ಶಿವಮೊಗ್ಗ, ಸೆ.21: ದಲಿತ, ಹಿಂದುಳಿದ ಮತ್ತು ಬಡವರಿಗೆ ಅನ್ಯಾಯವಾಗಲು ಎಂದಿಗೂ ಬಿಡುವುದಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಅ.೧ರಂದು ಹಾವೇರಿಯಲ್ಲಿ ನಡೆಯಲಿರುವ ಸಂಗೊಳ್ಳಿರಾಯಣ್ಣ ಬ್ರಿಗೇಡ್‌ನ ಸಮಾವೇಶದ ಸಿದ್ದತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯನವರು ಚುನಾವಣೆ ಬರುತ್ತಿದ್ದಂತೆ ನಾವಿರುವುದು ದಲಿತರ, ಬಡವರ, ಹಿಂದುಳಿದ ವರ್ಗದವರ ಉದ್ದಾರಕ್ಕೆ ಅವರಿಗೆ ನ್ಯಾಯ ದೊರಕಿಸಿಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅವರ ಮೂರುವರೆ ವರ್ಷದ ಆಡಳಿತದಲ್ಲಿ ಕೇವಲ ಇವರಿಗೆ ಅನ್ಯಾಯವಾಗಿದೆ ಹೊರತು ಯಾವುದೇ ಸೌಲಭ್ಯವಾಗಲಿ ಸಹಾಯವಾಗಲಿ ಸಿಗುತ್ತಿಲ್ಲ ಎಂದು ಕಿಡಿಕಾರಿದ ಅವರು, ರಾಯಣ್ಣ ಬ್ರಿಗೇಡ್ ಹುಟ್ಟಿರುವುದೇ ದಲಿತರ, ಹಿಂದುಳಿದವರ ಮತ್ತು ಬಡವರ ಉದ್ದಾರಕ್ಕಾಗಿ ಮತ್ತು ಅವರಿಗೆ ಸಿಗಬೇಕಾದ ನ್ಯಾಯ ಕೊಡಿಸುವುದಕ್ಕಾಗಿ ಎಂದರು.
ದಲಿತರ ಹಿಂದುಳಿದವರ ಮತ್ತು ಬಡವರ ಅಭಿವೃದ್ಧಿ ಮಾಡುವುದೇ ಬಿಜೆಪಿಯ ಗುರಿ ಇದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿಯೂ ಇಲ್ಲ. ರಾಯಣ್ಣ ಬ್ರಿಗೇಡ್ ಮೂಲಕ ಬಿಜೆಪಿಯನ್ನು ಬೆಂಬಲಿಸಬೇಕು. ಕಾಂಗ್ರೆಸ್‌ನ ದುರಾಡಳಿತದಿಂದ ಬೇಸತ್ತಿರುವ ಅನೇಕರು ಕಾಂಗ್ರೆಸ್ ಬಿಟ್ಟು ಅನೇಕರು ಬ್ರಿಗೇಡ್‌ಗೆ ಸೇರಿದ್ಧಾರೆ. ಹಲವು ಮಠಾಧೀಶರು, ನಿವೃತ್ತ ಅಧಿಕಾರಿಗಳು ನೇರವಾಗಿ ಬಿಜೆಪಿಯನ್ನು ಸೇರದಿರುವವರು ಬ್ರಿಗೇಡ್ ಮೂಲಕ ಬಿಜೆಪಿಯನ್ನು ಕಟ್ಟಲಿದ್ದಾರೆ. ಇದರಿಂದ ಬಿಜೆಪಿ ಮತ್ತಷ್ಟು ಗಟ್ಟಿಯಾಗುತ್ತದೆ ಎಂದರು ಸ್ಪಷ್ಟಪಡಿಸಿದರು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರಿಗೆ ಇನ್ನು ಗೊಂದಲವಿದೆ. ಆದಷ್ಟು ಬೇಗ ಅವರು ಆ ಗೊಂದಲದಿಂದ ಹೊರಬರುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ದಲಿತರಿಗೆ ಯಾವ ನ್ಯಾಯವನ್ನು ನೀಡಿಲ್ಲ ಕೇವಲ ಅವರನ್ನು ತಮ್ಮ ಓಟ್‌ಬ್ಯಾಂಕ್‌ನ್ನಾಗಿ ಮಾಡಿಕೊಂಡಿದೆಯೇ ವಿನಃ ಯಾವ ಕಲ್ಯಾಣವನ್ನು ಮಾಡಿಲ್ಲ. ಅವರ ಅಭಿವೃದ್ಧಿಯೂ ಆಗಿಲ್ಲ, ದಲಿತರಿಗೆ ಕುಡಿಯಲು ನೀರು ಸಹಾ ಸಿಗದ ಪರಿಸ್ಥಿತಿಬಂದಿದೆ. ಅವರ ಸ್ಥಿತಿ ಹೀನಾಯವಾಗುತ್ತಿದೆ. ಯಾವಾಗ ಕಾಂಗ್ರೆಸ್ ಸರ್ಕಾರ ದಲಿತರನ್ನ ಕಡೆಗಾಣಿಸಿತೋ ಆಗ ನಾವು ಬ್ರಿಗೇಡ್ ಮೂಲಕ ದಲಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ. ಆ ಮೂಲಕ ಬಿಜೆಪಿಯನ್ನು ಬೆಳೆಸುತ್ತಿದ್ಧೇವೆ ಎಂದರು.
ತಾನು ಜಾತಿ ಹಿಂದೆ ನಾವು ಎಂದೂ ಹೋಗುವವರಲ್ಲ. ಎಂದಿಗೂ ಹಿಂದುತ್ವದ ಪರವಾಗಿ ಇರುವವನು ಎಂದ ಅವರು, ನಮ್ಮ ಮುಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ. ಬ್ರಿಗೇಡ್ ಮೂಲಕವೇ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು. ಹಾವೇರಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ತಮ್ಮ ಜೊತೆಗೆ ತಮ್ಮ ತಂಡವನ್ನು ಕರೆದುತರಬೇಕು. 50 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಆ ಮೂಲಕ ದಲಿತರ, ಹಿಂದುಳಿದವರ ಏಳಿಗೆಗಾಗಿ ನಾವು ದುಡಿಯೋಣ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಾಡುವ ಮೊದಲ ಕೆಲಸವೇ ಹಿಂದುಳಿದವರ ಮತ್ತು ದಲಿತ ವರ್ಗಗಳ ಉದ್ದಾರ ಎಂದು ಘೋಷಣೆ ಮಾಡಿದರು.
ಸಭೆಯಲ್ಲಿ ರಾಯಣ್ಣ ಬ್ರಿಗೇಡ್‌ನ ಪ್ರಮುಖರಾದ ವಿರೂಪಾಕ್ಷಪ್ಪ, ಹುಲ್ತಿಕೊಪ್ಪ ಶ್ರೀಧರ್, ನಿವೃತ್ತ ಐಎಎಸ್ ಅಧಿಕಾರಿ ಪುಟ್ಟಸ್ವಾಮಿ, ವೆಂಕಟೇಶ ಮೂರ್ತಿ, ನೀಲಮೇಗನಾ, ಕೊಟ್ರೇಸ್, ಸೋಮಶೇಖರ್,ಕೆ.ಇ. ಕಾಂತೇಶ್, ವೆಂಕ್ಯಾನಾಯ್ಕ ಸೇರಿದಂತೆ ಹಲವರಿದ್ದರು.
ಯಡಿಯೂರಪ್ಪ ಮತ್ತು ಈಶ್ವರಪ್ಪನವರಿಗೆ ದಲಿತ ಹಿಂದುಳಿದ ಮತ್ತು ಬಡವರ ಮೇಲೆ ಪ್ರೀತಿ ಹುಟ್ಟುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಸಿದ್ದರಾಮಯ್ಯನವರು ದಲಿತರನ್ನು ಮತ್ತು ಬಡವನ್ನು ಕಡೆಗಣಿಸಿದ್ದಕ್ಕಾಗಿಯೇ ತಮಗೆ ಇವರ ಮೇಲೆ ಪ್ರೀತಿ ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರ ದಲಿತರಿಗೆ ಯಾವ ನ್ಯಾಯವನ್ನು ನೀಡಿಲ್ಲ ಕೇವಲ ಅವರನ್ನು ತಮ್ಮ ಓಟ್‌ಬ್ಯಾಂಕ್‌ನ್ನಾಗಿ ಮಾಡಿಕೊಂಡಿದೆಯೇ ವಿನಃ ಯಾವ ಕಲ್ಯಾಣವನ್ನು ಮಾಡಿಲ್ಲ. ಅವರ ಸ್ಥಿತಿ ಹೀನಾಯವಾಗುತ್ತಿದೆ. ಯಾವಾಗ ಕಾಂಗ್ರೆಸ್ ಸರ್ಕಾರ ದಲಿತರನ್ನ ಕಡೆಗಾಣಿಸಿತೋ ಆಗ ನಾವು ಬ್ರಿಗೇಡ್ ಮೂಲಕ ದಲಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ. ಆ ಮೂಲಕ ಬಿಜೆಪಿಯನ್ನು ಬೆಳೆಸುತ್ತಿದ್ಧೇವೆ.
ಕಾರ್ಯಕ್ರಮಕ್ಕೂ ಮುನ್ನಾ ಬ್ರಿಗೇಡ್ ವತಿಯಿಂದ ನಗರದ ಸರ್ಕ್ಯೂಟ್ ಹೌಸ್ ನಿಂದ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು. ನೂರಾರು ಕಾರ್ಯಕರ್ತರು ರ‌್ಯಾಲಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಜಿಪಂ ಸದಸ್ಯ ಕೆ.ಈ. ಕಾಂತೇಶ್ ರ‌್ಯಾಲಿಯ ನೇತೃತ್ವವಹಿಸಿ ಯುವಕರ ಉತ್ಸಾಹ ಇಮ್ಮಡಿಗೊಳಿಸುತ್ತಿದ್ದರು. ಕಾರ್ಯಕ್ರಮ ಕೊಂಚ ತಡವಾಗಿ ಪ್ರಾರಂಬವಾದರೂ ನೆರೆದಿದ್ದವರ ಉತ್ಸಾಹ ಕಡಿಮೆ ಆಗಿರಲಿಲ್ಲ.
Discussion about this post