Read - < 1 minute
ಸಿದ್ಧರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಜಾರಿಯಾದ ಎಲ್ಲ ಯೋಜನೆಗಳೂ ಬಹುತೇಕ ವೋಟ್ ಬ್ಯಾಂಕ್ ರಾಜಕಾರಣ ಪ್ರತೀಕವಾಗಿದ್ದವೇ ಹೊರತು ಜನಪರ ಕಾಳಜಿ ಹೊಂದಿದ್ದ ಯೋಜನೆಗಳು ಸೊನ್ನೆ ಎಂದೇ ಹೇಳಬೇಕು.
ಆದರೆ, ಈಗ್ಗೆ ಕೆಲವು ತಿಂಗಳುಗಳ ಹಿಂದೆ ಜಾರಿಯಾದ ಹರೀಶ್ ಯೋಜನೆ ಬಹುತೇಕ ಸಿದ್ಧರಾಮಯ್ಯ ಸರ್ಕಾ ರದ ಮೊದಲ ಉತ್ತಮ ಯೋಜನೆಯಾಗಿತ್ತು. ಆದರೆ, ಆರಂಭದಲ್ಲಿ ಈ ಯೋಜನೆ ಎಷ್ಟು ಸದ್ಧು ಮಾಡಿತ್ತೋ, ಅಷ್ಟೇ ಬೇಗ ಹಳ್ಳ ಹಿಡಿದು ಹೋಗಿರುವುದು, ಕೇಂದ್ರ ದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾದ ಯೋಜನೆಗಳ ಪ್ರತಿಬಿಂಬದಂತೆಯೇ ಆಗಿದೆ.
ಈಗ, ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಸೇರಿ ದಂತೆ ಜನಪ್ರತಿನಿಧಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ಭರಿಸುವುದಿಲ್ಲ, ಬದಲಾಗಿ, ಅವರುಗಳು ಸರ್ಕಾರಿ ಆಸ್ಪತ್ರೆಗೇ ಬರಬೇಕು ಎಂಬ ಮಸೂದೆಯ ಕರಡು ಸಿದ್ಧ ವಾಗಿರುವುದು ಬಹುಶಃ ರಾಜ್ಯ ಸರ್ಕಾರದ ಎರಡನೆಯ ಉತ್ತಮ ಯೋಜನೆ ಎಂದೇ ಹೇಳಬಹುದು.
ಜನಪ್ರತಿನಿಧಿಗಳು ಎಂದರೆ ವಾಸ್ತವವಾಗಿ ಜನರ ಸೇವ ಕರು. ಇಂತಹ ಸೇವಕರು ಇಂದು ಸೇವಕರಾಗಿರದೇ ಜನ ಭಕ್ಷರಾಗಿ ಸಿಕ್ಕ ಸಿಕ್ಕಂತೆ ಜನರ ದುಡ್ಡನ್ನು ಬಾಚಿಕೊ ಳ್ಳುತ್ತಿದು, ಅಧಿಕಾರ ವ್ಯವಹಾರದ ರೂಪ ವನ್ನು ಪಡೆದಿದೆ.
ಸರ್ಕಾರದಲ್ಲಿರುವ ಮುಖ್ಯಮಂತ್ರಿ, ಸಚಿವರು, ಶಾಸ ಕರು ಹಾಗೂ ಅಧಿಕಾರಿಗಳು ಸರ್ಕಾರಿ ವ್ಯವಸ್ಥೆಯ ಪ್ರತಿ ಬಿಂಬಗಳು. ಆದರೆ, ಚಿಕಿತ್ಸೆ ಎಂದಾಕ್ಷಣ ಇವರಿಗೆ ಕಾಣು ವುದು ಹೈಟೆಕ್ ಆಸ್ಪತ್ರೆಗಳು, ಸಿಂಗಾಪುರ್, ಅಮೆರಿಕಾ ಅಸ್ಪತ್ರೆಗಳು. ಕಾರಣ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಳು ಕಳಪೆ ಎಂಬುದು. ಜನರಿಂದ ಆಯ್ಕೆಯಾದ ಇವರಿಗೆ ಚಿಕಿತ್ಸೆಗಾಗಿ ಹೈಟೆಕ್ ಆಸ್ಪತ್ರೆಗಳು ಬೇಕು. ಆದರೆ, ಇವರನ್ನು ಆಯ್ಕೆ ಮಾಡಿದ ಜನರಿಗೆ ಮಾತ್ರ ಸವಲತ್ತಿಲ್ಲದ ಸರ್ಕಾರಿ ಆಸ್ಪತ್ರೆಗಳು.
ಇಂತಹ ಪರಿಸ್ಥಿತಿಯನ್ನು ಸುಧಾರಿಸಲು ಸಿಎಂ ಆದಿ ಯಾಗಿ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರ್ಕಾರದಿ ಆಸ್ಪತೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ವೆಚ್ಚ ಮರು ಪಾವತಿಯಿಲ್ಲ ಎಂಬ ಪ್ರಸ್ತಾವನೆ ನಿಜಕ್ಕೂ ಸ್ವಾಗತಾರ್ಹ.
ಆದರೆ, ಅಗತ್ಯ ಚಿಕಿತ್ಸೆ ಆ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದಿದ್ದರೆ ಮಾತ್ರ ಖಾಸಗಿ ಆಸ್ಪತ್ರೆಗೆ ತೆರಳಲು ಅವಕಾಶವಿದೆ ಎಂಬ ಅಂಶ ಇಲ್ಲಿ ಉಲ್ಲೇಖವಾಗಿದೆ. ಜನಪ್ರತಿನಿಧಿಗಳಿಗೇನೋ ಅಲ್ಲಿ ಆ ಚಿಕಿತ್ಸೆ ಲಭ್ಯವಿಲ್ಲದೇ ಇದ್ದರೆ ಖಾಸಗಿ ಆಸ್ಪತ್ರೆಗಳಿಗೆ ತೆರಳಬಹುದು, ಅದನ್ನು ಸರ್ಕಾರ ಮರುಪಾವತಿಸುತ್ತದೆ. ಆದರೆ, ಅದೇ ಆಸ್ಪತ್ರೆ ಯಲ್ಲಿ ಸಾಮಾನ್ಯ ಬಡವ ಏನು ಮಾಡಬೇಕು? ಅವನಿಗೆ ಖಾಸಗಿ ಆಸ್ಪತ್ರೆಗೆ ತೆರಳಲು ಹಣವಿಲ್ಲದೇ ಪ್ರಾಣ ಬಿಡಬೇಕೆ?
ಈ ಹಿನ್ನೆಲೆಯಲ್ಲಿ, ಅಗತ್ಯವಿರುವ ಸುಸಜ್ಜಿತ ಆಸ್ಪತ್ರೆ ಗಳಲ್ಲಿ, ಎಲ್ಲ ರೀತಿಯ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಿ. ಆಗ, ಜನಪ್ರತಿನಿಧಿಗಳಿಗೂ ಹಾಗೂ ಸಾಮಾನ್ಯ ಜನ ರಿಗೂ ಅದು ಸಹಕಾರಿಯಾಗುತ್ತದೆ.
ಅದೇ ರೀತಿ, ಈ ಯೋಜನೆಯೇನೋ ಉತ್ತಮ ವಾಗಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಯಾಗಿ ಜಾರಿಯಾಗುತ್ತದೆ, ಎಷ್ಟು ಜನಪ್ರತಿನಿಧಿಗಳು ಇದನ್ನು ಪಾಲಿಸುತ್ತಾರೆ ಎಂಬ ವಿಚಾರವನ್ನು ಗ್ರಹಿಸಲು ಮಸೂದೆಯಲ್ಲಿ ಏನಾದರೂ ಮಾನದಂಡಗಳಿವೆಯೇ ಎಂಬ ಅಂಶ ಮುಖ್ಯವಾಗುತ್ತದೆ.
ಯೋಜನೆ ಘೋಷಣೆ ಮಾಡುವುದು ಬಹಳ ಸಲೀಸು. ಆದರೆ, ಅದರ ಪರಿಣಾಮಕಾರಿ ಜಾರಿ ಬಹಳ ಕಷ್ಟ. ಹೀಗಾಗಿ, ಈ ಯೋಜನೆಯನ್ನು ಜಾರಿಗೊಳಿಸುವ ಮುನ್ನ ಇದರ ಪರಿಣಾಮಕಾರಿ ಜಾರಿಗೆ ಸೂತ್ರಗಳೇನು ಎಂಬುದನ್ನು ಮೊದಲು ಬಹಿರಂಗಪಡಿಸಬೇಕಿದೆ.
Discussion about this post