ಶಿವಮೊಗ್ಗ, ಸೆ.2: ಕಿಚ್ಚ ಸುದೀಪ್ ಫ್ಯಾನ್ ಗರ್ಲ್ಸ್ ಸೋಷಿಯಲ್ ಸರ್ವಿಸ್ ಗ್ರೂಪ್‌ಗೆ ಇಂದು ಚಾಲನೆ ನೀಡಲಾಗಿದ್ದು, ಇಲ್ಲಿನ ಮಾಧವನೆಲೆ ಅನಾಥಾಶ್ರಮದ ಮಕ್ಕಳೊಂದಿಗೆ ಸುದೀಪ್ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.
ಗ್ರೂಪಿನ ಸಂಸ್ಥಾಪಕ ಅಧ್ಯಕ್ಷೆ ಕುಮಾರಿ ಪವಿತ್ರಾ ಎಳ್ಳಾರೆ ಮಾತನಾಡಿ , ಇಂದು ಸುದೀಪ್ ಜನ್ಮದಿನವಾಗಿದೆ. ಸುದೀಪ್ ಅವರು ಪಾಲಿಸಿಕೊಂಡು ಬಂದ ಆದರ್ಶದಂತೆ ಅನಾಥಾಶ್ರಮದ ಮಕ್ಕಳೊಂದಿಗೆ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದೇವೆ. ನಮ್ಮ ತಂಡದಲ್ಲಿ ಉದ್ಯೋಗಸ್ಥ ಯುವತಿಯರು ಮತ್ತು ವಿದ್ಯಾರ್ಥಿನಿಯರಿದ್ದೇವೆ. ನಮ್ಮ ತಂಡದ ಕೆಲಸ ಕೇವಲ ಸುದೀಪ್ ಅವರ ಹುಟ್ಟುಹಬ್ಬದ ಆಚರಣೆಗೆ ಮಾತ್ರ ಸೀಮಿತವಾಗದೆ ಸಮಾಜಮುಖಿ ಕೆಲಸಗಳು ನಿರಂತರವಾಗಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಲಂಚ್ ಬಾಕ್ಸ್ ಮತ್ತು ಹಣ್ಣುಗಳನ್ನು ಹಾಗೂ ಗೌರಿಹಬ್ಬದ ಹಿನ್ನೆಲೆಯಲ್ಲಿ ಆಶ್ರಮದ ಹೆಣ್ಣುಮಕ್ಕಳಿಗೆ ಬಳೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರೂಪಿನ ಸದಸ್ಯರಾದ ಮೇಘಾ, ಸಹನಾ, ಅರ್ಪಿತಾ, ಪವಿತ್ರಾ ಮತ್ತಿತರರು ಇದ್ದರು.
Discussion about this post