ಬೆಂಗಳೂರು: ಆ;30: ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಆನೇಕಲ್ ತಾಲೂಕು ಸೇರಿದಂತೆ ವಿವಿಧ ಪ್ರದೇಶದಲ್ಲಿ ಶೌಚಾಲಯ ನಿಮರ್ಿಸುವಂತೆ ಒತ್ತಾಯಿಸಿ ಬೇಕೇ ಬೇಕು ಶೌಚಾಲಯ ಬೇಕು ಎಂಬ ವಿನೂತನ ಶೌಚಾಲಯ ಚಳವಳಿಯನ್ನು ಸೆ.6 ರಂದು ಹಮ್ಮಿಕೊಳ್ಳಲಾಗಿದೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಶೌಚಾಲಯವಿಲ್ಲದೆ ಬಯಲು ಪ್ರದೇಶಗಳಿಗೆ ಹೋಗಲು ಮುಜುಗರ ಪಡುತ್ತಿದ್ದಾರೆ. ಸಂಜೆಯಾಗುವವರೆಗೂ ಕಾಯ್ದು ಅವರು ಶೌಚಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಕನಿಷ್ಠ ಒಂದು ಗ್ರಾಮಕ್ಕೆ 5ರಂತೆ ಸುಸಜ್ಜಿತವಾದ ಶೌಚಾಲಯ ನಿಮರ್ಿಸಿ ಮಹಿಳೆಯರ ಸಮಸ್ಯೆಯನ್ನು ನಿವಾರಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಹೇಳಿದರು.
ಗ್ರಾಮೀಣ ಮಹಿಳೆಯರ ಶೌಚಾಲಯಗಳಿಗಾಗಿ ವರ್ಷವಿಡೀ ನಿರಂತರ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಒಂದು ಶೌಚಾಲಯಕ್ಕೆ ಕನಿಷ್ಠ 10 ಲಕ್ಷ ರೂ. ಖಚರ್ು ಮಾಡಿ ಉತ್ತಮ ನೀರಿನ ಸೌಲಭ್ಯವುಳ್ಳ ಶೌಚಾಲಯ ನಿಮರ್ಾಣವಾಗಬೇಕು ಎಂದು ಒತ್ತಾಯಿಸಿದರು.
ನಗರದಲ್ಲೂ ಬಹುತೇಕ ಸಾರ್ವಜನಿಕ ಶೌಚಾಲಯಗಳು ಹದಗೆಟ್ಟಿದ್ದು, ಅವುಗಳನ್ನು ಶುಚಿಗೊಳಿಸುವುದರ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸಕರ್ಾರದ ಮುಂದೆ ಬೇಡಿಕೆ ಇಡುತ್ತೇವೆ ಎಂದರು.
ಶೌಚಾಲಯಗಳ ನಿಮರ್ಾಣ ವಿಷಯವನ್ನು ರಾಜ್ಯ, ಕೇಂದ್ರ ಸಕರ್ಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ ವಾಟಾಳ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕು ಕಚೇರಿ ಮುಂದೆ ಶೌಚಾಲಯದ ಪರಿಕರಗಳನ್ನಿಟ್ಟು ಪ್ರದಶರ್ಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
Discussion about this post