Read - 5 minutes
ಸರ್ಕಾರದ ಮುಂದಿನ ಆಯ್ಕೆ?: ಮರುಪರಿಶೀಲನಾ ಅರ್ಜಿ ಸಲ್ಲಿಕೆ
ಕಾವೇರಿ ನಿರ್ವಹಣಾ ಮಂಡಳಿ ರಚನೆ:
ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಇದರಿಂದ ಕರ್ನಾಟಕ ಸರ್ಕಾರ ತನ್ನ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಳ್ಳಲಿದೆ.
ಈ ಬಗ್ಗೆ ಇಂದೂ ಕೂಡ ಕರ್ನಾಟಕ ಪರ ವಕೀಲ ಫಾಲಿ ನಾರಿಮನ್ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸದಿರುವುದು ತೀವ್ರ ಅಚ್ಚರಿಗೆ ಕಾರಣವಾಗಿದೆ.
ಮಂಡಳಿ ರಚನೆಯ ಪರಿಣಾಮವೇನು?
ಮಂಡಳಿ ವ್ಯಾಪ್ತಿಗೆ ಕಾವೇರಿ ಕಣಿವೆಯ 4 ಜಲಾಶಯ ಕೇಂದ್ರದ ವ್ಯಾಪ್ತಿಗೆ
(ಕೆಆರ್ ಎಸ್,ಕಬಿನಿ,ಹೇಮಾವತಿ ಹಾರಂಗಿ)
ಮಂಡಳಿಯೇ ಮೇಲುಸ್ತುವಾರಿ
ಕರ್ನಾಟಕಕ್ಕೆ ಯಾವುದೇ ಹಕ್ಕಿರಲ್ಲ
ಕೆಆರ್ ಎಸ್ ನೀರಿನ ಮಟ್ಟ:
ಒಟ್ಟು ನೀರು: 13.5 ಟಿಎಂಸಿ
8.5 ಟಿಎಂ ಸಿ ನೀರು ಬಳಸಲು ಅನರ್ಹ
ಬಳಕೆಗೆ ಯೋಗ್ಯ: 4.5 ಟಿಎಂಸಿ ಮಾತ್ರ
ಹೈಕಮಾಂಡ್ ಜೊತೆ ಸಿಎಂ ಮಾತುಕತೆ;
ಕಾವೇರಿ ನೀರು ವಿಚಾರ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ತೀರ್ಪು ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ದೂರವಾಣಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರ ನೀಡಿದ್ದಾರೆ.
ನೀರು ಬಿಡುಗಡೆ ಮಾಡುವ ಕುರಿತು ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾ ನ ಹೊರಬೀಳಲಿದ್ದು, ಮುಂದಿನ ಕ್ರಮಗಳ ಬಗ್ಗೆ ಹೈಕಮಾಂಡ್ ಸಲಹೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಗೆ ಮಂಡ್ಯದಲ್ಲಿ ನಿಷೇಧ: ಜಿ ಮಾದೇಗೌಡ ಅಸಮಾಧಾನ
ಪದೇ ಪದೇ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡನೆಗೆ ಅಸಮರ್ಥರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಡ್ಯದಲ್ಲಿ ನಿಷೇಧ ಹೇರಿದ್ದೇವೆ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಹೇಳಿದ್ದಾರೆ.
ರೈತರ ಬಗ್ಗೆ ಕಾಳಜಿ ಇದ್ದರೆ ನಷ್ಟ ಪರಿಹಾರ ಕೊಡಲಿ, ಇಲ್ಲದಿದ್ದರೆ ಸಿಎಂ ಮಂಡ್ಯಕ್ಕೆ ಬರಕೂಡದು ಎಂದು ಹೇಳಿದ್ದಾರೆ.
ಪ್ರತಿಕ್ರಿಯೆ:
ನೀರೇ ಇಲ್ಲ ಬಿಡುವ ಪ್ರಶ್ನೆ ಎಲ್ಲಿಂದ ಬಂತು. ಈಗಾಗಲೇ ಬಹಳ ಹೃದಯ ವೈಶಾಲ್ಯತೆಯಿಂದ ನೀರು ಹರಿಸುತ್ತಿದ್ದೀರಿ. ತಮಿಳುನಾಡಿನ ನಡವಳಿಕೆ ನಮಗೆ ಗೊತ್ತಿದೆ. ನಮ್ಮ ರಾಜ್ಯದ ನೀರು ಕೊಡದೇ, ತಮಿಳುನಾಡಿಗೆ ಬಿಟ್ಟಿದ್ದಾರೆ. ಯಾವ ಕಾನೂನೂ ನಮ್ಮ ರಕ್ಷಣೆಗೆ ಬಂದಿಲ್ಲ.
-ಹೆಚ್ ಡಿ ಕುಮಾರಸ್ವಾಮಿ (ಜೆಡಿಎಸ್ ರಾಜ್ಯಾಧ್ಯಕ್ಷ )
ಈ ಬಾರಿ ನಮ್ಮಲ್ಲಿ 4 ಜಲಾಶಯದಲ್ಲಿ ಕುಡಿಯಲು ಮಾತ್ರ ನೀರಿದೆ. ಇದನ್ನು ನ್ಯಾಯಾಲಯದ ಮುಂದಿಟ್ಟಿದ್ದೆವು. ಹಿಂದೆಂದೂ ಮಾಡದಂತಹ ವಾದ ಮಂಡನೆಯನ್ನು ನಾರಿಮನ್ ಮಾಡಿದ್ದಾರೆ. ಆದರೆ 6 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂಬ ಆದೇಶ ಬಂದಿದೆ. ಈ ಬಗ್ಗೆ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.
-ಎಂ ಬಿ ಪಾಟೀಲ್ (ಜಲಸಂಪನ್ಮೂಲ ಸಚಿವ)
ಭಾರೀ ಭದ್ರತೆ
ಕಾವೇರಿ ವಿವಾದದ ಕುರಿತು ಇಂದು ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ನಗರ ಪೊಲೀಸ್ ಆಯುಕ್ತ ಮೇಘರಿಕ್ ಸೇರಿದಂತೆ ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಗಸ್ತಿನಲ್ಲಿದ್ದಾರೆ.
ಪ್ರಮುಖವಾಗಿ ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಕಾಮಾಕ್ಷಿಪಾಳ್ಯ ಮುಖ್ಯರಸ್ತೆ, ಸುಮನಹಳ್ಳಿ ಜಂಕ್ಷನ್ ನಲ್ಲಿ ಸಿಬ್ಬಂದಿಗಳು ಬೀಡುಬಿಟ್ಟಿದ್ದಾರೆ.
ಅತ್ತಿಬೆಲೆ-ಹೊಸೂರು ಗಡಿಭಾಗದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು, ಗಡಿಯಲ್ಲೂ ಬಿಗಿ ಪೊಲೀಸ್ ಭದ್ರತೆ ಮಾಡಿರುವುದರಿಂದ ಬಸ್ ಗಳಿಲ್ಲದೆ ಮೂರು ಕಿಲೋ ಮೀಟರ್ ನಡೆದು ಉಭಯ ರಾಜ್ಯಗಳಿಗೆ ಪ್ರಯಾಣಿಕರು ತೆರಳುತ್ತಿದ್ದಾರೆ.
ಸ್ಯಾಟಲೈಟ ಬಸ್ ನಿಲ್ದಾಣ, ಮೆಜಸ್ಟಿಕ್, ಸಿಟಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಪಶ್ಚಿಮ ಮತ್ತು ಉತ್ತರ ವಿಭಾಗಗಳಲ್ಲಿ ಹೆಚ್ಚಿನ ಬಿಗಿ-ಭದ್ರತೆ ಮಾಡಲಾಗಿದೆ.
3 ಸಾವಿರ ಮಂದಿ ಅರೆಸೇನಾಪಡೆ, ಕೆಎಸ್ಆರ್ ಪಿ, ಸಿಎಆರ್, ಹೋಂಗಾರ್ಡ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮದ್ಯ ನಿಷೇಧ: ಸುಪ್ರೀಂಕೊರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಇಂದು ಬೆಳಗ್ಗೆಯಿಂದ ತಡರಾತ್ರಿ 1 ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬರಿದಾಗುತ್ತಿರುವ ಕಾವೇರಿ ಜಲಾನಯನ ಪ್ರದೇಶ!
ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸಿದ್ದರ ಪರಿಣಾಮ ಕಾವೇರಿ ಜಲಾನಯನ ಭಾಗದ ಜಲಾಶಯಗಳು ಬರಿದಾಗುತ್ತಿರುವುದು ಒಂದೆಡೆಯಾದರೆ ಸಣ್ಣಪುಟ್ಟ ಕೆರೆ-ಕಟ್ಟೆಗಳಿಗೂ ಕೂಡ ನೀರು ಬಾರದ ಪರಿಸ್ಥಿತಿ ರಾಜ್ಯದಲ್ಲಿ ಕಂಡುಬಂದಿದೆ.
ರಾಜ್ಯದ 3598 ಸಣ್ಣ ಕೆರೆಗಳ ಪೈಕಿ ಅರ್ಧದಷ್ಟು ಕೆರೆಗಳಿಗೆ ನೀರೇ ಬಂದಿಲ್ಲ. ಮಳೆಗಾಲದಲ್ಲೇ ಬಿರುಕು ಬಿಟ್ಟು ಒಣಗುವ ಸ್ಥಿತಿ ನಿರ್ಮಾಣವಾಗಿದೆ. 1527 ಕೆರೆಗಳು ನೀರು ಬಾರದೆ ಒಣಗಿ ನಿಂತಿವೆ.
ಭರ್ತಿಯಾಗಿರುವುದು ಕೇವಲ 112 ಕೆರೆಗಳು ಮಾತ್ರ. ಅರ್ಧಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿರುವ ಕೆರೆಗಳ ಸಂಖ್ಯೆ ಕೇವಲ 311 ಮಾತ್ರ. ಇನ್ನು ಅಲ್ಪಸ್ವಲ್ಪ ನೀರು ಬಂದಿರುವ ಕೆರೆಗಳ ಸಂಖ್ಯೆ 1600. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಕಾವೇರಿ ಜಲಾನಯನ ಭಾಗವಾದ ದಕ್ಷಿಣ ಒಳನಾಡಿನಲ್ಲಿ 1973 ಕೆರೆಗಳಿವೆ. ಈ ಕೆರೆಗಳಿಂದ 2,05,357 ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಇಲ್ಲೂ ಕೂಡ ನಾಲ್ಕು ಕೆರೆಗಳಿಗೆ ಮಳೆಗಾಲದಲ್ಲೇ ನೀರು ಬಂದಿಲ್ಲ. ಇದರಿಂದ ಜನ-ಜಾನುವಾರುಗಳು ತತ್ತರಿಸುವಂತಾಗಿದೆ. ಬರದ ಭೀಕರತೆಯ ಕರಾಳ ಛಾಯೆ ಈ ಪ್ರದೇಶಗಳಲ್ಲಿ ಈಗಾಗಲೇ ಕಂಡುಬಂದಿದೆ.
ಕರಾವಳಿ, ಮಲೆನಾಡು ಒಳಗೊಂಡಂತೆ ದಕ್ಷಿಣ ಭಾಗದ 17 ಜಿಲ್ಲೆಗಳಲ್ಲಿ ಕೇವಲ ಭರ್ತಿಯಾಗಿರುವುದು 23 ಕೆರೆಗಳು ಮಾತ್ರ. ಅದರಲ್ಲಿ ಬೆಂಗಳೂರು ನಗರದಲ್ಲಿ 5, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 8, ಚಾಮರಾಜನಗರ, ಉಡುಪಿ ಜಿಲ್ಲೆಯಲ್ಲಿ ತಲಾ 4, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ತಲಾ 1 ಕೆರೆಗಳು ಮಾತ್ರ ಭರ್ತಿಯಾಗಿವೆ.
180 ಕೆರೆಗಳಲ್ಲಿ ಮಾತ್ರ ಅರ್ಧಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದ್ದರೆ, 900 ಕೆರೆಗಳಲ್ಲಿ ಅಲ್ಪಸ್ವಲ್ಪ ಪ್ರಮಾಣದ ನೀರು ಇದೆ. ಅತ್ತ ಪ್ರಮುಖ ಜಲಾಶಯಗಳಾದ ಕೆಆರ್ ಎಸ್, ಹಾರಂಗಿ, ಕಬಿನಿ, ಹೇಮಾವತಿ ಕೂಡ ತಮಿಳುನಾಡಿಗೆ ನೀರು ಹರಿಸಿರುವುದರಿಂದ ಖಾಲಿಯಾಗತೊಡಗಿವೆ. ಇತ್ತ ಸಣ್ಣಪುಟ್ಟ ಕೆರೆ-ಕಟ್ಟೆ-ಕುಂಟೆಗಳಿಗೂ ನೀರಿಲ್ಲದೆ ಒಣಗುವ ಪರಿಸ್ಥಿತಿ ಇದೆ. ಇದರಿಂದ ಮುಂದಿನ ಬೇಸಿಗೆಯಲ್ಲಿ ಜನ-ಜಾನುವಾರುಗಳು ಕುಡಿಯುವ ನೀರಿಗೆ ಹಾಹಾಕಾರ ಪಡಬೇಕಾದ ಪರಿಸ್ಥಿತಿ ಉಂಟಾಗುವ ಸಂಭವವಿದೆ.
ಸೆಪ್ಟೆಂಬರ್ನಲ್ಲಿ ತುಂಬಿ ತುಳುಕಬೇಕಾಗಿದ್ದ ಸಣ್ಣ ಕೆರೆ-ಕಟ್ಟೆಗಳು ಒಣಗುತ್ತಿರುವುದು ಜನರ ಆತಂಕವನ್ನು ಹೆಚ್ಚು ಮಾಡಿದೆ.
ಗೃಹ ಸಚಿವರಿಂದ ಭದ್ರತೆ ಬಗ್ಗೆ ಮಾಹಿತಿ
ನಿನ್ನೆ ನಗರದ ಹಲವು ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇಂದು ಮಡಿವಾಳ, ಅತ್ತಿಬೆಲೆ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಭದ್ರತೆ ಬಗ್ಗೆ ಮಾಹಿತಿ ಪಡೆದರು.
ಕಾವೇರಿ ನದಿ ನೀರು ಹಂಚಿಕೆ ವಿವಾದದ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಕಳೆದ ಸೆ.12 ರಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರ ಘಟನೆ ಹಿನ್ನೆಲೆಯಲ್ಲಿ ಎಚ್ಚೆತ್ತ ಗೃಹ ಇಲಾಖೆ ನಗರದಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಖುದ್ದು ಗೃಹ ಸಚಿವರೇ ಬಂದೋಬಸ್ತ್ ಪರಿಶೀಲನೆ ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಇಂದು ಪ್ರಕಟಗೊಳ್ಳುವುದರಿಂದ ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಮುನ್ನೆಚ್ಚರಿಕೆ ವಹಿಸಿರುವ ಸಚಿವರೇ ಬಹುತೇಕ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಮಡಿವಾಳ, ಅತ್ತಿಬೆಲೆ ವಿಭಾಗದಲ್ಲಿ ಪೊಲೀಸ್ ಅಧಿಕಾರಗಳೊಂದಿಗೆ ಚಚರ್ೆ ನಡೆಸಿದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆ ಸೂಚನೆ ನೀಡಿದರು.
ನಿನ್ನೆ ಕಾವೇರಿ ಹೋರಾಟದಲ್ಲಿ ಹಿಂಸಾಚಾರಕ್ಕೆ ತುತ್ತಾಗಿದ್ದ ಕಾಮಾಕ್ಷಿಪಾಳ್ಯ, ರಾಜಗೋಪಾಲ ನಗರ, ಬ್ಯಾಟರಾಯನಪುರ, ಪೀಣ್ಯ, ಕೆಂಗೇರಿ ಸೇರಿದಂತೆ 16 ಠಾಣೆಗಳಿಗೆ ದಿಢೀರ್ ಭೇಟಿ ನೀಡಿ ಕಾನೂನು ಸುವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.
ತೀವ್ರಗೊಂಡ ಪ್ರತಿಭಟನೆ
ನವದೆಹಲಿಯಲ್ಲಿ ನಿನ್ನೆ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ತೀರ್ಮಾನ ಹಾಗೂ ಸುಪ್ರೀಂಕೋರ್ಟ್ ಇಂದಿನ ಆದೇಶವನ್ನು ಖಂಡಿಸಿ ಮಂಡ್ಯದಲ್ಲಿ ಮತ್ತೆ ಪ್ರತಿಭಟನೆ ಕಾವು ಹೆಚ್ಚಾಗಿದೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಲ್ಲಿ ಮೈ-ಬೆಂ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಲಾಯಿತು.
ಸುಪ್ರೀಂ ಕೋರ್ಟ್ ಗೆ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಮಧ್ಯೆ ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ನಿರಂತರ ಅನ್ಯಾಯವಾಗುತ್ತಿರುವುದರಿಂದ ಬೇಸತ್ತ ಸಾರ್ವಜನಿಕರು ನ್ಯಾಯಕ್ಕಾಗಿ ಕಾವೇರಿ ಮಾತೆಯ ಮೊರೆ ಹೋಗಿದ್ದಾರೆ.
ಕಾವೇರಿ ವಿಷಯದಲ್ಲಿ ಯಾರಿಂದಲೂ ನ್ಯಾಯ ಸಿಗುತ್ತಿಲ್ಲ. ಇನ್ನು ನಮಗೆ ದೇವರೇ ಗತಿ ಎಂದು ಜನ ದೇವರತ್ತ ಮುಖ ಮಾಡಿದ್ದಾರೆ.
ಕಸ್ತೂರಿ ಜನಪರ ವೇದಿಕೆಯವರು ಮಂಡ್ಯದಲ್ಲಿ ಕಾವೇರಿ ಮಾತೆಗೆ ಇಂದು ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ ಅಭಿಷೇಕ ಮಾಡುವ ಮೂಲಕ ನಮ್ಮನ್ನು ಕಾಪಾಡು ತಾಯಿ ಎಂದು ಮೊರೆಯಿಟ್ಟಿದ್ದಾರೆ.
ನಿನ್ನೆ ನೀಡಿದ ಕಾವೇರಿ ಮೇಲುಸ್ತುವಾರಿ ಸಮಿತಿಯ ತೀರ್ಪು ರಾಜ್ಯಕ್ಕೆ ವರವಾಗಿಲ್ಲವಾದರೂ ಅಷ್ಟೇನೂ ಪರಿಣಾಮ ಬೀರುವ ಸಾಧ್ಯತೆ ಇರಲಿಲ್ಲ ಆದರೆ ಇಂದಿನ ಸುಪ್ರೀಂಕೋರ್ಟ್ ಆದೇಶ ಆಘಾತವನ್ನುಂಟುಮಾಡಿದೆ.
ಇದಕ್ಕಾಗಿ ಮೊದಲೇ ಎಚ್ಚೆತ್ತಿರುವ ಸರ್ಕಾರ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದೆ. ಮಂಡ್ಯ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೋರಾಟಗಾರರನ್ನು, ಕನ್ನಡಪರ ಸಂಘಟನೆಗಳ ನಾಯಕರು ಮತ್ತು ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗ್ಗೆ ಆರು ಗಂಟೆಯಿಂದ ನಾಳೆ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಂಡ್ಯದಲ್ಲಿ ಕೇಬಲ್ ಕಟ್ ಮಾಡಲಾಗಿದೆ. ಹಲವೆಡೆ ವಿದ್ಯುತ್ ಸರಬರಾಜು ಕೂಡ ಕಡಿತ ಮಾಡಲಾಗಿದೆ.
ಕೆಆರ್ಎಸ್, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ನಿಷೇಧಾಜ್ಞೆ ಮುಂದುವರೆಸಲಾಗಿದ್ದು, ಅಗತ್ಯ ಬಿದ್ದರೆ ಕರ್ಫ್ಯೂ ಜಾರಿಗೊಳಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾಪಡೆ ಪಥಸಂಚಲನ ನಡೆಸಿದೆ. ನಿಷೇಧಾಜ್ಞೆ ನಡುವೆಯೂ ಮಂಡ್ಯದ ಸಂಜಯ್ ವೃತ್ತದಲ್ಲಿ ಇಂದು ಬೆಳಿಗ್ಗೆ ರೈತ ಸಂಘದ ಕಾರ್ಯಕರ್ತರು ಉರುಳಿಕಾಳು ಸುರಿದು ಪ್ರತಿಭಟನೆ ನಡೆಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಕಳೆದ ಸೆ.12 ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಸಂದರ್ಭದಲ್ಲಿ ಇದನ್ನು ವಿರೋಧಿಸಿ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರ ಘಟನೆಗಳ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಪೊಲೀಸರು ಬೆಂಗಳೂರಿನಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್ಆರ್ ಪಿ, ಅರೆಸೇನಾ ತುಕಡಿ, ಕ್ಷಿಪ್ರ ಕಾರ್ಯಾಚರಣೆ ಪಡೆ, ಜಲ ಪಿರಂಗಿ ತಂಡಗಳನ್ನು ಸಜ್ಜುಗೊಳಿಸಿದ್ದಾರೆ. ಯಾವುದೇ ರೀತಿ ಅಹಿತಕರ ಘಟನೆಗಳು ಆಗದಂತೆ ಎಚ್ಚರ ವಹಿಸಿದ್ದಾರೆ.
ನಿನ್ನೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತುರ್ತು ಸಭೆ ನಡೆಸಿ, ನಗರದ ಹಲವು ಭಾಗಗಳಿಗೆ ಖುದ್ದು ಭೇಟಿ ನೀಡಿ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ನಗರದಲ್ಲೂ ಕೂಡ ಇಂದು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಶಾಲಾ-ಕಾಲೇಜುಗಳಿಗೆ ರಜೆ ನೀಡಲು ಆಯಾ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
ಅತ್ತ ಗಡಿಭಾಗದಲ್ಲಿ ಕನ್ನಡ ಒಕ್ಕೂಟದ ಕಾರ್ಯಕರ್ತರು, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಚಾಮರಾಜನಗರ ಜಿಲ್ಲೆಯ ಪುಣಜೂರು ಗಡಿ ಭಾಗದಲ್ಲಿ ಗಡಿ ಬಂದ್ ಮಾಡಿ ಪ್ರತಿಭಟನೆ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ.
ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಮಂಜುನಾಥ್ದೇವು, ಶಿವರಾಮೇಗೌಡ, ಗಿರೀಶ್ ಸೇರಿದಂತೆ ಹಲವರು ರಸ್ತೆ ತಡೆ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಜನಪ್ರತಿನಿಧಿಗಳ ಸಭೆ
ಮಂಡ್ಯ: ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಭೆ ಕರೆಯಲಾಗಿದ್ದು, ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಹೇಳಿಕೆ. ಇಂದಿನ ಸುಪ್ರೀಂಕೋರ್ಟ್ ತೀರ್ಪಿನಿಂದ ಜಿಲ್ಲೆಯ ಜನತೆಗೆ ತುಂಬಲಾರದ ನೋವಾಗಿದೆ ಎಂದ ಅವರು, ಮನೆಗೊಬ್ಬರಂತೆ ಕಾವೇರಿ ಹೋರಾಟದಲ್ಲಿ ಬಾಗಿಯಾಗುವಂತೆ ಕರೆ ನೀಡಿದ್ದಾರೆ. ನಾಳೆ ಮಂಡ್ಯ ಬಂದ್ ಗೆ ನಾವು ಕರೆ ನೀಡಿಲ್ಲಾ. ಸ್ವಯಂಪ್ರೇರಣೆಯಿಂದ ಬಂದ್ ಮಾಡಿದರೆ ಸ್ವಾಗತ ಎಂದರು.
ಧಾರವಾಡದಲ್ಲಿ ಪ್ರತಿಭಟನೆ
ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕರವೇ ಕಾರ್ಯಕರ್ತರು ಹಾಗೂ ಕಳಸಾ ಬಂಡೂರಿ ಹೋರಾಟಗಾರರಿಂದ ಪ್ರತಿಭಟನೆ ನಡೆಸಲಾಯಿತು.
ರಾಜ್ಯಕ್ಕೆ ಮಾರಕ:
ಮೈಸೂರು: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ರಾಜ್ಯಕ್ಕೆ ಮಾರಕವಾಗಿದೆ ಎಂದು
ಸಹಕಾರ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಮೈಸೂರಿನಲ್ಲಿ ಹೇಳಿದ್ದಾರೆ.
ಈ ಬಗ್ಗೆ ನಾಳೆ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ರಾಜ್ಯದ ಜನತೆ ತಾಳ್ಮೆ ಕಳೆದು ಕೊಳ್ಳಬಾರದು.
ರಾಜ್ಯದ ಜನರಿಗೆ ನ್ಯಾಯ ದೊರಕಿಸಿಕೊಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅಭಯ ನೀಡಿದರು.
ರಾಜೀನಾಮೆ ನೀಡುತ್ತೇನೆ: ಪುಟ್ಟರಾಜು
ಸುಪ್ರೀಂಕೋರ್ಟ್ ಮತ್ತೆ ರಾಜ್ಯಕ್ಕೆ ಅನ್ಯಾಯವಾಗಿದ್ದು, ಸುಪ್ರೀಂಕೋರ್ಟ್ ತೀರ್ಪು ಖಂಡಿಸಿ ಮಂಡ್ಯ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪುಟ್ಟರಾಜು ಹೇಳಿದ್ದಾರೆ.
ನಾಡಿದ್ದು ದೆಹಲಿಗೆ ತೆರಳಿ ರಾಜೀನಾಮೇ ನೀಡೋದಾಗಿ ದೂರವಾಣಿ ಮೂಲಕ ವಿಷಯ ಪ್ರಕಟಿಸಿದ್ದಾರೆ.
ರಾಜೀನಾಮೆ ನೀಡಿ ಜನರೊಂದಿಗೆ ಕಾವೇರಿ ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕೇಬಲ್ ಪ್ರಸಾರ ಸ್ಥಗಿತ:
ಸುಪ್ರೀಂಕೋರ್ಟ್ ತೀರ್ಪು ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯಾದ್ಯಂತ ಕೇಬಲ್ ಪ್ರಸಾರ ಸ್ಥಗಿತಗೊಳಿಸಲಾಗಿತ್ತು.
ತೀರ್ಪು ರಾಜ್ಯಕ್ಕೆ ವಿರುದ್ದ ಬಂದ್ರೆ ಮತ್ತೆ ಜಿಲ್ಲೆಯಲ್ಲಿ ಗಲಭೆಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ಕೇಬಲ್ ಪ್ರಸಾರ ಸ್ಥಗಿತಗೊಳಿಸಲಾಗಿತ್ತು.
ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ:
ಜಲಾಶಯದ ಗರಿಷ್ಠ ಮಟ್ಟ :124.80 ಅಡಿ.
ಇಂದಿನ ನೀರಿನ ಮಟ್ಟ 84.25 ಅಡಿ.
ಜಲಾಶಯದ ಒಳ ಹರಿವು 6074 ಕ್ಯೂಸೆಕ್…
ಜಲಾಶಯದ ಹೊರ ಹರಿವು 253 ಕ್ಯೂಸೆಕ್.
ಹೆಚ್ಚಿನ ಭದ್ರತೆ:
ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಭದ್ರತೆಗೆ 4000ಸಿಬ್ಬಂದಿ ಇದ್ದು ಮತ್ತೆ 150 ಹೆಚ್ಚುವರಿ ಸಿಬ್ಬಂದಿ ನಿಯೋಜನೆ.
ಕೆ.ಆರ್.ಎಸ್. ಡ್ಯಾಂಗೆ ಹೆಚ್ಚುವರಿ ಭದ್ರತೆ.
ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ.
6 ಕಂಪನಿ ಪ್ಯಾರಾ ಮಿಲಿಟರಿ ಪಡೆ,35 ಸ್ಟ್ರೈಕಿಂಗ್ ಫೋರ್ಸ್.
21 ಜಿಲ್ಲೆಗಳಿಂದ ಬಂದಿರೋ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆ.
ಹುರುಳಿಕಾಳು ಪ್ರತಿಭಟನೆ.
ಕಾವೇರಿ ಮೇಲುಸ್ತುವಾರಿ ಸಮಿತಿ ಮತ್ತೆ ತಮಿಳುನಾಡಿಗೆ ಮುಂದಿನ 10 ದಿನಗಳ ಕಾಲ ಞಡಿ ಜಲಾಶಯದಿಂದ 3ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಆದೇಶ ನೀಡಿದ ಹಿನ್ನಲೆಲೀ ಮಂಡ್ಯದಲ್ಲಿ ಆಕ್ರೋಶ ಗೊಂಡಿದ್ದಾರೆ.ಮೇಲುಸ್ತುವಾರಿ ಸಮಿತಿ ಆದೇಶ ಖಂಡಿಸಿ ಮಂಡ್ಯದಲ್ಲಿ ಬಿಜೆಪಿ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತ ರು ರಸ್ತೆ ಮದ್ಯೆವ ಹುರುಳಿಕಾಳು ಚೆಲ್ಲಿ ಪ್ರತಿಭಟನೆ ನಡೆಸುದ್ರು. ಮಂಡ್ಯದ ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಅದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು. ಮೈ – ಬೆಂ ಹೆದ್ದಾರಿ ತಡೆಯಲು ಮುಂದಾದ ಪ್ರತಿಭಟನಾಕಾರನ್ನು ಪೊಲೀಸರು ತಡೆಯಲು ಮುಂದಾದ್ರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರ ನಡುವೆ ಕೆಲ ಕಾಲ ಮಾತಿನ ಚಕಮಕಿ ಕೂಡ ನಡೀತು. ನಿಷೇಧಾಜ್ಞೆ ಜಾರಿಯಲ್ಲಿರೊ ಕಾರಣ ಪೊಲೀಸ್ರು ತಡೆ ತಡೆ ನಡೆಸದಂತೆ ಸೂಚಿಸಿದ್ರಿಂದ ವೃತ್ತದ ರಸ್ತೆ ಮದ್ಯೆ ಹುರುಳಿ ಕಾಳು ಚೆಲ್ಲಿ ಇನ್ನು ಮಂಡ್ಯ ಜಿಲ್ಲೆ ಭತ್ತ ಕಬ್ಬು ಬೆಳೆಯಲಿಕ್ಕಾದೆ ಮಳೆ ನಂಬಿ ಹುರುಳಿ ಬೆಳೆಯಬೇಕಾಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರಿದ ಪ್ರತಿಭಟನೆ:
ಮಂಡ್ಯ ಮತ್ತು ಶ್ರೀರಂಗಪಟ್ಟಣದ ಕಾವೇರಿ ಹೋರಾಟ ವೇದಿಕೆಯಲ್ಲಿ ಪ್ರತಿಭಟನೆ ಮುಂದುವರಿದಿದೆ.
ಮಂಡ್ಯ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಹಾಗೂ ಶ್ರೀರಂಗಪಟ್ಟಣದ ಕುವೆಂಪು ವೃತ್ತದ ಬಳಿಯ ವೇದಿಕೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಕಾವೇರಿ ಹೋರಾಟ ವೇದಿಕೆಯಲ್ಲಿ ಹಲವು ಹೋರಾಟಗಾರು ಭಾಗಿಯಾಗಿದ್ದಾರೆ.
ಭುಗಿಲೆದ್ದ ರೈತರ ಆಕ್ರೋಶ:
ತಲೆ ಮೇಲೆ ಚಪ್ಪಲಿ ಇಟ್ಟು ರೈತ ಸಂಘ ಕಾರ್ಯಕರ್ತರಿಂದ ಪ್ರತಿಭಟನೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದ ಮೈ-ಬೆಂ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಲಾಯಿತು.
ಸುಪ್ರೀಂಕೋರ್ಟ್ ಆದೇಶಕ್ಕೆ ಜಿ.ಮಾದೇಗೌಡ ಆಕ್ರೋಶ
ಇಂದಿನಿಂದ ಕಾವೇರಿ ಪ್ರತಿಭಟನೆಯ ಸ್ವರೂಪ ಬದಲಿಸಲು ಚಿಂತನೆ.
ನಾಳೆಯಿಂದ ಜಿಲ್ಲೆಯಲ್ಲಿ ಉಗ್ರ ಪ್ರತಿಭಟನೆಗೆ ಕರೆ.
ಪ್ರತಿ ಮನೆಯಿಂದ ಓರ್ವರಂತೆ ಕಾವೇರಿ ಚಳುವಳಿಯಲ್ಲಿ ಪಾಲ್ಗೊಳುವಂತೆ ಕರೆ ನೀಡಲಾಗಿದೆ.
Discussion about this post