Read - 2 minutes
ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರಗಳ ಗೌಪ್ಯ ಮಾಹಿತಿಯನ್ನು ಕಳುವು ಮಾಡಿದ್ದಾರೆ ಎಂದು ಬಿಜೆಪಿ ಸಾಂಸದ ಹಾಗೂ ರಕ್ಷಣಾ ಇಲಾಖೆಯ ಸ್ಥಾಯಿ ಸಮಿತಿ ಸದಸ್ಯ ವರುಣ್ ಗಾಂಧಿ ವಿರುದ್ಧ ಆರೋಪ ವೊಂದು ಕೇಳಿಬಂದಿದೆ.
ಈ ಕುರಿತಂತೆ ದೇಶದಲ್ಲಿ ಈ ವಿಚಾರ ಭಾರೀ ಸಂಚಲನ ಸೃಷ್ಠಿಸಿದ್ದು, ವಿದೇಶಿ ಶಸ್ತ್ರಾಸ್ತ್ರ ದಲ್ಲಾಳಿಗಳು ಹನಿ ಟ್ರ್ಯಾಪ್ ಮೂಲಕ ದೇಶದ ಅಮೂಲ್ಯ ಮಾಹಿತಿ ಗಳನ್ನು ವರುಣ್ ಅವರಿಂದ ಕಳ್ಳತನ ಮಾಡಿಸಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಈ ಕುರಿತಂತೆ ಪ್ರಧಾನಿ ಕಚೇರಿಗೆ ದಾಖಲೆ ಸಹಿತ ದೂರು ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ವರುಣ್ ಗಾಂಧಿ ವಿರುದ್ಧ ಕೇಳಿಬಂದಿರುವ ಈ ಆರೋಪ ಅತ್ಯಂತ ಗುರುತರವಾಗಿದ್ದು ಹಾಗೂ ದೇಶದ ಭದ್ರತಾ ವ್ಯವಸ್ಥೆಯನ್ನೇ ಬದಲಿಸುವ ಸಾಮರ್ಥ್ಯವಿರ ಬಹುದಾದ ಅಂಶವಾಗಿದೆ.
ಭಾರತ ಹಾಗೂ ಪಾಕಿಸ್ಥಾನ ನಡುವಿನ ಕಲಹ ತಾರಕ ಕ್ಕೇರಿರುವಂತಯೇ, ಯುದ್ಧ ಘೋಷಣೆಯಾಗುವ ಸಾಧ್ಯತೆಯಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಇದೇ ವೇಳೆ ನೌಕಾ ವ್ಯವಸ್ಥೆಯಲ್ಲಿ ಚೀನಾ ಹಲವು ರೀತಿ ಯಲ್ಲಿ ಭಾರತ ಭದ್ರತಾ ವ್ಯವಸ್ಥೆಗೆ ಸವಾಲು ಹಾಕುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ವರುಣ್ ವಿರುದ್ಧ ಕೇಳಿಬಂದಿರುವ ಆರೋಪದ ವಿಚಾರದಲ್ಲಿ ಕೂಲಂಕಶ ತನಿಖೆ ನಡೆ ಯಬೇಕಿದೆ. ಭಾರತ ಈಗ ಮೊದಲಿಗಿಂತಲೂ ಅತ್ಯಂತ ಸೂಕ್ಷ್ಮ ದಿನಗಳನ್ನು ಎದುರಿಸುತ್ತಿದೆ. ಹೀಗಾಗಿ, ದೇಶದ ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಲೋಪ ದೋಷಗಳನ್ನು ಸಹಿಸಲು ಸಾಧ್ಯವಿಲ್ಲ.
ವರುಣ್ ಗಾಂಧಿ ಯಾವುದೇ ಪಕ್ಷಕ್ಕೆ ಸೇರಿರಲಿ, ಅದು ವಿಚಾರವಾಗುವುದಿಲ್ಲ. ಆದರೆ, ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿ ಕಳವು ಆಗಿದೆ ಎಂದಾದರೆ ಅದು ಅತ್ಯಂತ ಗುರುತರವಾದ ಆರೋಪವೇ ಹೌದು. ಒಂದು ಹೀಗಾಗಿ, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ತತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಿ,ಸತ್ಯಾಂಶವನ್ನು ಹೊರ ತರಬೇಕು. ಒಂದು ವೇಳೆ ವರುಣ್ ತಪ್ಪೇ ಮಾಡಿದ್ದರೆ, ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆಯಾಗಲೇಬೇಕು. ಅದು ಸಾಧಾರಣ ಶಿಕ್ಷೆಯಲ್ಲಿ, ಅತ್ಯಂತ ಕಠಿಣ ಶಿಕ್ಷೆಯಾಗಲೇಬೇಕು. ಕಾರಣ, ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರ. ಈ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ, ಎಲ್ಲರೂ ಒಂದೇ.
ಇದೇ ವೇಳೆ, ದೇಶದ ರಾಜಕಾರಣಿಗಳ ಇತಿಹಾಸವನ್ನೊವ್ಮೆು ತಿರುವಿ ನೋಡುವುದಾದರೆ, ಲಂಚ ಎನ್ನುವುದನ್ನು ಬಾಯಿ ಬಿಡದವನು ಯಾರೂ ಇಲ್ಲ. ಇದ್ದರೆ ಒಂದಿಬ್ಬರು ಮಾತ್ರ. ಇನ್ನು ಹೆಂಡ, ಹೆಣ್ಣು ಎಂದಾಕ್ಷಣ ಬಾಯಿ ಬಿಡುತ್ತಾ, ತಮ್ಮ ಸ್ಥಾನ ಹಾಗೂ ಹುದ್ದೆಯ ಘಟತೆಯನ್ನು ಮಣ್ಣುಪಾಲು ಮಾಡಿರುವ ರಾಜಕಾರಣಿಗಳ ಹೆಸರಿನ ಪಟ್ಟಿ ಉದ್ದವಿದೆ.
ಯಾವುದೇ ಒಂದು ಗುರುತರವಾದ ಹುದ್ದೆ ನಿರ್ವಹಣೆಯ ಜವಾಬ್ದಾರಿಯಿದ್ದಾಗ ಆ ವ್ಯಕ್ತಿಗೆ ಒಂದಷ್ಟು ನೈತಿಕತೆ, ಸಿದ್ದಾಂತ, ನೀತಿ, ನಿಯಮಗಳು ಇರಬೇಕು. ಯಾವುದೇ ಉನ್ನತ ಹುದ್ದೆಯಲ್ಲಿದ್ದಾಗ ಅದರಿಂದ ಲಾಭ ಪಡೆದುಕೊಳ್ಳುವವರು, ದುರ್ಲಾಭ ಮಾಡಿಕೊಳ್ಳುವವರು ಹಾಗೂ ಶತ್ರುಗಳು ಹೆಚ್ಚು ಸಕ್ರಿಯರಾಗಿರುತ್ತಾರೆ ಎನ್ನುವುದು ಸತ್ಯ.
ಎಲ್ಲಕ್ಕೂ ಮಿಗಿಲಾಗಿ ಉನ್ನತಾಧಿಕಾರದಲ್ಲಿರುವ ವ್ಯಕ್ತಿಯೊಬ್ಬ ಕೈ, ಬಾಯಿ ಹಾಗೂ ಕಚ್ಚೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು.
ಈ ಪ್ರಕರಣದಲ್ಲಿ ನೋಡುವುದಾದರೆ, ವರುಣ್ ಗಾಂಧಿ ಹನಿಟ್ರ್ಯಾಪ್‌ಗೆ ಒಳಗಾಗಿ, ಭದ್ರತಾ ಮಾಹಿತಿಯನ್ನು ನೀಡಿದ್ದೇ ಸತ್ಯವಾದಲ್ಲಿ, ಅದು ಯಾವುದೇ ಕಾರಣಕ್ಕೂ ಕ್ಷಮೆ ಅರ್ಹವಾದುದಲ್ಲ. ಅದಕ್ಕೆ ಅತ್ಯಂತ ಕಠಿಣ ಶಿಕ್ಷೆಯಾಗಲೇಬೇಕು.
ಅದೇ ರೀತಿ, ವರುಣ್ ವಿರುದ್ಧ ಆರೋಪ ಮಾಡಿರು ವುದು ಒಂದು ಖಾಸಗೀ ಸಂಸ್ಥೆ. ಆರೋಪ ಗುರುತರವಾ ದುದು ಎನ್ನುವುದು ಸತ್ಯ. ಆದರೆ, ಆ ಆರೋಪದಲ್ಲಿ ಎಷ್ಟು ಹುರುಳಿದೆ ಎನ್ನುವುದೂ ಅಷ್ಟೇ ಮುಖ್ಯ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಕೇಳಬಂದ ತಕ್ಷಣ ಜಾರ್ಜ್ ನಿರಪರಾಧಿ ಎಂದು ತೀರ್ಪು ನೀಡಿದ್ದ ಕಾಂಗ್ರೆಸ್, ಈಗ ವರುಣ್ ಗಾಂಧಿ ವಿರುದ್ಧ ಆರೋಪ ಕೇಳಬಂದ ತಕ್ಷಣ ಬಾಯಿಗೆ ಬಂದಂತೆ ಮಾತನಾ ಡುವುದು ತರವಲ್ಲ.
ಅಲ್ಲದೇ, ಇದು ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಂ ಧಿಸಿದ ವಿಚಾರ ಎನ್ನುವುದು ಸತ್ಯವಾದರೂ, ವರುಣ್ ವಿರುದ್ಧ ಹೌಹಾರುವ ಮುನ್ನ ಕಾಂಗ್ರೆಸ್ಸಿಗರು ಒಮ್ಮೆ ಬೋಫೋರ್ಸ್ ಹಗರಣವನ್ನು ನೆನಪಿಸಿಕೊಳ್ಳುವುದು ಉತ್ತಮ.
ಇನ್ನು, ವರುಣ್ ಹನಿಟ್ರ್ಯಾಪ್‌ಗೆ ಒಳಗಾಗಿದ್ದು ಸತ್ಯ ಎಂದರೆ ಅದು ತಪ್ಪೇ. ಆದರೆ, ವರುಣ್ ವಿರುದ್ದ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ ಹಾಗೂ ಎಡಪಂಥೀಯರಿಗೆ ಇಲ್ಲ. ದೇಶದ ಮೊದಲ ಪ್ರಧಾನಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನೆಹರೂ ಕುಟುಂಬಸ್ಥರಿಗೆ ನೆಹರೂ ಎಂತಹ ಹೆಣ್ಣಿನ ಗೀಳನ್ನು ಹೊಂದಿದ್ದರು ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿದೆ ಎನ್ನುವುದುನ್ನು ತಿಳಿಯಬೇಕು. ಹೀಗಾಗಿ, ಗಾಜಿನ ಮನೆಯಲ್ಲಿ ಕುಳಿತು ಎದುರು ಮನೆಗೆ ಕಲ್ಲು ಹೊಡೆಯುವುದನ್ನು ಮಾಡಬೇಡಿ…
Discussion about this post