Read - < 1 minute
ವಿಶ್ವಸಂಸ್ಥೆ, ಸೆ.20: ಭಯೋತ್ಪಾದನೆಯನ್ನು ಅಸ್ತಿತ್ವದಲ್ಲಿರುವ ಆತಂಕ ಎಂದು ವ್ಯಾಖ್ಯಾನಿಸಿರುವ ಭಾರತ, ಈ ಪಿಡುಗಿನ ಧೂರ್ತತನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಬೃಹತ್ ಪ್ರಮಾಣದಲ್ಲಿ ನಿರಾಶ್ರಿತರ ವಲಸೆಗೆ ಭಯೋತ್ಪಾದನೆಯೇ ಮುಖ್ಯ ಕಾರಣ ಎಂದೂ ಭಾರತ ಪ್ರತಿಪಾದಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಮಹಾಧಿವೇಶನದ ಶೃಂಗಸಭೆ (ನಿರಾಶ್ರಿತರು ಮತ್ತು ವಲಸೆ) ಉದ್ದೇಶಿಸಿ ನಿನ್ನೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್, ಭಯೋತ್ಪಾದನೆ ಈಗ ಅಸ್ತಿತ್ವದಲ್ಲಿರುವ ದೊಡ್ಡ ಮಟ್ಟದ ಆತಂಕ ಎಂದು ವ್ಯಾಖ್ಯಾನಿಸಿದರು.
ಭಯೋತ್ಪಾದನೆಯಿಂದ ವಲಸಿಗರು ಮತ್ತು ನಿರಾಶ್ರಿತರು ಭಾರೀ ಪ್ರಮಾಣದಲ್ಲಿ ಗುಳೇ ಹೋಗುವಂತಾಗಿದೆ. ಇದು ಸಂಕಷ್ಟ ಅಂಶದ ಭೌಗೋಳಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಅಕ್ಬರ್ ವಿಶ್ಲೇಷಿಸಿದರು.
ಭಯೋತ್ಪಾದನೆಯಿಂದ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಬಿಕ್ಕಟ್ಟು, ಸಂಘರ್ಷ, ಯುದ್ಧ ಮತ್ತು ಬಡತನಕ್ಕೆ ಇದು ಎಡೆಮಾಡಿಕೊಟ್ಟಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
Discussion about this post