ಹೈದರಾಬಾದ್, ಅ.8: ಜೈನ ಸಂಪ್ರದಾಯದಲ್ಲಿ ಆಚರಿಸಲಾಗುವ ದೌಮಾಸದಲ್ಲಿ ಪಾಲ್ಗೊಂಡು 68 ದಿನಗಳ ಕಾಲ ಉಪವಾಸ ಕೈಗೊಂಡಿದ್ದ 13 ವರ್ಷದ ಬಾಲಕಿಯೊಬ್ಬಳು, ಹೃದಯಾಘಾತದಿಂದ ಸಾವನ್ನಪ್ಪ್ಟಿರುವ ಘಟನೆ ನಡೆದಿದೆ.
ಚೌಮಾಸದ ಅಂಗವಾಗಿ 13 ವರ್ಷದ ಆರಾಧನಾ ಪಾಲ್ಗೊಂಡಿದ್ದಳು. 68 ದಿನಗಳ ಕಾಲ ಸುಧೀರ್ಘ ಉಪವಾಸವನ್ನು ಕೈಗೊಂಡಿದ್ದ ಈಕೆ, ಅಸ್ವಸ್ಥಳಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೃದಯಾಘಾತವಾದ ಹಿನ್ನೆಲೆಯಲ್ಲಿ ಆಕೆ ನಿಧನಳಾಗಿದ್ದಾಳೆ.
ಇಂದು ಆರಾಧನಾಳ ಅಂತ್ಯಕ್ರಿಯೆ ನಡೆದಿದ್ದು, ಈ ವೇಳೆ ಸುಮಾರು 600 ಮಂದಿ ಪಾಲ್ಗೊಂಡಿದ್ದರು. ಆರಾಧನಾ, ಈ ಹಿಂದೆ 41 ದಿನಗಳ ಕಾಲ ಉಪವಾಸ ವ್ರತವನ್ನು ಕೈಗೊಂಡಿದ್ದಳು. ಬಾಲಕಿಯ ಕುಟುಂಬ ಚಿನ್ನಾಭರಣದ ವ್ಯವಹಾರ ಮಾಡುತ್ತಿದ್ದು ಸಿಕಂದರಾಬಾದ್ ನ ಪಾಟ್ ಬಜಾರ್ ಪ್ರದೇಶದಲ್ಲಿ ಅಂಗಡಿ ಹೊಂದಿದ್ದಾರೆ.
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji
Kalpa Media House | Mysuru | Stressing the importance of dharma, Sri Mad Yadugiri Yatiraja Jeeyar Swamiji of Sri Yatiraja...
Read moreDetails












