ಮೈಸೂರು, ಸೆ.16: ಶ್ರೀಕೃಷ್ಣಧಾಮದಲ್ಲಿ ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ೩೮ನೇ ಹಾಗು ಅದಮಾರು ಮಠದ ಕಿರಿಯ ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ತಮ್ಮ ೩ನೇ ಚಾತುರ್ಮಾಸ್ಯವ್ರತವನ್ನು ಕೈಗೊಂಡಿದ್ದು ೪೮ ದಿನಗಳ ಈ ಚಾತುರ್ಮಾಸ್ಯವ್ರತದ ಸಮಾರೋಪ ಸಮಾರಂಭ ನಿನ್ನೆ ಸಂಜೆ ನಡೆಯಿತು.
ಸಮಾರಂಭದಲ್ಲಿ ಅವದೂತ ದತ್ತಪೀಠದ ಕಿರಿಯ ಸ್ವಾಮೀಜಿ ಶ್ರೀ ಶ್ರೀ ದತ್ತವಿಜಯಾನಂದ ಸ್ವಾಮೀಜಿಯವರು, ಸಂಸದ ಪ್ರತಾಪಸಿಂಹ, ಡಾ. ಡಿ. ಪ್ರಹ್ಲಾದಾಚಾರ್ಯ, ಚಾತುರ್ಮಾಸ್ಯವ್ರತ ಸಮಿತಿಯ ಅಧ್ಯಕ್ಷರಾದ ಶ್ರೀಕೃಷ್ಣದಾಸ ಪುರಾಣಿಕ್, ಕಾರ್ಯದರ್ಶಿಗಳಾದ ಶ್ರೀರವಿ ಶಾಸ್ತ್ರಿ , ಶ್ರೀರಾಜೀವ್ ಹಾಗು ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
Discussion about this post