Read - < 1 minute
ರಿಯೊ: ಅಥ್ಲೀಟ್ ದೀಪಾ ಮಲಿಕ್ ಮಹಿಳಾ ಶಾಟ್ಪುಟ್ ಫೈನಲ್ ನಲ್ಲಿ 4.61ಮೀ. ದೂರ ಎಸೆದು ಬೆಳ್ಳಿ ಪದಕ ಪಡೆದರು. ಈ ಮೂಲಕ ಬೆಳ್ಳಿ ಪದಕ ಪಡೆದ ಮೊದಲ ಭಾರತೀಯ ಪ್ಯಾರಾ ಒಲಿಂಪಿಕ್ ಅಥ್ಲೀಟ್ ಎಂಬ ಖ್ಯಾತಿಗೆ ಭಾಜನರಾದರು.
4.61ಮೀ. ದೂರ ಎಸೆದು ಎರಡನೇ ಸ್ಥಾನ ಪಡೆದಿರುವ ದೀಪಾ ಮಲಿಕ್ ಇದು ಅವರ ಅತ್ಯುತ್ತಮ ವೈಯಕ್ತಿಕ ಸಾಧನೆಗಳಲ್ಲಿ ಒಂದಾಗಿದೆ.
ದೀಪಾ ಮಲಿಕ್ ಮೊದಲ ಪ್ರಯತ್ನದಲ್ಲಿ 4.26ಮೀ. ದೂರ ಎಸೆದರು. ಎರಡನೇ ಪ್ರಯತ್ನದಲ್ಲಿ 4.49ಮೀ., ಮೂರನೇ ಪ್ರಯತ್ನದಲ್ಲಿ 4.41ಮೀ., ನಾಲ್ಕನೆ ಮತ್ತು ಅಂತಿಮ ಪ್ರಯತ್ನದಲ್ಲಿ 4.61ಮೀ. ದೂರ ಎಸೆದು ಹೊಸ ದಾಖಲೆ ಬರೆದ ಸಾಧನೆ ಮಾಡಿದರು.
ಪದಕ ಗೆದ್ದಿರುವುದು ತುಂಬ ಖುಷಿಯಾಗಿದೆ. ಇದು ನನ್ನ ಜೀವನದ ಗುರಿಯಾಗಿತ್ತು ಎಂದು ದೀಪಾ ಮಲಿಕ್ ಸಂತಸ ಹಂಚಿಕೊಂಡಿದ್ದಾರೆ.
ಮೊದಲ ಸ್ಥಾನವನ್ನು ಬೆಹ್ರಾನ್ನ ಫಾತೀಮಾ ನೆದಂ 4.76ಮೀ. ದೂರ ಎಸೆದು ಚಿನ್ನದ ಪದಕ ಪಡೆದರು. ಗ್ರೀಸ್ ನ ಡಿಮಿಟ್ರಿ ಕೊರೊಕಿಡಾ 4.28ಮೀ. ದೂರ ಎಸೆದು ಕಂಚಿನ ಪದಕ ಪಡೆದರು.
Discussion about this post