ಬೆಂಗಳೂರು: ಅ:28: ಕಿಕ್ಬ್ಯಾಕ್ ಪಡೆದ ಪ್ರಕರಣದಲ್ಲಿ ನ್ಯಾಯಾಲಯದಿಂದ ಕ್ಲೀನ್ಚಿಟ್ ಪಡೆದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಷ್ಟ್ರ ನಾಯಕರನ್ನು ಭೇಟಿ ಮಾಡಲು ನವದೆಹಲಿಗೆ ತೆರಳಿದ್ದಾರೆ.
ಇಂದು ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರನ್ನು ಭೇಟಿ ಮಾಡಿ ತಮ್ಮ ಮೇಲೆ ಕೇಳಿಬಂದಿದ್ದ ಆಪಾದನೆಗಳಿಂದ ದೋಷಮುಕ್ತವಾದ ಬಗ್ಗೆ ವಿವರಣೆ ನೀಡಲಿದ್ದಾರೆ.
ಮಾಜಿ ಸಚಿವ ಅರವಿಂದ ಲಿಂಬಾವಳಿ ಕೂಡ ಬಿಎಸ್ವೈ ಜತೆ ದೆಹಲಿಗೆ ತೆರಳಿದ್ದಾರೆ.
ತದನಂತರ ಪ್ರಧಾನಿ ನರೇಂದ್ರಮೋದಿಯವರನ್ನು ಕೂಡ ಭೇಟಿ ಮಾಡುವ ಸಂಭವವಿದೆ. ಆದರೆ, ಈವರೆಗೂ ಅವರಿಗೆ ಪ್ರಧಾನಿ ಕಾರ್ಯಲಯದಿಂದ ಸಮಯಾವಕಾಶ ಸಿಕ್ಕಿಲ್ಲ.
ಅಮಿತ್ ಷಾ ಅವರನ್ನು ಭೇಟಿ ಮಾಡಲಿರುವ ಯಡಿಯೂರಪ್ಪ ಈ ಹಿಂದೆ ತಮ್ಮ ರಾಜಕೀಯ ವನವಾಸಕ್ಕೆ ಕಾರಣವಾಗಿದ್ದ ಪ್ರಕರಣಗಳು ಹಾಗೂ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀಪರ್ಿನ ಬಗ್ಗೆ ಚರ್ಚೆ ನಡೆಸುವರು.
ನಂತರ ಪಕ್ಷದ ಸಂಘಟನೆ ಹಾಗೂ ನವೆಂಬರ್ನಲ್ಲಿ ನಡೆಸಲು ಉದ್ದೇಶಿಸಿರುವ ಹಿಂದುಳಿದ ವರ್ಗಗಳ ಸಮಾವೇಶಕ್ಕೂ ಅವರನ್ನು ಅಧಿಕೃತವಾಗಿ ಆಹ್ವಾನಿಸಲಿದ್ದಾರೆ.
ಚರ್ಚೆ ವೇಳೆ ಪಕ್ಷದಲ್ಲಿ ಇತ್ತೀಚೆಗೆ ಉಂಟಾಗಿರುವ ಭಿನ್ನಾಭಿಪ್ರಾಯ ಹಾಗೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕುರಿತಂತೆಯೂ ಮಾತುಕತೆ ನಡೆಸುವರು.
ರಾಜ್ಯದಲ್ಲಿ ಬಿಜೆಪಿಗೆ ಉತ್ತಮವಾದ ವಾತಾವರಣ ನಿಮರ್ಾಣವಾಗುತ್ತಿದೆ. ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಜನರು ದಿನದಿಂದ ದಿನಕ್ಕೆ ಆಕ್ರೋಶಗೊಂಡು ನಮ್ಮ ಪಕ್ಷದತ್ತ ಒಲವು ತೋರುತ್ತಿದ್ದಾರೆ. ಇಂತಹ ವೇಳೆ ಪಕ್ಷದಲ್ಲಿ ಗೊಂದಲಗಳಿಗೆ ಅವಕಾಶ ನೀಡಬಾರದೆಂದು ರಾಜ್ಯ ನಾಯಕರಿಗೆ ಸೂಚನೆ ನೀಡುವಂತೆ ಕೋರುವರು.
ಉಳಿದಿರುವ ಅವಧಿಯಲ್ಲಿ ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡಿ ರಾಜ್ಯಾದ್ಯಂತ ಪ್ರವಾಸ, ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಲಾಗುವುದು. ಪಕ್ಷ ಸಂಘಟನೆ ವೇಳೆ ಅನಗತ್ಯವಾಗಿ ಯಾರೊಬ್ಬರೂ ಗೊಂದಲ ಸೃಷ್ಟಿಸಲು ಅವಕಾಶ ನೀಡಬಾರದು. ಇದಕ್ಕೆ ರಾಷ್ಟ್ರೀಯ ನಾಯಕರು ಬೆಂಬಲ ನೀಡುವಂತೆ ಮನವಿ ಮಾಡುವರು.
ಬಿಎಸ್ವೈ ದೆಹಲಿಗೆ ತೆರಳಿರುವುದರಿಂದ ಇಂದು ನಡೆಯಬೇಕಿದ್ದ ಕೋರ್ ಕಮಿಟಿ ಸಭೆ ರದ್ದಾಗಿದ್ದು, ಮುಂದಿನ ತಿಂಗಳು
ನಡೆಯಲಿದೆ.
Discussion about this post