Read - < 1 minute
ವಾಶಿಂಗ್ಟನ್: ಸೆ:30: ಪಾಕ್ ಆಕ್ರಮಿತ ಪ್ರದೇಶದೊಳಗೆ ನುಗ್ಗಿ ಉಗ್ರರನ್ನು ಹೊಡೆದುರುಳಿಸಿರುವ ಸರ್ಜಿಕಲ್ ಕಾರ್ ಯಾಚರಣೆ ಹಿಂದೆ ಅಮೇರಿಕಾದ ಪಾತ್ರವೂ ಇತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಅಮೇರಿಕಾ ನಿರಾಕರಿಸಿಯೂ ಇಲ್ಲ, ಪುಷ್ಠಿಯೂ ಮಾಡಿಲ್ಲ.
ಇತ್ತೀಚೆಗೆ ಪಾಕಿಸ್ತಾನಕ್ಕೆ ಭಯೋತ್ಪಾದನೆ ಹತ್ತಿಕ್ಕುವಂತೆ ಅಮೇರಿಕಾ ಎಚ್ಚರಿಕೆ ನೀಡಿತ್ತು, ಈ ಬೆನ್ನಲ್ಲೇ ಭಾರತ ನಡೆಸಿರುವ ದಾಳಿಯನ್ನು ಅಮೇರಿಕಾ ಬೆಂಬಲ ವ್ಯಕ್ತಪಡಿಸಿದೆ.
ಭಾರತ ನಡೆಸುವ ದಾಳಿ ಬಗ್ಗೆ ಅಮೇರಿಕಾಗೆ ಮೊದಲೇ ಮಾಹಿತಿ ತಿಳಿದಿತ್ತು ಎಂಬ ಮಾತು ಕೇಳಿಬಂದಿದ್ದು, ಈ ಬಗ್ಗೆ ಇನ್ನೂ ಸ್ಪಷ್ಟನೆ ನೀಡಿಲ್ಲ.
ಉರಿ ದಾಳಿ ಕುರಿತು ಮಾತನಾಡಿದ ಅಮೇರಿಕಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾನ್ ಕಿರ್ಬಿ, ಉರಿ ದಾಳಿಯನ್ನು ಅಮೇರಿಕಾ ತೀವ್ರವಾಗಿ ಖಂಡಿಸಿದ್ದು, ಇಂತಹ ವಾತಾವರಣವು ಭಯಭೀತರನ್ನಾಗಿಸಲಿದೆ ಎಂದು ಭಾರತದ ದಾಳಿ ಕುರಿತ ಪ್ರಶ್ನೆಗೆ ಕಿರ್ಬಿ ಉತ್ತರಿಸಿದ್ದಾರೆ.
ಆದರೆ ಇದೇ ವಾರದ ಪ್ರಾರಂಭದಲ್ಲಿ ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಅಮೇರಿಕಾ ವಿದೇಶಾಂಗ ಸಚಿವ ಜಾನ್ ಕೆರ್ರಿ ಜೊತೆ ಮಾತುಕತೆ ನಡೆದಿತ್ತು. ಈ ಬಗ್ಗೆಯೂ ಉತ್ತರ ನೀಡಿದ ಕಿಬರ್ಿ, ಇದು ಭಾರತೀಯ ಪ್ರತ್ಯುತ್ತರ ದಾಳಿಯಾಗಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ ಭಾರತೀಯ ಸೇನೆಯ ಸರ್ಜಿಕಲ್ ದಾಳಿ ಕುರಿತು ಭಾರತೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಗೆ ಕರೆ ಮಾಡಿದ ಅಮೇರಿಕಾ ಭದ್ರತಾ ಸಲಹೆಗಾರ ಸುಜನ್ ರೈಸ್ ಗಡಿಯಲ್ಲಿ ಉಂಟಾಗಿರುವ ಉಗ್ರರ ದಾಳಿ ಬಗ್ಗೆ ಆತಂಕ ವ್ಯಕ್ತಪಡಿಸಿ, ವಿಶ್ವಸಂಸ್ಥೆ ನಿಷೇಧಿಸಿರುವ ಲಷ್ಕರ್ ಹಾಗೂ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯನ್ನುಪಾಕಿಸ್ತಾನ ಮಟ್ಟ ಹಾಕಬೇಕೆಂದು ಅಮೇರಿಕಾ ಬಯಸಿದೆ ಎಂದು ಹೇಳಿದರು.
ಇವೆಲ್ಲಾ ಬೆಳವಣಿಗಗಳು ಗಮನಿಸಿದಾಗ ಅಮೇರಿಕಾ ಕೂಡ ಪಾಕಿಸ್ತಾನದ ಭಯೋತ್ಪಾದನೆಯಿಂದ ಸಾಕಾಗಿಹೋಗಿದ್ದು, ಅಲ್ಲದೇ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ವಿಶ್ವಾಸಕಳೆದುಕೊಳ್ಳಲು ಇಚ್ಚಿಸದ ಅಮೇರಿಕಾ ಕೂಡ ಈ ದಾಳಿಗೆ ಬೆಂಬಲ ಸೂಚಿಸಿದೆ ಎಂದರೆ ತಪ್ಪಾಗಲಾರದು.
Discussion about this post