Friday, March 24, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Army

ನಗ್ನ ಪ್ರತಿಭಟನೆಗಳು ಮತ್ತು ಪ್ರಚಾರದ ಗೀಳುಗಳು

October 13, 2016
in Army
0 0
0
Share on facebookShare on TwitterWhatsapp
Read - 2 minutes

ನೀವು ಮುಂಬೈ ರೈಲುಗಳಲ್ಲಿ ಅಡ್ಡಾಡಿದವರಾದರೆ ನಿಮಗೆ ಅಲ್ಲಿ ಮಂಗಳಮುಖಿಯರು ಹೇಗೆ ಜನರನ್ನು ದುಡ್ಡಿಗೆ ಪೀಡಿಸುತ್ತಾರೆ, ದುಡ್ಡು ಕೊಡದಿದ್ದರೆ ಯಾವ ಬಗೆಯ ಪ್ರತಿಭಟನೆ ಮಾಡುತ್ತಾರೆ ಎನ್ನುವುದು ಗೊತ್ತಿರಬಹುದು. ಸುಮಾರು ಹದಿನೈದು ವರ್ಷದ ಹಿಂದೆ ಅಲ್ಲಿ ನನಗೆ ಅವರ ಆ ಬಗೆಯ ಪ್ರತಿಭಟನೆ ಕಂಡಾಗ ದಿಗಿಲಾಗಿತ್ತು. ಅವರ ಪ್ರತಾಪಗಳ ಅರಿವಿರುವ ಯಾರೂ ಅವರು ಅಲ್ಲಿಯವರೆಗೆ ಮುಂದುವರಿಯಲು ಬಿಡುವುದಿಲ್ಲ. ಕೇಳಿದಷ್ಟು ದುಡ್ಡು ಕೊಟ್ಟು ಸಾಗಹಾಕುತ್ತಾರೆ. ಅಂದರೆ, ಅವರಿಗೆ ಅಲ್ಲಿ ನಗ್ನತೆ ಪ್ರತಿಭಟನೆ ಅನ್ನುವುದಕ್ಕಿಂತಲೂ ಬ್ಯುಸಿನೆಸ್ಸಿನ ಒಂದು ತಂತ್ರವಾಗಿ ಬಳಕೆಯಾಗುತ್ತಿದೆ.
ಉತ್ತರಪ್ರದೇಶದಲ್ಲಿ ಕೆಲವು ವರ್ಷಗಳನ್ನು ಕಳೆದವರಿಗೆ ಅಲ್ಲಿನ ಬೆತ್ತಲೆ ಪ್ರತಿಭಟನೆಗಳೇನೂ ವಿಶೇಷವಲ್ಲ. ಇದನ್ನು ದಲಿತರು ಮಾತ್ರವಲ್ಲ; ಜಾತಿಭೇದ ಇಲ್ಲದೆ ಎಲ್ಲರೂ ಒಂದು ತಂತ್ರವಾಗಿ ಅಲ್ಲಿ ಬಳಸುತ್ತಾರೆ. ಇದಕ್ಕೆ ಅರ್ಧ ಕಾರಣ ಅಲ್ಲಿನ ಪೊಲೀಸ್ ವ್ಯವಸ್ಥೆಯೇ ಎನ್ನಬೇಕು. ನೂರರಲ್ಲಿ ಐವತ್ತು ಕೇಸುಗಳನ್ನು ಪೊಲೀಸರು ಅಲ್ಲಿ ದಾಖಲಿಸಿಕೊಳ್ಳುವುದಿಲ್ಲ. ಎರಡೂ ಪಾರ್ಟಿಯವರಿಗೆ ಗದರಿಸಿಯೋ ಸಮಾಧಾನ ಮಾಡಿಯೋ ಸಾಗಹಾಕುತ್ತಾರೆ. ಇದುವರೆಗೆ ಬರೆದಿಟ್ಟುಕೊಂಡ ಕೇಸುಗಳಿಗೆ ಗತಿ ಕಾಣಿಸಲು ಇನ್ನೆಷ್ಟು ಶತಮಾನಗಳು ಬೇಕಾಗುತ್ತವೋ ಎಂಬಂಥ ಸ್ಥಿತಿಯಲ್ಲಿ ಅಲ್ಲಿನ ಪೋಲೀಸ್ ವ್ಯವಸ್ಥೆ ಇರುವುದರಿಂದ, ದೂರು ಕೊಡಲು ಬಂದವರು ಕೂಡ, ದೂರು ದಾಖಲಾಗದೆ ರಾಜಿ ಪಂಚಾಯಿತಿಗೆಯಿಂದಲೇ ಪ್ರಕರಣ ಸುಖಾಂತ್ಯ ಕಂಡರೆ ಅದಕ್ಕೇನೂ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಆದರೆ, ಕೇಸು ಹಾಕಿಸುವುದೇ ಮುಖ್ಯ; ಉಳಿದದ್ದೆಲ್ಲ ನಗಣ್ಯ ಎನ್ನುವವರು ಮಾತ್ರ ಪೋಲೀಸರ ಮೇಲೆ ಒತ್ತಡ ಹಾಕುತ್ತಾರೆ. ಕೇಸು ತೆಗೆದುಕೊಂಡಿಲ್ಲ ಎಂದರೆ ಪ್ರತಿಭಟನೆಯ ಅಸ್ತ್ರಗಳನ್ನು ಹೊರತೆಗೆಯುತ್ತಾರೆ. ನಗ್ನವಾಗಿ ನಿಂತರೆ ಮಾಧ್ಯಮಗಳು ಎದ್ದೆವೋ ಬಿದ್ದೆವೋ ಎನ್ನುತ್ತ ಬಂದು ಶೂಟ್ ಮಾಡಿ ಸುದ್ದಿ ಮಾಡುವುದರಿಂದ, ಅದೊಂದು ಅಗ್ಗದ ಸಾಧನವಾಗಿದೆ ಹಲವರಿಗೆ. ಈ ನಗ್ನಾಸ್ತ್ರಕ್ಕೆ ಇಂಥವರೇ ಎಂಬ ಜಾತಿಬಂಧನ ಏನೂ ಇಲ್ಲ. ಎಲ್ಲರೆದುರು ಹಾಗೆ ಬಟ್ಟೆ ಕಳಚಿ ನಿಲ್ಲುವ ಧೈರ್ಯ ಇದ್ದರೆ ಸಾಕು.
ಒಂದು ವ್ಯವಸ್ಥೆಯ ಕಿವಿ ಹಿಂಡಬೇಕಾದರೆ ಜನಸಾಮಾನ್ಯರು ನಗ್ನರಾಗಿ ನಿಲ್ಲುವಂಥ ಅನಿವಾರ್ಯತೆ ಸೃಷ್ಟಿಯಾಗಿದೆಯೆಂದರೆ ಅದಕ್ಕಿಂತ ಘೋರ ವಾಸ್ತವ ಇನ್ನೊಂದಿಲ್ಲ. ಆದರೆ, ಅಲ್ಲಿ ಅವರು ಯಾವ ಕಾರಣಕ್ಕೆ ಹಾಗೆ ನಿಂತರು ಎನ್ನುವುದನ್ನೇ ತಿಳಿಯದೆ ಪೋಲೀಸರು ಅವರ ಬಟ್ಟೆ ಬಿಚ್ಚಿದರು ಎಂದು ಗೋಗರೆದು, ಪದ್ಯ ಬರೆದು ಹಾಹಾಕಾರ ಎಬ್ಬಿಸುವ ಬುದ್ದಿಜೀವಿಗಳ ನಡತೆ ಮಾತ್ರ ನನ್ನಲ್ಲಿ ನಗು ಉಕ್ಕಿಸುತ್ತಿದೆ. ನಮ್ಮಲ್ಲಿ ದೇವದೇವಿಯರನ್ನು ಕಲಾಭಿವ್ಯಕ್ತಿ ಎಂಬ ಗುರಾಣಿ ಅಲ್ಲಾಡಿಸುತ್ತ ನಗ್ನವಾಗಿ ಚಿತ್ರಿಸಿ ತೀಟೆ ತೀರಿಸಿಕೊಳ್ಳುವವರು ಇದೇ ಬುಜೀ ಕಲಾವಿದರು. ಇವರು ನಿರ್ದೇಶಿಸುವ ಚಿತ್ರ, ನಾಟಕಗಳಲ್ಲಿ ಅಗತ್ಯ ಮೀರಿ ನಗ್ನತೆ ಇರುತ್ತದೆ. ಸೋಕಾಲ್ಡ್ ಬುಜೀ ನಿರ್ದೇಶಕರು ನಿರ್ದೇಶಿಸುವ ನಾಟಕಗಳಲ್ಲಿ ಬಟ್ಟೆ ಹರಿಯುವುದು, ಹೆಣ್ಣಿನ ಒಳ ಉಡುಪುಗಳನ್ನು ಕಿತ್ತೆಸೆಯುವುದು (’ಅಂಜುಮಲ್ಲಿಗೆ’ ನೆನಪು ಮಾಡಿಕೊಳ್ಳಿ), ಲೈಂಗಿಕ ದೃಶ್ಯಗಳು, ಬ್ಲೋಜಾಬ್ ಇತ್ಯಾದಿಗಳು ವೇದಿಕೆ ಮೇಲೇ ಯಾವ ಎಗ್ಗಿಲ್ಲದೆ ಅಭಿನಯಿಸಲ್ಪಡುತ್ತವೆ. ಮತ್ತು ಇಂಥವಕ್ಕೆ ಬುಜೀ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆಗಳ ಮೂಲಕ ಉತ್ತೇಜನ ಕೂಡ ಕೊಡುತ್ತಾರೆ. ಇವನ್ನೆಲ್ಲ ಭಾವಾಭಿವ್ಯಕ್ತಿ, ಕಲಾಪ್ರಜ್ಞೆ, ವಾಸ್ತವತೆಯ ಪ್ರತಿಫಲನ, ಹೆಣ್ಣಿನ ಮನೋರಂಗದ ಅನಾವರಣ ಎಂದು ಮುಂತಾದ ಮಣ್ಣುಮಸಿ ಸಿದ್ಧಾಂತಗಳಿಂದ ಸಮರ್ಥಿಸಿಕೊಳ್ಳಲಾಗುತ್ತದೆ. ಇದೇ ಬುಜೀಗಳು ರಾತ್ರಿ ಹನ್ನೆರಡರ ತನಕ ಬಾರುಗಳನ್ನು ತೆರೆದಿರಬೇಕು; ಕ್ಯಾಬರೆ – ಡಿಸ್ಕೋಥೆಕ್ ಮುಂತಾದವನ್ನು ಮುಚ್ಚಿಸಿ ಹೆಣ್ಣುಗಳ ಸಂಪಾದನೆಗೆ ಕಲ್ಲು ಹಾಕಬಾರದು ಎಂದು ಟೌನ್‌ಹಾಲ್ ಎದುರು ಓರಾಟ ಮಾಡುತ್ತಾರೆ! ಹೆಣ್ಣುಗಳ ಮೇಲೆ ಅತ್ಯಂತ ಹೀನಾಯವಾದ ಕವಿತೆ ಬರೆದುಕೊಂಡು ತಮ್ಮ ತೃಷೆಗಳನ್ನು ನೀಗಿಕೊಳ್ಳುತ್ತಾರೆ. ರಾತ್ರಿ ಒಂಬತ್ತರ ನಂತರ ಗ್ಲಾಸುಗಳಲ್ಲಿ ಜಲಸಮಾಧಿಯಾಗುವ ಬಹುತೇಕ ಬುಜೀ ಮತ್ತು ಮರಿ ಬುಜೀಗಳು ತಮ್ಮ ಫೋನಿನ ಅಡ್ರೆಸ್ ಬುಕ್ಕಿನಲ್ಲಿರುವ ಹೆಣ್ಣುಗಳಿಗೆ ಬರೆಯುವ ಮೆಸೇಜುಗಳು ಆತ್ಮಹತ್ಯೆಗಳಿಗೆ ಪ್ರಚೋದಿಸುವಷ್ಟು ಕೊಳಕಾಗಿರುತ್ತವೆ. ನಗ್ನತೆ ಎಂದರೆ ಉಸಿರಾಟದಷ್ಟೇ ಸಹಜ ಇವರಿಗೆಲ್ಲ ಎನ್ನುವುದು ಈ ಎಲ್ಲ ಸಂದರ್ಭಗಳಲ್ಲೂ ರುಜುವಾತಾಗುತ್ತವೆ.
ಪೋರ್ನ್ ಸೈಟುಗಳನ್ನು ನಿಷೇಧಿಸಬಾರದು ಎಂದು ವಾದಹೂಡುವ ಬುಜೀಗಳು ಅದಕ್ಕಾಗಿ ಎಳೆದುತರುವುದು ಖಜುರಾಹೋ ವಿಗ್ರಹಗಳನ್ನು. ಇವರಲ್ಲಿ ಎಷ್ಟು ಜನ ತಮ್ಮ ತೀಟೆ ತೀರಿಸಿಕೊಳ್ಳಬೇಕಾದಾಗ ಪೋರ್ನ್ ಬದಲು ಖಜುರಾಹೋ ವಿಗ್ರಹಗಳನ್ನು ನೋಡುತ್ತಾರೆ? ನಿಮ್ಮದು ಕಾಮುಕ ಕವಿತೆ ಎಂದರೆ ಕಾಮಸೂತ್ರದ ಉದಾಹರಣೆ ಎತ್ತಿಕೊಂಡು ಬಂದು ತಮ್ಮ ಕವಿತೆ ಶ್ರೇಷ್ಠವೇ ಹೌದು ಎಂದು ಸಮರ್ಥಿಸಿಕೊಳ್ಳುವ ಕವಿಗಳೂ ಇದ್ದಾರೆ.
ಒಬ್ಬ ಕವಿಗೆ ತನ್ನ ಕಾವ್ಯದ ಬಗ್ಗೆ ಇಂಥ ವಕಾಲತ್ತು ಮಾಡಬೇಕಾಗಿದೆ (ಮತ್ತು ಸಮರ್ಥನೆಗಾಗಿ ಕಾಮಸೂತ್ರವನ್ನು ಹಿಡಿಯಬೇಕಾಗಿದೆ) ಎಂದರೆ, ಅವನ ಕಾವ್ಯದ ಕಸುವು ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು! ಹಾಗೆಯೇ, ಮಹಿಳೆಯರು ಯಾವುದೋ ಒಂದು ಬೀದಿಯಲ್ಲಿ ಬೆತ್ತಲಾದದ್ದು ಮಾನವ ಜನಾಂಗವೇ ತಲೆ ತಗ್ಗಿಸುವಂಥ ಘಟನೆ; ಆದರೆ ಬೆತ್ತಲೆಗಳನ್ನು ಸಮರ್ಥಿಸಿಕೊಂಡು ಕಲೆಯ ಹೆಸರಲ್ಲಿ ದೊಡ್ಡ ಪರದೆಯಲ್ಲಿ ಹೆಣ್ಣಿನ ನಗ್ನತೆಯನ್ನು ಜಗತ್ತಿನಾದ್ಯಂತ ಪ್ರದರ್ಶಿಸಿ ದುಡ್ಡು ಮಾಡುವುದು ಹೆಣ್ಣಿನ ಶೋಷಣೆ ಅಲ್ಲ ಎನ್ನುವುದು ಯಾವ ಲಾಜಿಕ್ಕು? ಹುಡುಗಿಯರು, ಪ್ರಾಯದ ಹೆಂಗಸರು ಎಂಬ ಭೇದವಿಲ್ಲದೆ ಹೆಣ್ಣೆಂದು ತಿಳಿದೊಡನೆ ಗುರುತು-ಪರಿಚಯ ಮಾಡಿಕೊಂಡು ಕೊನೆಗೆ ಚಾಟಿಂಗ್‌ನಲ್ಲಿ ಕಾಮಕೇಳಿಗೆಳಸುವ; ಖಾಸಗಿ ಫೋಟೋಗಳನ್ನು ಕೇಳುವ ವ್ಯಕ್ತಿಗಳು ಬಹಿರಂಗದಲ್ಲಿ ನಗ್ನತೆ ವಿರೋಧಿಸಿ ಪ್ರತಿಭಟನೆ ಮಾಡುವುದು ಬಹುಶಃ ಬುಜೀ ಲೋಕದಲ್ಲಿ ಮಾತ್ರ ಕಂಡುಬರುವ ವೈರುಧ್ಯವಿಶೇಷ ಇರಬಹುದು!
ಈ ನಗ್ನತೆಯ ರಾಜಕೀಯದಲ್ಲಿ ತಾವೂ ಜಗತ್ತಿನೆದುರು ನಗ್ನರಾಗುತ್ತಿದ್ದೇವೆ ಎನ್ನುವ ತಿಳಿವಳಿಕೆ ಈ ಬುಜೀ ಓರಾಟಗಾರರಿಗೆ ಬಂದರೆ ಸಾಕು.
ಮಹಿಳೆಯರು ಯಾವುದೋ ಒಂದು ಬೀದಿಯಲ್ಲಿ ಬೆತ್ತಲಾದದ್ದು ಮಾನವ ಜನಾಂಗವೇ ತಲೆ ತಗ್ಗಿಸುವಂಥ ಘಟನೆ; ಆದರೆ ಬೆತ್ತಲೆಗಳನ್ನು ಸಮರ್ಥಿಸಿಕೊಂಡು ಕಲೆಯ ಹೆಸರಲ್ಲಿ ದೊಡ್ಡ ಪರದೆಯಲ್ಲಿ ಹೆಣ್ಣಿನ ನಗ್ನತೆಯನ್ನು ಜಗತ್ತಿನಾದ್ಯಂತ ಪ್ರದರ್ಶಿಸಿ ದುಡ್ಡು ಮಾಡುವುದು ಹೆಣ್ಣಿನ ಶೋಷಣೆ ಅಲ್ಲ ಎನ್ನುವುದು ಯಾವ ಲಾಜಿಕ್ಕು? ಹುಡುಗಿಯರು, ಪ್ರಾಯದ ಹೆಂಗಸರು ಎಂಬ ಭೇದವಿಲ್ಲದೆ ಹೆಣ್ಣೆಂದು ತಿಳಿದೊಡನೆ ಗುರುತು-ಪರಿಚಯ ಮಾಡಿಕೊಂಡು ಕೊನೆಗೆ ಚಾಟಿಂಗ್‌ನಲ್ಲಿ ಕಾಮಕೇಳಿಗೆಳಸುವ; ಖಾಸಗಿ ಫೋಟೋಗಳನ್ನು ಕೇಳುವ ವ್ಯಕ್ತಿಗಳು ಬಹಿರಂಗದಲ್ಲಿ ನಗ್ನತೆ ವಿರೋಧಿಸಿ ಪ್ರತಿಭಟನೆ ಮಾಡುವುದು ಬಹುಶಃ ಬುಜೀ ಲೋಕದಲ್ಲಿ ಮಾತ್ರ ಕಂಡುಬರುವ ವೈರುಧ್ಯವಿಶೇಷ ಇರಬಹುದು!

Previous Post

ಜೆಎನ್‌ಯುನಲ್ಲಿ ಮೋದಿ ಪ್ರತಿಕೃತಿ ದಹನ: ವರದಿ ಕೇಳಿದ ಕೇಂದ್ರ ಗೃಹ ಇಲಾಖೆ

Next Post

ಗಂಡ ಊರಿಗ್ ಹೋದಾಗ ಚಿತ್ರೀಕರಣಕ್ಕೆ ಚಾಲನೆ

kalpa

kalpa

Next Post

ಗಂಡ ಊರಿಗ್ ಹೋದಾಗ ಚಿತ್ರೀಕರಣಕ್ಕೆ ಚಾಲನೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಗಮನಿಸಿ! ಮಾರ್ಚ್ 25ರಂದು ಶಿವಮೊಗ್ಗ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ

March 24, 2023

ಕೂಡ್ಲಿಗೆರೆ ಗ್ರಾಪಂ ಅಧ್ಯಕ್ಷರಾಗಿ ಗೌರಮ್ಮ ಮಹದೇವ್ ಅವಿರೋಧ ಆಯ್ಕೆ

March 24, 2023

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅತ್ಯಾಧುನಿಕ ತುರ್ತು ಚಿಕಿತ್ಸಾ ವಾಹನ ಹಸ್ತಾಂತರ

March 24, 2023

ಚುನಾವಣೆ ಹಿನ್ನೆಲೆ: ಬಳ್ಳಾರಿ ಜಿಲ್ಲೆಯಲ್ಲಿ 18 ಚೆಕ್ ಪೋಸ್ಟ್, ಅಕ್ರಮ ಮದ್ಯ, ವಸ್ತುಗಳು ಸೀಜ್

March 24, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಗಮನಿಸಿ! ಮಾರ್ಚ್ 25ರಂದು ಶಿವಮೊಗ್ಗ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ

March 24, 2023

ಕೂಡ್ಲಿಗೆರೆ ಗ್ರಾಪಂ ಅಧ್ಯಕ್ಷರಾಗಿ ಗೌರಮ್ಮ ಮಹದೇವ್ ಅವಿರೋಧ ಆಯ್ಕೆ

March 24, 2023

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅತ್ಯಾಧುನಿಕ ತುರ್ತು ಚಿಕಿತ್ಸಾ ವಾಹನ ಹಸ್ತಾಂತರ

March 24, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!