Sunday, July 6, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Army

ಚೀನಾಕ್ಕೆ ಥಂಡಿ, ಇಲ್ಲಿ ಮಾವೋವಾದಿಗಳಿಗೆ ಜ್ವರ!!

September 6, 2016
in Army
0 0
0
Share on facebookShare on TwitterWhatsapp
Read - 3 minutes

ಜವಹರಲಾಲ್ ನೆಹರೂರವರ ‘ಅಲಿಪ್ತ ನೀತಿ’ಗೆ ಭಾರತ ತಿಲಾಂಜಲಿ ಇಟ್ಟು ಹೊಸ ಬಗೆಯ ನೀತಿಯತ್ತ ವಾಲಿದೆ. ಈಗ ಇದು ಚೀನಾದಂತಹ ರಾಷ್ಟ್ರಕ್ಕೂ ಗಾಬರಿ ಹುಟ್ಟಿಸಿರುವ ‘ಬಹುಮಿತ್ರ ನೀತಿ’. ಯಾರೊಂದಿಗೂ ಕಾಲುಕೆರೆದು ಯುದ್ಧಕ್ಕೆ ಹೋಗದ ನಮ್ಮ ನಿರ್ಣಯ ಇಂದು ನಿನ್ನೆಯದಲ್ಲ. ಕೃಷ್ಣನೂ ಕುರುಕ್ಷೇತ್ರದಯುದ್ಧಕ್ಕೆ ಮುನ್ನ ಸಂಧಾನಕ್ಕೆ ಹೋಗಿ ಯುದ್ಧ ತಪ್ಪಿಸಲು ಪಾಡುಪಟ್ಟಿಲ್ಲವೇ? ಹಾಗಂತ ಆಕ್ರಮಣಕ್ಕೊಳಗಾಗಿ ಪ್ಯಾದೆಗಳಂತೆ ಇದ್ದುದೆಲ್ಲವನ್ನೂ ಕೊಟ್ಟು ಬೆತ್ತಲಾಗುವವರು ನಾವಾಗಿರಲಿಲ್ಲ. ನೆಹರೂ ಅಲಿಪ್ತ ನೀತಿಯ ಮೂಲಕ ಹಾಗೊಂದು ದೈನೇಸಿ ಸ್ಥಿತಿಗೆ ನಮ್ಮನ್ನೊಯ್ದುಬಿಟ್ಟಿದ್ದರು. 1962ರ ಚೀನಾ ಯುದ್ಧವನ್ನುನೆನಪಿಸಿಕೊಂಡಾಗಲೆಲ್ಲ ಕೋಪದಿಂದ ಮೈ ಮೇಲೆ ಮುಳ್ಳುಗಳೇಳುವುದಕ್ಕೆ ಅದೇ ಕಾರಣ. ಆ ಯುದ್ಧ ನಮಗೆ ಅನೇಕ ಪಾಠ ಕಲಿಸಿತು. ವಿದೇಶ ಪ್ರವಾಸಗಳಿಗೆ ಹೋಗಿ ನೆಹರೂರಂತೆ ತಿರುಗಾಡಿಕೊಂಡು ಬಂದರಾಗದು. ವ್ಯವಸ್ಥಿತ ಯೋಜನೆಗಳನ್ನು ರೂಪಿಸಿ ಅಂತರರಾಷ್ಟ್ರೀಯ ಸಮುದಾಯದೆದುರಿಗೆ ಭಾರತದಘನತೆ ಎತ್ತಿ ಹಿಡಿಯಬೇಕು. ಅದು ವಿದೇಶ ನೀತಿ ಎನಿಸಿಕೊಳ್ಳುತ್ತದೆ. ನರೇಂದ್ರ ಮೋದಿ ಅಕ್ಷರಶಃ ಅದರಲ್ಲಿ ಯಶಸ್ಸು ಕಾಣುತ್ತಿದ್ದಾರೆ.

ನಿಮಗೆ ನೆನಪಿರಬೇಕು. ಕಳೆದ ಬಾರಿ ಇನ್ನೇನು ಭಾರತ ಪರಮಾಣು ಪೂರೈಕೆದಾರರ ಗುಂಪು ಎನ್.ಎಸ್.ಜಿ ಗೆ ಸೇರಿಯೇ ಬಿಟ್ಟಿತ್ತು. ಅಡ್ಡಗಾಲು ಹಾಕಿತು ಚೀನಾ. ಭ್ರಮನಿರಸನಗೊಂಡ ಭಾರತ ತನ್ನ ವಿದೇಶ ನೀತಿಯನ್ನು ಭಿನ್ನವಾಗಿ ರೂಪಿಸಲು ನಿಶ್ಚಯಿಸಿತು. ಅಲ್ಲಿಯವರೆಗೂ ಚೀನಾಕ್ಕೆ ಗೌರವಯುತವಾಗಿಯೇ ಬಿಸಿಮುಟ್ಟಿಸುತ್ತಿದ್ದ ಭಾರತ ಈಗ ಅಕ್ಷರಶಃ ಆಕ್ರಮಣಕಾರಿ ನೀತಿಯನ್ನೇ ಅನುಸರಿಸಲಾರಂಭಿಸಿತು. ಕಾಶ್ಮೀರದ ನೀತಿಗೆ ಮೊದಲ ಬಾರಿ ಕಡಕ್ಕುತನದ ಸ್ಪರ್ಶ ಸಿಕ್ಕಿರೋದು ಆನಂತರವೇ. ಎನ್.ಎಸ್.ಜಿ ಕಿರಿಕಿರಿ ಆಗುವವರೆಗೂ ಕಾಶ್ಮೀರದೊಂದಿಗೆ ಸೌಮ್ಯವಾಗಿದ್ದ ಸರ್ಕಾರ ಚೈನಾ ಬೆಂಬಲ ಪಡೆದು ಶಕ್ತಿಯಾಗಿ ನಿಂತಿರುವಪಾಕಿಗೆ ತಪರಾಕಿ ನೀಡಲು ನಿಶ್ಚಯಿಸಿತು. ಮುಲಾಜಿಲ್ಲದೇ ಆಂತರಿಕ ಸುರಕ್ಷತೆ ಬಲಗೊಳಿಸಿತು. ಭಯೋತ್ಪಾದಕರ ಹುಡುಕಿ ಕೊಂದಿತು, ಪಾಕ್ ಪರವಾದ ದನಿ ಹೊರಡಿಸುವವರನ್ನು ಮಟ್ಟ ಹಾಕಿತು. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪ್ರಧಾನ ಮಂತ್ರಿಗಳು ವಿಶೇಷ ಪ್ಯಾಕೇಜ್ ಘೋಷಿಸಿದರು. ಅಲ್ಲಿಗೆ ನಿಲ್ಲಿಸದೇಸ್ವಾತಂತ್ರ್ಯೋತ್ಸವದ ದಿನದಂದು ಭಾಷಣ ಮಾಡುತ್ತ ಬಲೂಚಿಸ್ತಾನಕ್ಕೆ ಬೆಂಬಲ ಘೋಷಿಸಿಬಿಟ್ಟರು. ಕಾಶ್ಮೀರದ ಕುರಿತಂತೆ ಮಾತನಾಡಿ ಹೇಗೆ ಭಾರತವನ್ನು ಪಾಕೀಸ್ತಾನ ಹಳಿಯುವ ಯತ್ನ ಮಾಡುತ್ತಿತ್ತೋ ಭಾರತ ಅದೇ ಮಾದರಿಯನ್ನು ಪಾಕೀಸ್ಥಾನದ ವಿರುದ್ಧವೇ ಬಳಸಿತು. ಬಲೂಚಿಸ್ತಾನದಲ್ಲಿ ಪಾಕೀಸ್ತಾನೀ ಸೇನೆನಡೆಸುವ ಅತ್ಯಾಚಾರಗಳು ಈಗ ಜಗತ್ತಿನ ಪತ್ರಿಕೆಗಳ ಮುಖಪುಟವನ್ನು ಅಲಂಕರಿಸುತ್ತಿದ್ದಂತೆ ಅತ್ತ ಗಿಲ್ಗಿಟ್, ಬಾಲ್ಟಿಸ್ತಾನಗಳೂ ಪ್ರತಿಭಟನೆಯ ಕೂಗು ಜೋರು ಮಾಡಿದವು. ಇವುಗಳಿಂದ ಎಚ್ಚೆತ್ತ ಸಿಂಧ್ ಪ್ರದೇಶ ಪ್ರತ್ಯೇಕ ಸಿಂಧೂ ದೇಶದ ಬೇಡಿಕೆ ಇಟ್ಟು ಪಾಕೀ ದೊರೆಗಳ ಎದೆಗೇ ಕುಟ್ಟಿತು. ತಾನು ನೇಯ್ದ ಬಲೆಯಲ್ಲಿತಾನೇ ಸಿಕ್ಕು ವಿಲವಿಲನೆ ವದ್ದಾಡಿತು ಪಾಕೀಸ್ತಾನ.
ಆದರೆ ಭಾರತದ ನಿಜವಾದ ಗುರಿ ಪಾಕೀಸ್ತಾನ ಅಲ್ಲವೇ ಅಲ್ಲ. ಪ್ರಧಾನಮಂತ್ರಿ ಪಾಕೀಸ್ತಾನದ ಮೇಲೆ ಕಲ್ಲು ಬೀಸಿದಂತೆ ಕಂಡರೂ ಅವರ ಗುರಿ ಇದ್ದದು ಚೀನಾದ ಮೇಲೆಯೇ. ಚೀನಾ 46 ಬಿಲಿಯನ್ ಡಾಲರುಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಪಿಓಕೆ ಮತ್ತು ಬಲೂಚಿಸ್ತಾನಗಳ ಮೂಲಕ ಹಾದು ಹೋಗುವ ಎಕಾನಾಮಿಕ್ಕಾರಿಡಾರ್ಗೆ ಭಾರತದ ಈ ನಡೆ ಬಲು ದೊಡ್ಡ ಹೊಡೆತವನ್ನೇ ಕೊಡಲಿದೆ. ಭಾರತದ ಪ್ರತಿಭಟನೆಯ ನಂತರವೂ ನಮಗೆ ರಕ್ಷಣಾ ದೃಷ್ಟಿಯಿಂದ ಘಾತುಕವಾಗಬಲ್ಲ ಈ ಯೋಜನೆಗೆ ಮುಂದಡಿ ಇಟ್ಟಿದ್ದ ಚೀನಾ ಈಗ ನಿಜವಾದ ಬಿಸಿ ಅನುಭವಿಸುತ್ತಿದೆ. ಪಿಓಕೆ ಪ್ರತ್ಯೇಕಗೊಂಡರೆ,ಭಾರತದೊಳಕ್ಕೆ ವಿಲೀನವಾದರೆ ಅಥವಾಬಲೂಚಿಸ್ತಾನ ಅತಂತ್ರವಾದರೆ ಅಲ್ಲಿಗೆ ಚೀನಾದ ಬಿಲಿಯನ್ಗಟ್ಟಲೆ ಡಾಲರುಗಳು ನೀರಲ್ಲಿ ಹೋಮವಾದಂತೆಯೇ. ಅದಕ್ಕೆ ಗಾಬರಿಗೊಂಡು ಕಾಶ್ಮೀರದ ವಿಚಾರದಲ್ಲಿ ತಾನೂ ಕೂಡ ಫಲಾನುಭವಿ ಎಂಬ ಹೇಳಿಕೆಯನ್ನು ಅವಸರದಲ್ಲಿ ಕೊಟ್ಟು ಮೂರ್ಖವಾಯ್ತು ಚೀನಾ!

ಇತ್ತ ಕಾಶ್ಮೀರಕ್ಕೂ ಈಗ ದ್ವಂದ್ವ. ಯಾವ ಪಾಕೀಸ್ತಾನಕ್ಕೆ ಜೈಕಾರ ಹಾಕುತ್ತಾ ಅವರು ನಿಂತಿದ್ದಾರೋ ಅದೇ ರಾಷ್ಟ್ರದಿಂದ ಚೂರು ಚೂರಾಗಿ ಪ್ರತ್ಯೇಕವಾಗುವ ಕನಸು ಹೊತ್ತ ಭೂಭಾಗಗಳು ಅವರ ನಿದ್ದೆ ಕೆಡಿಸಿವೆ. ಲದಾಖ್ನಲ್ಲಿ ಕೂಡ ಇತ್ತೀಚೆಗೆ ಸರ್ವ ಪಂಥಗಳ ನಾಯಕರೂ ಸಭೆ ಸೇರಿ ‘ಇತಿಹಾಸದುದ್ದಕ್ಕೂ ಲದಾಖ್ಭಾರತದೊಂದಿಗೆ ಇದೆ. ಈಗಲೂ ಹಾಗೆಯೇ. ಕಾಶ್ಮೀರದೊಂದಿಗಲ್ಲ ಅಖಂಡ ಭಾರತದ ಅಂಗವಾಗಿ ನಿಂತಿದೆ’ ಎಂದು ಪತ್ರಿಕಾಗೋಷ್ಠಿ ಕರೆದು ಪುನರುಚ್ಚರಿಸಿದರು. ಈ ತಂಡದಲ್ಲಿ ಲದಾಖ್ ಬೌದ್ಧ ಸಂಘದ ತ್ಸೆವಾಂಗ್ ತಿನ್ಲೆಸ್, ಅಂಜುಮನ್ ಇಮಾಮಿಯಾದ ಅಶ್ರಫ್ ಅಲಿ ಅಂತಹವರೂ ಇದ್ದರೆಂಬುದುಗಮನಿಸಲೇಬೇಕಾದ ಸಂಗತಿ. ಅಲ್ಲಿಗೆ ಕಾಶ್ಮೀರ ಏಕಾಂಗಿಯಾಯ್ತು. ಅವರ ಶಕ್ತಿಯೂ ಕ್ಷೀಣಿಸಿತು. ಜಮ್ಮು, ಲದಾಖ್ಗಳು ಬೇರೆಯಾದರೆ ರಾಜ್ಯಕ್ಕೆ ಶಕ್ತಿ ಇರಲಾರದೆಂಬುದು ಬಹುಶಃ ಮೆಹಬೂಬಾಗೂ ಸ್ಪಷ್ಟವಾಗಿರಬೇಕು. ಅದಕ್ಕೇ ಆಕೆ ಪ್ರತ್ಯೇಕತಾವಾದಿಗಳನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಾಳೆ! ಪಾಪ.ಪಾಕೀಸ್ತಾನ ಈ ಎಲ್ಲಾ ಬದಲಾವಣೆಗಳನ್ನು ಜೀಣರ್ಿಸಿಕೊಳ್ಳುವ ವೇಳೆಗೆ ಹೈರಾಣಾಗಿಬಿಟ್ಟಿದೆ!
ಈ ಎಲ್ಲಾ ರಾಜತಾಂತ್ರಿಕ ನಡೆಗೂ ಕಿರೀಟಪ್ರಾಯವಾದುದು ಭಾರತ ಮತ್ತು ಅಮೇರಿಕಾದ ನಡುವಣ ಸೇನಾ ನೆಲೆ ಕುರಿತಂತಹ ಒಪ್ಪಂದ. ಈ ಎರಡೂ ರಾಷ್ಟ್ರಗಳೂ ಒಬ್ಬರು ಮತ್ತೊಬ್ಬರ ಭೂ, ನೌಕಾ, ವಾಯು ನೆಲೆಗಳನ್ನು ಬಳಸಿಕೊಳ್ಳುವ ಈ ಒಪ್ಪಂದ ಐತಿಹಾಸಿಕವೇ ಸರಿ. ಅತ್ತ ರಷ್ಯಾದೊಂದಿಗೆ ಸುಖೋಯ್ವಿಮಾನಗಳ ಅಭಿವೃದ್ಧಿಯ ಒಪ್ಪಂದಕ್ಕೆ ಅಂಕಿತ ಹಾಕುವ ಭಾರತ ಇತ್ತ ಅಮೇರಿಕಾದೊಂದಿಗೆ ಇಂತಹುದೊಂದು ಮಹತ್ವದ ಹೆಜ್ಜೆ ಇಟ್ಟು ದಕ್ಷಿಣ ಚೀನಾದ ಸಮುದ್ರಕ್ಕೆ ಅದು ಅಬಾಧಿತವಾಗಿ ಬರುವಂತೆ ತಬ್ಬಿಕೊಳ್ಳುತ್ತದೆ. ಅದಕ್ಕೇ ಆರಂಭದಲ್ಲಿಯೇ ಬಹುಮಿತ್ರನೀತಿ ಎಂದಿದ್ದು. ಈ ಒಪ್ಪಂದಕ್ಕೆ ವೇದಿಕೆನಿರ್ಮಾಣವಾಗುತ್ತಿದ್ದಂತೆ ಚೀನಾದ ನಿದ್ದೆ ಹಾರಿ ಹೋಗಿದೆ. ಸರ್ಕಾರೀ ಪತ್ರಿಕೆ ಗ್ಲೋಬಲ್ ಟೈಮ್ಸ್ನಲ್ಲಿ ‘ಭಾರತ ಅಮೇರಿಕಕ್ಕೆ ಹತ್ತಿರವಾಗೋದು ಚೀನಾಕ್ಕೆ ಮಾತ್ರವಲ್ಲ ಪಾಕ್, ರಷ್ಯಾಗಳ ಕಣ್ಣನ್ನು ಕೆಂಪು ಮಾಡಿದರೆ ಅಚ್ಚರಿಯಲ್ಲ’ ಎಂದು ಬರೆದು ಭಾರತವನ್ನು ಹೆದರಿಸುವ ಪ್ರಯತ್ನ ಮಾಡಿತ್ತು. ವಾಸ್ತವವಾಗಿ ಏಷ್ಯಾಖಂಡದಲ್ಲಿ ತಾನೇ ಮೂಲೆಗುಂಪಾಗುತ್ತಿರುವ ಎಲ್ಲ ಲಕ್ಷಣಗಳೂ ಅದಕ್ಕೆ ಗೋಚರವಾಗಿದೆ. ಅಲ್ಲವೇ ಮತ್ತೇ? ಜಪಾನ್ ಈ ಬಾರಿ ತನ್ನ ರಕ್ಷಣಾ ಬಜೆಟನ್ನು ಹಿಂದಿನ ಎಲ್ಲ ವರ್ಷಗಳಿಗಿಂತ ಹಿಗ್ಗಿಸಿದ್ದು ಚೀನಾಕ್ಕೆ ಆತಂಕ ತಂದಿರಲೇಬೇಕು. ನೆಲದಿಂದ ಹಡಗಿಗೆ ಸಿಡಿಯುವ ಮತ್ತು ಆಗಸದಿಂದ ಹಡಗಿನತ್ತ ಸಿಡಿಯುವಮಿಸೈಲುಗಳ ಅಭಿವೃದ್ಧಿಗೆ ಈ ಹಣ ಎಂದು ಜಪಾನ್ ಹೇಳಿರುವುದು ತನ್ನನ್ನು ಗುರಿಯಾಗಿಟ್ಟುಕೊಂಡೇ ಎನ್ನುವುದರಲ್ಲಿ ಚೀನಾಕ್ಕೆ ಯಾವ ಅನುಮಾನವೂ ಉಳಿದಿಲ್ಲ. ಇದರ ಜೊತೆ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಬಂಧ ವೃದ್ಧಿಯ ನೆಪದಲ್ಲಿ ವಿಯೆಟ್ನಾಂಗೆ ಭೇಟಿ ಕೊಡುತ್ತಿರುವ ಸುದ್ದಿಯಂತೂ ಚೀನಾದಪಾಲಿಗೆ ದುಸ್ವಪ್ನವೇ. ಅತ್ತ ಆಸ್ಟ್ರೇಲಿಯಾ ಕೂಡ ಚೀನಾದ ಸೆರಗಿನಿಂದ ಆಚೆ ಬರಬೇಕೆಂದು ಹವಣಿಸುತ್ತಿದೆ. ಮಾಲ್ಡೀವ್ಸ್ನ ಮೇಲಿದ್ದ ಭಾರತದ ಹಿಡಿತವನ್ನು ಕಡಿಮೆ ಮಾಡಿ ತನ್ನ ಪ್ರಾಬಲ್ಯ ಸ್ಥಾಪಿಸಿಕೊಂಡಿದ್ದ ಚೀನಾಕ್ಕೆ ಸದ್ಯದಲ್ಲಿ ದೊಡ್ಡದೊಂದು ಹೊಡೆತ ಬೀಳಲಿದೆ. ನೇಪಾಳದಲ್ಲಿ ಚೀನಾದ ಪರವಾಗಿದ್ದ ಪ್ರಧಾನಮಂತ್ರಿಕೆ.ಪಿ ಒಲಿ ಮಾಧೇಶಿಗಳ ಹೋರಾಟವನ್ನು ಹತ್ತಿಕ್ಕಲಾಗದೇ ಇಳಿಯಬೇಕಾಯ್ತಲ್ಲ ಅದರ ಹಿಂದೆ ನಿಂತದ್ದೂ ಭಾರತದ ಶಕ್ತಿಯೇ. ಈಗ ಗದ್ದುಗೆಯೇರಿರುವ ಪ್ರಚಂಡ ನಿಧಾನವಾಗಿ ಭಾರತದ ಕಡೆಗೆ ತಿರುಗುತ್ತಿರುವುದು ಒಳ್ಳೆಯ ಸಂಕೇತವೇ. ಶ್ರೀಲಂಕಾದ ಕತೆಯೂ ಹಾಗೆಯೇ ಆಗಿ ಚೀನಾದ ಕೈ ತಪ್ಪಿ ಹೋದ ಮೇಲೆನಿಜಕ್ಕೂ ಚೀನಾ ಈಗ ಭಾರತದ ರಾಜತಂತ್ರದಿಂದ ಸುತ್ತುವರಿಯಲ್ಪಟ್ಟಿದೆ. ಒಳಗಿಂದ ವಹಾಬಿ ಮುಸಲ್ಮಾನರು ತಂಟೆ ತಕರಾರು ಶುರುಮಾಡಿ, ಟಿಬೇಟಿಗರು ಪ್ರತ್ಯೇಕತೆಯ ಕೂಗೆಬ್ಬಿಸಿಬಿಟ್ಟರೆ ಚೀನಾ ಕೂಡ ತಾನೇ ತೋಡಿದ ಹಳ್ಳದಲ್ಲಿ ಬೀಳುವುದು ಖಚಿತ.

ಹಾಗೆಂದ ಮಾತ್ರಕ್ಕೆ ಭಾರತ ಹೊರಗಿನ ಶಕ್ತಿಗಳನ್ನಷ್ಟೇ ನೆಚ್ಚಿ ಇಂತಹುದೊಂದು ಸವಾಲನ್ನು ಹಾಕುತ್ತಿದೆಯೆಂದು ಭಾವಿಸಿಬಿಡಬೇಡಿ. ಮೇಕ್ ಇನ್ ಇಂಡಿಯಾಕ್ಕೆ ಶಕ್ತಿ ತುಂಬಲೆಂದೇ ಆರ್ಮಿ ಡಿಸೈನ್ ಬ್ಯೂರೋ ದೆಹಲಿಯಲ್ಲಿ ತೆರೆಯಲಾಗಿದ್ದು ಇದು ಸೇನೆ ತನಗೆ ಬೇಕಾಗಿರುವ ಶಸ್ತ್ರಾಸ್ತ್ರಗಳ ಸ್ಪೇರ್ ಪಾರ್ಟಗಳನ್ನು ತಾನೇತಯಾರಿಸುವ ನಿಟ್ಟಿನಲ್ಲಿ ಡಿಸೈನ್ ಹಾಕಿಕೊಡುತ್ತದೆ. ಅದನ್ನು ದೇಸೀ ಕಂಪನಿಗಳು ತಯಾರಿಸುವಲ್ಲಿ ಮುಂದೆ ಬಂದಿವೆ. ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಬೀಳುವುದರಿಂದ ಕೋಟ್ಯಂತರ ರೂಪಾಯಿ ಉಳಿತಾಯ ಖಾತ್ರಿ. ಅಷ್ಟೇ ಅಲ್ಲದೇ ಸರ್ಕಾರ ಸ್ವಿಡನ್ ಕಂಪನಿಗಳನ್ನೂ ಆಹ್ವಾನಿಸಿ ಭಾರತದಲ್ಲಿಯೇಶಸ್ತ್ರಾಸ್ತ್ರಗಳ ತಯಾರಿಕೆಗೆ ಮನವೊಲಿಸುತ್ತಿದೆ. ಇನ್ನು ಮುಂದೆ ನೌಕೆಗಳು, ಸಬ್ಮೆರೀನ್ಗಳೂ ಇಲ್ಲಿಯೇ ನಿರ್ಮಾಣವಾಗಲಿವೆ. ಸಹಜವಾಗಿಯೇ ಚೀನಾ ಮೀರಿಸುವ ಯುದ್ಧ ಕೌಶಲ, ತಂತ್ರಜ್ಞಾನ ನಮ್ಮದಾಗುವ ಕಾಲ ದೂರವಿಲ್ಲ. ನಾವೀಗ ಪಾಕೀಸ್ತಾನದೊಂದಿಗೆ ತುಲನೆ ಮಾಡಬೇಕಾದ ರಾಷ್ಟ್ರವಲ್ಲ, ನಮ್ಮ ತೂಕ ಈಗಚೀನಾದ ಮಟ್ಟದ್ದೇ.
ನಂಬಿಕೆ ಬರುತ್ತಿಲ್ಲವೇ? ಮೊದಲೆಲ್ಲ ಅಮೇರಿಕಾದ ಮಂತ್ರಿಗಳು ಭಾರತದ ಭೇಟಿ ಮಾಡಿದ ನಂತರ ಪಾಕೀಸ್ತಾನಕ್ಕೆ ಹೋಗುತ್ತಿದ್ದುದು ನೆನಪಿದೆಯೇ? ಅದು ನಮ್ಮನ್ನು ಅವರೊಂದಿಗೆ ತೂಗಿ ನೋಡುತ್ತಿದ್ದ ಪರಿ. ಇತ್ತೀಚೆಗೆ ಅಮೇರಿಕಾದ ಕಾರ್ಯದರ್ಶಿ ಜಾನ್ ಕೆರ್ರಿ ಭಾರತಕ್ಕೆ ಬಂದರಲ್ಲ ಅವರು ಕೆಲವು ದಿನ ಇಲ್ಲಿಯೇಉಳಿದು ನೇರವಾಗಿ ಚೀನಾದೊಂದಿಗೆ ಮಾತುಕತೆಗೆ ತೆರಳಲಿದ್ದಾರೆ. ಅದರರ್ಥವೇನು ಗೊತ್ತಾಯ್ತಲ್ಲ!
ಚೀನಾಕ್ಕೆ ನಡುಕವುಂಟಾಗಿರೋದು ಅದಕ್ಕೆ. ಹೀಗಾಗಿಯೇ ಅಲ್ಲಿನ ಎಂಜಲು ಕಾಸಿಗಾಗಿ ಕಾಯುವ ಇಲ್ಲಿನ ಮಾವೋವಾದಿಗಳು ಥಂಡಿ ಜ್ವರ ಬಂದಂತಾಡುತ್ತಿದ್ದಾರೆ. ಮೋದಿಯನ್ನು ಮನಸೋ ಇಚ್ಛೆ ಬೈದಾಡುತ್ತಿವೆ. ಆತ ಯಾರಿಗೂ ಸೊಪ್ಪು ಹಾಕುತ್ತಿಲ್ಲ. ಭಾರತದ ಅಖಂಡತೆ, ಸಾರ್ವಭೌಮತೆಯ ಸಾಬೀತಿಗೆಟೊಂಕಕಟ್ಟಿ ನಿಂತುಬಿಟ್ಟಿದ್ದಾನೆ. ಐವತ್ತಾರು ಇಂಚಿನ ಎದೆ ಅಂತ ಸುಮ್ಮನೇ ಹೇಳಿದ್ದಲ್ಲ!!

Previous Post

ಕಾವೇರಿ ಅನ್ಯಾಯಕ್ಕೆ ಸಿಡಿದೆದ್ದ ಮಂಡ್ಯ: ಮೈಸೂರು ಭಾಗದಲ್ಲಿ ತೀವ್ರ ಹೋರಾಟ

Next Post

ಇಲ್ಲಿ ಕುಡಿಯಲೇ ನೀರಿಲ್ಲ, ಸಾಂಬಾಗೆ ನೀರು ಬೇಕಂತೆ!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಇಲ್ಲಿ ಕುಡಿಯಲೇ ನೀರಿಲ್ಲ, ಸಾಂಬಾಗೆ ನೀರು ಬೇಕಂತೆ!

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025

134ನೇ ಫುಟ್ಬಾಲ್ ದುರಂದ್ ಕಪ್’ಗೆ ರಾಷ್ಟ್ರಪತಿಗಳಿಂದ ಚಾಲನೆ | ಏನಿದರ ವಿಶೇಷ?

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!