ಗೋಕರ್ಣ, ಸೆ.17: ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಪರಿಶಿಷ್ಟ ಜನಾಂಗದ ಕೇಂದ್ರ ಆಯೋಗದ ಅಧ್ಯಕ್ಷ ಡಾ ರಾಮೇಶ್ವರ ಓರಾನ್ ಇವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ವೇ ಶಿತಿಕಂಠ ಹಿರೇ ಭಟ್ ಇವರು ಪೂಜಾ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಶ್ರೀ ದೇವಾಲಯದ ಸ್ವಚ್ಛತೆ ಹಾಗೂ ವ್ಯವಸ್ಥೆಯನ್ನು ಶ್ಲಾಘಿಸಿದರು. ದೇವಾಲಯದ ಗರ್ಭಗುಡಿಗೆ ಎಲ್ಲ ಜಾತಿ , ಸಮುದಾಯಗಳ ಜನರು ಪ್ರವೇಶಿಸಿ ಆತ್ಮಲಿಂಗದ ಸ್ಪರ್ಶ ದರ್ಶನ ಪಡೆಯುವ ವ್ಯವಸ್ಥೆಗೆ ಸಂತಸ ವ್ಯಕ್ತಪಡಿಸಿದರು.
ಉತ್ತರಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಸಮಾಜವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಿ ಸರಕಾರದಿಂದ ಹೆಚ್ಚಿನ ಸೌಲಭ್ಯವನ್ನು ಒದಗಿಸುವಂತೆ ಜಿ ಕೆ ಹೆಗಡೆ ಮನವಿ ಮಾಡಿಕೊಂಡರು .
Discussion about this post