Read - < 1 minute
ಶ್ರೀನಗರ, ಅ.19: ಪಿಒಕೆ ಮೇಲಿನ ಸರ್ಜಿಕಲ್ ಸ್ಟ್ರೈಕ್ ಯಶಸ್ಸಿನ ಹಿನ್ನೆಲೆಯಲ್ಲಿಯೇ ಜಮ್ಮು ಕಾಶ್ಮೀರದ ಬಾರಾಮುಲ್ಲಾ ವಲಯದಲ್ಲಿ ಉಗ್ರರ ಸುಮಾರು 10 ಅಡಗುತಾಣಗಳ ಮೇಲೆ ದಾಳಿ ನಡೆಸಿರುವ ಸೇನೆ, ಅವನ್ನು ನಾಶಪಡಿಸಿವೆ.
ಈ ಮೂಲಕ ಭಾರತೀಯ ಸೇನಾ ಪಡೆಗಳಿಗೆ ಮತ್ತೊಂದು ಬೃಹತ್ ಯಶಸ್ಸು ಸಂದಿದೆ. ಇದೇ ವೇಳೆ ಉಗ್ರ ಸಂಬಂಧಿ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಸುಮಾರು 44 ದುಷ್ಕರ್ಮಿಗಳನ್ನು ಸೇನೆ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.
ಅಕ್ಟೋಬರ್ 17ರಂದು ಸುಮಾರು ಹನ್ನೆರಡು ತಾಸುಗಳ ಕಾಲ ಬಾರಾಮೂಲಾ ವಲಯದಲ್ಲಿನ ಸುಮಾರು 700 ಮನೆಗಳ ಬಿರುಸಿನ ಶೋಧ ಕಾರ್ಯಾಚರಣೆಯನ್ನು ಸೇನೆಯು ಕೈಗೊಂಡಿತ್ತು. ಭಯೋತ್ಪಾದಕ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಸುಮಾರು ೪೪ ಮಂದಿಯನ್ನು ಈ ಶೋಧ ಕಾರ್ಯಾಚರಣೆಯಲ್ಲಿ ಬಂಧಿಸಲಾಯಿತು ಎಂದು ಸೇನಾ ವಕ್ತಾರ ತಿಳಿಸಿದ್ದಾರೆ.
ನಿನ್ನೆ ತಡರಾತ್ರಿಯಿಂದ ನಡೆದ ಈ ಕಾರ್ಯಾಚರಣೆಯಲ್ಲಿ ಸೇನಾ ಪಡೆಗಳು ಭಯೋತ್ಪಾದಕರಿಗೆ ಸೇರಿದ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ಉಗ್ರರ ಮತ್ತಷ್ಟು ಅಡಗುತಾಣಗಳ ಸುಳಿವು ದೊರೆತಿದ್ದು, ಕಾರ್ಯಾಚರಣೆ ಮುಂದುವರೆಯುತ್ತದೆ ಎಂದು ಹೇಳಲಾಗಿದೆ.
ಉಗ್ರರ ಈ ಅಡಗುದಾಣದಲ್ಲಿ ಚೀನಾ ಮತ್ತು ಪಾಕಿಸ್ಥಾನದ ಧ್ವಜಗಳು ಮಾತ್ರವಲ್ಲದೆ ಬಾಂಬುಗಳು, ಪಾಕ್ ಮೂಲದ ಲಷ್ಕರ್ ಎ ತಯ್ಯಬ ಮತ್ತು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗಳ ಲೆಟರ್‌ಹೆಡ್‌ಗಳು, ಪತ್ತೆಯಾಗಿವೆ.
ಈ ಕುರಿತಂತೆ ಮಾತನಾಡಿರುವ ಸೇನಾಧಿಕಾರಿಯೊಬ್ಬರು, ಶೋಧ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಪೆಟ್ರೋಲ್ ಬಾಂಬ್‌ಗಳು, ಚೀನೀ ಮತ್ತು ಪಾಕಿಸ್ಥಾನಿ ಧ್ವಜಗಳು, ಎಲ್‌ಇಟಿ ಮತ್ತು ಜೆಇಎಂ ಲೆಟರ್‌ಹೆಡ್ ಪ್ಯಾಡ್‌ಗಳು, ಅನಧಿಕೃತ ಮೊಬೈಲ್ ಪೋನ್‌ಗಳು, ರಾಷ್ಟ್ರ ವಿರೋಧಿ ಪ್ರಚಾರ ಸಾಹಿತ್ಯಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಈ ಕಾರ್ಯಾಚರಣೆಯನ್ನು ಸೇನೆಯು ಪೊಲೀಸರು, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ತಂಡದವರೊಂದಿಗೆ ಸೇರಿಕೊಂಡು ಕನಿಷ್ಠ ಹತ್ತು ತಾಣಗಳಲ್ಲಿ ನಡೆಸಿದವು.
ಇವುಗಳಲ್ಲಿ ಕಾಜಿ ಹಮಾಮ್, ಗನಾಯಿ ಹಮಾಮ್, ತವೀದ್ ಗಂಜ್, ಜಾಮಿಯಾ ಮತ್ತು ಇತರ ಮೊಹಲ್ಲಾಗಳು ಮುಖ್ಯವಾಗಿದ್ದವು. ಈ ತಾಣಗಳು ಪಾಕ್ ಉಗ್ರರಿಗೆ ಸುರಕ್ಷಿತ ಅಡಗುದಾಣಗಳಾಗಿದ್ದವು ಎಂದು ಸೇನಾ ವಕ್ತಾರ ಹೇಳಿದ್ದಾರೆ.
ಉಗ್ರರ ಈ ಅಡಗುದಾಣದಲ್ಲಿ ಚೀನಾ ಮತ್ತು ಪಾಕಿಸ್ಥಾನದ ಧ್ವಜಗಳು ಮಾತ್ರವಲ್ಲದೆ ಬಾಂಬುಗಳು, ಪಾಕ್ ಮೂಲದ ಲಷ್ಕರ್ ಎ ತಯ್ಯಬ ಮತ್ತು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗಳ ಲೆಟರ್‌ಹೆಡ್‌ಗಳು, ಪತ್ತೆಯಾಗಿವೆ. ಶೋಧ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಪೆಟ್ರೋಲ್ ಬಾಂಬ್‌ಗಳು, ಚೀನೀ ಮತ್ತು ಪಾಕಿಸ್ಥಾನಿ ಧ್ವಜಗಳು, ಎಲ್‌ಇಟಿ ಮತ್ತು ಜೆಇಎಂ ಲೆಟರ್‌ಹೆಡ್ ಪ್ಯಾಡ್‌ಗಳು, ಅನಧಿಕೃತ ಮೊಬೈಲ್ ಪೋನ್‌ಗಳು, ರಾಷ್ಟ್ರ ವಿರೋಧಿ ಪ್ರಚಾರ ಸಾಹಿತ್ಯಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
-ಸೇನಾಧಿಕಾರಿ
Discussion about this post