ಬೆಂಗಳೂರು: ಸೆ:23; ನ್ಯಾಯಾಲಯದ ಮೇಲೆ ಗೌರವವಿದೆ, ಆದರೆ ನ್ಯಾಯಾಲಯವು ಆದೇಶ ಪಾಲನೆ ಮಾಡಲಾಗದಂತಹ ಆದೇಶ ನೀಡಿದೆ, ಸಂಕಷ್ಟ ಪರಿಸ್ಥಿತಿ ರಾಜ್ಯದಲ್ಲಿದ್ದು, ಸದನದಲ್ಲಿ ಸರ್ವಾನುಮತದಿಂದ ತೆಗೆದುಕೊಂಡ ನಿರ್ಣಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸದನದಲ್ಲಿ ನಿರ್ಣಯ ತೆಗೆದುಕೊಳ್ಳುವ ಮೂಲಕ ನ್ಯಾಯಾಲಯಕ್ಕೆ ಸೆಡ್ಡುಹೊಡೆದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಬಗ್ಗೆ ಸಮಾನ ಗೌರವವಿದೆ. ಜಲ ವರ್ಷದಲ್ಲಿ ಸಂಕಷ್ಟ ಇರುವುದರಿಂದ ಗಂಭೀರವಾಗಿ ಪರಿಗಣಿಸಿ, ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ನೀರಿಲ್ಲದೇ ಇರುವ ಆತಂಕಕಾರಿ ಅಂಶ ಪರಿಗಣಿಸಿ ಸದನದಲ್ಲಿ ಈ ನಿರ್ಣಯ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸಿದ್ದರಾಮಯ್ಯ ಅವರು ಆಡಳಿತಾರೂಢ ಸರ್ಕಾರದ ಪರವಾಗಿ ಒಪ್ಪಿಗೆ ಸೂಚಿಸಿದ ಬಳಿಕ, ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರು ನಿರ್ಣಯ ಅಂಗೀಕಾರದ ಪ್ರತಿಯನ್ನು ಓದಿ, ಸದನದ ಸಹಮತಕ್ಕೆ ಹಾಕಿದರು. ಸದನದಲ್ಲಿ ಸರ್ವಾನುಮತದಿಂದ ಒಪ್ಪಿಗೆ ವ್ಯಕ್ತವಾದ ಬಳಿಕ ಅಧ್ಯಕ್ಷರು ನಿರ್ಣಯವನ್ನು ಅಂಗೀಕರಿಸಲಾಯಿತು ಎಂದು ಸದನಕ್ಕೆ ತಿಳಿಸಿದರು.
ತಮಿಳುನಾಡಿನಲ್ಲಿ 2ನೇ ಬೆಳೆಗೆ ನೀರು ಕೇಳುತ್ತಿದೆ, ಆದರೆ ನಮ್ಮಲ್ಲಿ ಕುಡಯಲೆಂದೇ ನೀರಿಲ್ಲ, ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ವರೆಗಿನ ಪಟ್ಟಣ ಹಳ್ಳಿಗಳಿಗೆ 27 ಟಿಎಂಸಿ ನೀರು ಬೇಕು. ಬೆಳೆಗೆ 10ಕ್ಕೂ ಹೆಚ್ಚು ಟಿಎಂಸಿ ನೀರು ಬೇಕು, ಕೆರೆಗೆ ನೀರುಣಿಸಲು 11 ಟಿಎಂಸಿ ಬೇಕು. ರೈತರ ಬೆಳೆಗೆ ಮತ್ತು ಜನರಿಗೆ ಕುಡಿಯಲು ನೀರು ಕೊಡುವುದು ನಮ್ಮ ಜವಾಬ್ದಾರಿ, ಸದನ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ಸರ್ಕಾರ ಬದ್ಧವಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕೆಟ್ಟ ಸನ್ನಿವೇಶ ನಿರ್ಮಾಣವಾಗಿದೆ. ಸೆ. 20ರಂದು ಸುಪ್ರೀಂ ಕೋರ್ಟ್ ಆದೇಶ ಬಂದಮೇಲೆ ಅನಿವಾರ್ಯವಾಗಿ ಅತ್ಯಂತ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸದನ ಸೇರಿದ್ದೇವೆ’.
ರಾಜ್ಯದ ಕಾವೇರಿ ಕೊಳ್ಳದ ಕೆಆರ್ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಇಷ್ಟೊಂದು ಮಳೆ ಕೊರತೆ ಯಾವಾಗಲೂ ಆಗಿಲ್ಲ. ಸಾಮಾನ್ಯ ಮಳೆ ಎಷ್ಟು ಬರಬೇಕಿತ್ತೊ ಅದಕ್ಕಿಂತ ಕನಿಷ್ಠಮಟ್ಟದ ಮಳೆಯಾಗಿದೆ, ನಾಲ್ಕೂ ಜಲಾಶಯಗಳಿಂದ 27.6 ಟಿಎಂಸಿ ನೀರು ಮಾತ್ರ ಇದೆ ಈ ನೀರು ಮೇ ಕೊನೇವರೆಗೆ ಬರಬೇಕು, ಈಗಿರುವ ನೀರೇ ಸಾಕಾಗುವುದಿಲ್ಲ ಎಂದು ಹೇಳಿದರು.
ನಮ್ಮ ರೈತರು ಉಳಿಬೇಕು, ಜನರಿಗೂ ನೀಡಬೇಕು. ತಮಿಳುನಾಡಿನ ರೈತರಿಗೂ ನೀರು ಬೇಕು. ಅವರೂ ಉಳಿಯಬೇಕು. ಅವರಿಗೆ ಸಾಂಬಾ ಬೆಳೆಗೆ. ನಮಗೆ ಕುಡಿಯುವ ನೀರಿಗಾಗಿ ಉಳಿಸಿಕೊಳ್ಳಬೇಕಿದೆ. ನಮ್ಮಲ್ಲಿ ಕುಡಿಯವ ನೀರಿಗಾಗಿ 24.11 ಟಿಎಂಸಿ ಬೇಕು, ಹಾಗೆ ಇರುವ ನೀರು ಬಿಸಿಲಿಗೆ ಆವಿಯಾಗುತ್ತಾ ಹೋಗುತ್ತದೆ, ಇದನ್ನೆಲ್ಲ ಪರಿಗಣಿಸಬೇಕು ಎಂದು ಹೇಳಿದರು.
ತಮಿಳುನಾಡು ಆಕ್ಷೇಪಣೆ:
ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶಿಸಿರುವ ಪ್ರಕಾರ ಕನರ್ಾಟಕವು ಇನ್ನೂ 17 ಟಿಎಂಸಿ ನೀರು ಬಿಡುಗಡೆ ಮಾಡಬೇಕೆಂದು ಸುಪ್ರೀಂಕೋಟರ್್ ನಲ್ಲಿ ತಮಿಳುನಾಡು ಸುಪ್ರೀಂಕೋಟರ್್ ನಲ್ಲಿ ತಮಿಳುನಾಡು ಆಕ್ಷೇಪವನ್ನು ಸಲ್ಲಿಸಿದೆ.
ತಮಿಳುನಾಡು ಆಕ್ಷೇಪ ಸಲ್ಲಿಸಿದ ನಂತರ ಕನರ್ಾಟಕವೂ ಆಕ್ಷೇಪ ಸಲ್ಲಿಸಿದೆ. ಕೇವಲ 27.6 ಟಿಎಂಸಿ ಅಡಿ ನೀರು ಮಾತ್ರ ಇದೆ. ರಾಜ್ಯದ ಜನರಿಗೆ 26.33 ಟಿಎಂಸಿ ಮಾತ್ರ ನೀರು ಕುಡಿಯುವುದಕ್ಕೆ ಬೇಕು ಎಂದು ತಿಳಿಸಿದೆ.
Discussion about this post