ನವದೆಹಲಿ, ಸೆ.1: ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿರುವ ಸಂದೀಪ್ ಕುಮಾರ್, ಪ್ರತಿದಿನ ಕೆಲಸಕ್ಕೆ ಹರಡುವ ಮುನ್ನ ತಮ್ಮ ಪತ್ನಿ ಕಾಲಿಗೆ ನಮಸ್ಕರಿಸುತ್ತಾರೆ ಎಂದು ಖ್ಯಾತರಾಗಿದ್ದರು. ಆದರೆ, ಸೆಕ್ಸ್ ಸ್ಕ್ಯಾಂಡಲ್ ಒಂದರಲ್ಲಿ ಸಂದೀಪ್ ಕುಮಾರ್ ಹೆಸರು ಕೇಳಬಂದಿರುವ ಹಿನ್ನೆಲೆಯಲ್ಲಿ ಎಎಪಿ ಮಂತ್ರಿಯ ನೈತಿಕತೆ ಈಗ ಪ್ರಶ್ನಾರ್ಹವಾಗಿದೆ.
ಎಎಪಿ ಮೂಲಗಳ ಪ್ರಕಾರ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಸೆಕ್ಸ್ ಸ್ಕ್ಯಾಂಡಲ್ ವೊಂದರಲ್ಲಿ ಸಂದೀಪ್ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಕುರಿತ ಸಿಡಿ ಒಂದನ್ನು ಕೇಜ್ರಿವಾಲ್ ಗೆ ನೀಡಲಾಗಿದೆ. ಎರಡು ಹುಡುಗಿಯರ ಜೊತೆಯಲ್ಲಿ ಅಶ್ಲೀಲ ರೀತಿಯಲ್ಲಿ ಸಂದೀಪ್ ಇರುವುದು ವೀಡಿಯೋದಲ್ಲಿ ದಾಖಲಾಗಿದೆ ಎಂದು ಹೇಳಲಾಗಿದ್ದು, ಇದರ ಪೋಟೋಗಳೂ ಲಭ್ಯವಾಗಿವೆ ಎಂದು ವರದಿಯಾಗಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅರವಿಂದ ಕೇಜ್ರಿವಾಲ್, ಸಂದೀಪ್ ಕುರಿತಾದ ಸಿಡಿಯನ್ನು ಪರಿಶೀಲನೆ ನಡೆಸಿದ್ದೇನೆ. ಅವರು ತಪ್ಪಿತಸ್ತರು ಎಂದು ಸಾಬೀತಾದರೆ ಕ್ರಮ ಕೈಗೊಳ್ಳುತ್ತೇನೆ. ಸಾರ್ವಜನಿಕರ ಹಿತಕ್ಕಾಗಿ ಎಎಪಿ ಎಂದಿಗೂ ನಿಂತಿದೆ. ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಆರೋಪ ಕೇಳಿಬಂದಿರುವ ಸಂದೀಪ್ ಅವರನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡುತ್ತಿದ್ದೇನೆ ಎಂದಿದ್ದಾರೆ.
ಸೆಕ್ಸ್ ಸ್ಕ್ಯಾಂಡಲ್ ಆರೋಪದಲ್ಲಿ ಸಿಲುಕಿರುವ ಸಂದೀಪ್ ಕುಮಾರ್, ಪ್ರತಿದಿನ ತನ್ನ ಪತ್ನಿ ಕಾಲಿಗೆ ನಮಸ್ಕರಿಸಿಯೇ ಹೊರಗೆ ತೆರಳುತ್ತಾರೆ ಎಂದು ದೇಶದೆಲ್ಲೆಡೆ ಸುದ್ಧಿಯಾಗಿದ್ದರು. ಪತ್ನಿಗೆ ಈತ ನೀಡುವ ಗೌರವ ಕುರಿತು ಹಲವೆಡೆ ಉತ್ತಮ ಚರ್ಚೆಗಳು ನಡೆದಿದ್ದವು. ಆದರೆ, ಈಗ ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಲುಕಿರುವುದು ಎಎಪಿಯನ್ನು ನಗೆಪಾಟಲಿಗೆ ಈಡುಮಾಡಿದೆ.
ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದಲ್ಲಿರುವ ಮಂತ್ರಿಗಳು ಹಾಗೂ ಶಾಸಕರು ಒಬ್ಬೊಬ್ಬರ ಮೇಲೆಯೇ ವಿವಿಧ ಆರೋಪಗಳು ಕೇಳಿಬರುತ್ತಿದ್ದು, ಈಗಾಗಲೇ ಹಲವರ ಬಂಧನವಾಗಿರುವುದು ಎಎಪಿ ನೈತಿಕತೆಯ ಪ್ರಶ್ನೆ ಉದ್ಭವಿಸಿದೆ.
Discussion about this post