ಶಿವಮೊಗ್ಗ, ಅ.5: ಮೇಯರ್ ಎಸ್.ಕೆ. ಮರಿಯಪ್ಪನವರು ಮಾದಿಗ ಸಮುದಾಯವನ್ನು ಅಗೌರವಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ರಾಜ್ಯ ಗುತ್ತಿಗೆ ಪೌರಕಾರ್ಮಿಕರ ಸಂಘದ ವತಿಯಿಂದ ಗೋಪಿವೃತ್ತದಲ್ಲಿ ಮರಿಯಪ್ಪರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ನಿನ್ನೆ ಬೆಳಿಗ್ಗೆ ಪಾಲಿಕೆಯಲ್ಲಿ ಸುಮಾರು 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರಕಾರ್ಮಿಕರ ವೇತನವನ್ನು 2 ತಿಂಗಳಿನಿಂದ ನೀಡದೇ ಇರುವುದನ್ನು ತಮ್ಮ ಸಂಘಟನೆಯ ಮುಖಂಡ ಬಾನುಪ್ರಸಾದ್ ಮತ್ತು ಗುತ್ತಿಗೆ ಕಾರ್ಮಿಕರು ಆಯುಕ್ತೆ ತುಷಾರ ಮಣಿ ಮತ್ತು ಮೇಯರ್ ಎಸ್.ಕೆ. ಮರಿಯಪ್ಪನವರ ಬಳಿ ಮನವಿಮಾಡಲಾಗಿದೆ. ಆದರೆ ಆಯುಕ್ತರ ಕೊಠಡಿಗೆ ಸಮಿತಿಯ ಮುಖಂಡರು ಹೋದಾಗ ಅವರು ತಮಗೆ ವಾಸನೆ ಬರುತ್ತಿದೆ ಇಲ್ಲಿಂದ ಹೊರಹೋಗಿ ಎಂದು ಎಂದು ನಿಂದಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಇದು ತಮ್ಮ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮರಿಯಪ್ಪ ಆಯುಕ್ತರ ಪರವಾಗಿ ನಿಂತು ನಿಮಗೆ ವೇತನ ನೀಡಲು ಆಗುವುದಿಲ್ಲ. ನಾಳೆಯಿಂದ ಕೆಲಸ ನಿಲ್ಲಿಸುತ್ತೇವೆ ಏನು ಬೇಕಾದರೂ ಮಾಡಿಕೊಳ್ಳಿ ಎಂದು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಹೊರಕಳಿಸಿದ್ದಾರೆ ಎಂದು ದೂರಿದರು.
ಸಮಿತಿಯ ರಾಜ್ಯ ವಿಭಾಗೀಯ ಕಾರ್ಯದರ್ಶಿ ಭಾನುಪ್ರಸಾದ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಜಾತಿ ನಿಂದನೆ ಮಾಡಿರುವುದರಿಂದ ಮಾದಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಕೂಡಲೇ ಆಯುಕ್ತೆ ತುಷಾರ ಮಣಿ ಹಾಗೂ ಮೇಯರ್ ಮರಿಯಪ್ಪರನ್ನುಅವರ ಸ್ಥಾನದಿಂದ ವಜಾಗೊಳಿಸಬೇಕು. ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಬೇಕೆಂದು ಒತ್ತಾಯಿಸಿದರು.
ಕೂಡಲೇ ಬಾಕಿ ಇರುವ ಎರಡು ತಿಂಗಳ ವೇತನ ಬಿಡುಗಡೆ ಮಾಡಬೇಕು. ಗುತ್ತಿಗೆ ಪೌರ ಕಾರ್ಮಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಿ.ಎ. ಭಾನುಪ್ರಸಾದ್, ಆರ್. ರಂಗಪ್ಪ, ಕೆ. ಕುಮಾರ್, ಗಂಗಾಧರ್, ತೇಜಸ್, ವೆಂಕಟೇಶ್ ಮತ್ತಿತರರು ಇದ್ದರು.
ಮೇಯರ್ ಮರಿಯಪ್ಪರಿಂದ ಮಾದಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಅವರಿಂದ ಜಾತಿ ನಿಂದನೆ ಆಗಿದೆ. ಕೂಡಲೇ ಆಯುಕ್ತೆ ತುಷಾರ ಮಣಿ ಹಾಗೂ ಮೇಯರ್ ಮರಿಯಪ್ಪರನ್ನುಅವರ ಸ್ಥಾನದಿಂದ ವಜಾಗೊಳಿಸಬೇಕು. ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಬೇಕು.ಬಾಕಿ ಇರುವ ಎರಡು ತಿಂಗಳ ವೇತನ ಬಿಡುಗಡೆ ಮಾಡಬೇಕು. ಗುತ್ತಿಗೆ ಪೌರ ಕಾರ್ಮಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ.
– ಪ್ರತಿಭಟನಾಕಾರರು
Discussion about this post