ದೇವರ ನಾಡು.
ಹೀಗಂದೊಡನೆ ತಿಳಿದವರಿಂದ ನಿಡಿದಾದ ಉಸಿರೊಂದು ಹೊರ ಬೀಳುತ್ತದೆ. ಅಲ್ಲಿ ಹಸಿರ ಸಿರಿಯಿಂದ ತುಂಬಿ ತುಳುಕುವ ವನದೊಳಗಿನ ಮರಗಳಿಂದ ರಕ್ತ ತೊಟ್ಟಿಕ್ಕುತ್ತಲೇ ಇದೆ. ಮಳೆಗಾಲದಲ್ಲೂ, ಬಿರುಬಿಸಿಲಿನಲ್ಲೂ ಅಲ್ಲಿಯ ನದಿಗಳಲ್ಲಿ ಹರಿಯುವ ನೀರು ಕಡುಗೆಂಪೇ! ದುಷ್ಟರ ಚೆಂಡಾಡಿದ ತಾಯಿ ಭಗವತಿ, ಕ್ಷಾತ್ರಧರ್ಮವನ್ನು ಪುನರುಜ್ಜೀವಿಸಿದ ಶ್ರೀಕೃಷ್ಣ ಅಲ್ಲಿ ಮೂಕ ಪ್ರೇಕ್ಷಕರು. ಮಾನವರೆಲ್ಲಾ ಒಂದೇ ಎಂದ ಅಯ್ಯಪ್ಪನ ನಾಡಿನಲ್ಲಿ ಮಾನವರನ್ಯಾರನ್ನೂ ಬದುಕಗೊಡುತ್ತಿಲ್ಲ. ಒಂದೆಡೆ ಜಿಹಾದಿನ ಅಬ್ಬರ ಇನ್ನೊಂದೆಡೆ ಕೆಂಪು ಉಗ್ರರ ಅಟ್ಟಹಾಸಗಳ ನಡುವೆ ಹಿಂದೂಗಳ ಬದುಕು ದುರ್ಭರ. ಇನ್ನೆಲ್ಲಿಯ ದೇವರ ನಾಡು…ಅದೀಗ ದೆವ್ವಗಳ ಬೀಡು, ನರ ರಾಕ್ಷಸರ ತಾಣ. ಈಗಂತೂ ಅವರದ್ದೇ ಆಳ್ವಿಕೆ…ಈಗೇನೂ ಹಿಂದಾದರೂ ಅವರದ್ದೇ ಕಾರ್ಯಭಾರವಲ್ಲವೇ!
ಕಣ್ಣೂರಿನಲ್ಲೇ ಕಮ್ಯುನಿಷ್ಟ್ ಹಿಂಸೆ ಯಾಕೆ ತೀವ್ರವಾಗಿದೆ ಎಂದರೆ, ಎಡಪಕ್ಷಗಳು ಅದನ್ನು ಕಮ್ಯುನಿಸಂನ ತೊಟ್ಟಿಲು ಎಂದೇ ಪರಿಗಣಿಸುತ್ತವೆ. 1940ರಲ್ಲಿ ಕಣ್ಣೂರಿನ ಪಿಣರಾಯಿಯಲ್ಲೇ ಕಮ್ಯುನಿಸ್ಟ್ ಪಕ್ಷ ಪ್ರಾರಂಭವಾಯಿತು. ಆರಂಭದಲ್ಲಿ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ ತಮಗಿಂತಲೂ ವೃದ್ಧಿಯಾಗಬಹುದು ಎಂದು ಅಂದುಕೊಂಡಿರಲಿಲ್ಲ. ನಾಗ್ಪುರದಲ್ಲಿ ಶುರುವಾದ ಸಂಘಟನೆ ತಮ್ಮ ನೆಲದಲ್ಲಿ ಬೆಳೆಯಲಾರದು ಎಂದೇ ನಿರ್ಲಕ್ಷಿಸಿದರು. ಆದರೆ, ಸಂಘ ಬಲಗೊಳ್ಳತೊಡಗಿತು. ತಮ್ಮ ತೊಟ್ಟಿಲಾದ ಕಣ್ಣೂರಿನಲ್ಲಿ ಸಿಪಿಎಂ ಹಿಮ್ಮೆಟ್ಟಿದ್ದೇ ಆದರೆ ಉಳಿದೆಡೆ ಅದರ ಪತನ ನಿಶ್ಚಯವೆಂದೇ ಕಮ್ಯುನಿಸ್ಟರು ಹಿಂಸೆ- ಹತ್ಯೆಗಳ ಮೂಲಕ ತಮಗಾಗದ ಸಿದ್ಧಾಂತದವರನ್ನು ಇಲ್ಲವಾಗಿಸಲು ಪ್ರಾರಂಭಿಸಿದರು.
ಶಿಕ್ಷಕರಾಗಿದ್ದ ಸದಾನಂದ ಮಾಸ್ಟರರ ತಂದೆ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದರು. ಈಗ ಡಿವೈಎಸ್ಎಫ್ ಎಂದು ಕರೆಸಿಕೊಳ್ಳುತ್ತಿರುವ ಆಗಿನ ಕಮ್ಯುನಿಸ್ಟ್ ಸಂಘಟನೆ ಕೆಎಸ್ ವೈಎಫ್ ನಲ್ಲಿ ಸದಾನಂದರ ಇಬ್ಬರು ಸಹೋದರರೂ ಇದ್ದರು. ಇಂಥ ವಾತಾವರಣದಲ್ಲಿ ಬೆಳೆದ ಸದಾನಂದರೂ ಸಹಜವಾಗಿ ಕಮ್ಯುನಿಷ್ಟ್ ಪಕ್ಷವನ್ನು ಸೇರಿಕೊಂಡರು. ಎಸ್ಎಫ್ಐ ಎಂಬ ಕಮ್ಯುನಿಸ್ಟ್ ವಿದ್ಯಾರ್ಥಿ ಕೂಟದ ಸದಸ್ಯನೂ ಆದರು. “ಆ ಸಂದರ್ಭದಲ್ಲೇ ನಮಗೆ ಕಾಲೇಜು ಚುನಾವಣೆಗಳ ವೇಳೆ ಎಬಿವಿಪಿ ಸದಸ್ಯರ ವಿರುದ್ಧ ಕಲ್ಲು ತೂರಬೇಕೆಂಬ ನಿರ್ದೇಶನಗಳನ್ನು ನೀಡಲಾಗುತ್ತಿತ್ತು” ಎಂದಿದ್ದಾರೆ ಸದಾನಂದ ಮಾಸ್ಟರ್. ಆದರೆ ಪ್ರಬುದ್ಧರಾಗುತ್ತಿದ್ದಂತೆ ಸದಾನಂದರಿಗೆ ಸಂಘದ ಬಗ್ಗೆ ತಿಳಿಯುವ ಕುತೂಹಲ ಉಂಟಾಯಿತು. ರಕ್ಷಾಬಂಧನದ ಪ್ರಯುಕ್ತ ಬೌದ್ಧಿಕ ಭಾಷಣವನ್ನು ಕೇಳಿದಾಗ, ಸಮಾಜ ನಿರ್ಮಾಣಕ್ಕೆ ಇದೇ ಸರಿ ಎನ್ನಿಸಿತು. ಸಂಘದ ಕೇಸರಿ ಪತ್ರಿಕೆಗೆ ಚಂದಾದಾರನೂ ಆದರು. ಹೀಗೆ ಶಾಖೆಗೆ ಬಂದರು ಮಾಸ್ಟರ್. ಯಾವಾಗ ಅವರು ಸಂಘ ಸೇರುವ ನಿರ್ಧಾರ ತೆಗೆದುಕೊಂಡರೋ ಆಗ ಅವರ ಸಹವರ್ತಿಗಳಿಗೆ ಆಘಾತವಾಯಿತು. ಕುಟುಂಬದ ಸದಸ್ಯರೆಲ್ಲ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿರುವಾಗ ಅವರಲ್ಲೊಬ್ಬ ಸಂಘವನ್ನು ಸೇರಿಕೊಳ್ಳುವುದನ್ನು ಅವರು ಹೇಗೆ ಸಹಿಸಿಯಾರು? ದೊಡ್ಡ ದೊಡ್ಡ ಗುಂಪುಗಳಲ್ಲಿ ಮನೆಗೆ ಬಂದ ಕಮ್ಯುನಿಸ್ಟ್ ಕಾರ್ಯಕರ್ತರು ಮೊದಲಿಗೆ ಪ್ರೀತಿಯಿಂದಲೇ ಉಪದೇಶ ಕೊಟ್ಟರು. ಸಂಘ ಒಂದು ಫ್ಯಾಸಿಸ್ಟ್ ಸಂಘಟನೆ ಎಂದು ಎಚ್ಚರಿಸಿದರು! ಇದಕ್ಕೆ ಒಪ್ಪದಿದ್ದಾಗ ಶಿಕ್ಷಿಸುವ ನಿರ್ಧಾರ ತೆಗೆದುಕೊಂಡರು. ಕೇರಳದಲ್ಲಿ ‘ಪಾರ್ಟಿ ವಿಲೇಜ್’ ಎಂದು ಕರೆಸಿಕೊಳ್ಳುವ ಹಲವು ಹಳ್ಳಿಗಳಿವೆ. ಇವೆಲ್ಲವೂ ಕಮ್ಯುನಿಸ್ಟರ ನಿಯಂತ್ರಣದಲ್ಲಿರುವ ಹಳ್ಳಿಗಳಾದುದರಿಂದ ಆ ಹೆಸರು. ಪಾರ್ಟಿ ವಿಲೇಜ್ ಗಳ ಮುಖ್ಯ ಲಕ್ಷಣ ಎಂದರೆ ಅಲ್ಲಿ ಯಾವ ಅಭಿವೃದ್ಧಿ ಕಾರ್ಯಗಳೂ ಆಗಿರುವುದಿಲ್ಲ. ರಸ್ತೆ- ಮೂಲಸೌಕರ್ಯಗಳನ್ನು ರಹಿತವಾಗಿಸಿ ಯಾರೂ ಅತ್ತ ಹೋಗದಂತೆ ಕಾಪಾಡಿಕೊಳ್ಳಲಾಗುತ್ತದೆ. ವಿದ್ಯುತ್ ಇರುವುದೇ ಅಪರೂಪ. ಇದ್ದರೂ ಸಂಜೆಯ ನಂತರ ಸ್ಥಗಿತ. ಕಮ್ಯುನಿಸ್ಟ್ ಪಾರ್ಟಿ ವಿಲೇಜ್ ಜತೆಗೆ ಪಾರ್ಟಿ ಕೋರ್ಟುಗಳೂ ಕೇರಳದಲ್ಲಿವೆ. ಸದಾನಂದ ಮಾಸ್ಟರ್ ಅವರ ಕಾಲು ಕತ್ತರಿಸುವ ನಿರ್ಧಾರವಾಗಿದ್ದು ಇಂಥದೇ ಕೋರ್ಟಿನಲ್ಲಿ. ಯಾವಾಗ ಅವರು ಉಪದೇಶದ ಮಾತುಗಳಿಗೆ ಮಣಿಯುವುದಿಲ್ಲ ಎಂದಾಯಿತೋ, ಆಗಲೇ ಇವರನ್ನು ಪಾರ್ಟಿ ಕೋರ್ಟಿಗೆ ಕರೆತರಲಾಯಿತು. ಅಲ್ಲಿನ ಚರ್ಚೆಯಲ್ಲಿ ಕಮ್ಯುನಿಸ್ಟ್ ಸದಸ್ಯರು ಸದಾನಂದ ಮಾಸ್ಟರಿಗೆ ಮರಣದಂಡನೆ ಆಗಬೇಕು ಅಂತಲೇ ಕೇಳಿದರು. ಆದರೆ, ನಂತರ ಉಳಿದವರಿಗೆ ಭಯ ಹುಟ್ಟಲು ಕಾರಣವಾಗಲಿ ಎಂಬ ಕಾರಣಕ್ಕೆ ಕಾಲು ಕತ್ತರಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದೇನೂ ಆಕ್ರೋಶದ ಭರದಲ್ಲಿ ಮಾಡಿದ ಕಾರ್ಯವಲ್ಲ. ಯಾರು ಕಾಲು ಕತ್ತರಿಸಬೇಕು, ಯಾರು ಇವರನ್ನು ಹಿಡಿದುಕೊಳ್ಳಬೇಕು, ಯಾರ್ಯಾರು ಮಣ್ಣು-ಸಗಣಿ ಮೆತ್ತಬೇಕು ಎಂಬುದೆಲ್ಲ ಯೋಜನಾಬದ್ಧವಾಗಿ ಸಿದ್ಧಗೊಂಡಿತು. ಸದಾನಂದ ಮಾಸ್ಟರ್ ಮೇಲೆ ಹಲ್ಲೆಯ ದಿನ ವಿದ್ಯುತ್ ತೆಗೆಯಲಾಯಿತು. ಎಲ್ಲಾ ಭೀಬತ್ಸದ ವಿವರಗಳು ಇರುವಂತೆ ಹಲ್ಲೆ ನಡೆಸಲಾಯಿತು. ಸದಾನಂದ್ ಮಾಸ್ಟರ್ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು, ಕಾಲಿಗೆ ತೂರಿಸಿದ್ದ ಸಗಣಿ, ಮಣ್ಣು ತೆಗೆಯುವುದಕ್ಕೆ ನಾಲ್ಕು ತಾಸು ತೆಗೆದುಕೊಂಡಿತು ಎಂದಿದ್ದರು. “ಜೀವ ತೆಗೆಯದೇ ಬರ್ಬರವಾಗಿ ಹಲ್ಲೆ ನಡೆಸಿ, ಓಡಾಡಲು ಆಗದಂತೆ ಕಾಲು ಕತ್ತರಿಸಿ, ನನ್ನನ್ನು ಧೃತಿಗೆಡಿಸುವುದಲ್ಲದೇ ಇನ್ಯಾರೂ ಆರೆಸ್ಸೆಸ್ ಸೇರದಂತೆ ಮಾಡುವ ಉದ್ದೇಶ ಇದಾಗಿತ್ತು” ಎಂದು ತಮ್ಮ ಹಿಂದಿನ ಸಂಘಟನೆಯ “ಶಾಂತಿ ಸ್ವರೂಪ”ವನ್ನು “ಫ್ಯಾಸಿಸ್ಟ್ ಅಲ್ಲದ” ಗುಣವನ್ನು ಬಿಚ್ಚಿಟ್ಟಿದ್ದಾರೆ ಸದಾನಂದ ಮಾಸ್ಟರ್.
2000ನೇ ಇಸವಿಯಲ್ಲಿ ಕೊಡಿಯೇರಿ ಬಾಲಕೃಷ್ಣನನ ಅಳಿಯ ಶಾಖೆಯ ಮೇಲೆ ದಾಳಿ ಮಾಡಿದ ನಂತರ ಕೊಡಿಯೇರಿಯ ಎಂಗಾಯಿಲ್ಪೀಡಿಕಾದಲ್ಲಿ ಶಾಖೆ ನಡೆಸಲು ಕೆಂಪು ಉಗ್ರರು ಅವಕಾಶವನ್ನೇ ಕೊಡುತ್ತಿಲ್ಲ. ಅಲ್ಲಿ ಸಂಘದ ಕಾರ್ಯಕರ್ತರ ಮೇಲೆ ಕಮ್ಯೂನಿಸ್ಟ್ ಗೂಂಡಾಗಳ ಅಘೋಷಿತ 144 ಸೆಕ್ಷನ್ ಜಾರಿಯಲ್ಲಿದೆ ಒಂದು ಕಡೆ ಕುಳಿತುಕೊಳ್ಳುವಂತಿಲ್ಲ. ಒಟ್ಟು ಸೇರಿ ಮಾತಾಡುವಂತಿಲ್ಲ. ಒಂದೋ ತಿರುಗಾಡುತ್ತಿರಬೇಕು ಇಲ್ಲವೇ ಒಬ್ಬರೇ ನಡೆದಾಡಬೇಕು. ಕಣ್ಣೂರಿನ ಐವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಶಾಖೆಗಳನ್ನು ನಡೆಸಲು ಕೆಂಪು ಉಗ್ರರು ಬಿಡುವುದೇ ಇಲ್ಲ. ಎಲ್ಲಾದರೂ ಶಾಖೆ ನಡೆಸುವ ಪ್ರಯತ್ನ ಯಾರಾದರೂ ಮಾಡಿದರೆ ತಲವಾರ್, ಮಚ್ಚು, ಬಾಂಬುಗಳೊಂದಿಗೆ ಸ್ಟಾಲಿನ್ ಭಕ್ತರು ಪ್ರತ್ಯಕ್ಷರಾಗುತ್ತಾರೆ. ಕಣ್ಣೂರಿನ 265 ಬೂತುಗಳಲ್ಲಿ ಸಿಪಿಎಂ ಗೂಂಡಾಗಳನ್ನು ಬಿಟ್ಟು ಯಾರೂ ಕೂರುವಂತಿಲ್ಲ. ಕಣ್ಣೂರಿನ ಭೀಬತ್ಸ ರಕ್ತಸಿಕ್ತ ಅಧ್ಯಾಯವನ್ನು ಕಂಡ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ರಾಮಕುಮಾರ್ 2008ರಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ರಾಜಕೀಯ ಒತ್ತಡವಿಲ್ಲದ ಪಡೆಯೊಂದನ್ನು ಇಲ್ಲಿ ನಿಯೋಜಿಸುವುದೇ ಶಾಂತಿ ಕಾಪಾಡಲು ಇರುವ ಏಕೈಕ ಮಾರ್ಗ ಎಂದಿದ್ದರು.
ಕೇರಳದ ಕಮ್ಯೂನಿಷ್ಟರ ರಕ್ತ ದಾಹಕ್ಕೆ ಕಿರೀಟಪ್ರಾಯವಾದ ಘಟನೆ ಜಯಕೃಷ್ಣ ಮಾಸ್ತರರ ಕೊಲೆ. ಕಳೆದ ಶತಮಾನದ ಕೊನೆಯ ತಿಂಗಳಲ್ಲೊಂದು ದಿನ ಭಾರತೀಯ ಜನತಾ ಯುವಮೋರ್ಚಾದ ಕೇರಳ ರಾಜ್ಯ ಉಪಾಧ್ಯಕ್ಷರಾಗಿದ್ದ ಜಯಕೃಷ್ಣನ್ ಮಾಸ್ಟರ್ ಕಣ್ಣೂರು ಜಿಲ್ಲೆಯ ಶಾಲೆಯೊಂದರಲ್ಲಿ ಎಂದಿನಂತೆ 6ನೇ ತರಗತಿಯ ಮಕ್ಕಳಿಗೆ ಪಾಠ ಮಾಡುತಿದ್ದರು. ಕೆಲ ಸಮಯದಲ್ಲಿ ಕಮ್ಯೂನಿಸ್ಟ್ ಗೂಂಡಾಗಳಿಂದ ಅವರ ರಕ್ಷಣೆಗೆಂದು ನೇಮಿಸಿದ್ದ ಅವರ ಅಂಗರಕ್ಷಕ ನಾಪತ್ತೆಯಾದ. ತಕ್ಷಣ ಏಳು ಜನ ಕಮ್ಯುನಿಸ್ಟ್ ಗೂಂಡಾಗಳು ಮಾರಕಾಸ್ತ್ರಗಳನ್ನು ಝಳಪಿಸುತ್ತ ನೇರವಾಗಿ ತರಗತಿಯೊಳಗೆ ನಡೆದು ಬಂದರು. ಮಕ್ಕಳನ್ನು ಕೂತ ಜಾಗದಿಂದ ಕದಲದಂತೆ ಬೆದರಿಸಿ, ಆ ಚಿಣ್ಣರ ಕಣ್ಣೆದುರೇ ಜಯಕೃಷ್ಣನ್ ಮಾಸ್ತರರಿಗೆ ಭೀಕರವಾಗಿ ಇರಿಯಲಾಯಿತು. 48 ಇರಿತದ ಗಾಯಗಳಿಂದ ಜರ್ಝರಿತವಾದ ಆ ಶರೀರ ನೆಲಕ್ಕೊರಗಿತು. ತಮ್ಮ ನೆಚ್ಚಿನ ಶಿಕ್ಷಕನ ಮೇಲಾದ ಭೀಕರ ದಾಳಿಯನ್ನು ನೋಡಿದ ಆ ಮಕ್ಕಳು ಆಘಾತಕ್ಕೊಳಗಾದರು. ಅವರನ್ನು ಸಹಜ ಸ್ಥಿತಿಗೆ ತರಲು ಕೌನ್ಸೆಲಿಂಗ್ ಮಾಡಬೇಕಾಯಿತು. ಅಮಾನುಷವಾಗಿ ಕೊಲೆ ಮಾಡಿದ ಬಳಿಕ ಶಾಲೆಯ ಬೋರ್ಡಿನಲ್ಲಿ ಸಾಕ್ಷಿ ಹೇಳಿದವರಿಗೂ ಇದೇ ಗತಿ ಎಂದು ಬರೆದ ಕೆಂಪು ಉಗ್ರರು ಕೇಕೆ ಹಾಕುತ್ತಾ ಹೊರನಡೆದರು. 1996ರಲ್ಲಿ ಚಂದ್ರನ್ ಕೊಲೆಯಾದ ಬಳಿಕ ಕಣ್ಣೂರಿನಲ್ಲಿ ಭಾಜಪಾ ನೇತೃತ್ವ ವಹಿಸಿದವರು ಜಯಕೃಷ್ಣನ್ ಮಾಸ್ತರ್. ಅವರ ಭಾಷಣ ಕೇಳಲು ಜನ ಕಿಕ್ಕಿರಿದು ನೆರೆಯುತ್ತಿದ್ದರು. ಅವರ ನೇತೃತ್ವದಲ್ಲಿ ಭಾಜಪಾ ಬೆಳೆಯಲಾರಂಭಿಸಿತು. ಕಾರ್ಯಕರ್ತರ ಉತ್ಸಾಹ ಹೆಚ್ಚಲಾರಂಭಿಸಿತು. ಅನೇಕರು ಭಾಜಪಾ ತೆಕ್ಕೆಗೆ ಸೇರಿದರು. ಈ ಬೆಳವಣಿಗೆ ಕೆಂಪು ಉಗ್ರರ ಕಣ್ಣು ಕುಕ್ಕಿತು. ಅವರು ಬಹಿರಂಗವಾಗಿ ಧಮಕಿ ಹಾಕಲಾರಂಬಿಸಿದರು. ಆದರೆ ಕಣ್ಣೂರಿನಾದ್ಯಂತ ಜನರ ಪ್ರೀತಿಗೆ ಪಾತ್ರರಾಗಿದ್ದ ಸರಳ ಸಜ್ಜನ ಮಾಸ್ತರರನ್ನು ಕೊಲ್ಲುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಐದು ವರ್ಷಗಳ ಬಳಿಕ ಆರೋಪಿಗಳಿಗೆ ಶಿಕ್ಷೆ ವಿಧಿಸಿದಾಗ ಕಮ್ಯೂನಿಸ್ಟರು ನ್ಯಾಯಾಧೀಶರಿಗೇ ನ್ಯಾಯಾಲಯದ ಆವರಣದಲ್ಲೇ ಕೊಲೆ ಬೆದರಿಕೆಯೊಡ್ಡಿದ್ದರು.
ಕಮ್ಯೂನಿಷ್ಟರ ದಾಂಧಲೆಗೆ ಇಂತಹ ಜಾಗ, ಸಮಯ, ದಿನ ಎನ್ನುವ ನಿಯಮವಿಲ್ಲ. ತಮ್ಮ ಕುಕೃತ್ಯಕ್ಕೆ ಅಡ್ಡಿಯಾದವರು ಯಾರೇ ಆಗಿರಲಿ ಅವರನ್ನು ರಾಜಾರೋಷವಾಗಿ ಅಟ್ಟಾಡಿಸಿ ಕೊಲ್ಲುವುದೇ ಅವರ ಜಾಯಮಾನ. ಕೇರಳದ ಪರುಮಲ ಜಿಲ್ಲೆಯಲ್ಲಿ ದೇವಸ್ವಮ್ ಎನ್ನುವ ಕಾಲೇಜೊಂದಿದೆ. 1996ರ ಸೆಪ್ಟೆಂಬರ್ ಹದಿನೇಳರ ಒಂದು ದಿನ ಈ ಕಾಲೇಜಿಗೆ ನುಗ್ಗಿದ ಕೆಂಪು ಉಗ್ರರು ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು. ಕಮ್ಯೂನಿಷ್ಟ್ ಗೂಂಡಾಗಳಿಂದ ತಪ್ಪಿಸಿಕೊಂಡು ಓಡಿದ ಈ ಹುಡುಗರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಪಂಪಾ ನದಿಗೆ ಹಾರಿದರು. ಅಲ್ಲಿಗೂ ಬಂದ ಕಮ್ಯೂನಿಷ್ಟ್ ಗೂಂಡಾಗಳು ವಿದ್ಯಾರ್ಥಿಗಳೆಡೆ ಕಲ್ಲೆಸೆಯಲಾರಂಭಿಸಿದರು. ನದಿಯ ಇನ್ನೊಂದು ತೀರದಲ್ಲಿ ಬಟ್ಟೆಯೊಗೆಯುತ್ತಿದ್ದ ಹೆಂಗಳೆಯರು ಕಮ್ಯುನಿಸ್ಟರ ಕಲ್ಲಿನೇಟಿಗೆ ತುತ್ತಾಗಿ ಮುಳುಗುತ್ತಿದ್ದ ಹುಡುಗರತ್ತ ಸೀರೆಗಳನ್ನೆಸೆದು ಅವರ ಪ್ರಾಣ ಉಳಿಸುವ ಯತ್ನ ಮಾಡಿದಾಗ ಕೆಂಪು ಉಗ್ರರ ಕಲ್ಲು ಆ ಹೆಣ್ಣುಮಕ್ಕಳತ್ತ ತಿರುಗಿತು. ಕೆಲವೇ ಕ್ಷಣಗಳಲ್ಲಿ ಪಂಪೆ ಕೆಂಪಾದಳು. ಅಷ್ಟಕ್ಕೂ ಆ ಹುಡುಗರು ಮಾಡಿದ ತಪ್ಪಾದರೂ ಏನು? ಅವರು ಎಬಿವಿಪಿಯ ಕಾರ್ಯಕರ್ತರಾಗಿದ್ದುದೇ ಕಮ್ಯೂನಿಷ್ಟರ ಕಣ್ಣು ಕೆಂಪಗಾಗಲು ಕಾರಣವಾಗಿತ್ತು.
ಕೇರಳ, ಅದರಲ್ಲೂ ಮಲಬಾರ್ ಪ್ರದೇಶ ಕಳೆದ ಎರಡು ದಶಕಗಳಲ್ಲಿ ಹಲವಾರು ರಾಜಕೀಯ ಕೊಲೆಗಳನ್ನು ಕಂಡಿದೆ. ಕಣ್ಣೂರಂತೂ ವಧಾಕ್ಷೇತ್ರವೇ ಸರಿ. ಕಣ್ಣೂರಿನಲ್ಲಿ ನೂರಕ್ಕೂ ಹೆಚ್ಚು ಸಂಘ ಕಾರ್ಯಕರ್ತರನ್ನು ಕಮ್ಯೂನಿಷ್ಟರು ಕೊಲೆ ಮಾಡಿದ್ದಾರೆ. 1998ರ ಬಳಿಕ ಕಣ್ಣೂರಿನಲ್ಲಿ 3,500ಕ್ಕೂ ಅಧಿಕ ರಾಜಕೀಯ ಘರ್ಷಣೆಗಳು ನಡೆದಿದ್ದು , ಸುಮಾರು 60 ಮಂದಿ ಸಾವಿಗೀಡಾಗಿದ್ದಾರೆ ಮತ್ತು ಬಹಳಷ್ಟು ಜನ ಕೈಕಾಲು ಕಳೆದುಕೊಂಡಿದ್ದಾರೆ. 16 ಲಕ್ಷ ಜನಸಂಖ್ಯೆಯ ಕಣ್ಣೂರು ಪ್ರಾಂತ್ಯದಲ್ಲಿ ಕಮ್ಯೂನಿಷ್ಟ್ ರಕ್ತರಾಜಕೀಯಕ್ಕೆ ಬಲಿಯಾಗಿ ಗಂಭೀರವಾಗಿ ಗಾಯಗೊಂಡು ಜೀವನ ಕೆಡಿಸಿಕೊಂಡವರು 3 ಸಾವಿರ ಸಂಖ್ಯೆಯಲ್ಲಿದ್ದಾರೆ.
ಕಣ್ಣೂರಿನ ರಕ್ತಚರಿತ್ರೆ ಹೊರಜಗತ್ತಿಗೆ ತಿಳಿದಾಗ ಈಗ ಮುಖ್ಯಮಂತ್ರಿಯಾಗಿರುವ ಸಂಘ ಕಾರ್ಯಕರ್ತರ ಕೊಲೆಗೆ ಅಡಿಪಾಯ ಹಾಕಿದ ಪಿಣರಾಯಿ ವಿಜಯನ್ “ನಾವು ವಿರೋಧಿಗಳನ್ನು ಹೇಗೆ ಕೊಲ್ಲಬೇಕು ಎನ್ನುವುದನ್ನು ಬಂಗಾಳಿಗಳಿಂದ ಕಲಿಯಬೇಕು. ಅವರು ರಕ್ತದ ಒಂದು ಹನಿಯೂ ಸಿಗದ ಹಾಗೆ ಮುಗಿಸಿಬಿಡುತ್ತಾರೆ. ತಮಗಾಗದವರನ್ನು ಅಪಹರಿಸಿ ಹೊಂಡ ತೋಡಿ ಜೀವಂತ ಸಮಾಧಿ ಮಾಡಿ ಉಪ್ಪು ಹಾಕಿ ಬಿಡುತ್ತಾರೆ. ಜಗತ್ತಿಗೆ ರಕ್ತದ ಕಲೆಯಾಗಲೀ, ವ್ಯಕ್ತಿಯ ಚಿತ್ರ ಅಥವಾ ಸುದ್ದಿಯಾಗಲೀ ತಿಳಿಯುವುದೇ ಇಲ್ಲ.” ಎಂದಿದ್ದರು. ಇಂತಹ ಮನಃಸ್ಥಿತಿ ಇರುವವರೇ ಮುಖ್ಯಮಂತ್ರಿಯಾಗಿರುವಾಗ ನ್ಯಾಯ ನಿರೀಕ್ಷಣೆ ಬಿಡಿ, ಕನಿಷ್ಟ ಈ ಹತ್ಯೆಗಳಾದರೂ ನಿಲ್ಲುತ್ತವೆ ಎಂಬ ನಿರೀಕ್ಷೆಯಾದರೂ ಉಳಿದೀತೆ? ಅದಕ್ಕೆ ತಕ್ಕಂತೆ ಆತ ಅಧಿಕಾರವಹಿಸಿಕೊಂಡ ಬಳಿಕ ಕೇರಳದಲ್ಲಿ ಅದೆಷ್ಟು ಕೊಲೆಗಳಾದವು. ಕಣ್ಣೂರಿನ ಪಿಣರಾಯಿಯಲ್ಲಂತೂ ಜನ ಭಯದಿಂದಲೇ ನಿತ್ಯ ಬದುಕು ಸಾಗಿಸುತ್ತಿದ್ದಾರೆ. ಕಣ್ಣೆದುರಲ್ಲೇ ಜಯಕೃಷ್ಣ ಮಾಸ್ತರರ ರಕ್ತದೋಕುಳಿಯಾಡಿದ ಕೆಂಪು ಉಗ್ರರ ಅಟ್ಟಹಾಸವನ್ನು ನೋಡಿದ ಎಳೆಯ ಮಕ್ಕಳು, ಮೊನ್ನೆ ಕೆಂಬಾವುಟದ ವಿಜಯೋತ್ಸವಕ್ಕೆ ಮೆರುಗು ನೀಡಲು ಈ ಉಗ್ರರಿಂದ ಕೈಕತ್ತರಿಸಿಕೊಂಡ ಏಳು ವರ್ಷದ ಕಾರ್ತಿಕ…ಮುಂತಾದ ಘಟನೆಗಳೆಲ್ಲಾ ಚಿಕ್ಕಮಕ್ಕಳೆಂಬ ಭಾವವೂ ಇಲ್ಲದ ನರರಾಕ್ಷಸರು ಈ ಕೆಂಪಿಗರು ಎನ್ನುವುದರ ನಿದರ್ಶನಗಳಷ್ಟೇ.
ಬಂಗಾಳದಲ್ಲಿ ತಮ್ಮ ರಾಜಕೀಯ ಎದುರಾಳಿಗಳನ್ನು ಕಿಡ್ನ್ಯಾಪ್ ಮಾಡಿ ತಂದು ಗುಂಡಿ ತೆಗೆದು ಜೀವಂತ ಹೂತು ಹಾಕುವುದೇ ಕೆಂಪು ಉಗ್ರರ ಚಾಳಿ. ಹೊರ ಜಗತ್ತಿಗೆ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂಬ ಸುದ್ದಿ. ಪಶ್ಚಿಮ ಬಂಗಾಳದಲ್ಲಿ 1970ರಲ್ಲಿ ಸೈನ್ ಸಹೋದರರನ್ನು ಕೊಂದು ಆ ರಕ್ತದಲ್ಲಿ ಅವರ ತಾಯಿಗೆ ಬಲವಂತವಾಗಿ ಅನ್ನವನ್ನು ಅದ್ದಿ ತಿನ್ನಿಸಿ ಹುಚ್ಚಿಯನ್ನಾಗಿಸಿದ ಸೈನ್ ಬಾರಿ ಹತ್ಯಾಕಾಂಡ, 79ರಲ್ಲಿ ಬಾಂಗ್ಲಾದಿಂದ ಮತಾಂತರಗೊಳ್ಳುವುದರಿಂದ ತಪ್ಪಿಸಿ ಆಶ್ರಯಕ್ಕಾಗಿ ಭಾರತಕ್ಕೆ ಓಡಿ ಬಂದು ಸುಂದರ ಬನದಲ್ಲಿದ್ದ 60ಸಾವಿರ ಹಿಂದೂಗಳ ಸರಕಾರೀ ಪ್ರಾಯೋಜಿತ ಮರೀಚ್ ಝಾಪಿ ಹತ್ಯಾಕಾಂಡ, ಹದಿನೇಳು ಜನ ಆನಂದಮಾರ್ಗಿ ಸನ್ಯಾಸಿ/ನಿಗಳನ್ನು ಜೀವಂತವಾಗಿ ಸುಟ್ಟ ಘಟನೆ, ನಾನೂರ್ ಹಾಗೂ ಇತಿಹಾಸ ಪ್ರಸಿದ್ಧ ನಂದಿಗ್ರಾಮದ ಹತ್ಯಾಕಾಂಡದ ಘಟನೆಗಳೇ ಸಾಕು ಕೆಂಪು ಉಗ್ರರು ಯಾವ ಪರಿಯ ರಾಕ್ಷಸರು ಎನ್ನುವುದನ್ನು ಅರಿಯಲು. ಕಾಮ್ರೇಡುಗಳ ಮಾತಿಗೂ ಕೃತಿಗೂ ಇರುವ ಅಂತರವನ್ನು ಎತ್ತಿ ತೋರಿಸಲು ಬಡವರ ಪರ ಎಂದು ಬಿಂಬಿಸಿಕೊಳ್ಳುವ ಈ ಕಾಮ್ರೇಡುಗಳು ನಂದಿಗ್ರಾಮದಲ್ಲಿ ಬಡವರ ಭೂಮಿಯನ್ನು ಬೈದು-ಬೆದರಿಸಿ-ಕೊಲೆ ಮಾಡಿ ಕಿತ್ತುಕೊಂಡು ಕೇಕೆ ಹಾಕಿದ ಘಟನೆಯೊಂದೇ ಸಾಕು!
ಸರಕಾರೀ ಪ್ರಾಯೋಜಿತ ಅಥವಾ ಪಕ್ಷವೇ ಪ್ರಾಯೋಜಿಸಿದ ತಮ್ಮ ಎದುರಾಳಿಗಳ ಹತ್ಯಾಕಾಂಡ ಕೇವಲ ಕೇರಳಕ್ಕೆ ಸೀಮಿತವಾಗಿಲ್ಲ. ಕಮ್ಯೂನಿಷ್ಟರು ಎಲ್ಲೆಲ್ಲಾ ಇದ್ದಾರೋ ಅಲ್ಲೆಲ್ಲಾ ರಕ್ತದ ಕಲೆಗಳೇ ಗೋಚರಿಸುತ್ತವೆ. ಬಂಗಾಳದಲ್ಲಿ 1977-1996ರ ನಡುವೆ 28,000 ರಾಜಕೀಯ ಹತ್ಯೆಗಳಾಗಿದ್ದವು. 1997-2009ರ ನಡುವೆ ಬಂಗಾಳ 27,408 ಹತ್ಯೆಗಳನ್ನು ಕಂಡಿತ್ತು. ಇದೆಲ್ಲಾ ಕಮ್ಯೂನಿಷ್ಟ್ ಆಳ್ವಿಕೆಯಲ್ಲೇ ನಡೆದದ್ದು. ಪ್ರತೀ 5 ಗಂಟೆಗೊಂದು ಕೊಲೆ! ಈ ಅಂಕಿಅಂಶಗಳು ಆಗಿನ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯರೇ ಬಂಗಾಳ ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಹೇಳಿದ ಮಾಹಿತಿ! ಇದು ಲೆಕ್ಕಕ್ಕೆ ಸಿಕ್ಕ ಮಾಹಿತಿ. ಅವರೇ ಹೇಳಿದಂತೆ ಹೊರಜಗತ್ತಿಗೆ ಗೊತ್ತಾಗದಂತೆ ಹೂತು ಹಾಕಿದ್ದೆಷ್ಟೋ? ಕಮ್ಯೂನಿಸ್ಟರಿಗೆ ಇದೇನೂ ಹೊಸತಲ್ಲ. ಮಾವೋ ಆಡಳಿತದಲ್ಲಿ ಆದ ಕೊಲೆಗಳಿಗೆ ಉರಿದ ಗ್ರಂಥಗಳಿಗೆ ಮುಚ್ಚಿದ ವಿವಿಗಳಿಗೆ ಲೆಖ್ಖವಿದೆಯೇ? ಸ್ಟಾಲಿನ್ನನ ಕ್ರೌರ್ಯಕ್ಕೆ ಬಲಿಯಾದವರ ಸಂಖ್ಯೆ ಹಿಟ್ಲರ್ ಮಾಡಿದ ಕೊಲೆಗಳಿಗಿಂತಲೂ ಹೆಚ್ಚು.
ಭಾರತದಲ್ಲಿನ ಕಮ್ಯೂನಿಸ್ಟರಿಗೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ಆಕ್ಸ್ ಫರ್ಡ್, ಕೇಂಬ್ರಿಡ್ಜ್ ವಿವಿಗಳಲ್ಲಿ ಓದಿ ಬಂದು ಇಲ್ಲಿ ಸಾಮಾನ್ಯ ಜನರನ್ನು ತಮ್ಮ ಉದ್ದೇಶಕ್ಕೆ ಕುಣಿಸಿ ಹೊಟ್ಟೆಹೊರೆದುಕೊಳ್ಳುವವರೇ ಅವರಲ್ಲಿ ನಾಯಕರು. ತಮ್ಮ ಮಕ್ಕಳನ್ನು ಬಂಡವಾಳಶಾಹಿ ಎಂದು ತಾವು ಬೊಬ್ಬಿರಿಯುವ ಉದ್ಯಮಗಳಿಗೆ ಕಳುಹಿಸಿ ಬಡವರನ್ನು ಬಲಿಪಶು ಮಾಡುವ ಗೋಮುಖವ್ಯಾಘ್ರಗಳಿವರು. ಮಾವೋ, ಸ್ಟಾಲಿನ್ನರಿಗೆ ಕನಿಷ್ಟ ದೇಶದ ಮೇಲಾದರೂ ಪ್ರೀತಿ ಇತ್ತೇನೋ. ಇವರು ಎಲ್ಲಾ ಬಿಟ್ಟವರು. ಹಿಂದಿನ ಬ್ರಿಟಿಷರ ವಸಾಹತುಶಾಹಿ ಮಾನಸಿಕತೆಗೆ ತಮ್ಮನ್ನು ಮಾರಿಕೊಂಡವರು. ಸನಾತನವಾದ ಪ್ರತಿಯೊಂದನ್ನೂ ವಿರೋಧಿಸಬೇಕೆಂಬುದೇ ಅವರ ಮಾನಸಿಕತೆಗೆ. ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು. 1920ರ ದಶಕದಲ್ಲಿ ಕಮ್ಯೂನಿಸ್ಟ್ ಪಕ್ಷ ಭಾರತದಲ್ಲಿ ಸ್ಥಾಪನೆಯಾದಾಗ ಅದರಲ್ಲಿ ಇದ್ದವರು ರಷ್ಯಾ, ಜರ್ಮನಿ, ಬ್ರಿಟಿಷರ ದಲ್ಲಾಳಿಗಳೇ. ದ್ವಿರಾಷ್ಟ್ರ ಸಿದ್ಧಾಂತವನ್ನು ಬೆಂಬಲಿಸಿದ ಅವರು ಪಾಕಿಸ್ತಾನ ರಚನೆಗೂ ಮುಸ್ಲಿಮ್ ಲೀಗ್ ಜೊತೆ ಕೈಜೋಡಿಸಿದರು. ಸಿಖ್ಖರು ಪ್ರತ್ಯೇಕ ದೇಶ ಕೇಳಿದಾಗ ಅದಕ್ಕೂ ಅಸ್ತು ಎಂದರು. “ಭಾರತ ಬಿಟ್ಟು ತೊಲಗಿ” ಚಳುವಳಿಯ ಸಮಯದಲ್ಲಿ ಬ್ರಿಟಿಷರ ಜೊತೆ ಕೈಜೋಡಿಸಿದರು. ಹೈದರಾಬಾದ್ ನಿಜಾಮನ ಬೆಂಗಾವಲಿಗೆ ನಿಂತರು. ಚೀನಾ ಅತಿಕ್ರಮಿಸಿದಾಗ ಮಾವೋಗೆ ಜೈ ಅಂದ ದೇಶದ್ರೋಹಿಗಳಿವರು. ಸುಭಾಷರನ್ನು ಜನರಲ್ ಟೋಜೋನ ಸಾಕುನಾಯಿ ಎಂದು ಕರೆದ ಮತಿಹೀನರಿವರು. ನಕ್ಸಲ್ ಚಳುವಳಿಯ ಜನ್ಮದಾತರೂ ಇವರೇ. 1998ರಲ್ಲಿ ಅಣ್ವಸ್ತ್ರ ಪರೀಕ್ಷೆಗೂ ತಡೆ ಒಡ್ಡಿದ್ದರು.
ಕೇವಲ ಆರೆಸ್ಸೆಸ್ ಸೇರಿದವರ ಮೇಲಷ್ಟೇ ಸಿಪಿಎಂನವರ ಈ ಕ್ರೌರ್ಯ ಎಂದುಕೊಳ್ಳಬೇಡಿ. ತಮ್ಮನ್ನು ತೊರೆದು ಮತ್ತೊಂದು ಕಮ್ಯುನಿಸ್ಟ್ ಪಕ್ಷ ರಚಿಸಲು ಹೋದವರನ್ನೂ ಕೊಂದಿದ್ದಾರೆ. ಈ ಬಗ್ಗೆ ಮಲಯಾಳಂ ವಾಹಿನಿ ಚರ್ಚೆಯೊಂದರಲ್ಲಿ, ರಾಜಕೀಯ ಹಲ್ಲೆಗಳಲ್ಲಿ ಸಂತ್ರಸ್ತರಾದ 83 ಮಂದಿಯಲ್ಲಿ 70 ಮಂದಿ ಸಿಪಿಎಂ ತೊರೆದವರು ಎಂಬ ಅಂಶ ಎತ್ತಿದಾಗ, ಸಿಪಿಎಂ ಪ್ರತಿನಿಧಿ ಫಕ್ರುದ್ದೀನ್ ಪ್ರತಿಕ್ರಿಯಿಸಿದ್ದು- ಇನ್ನೇನು ಪಕ್ಷ ತೊರೆದವರಿಗೆ ಚಹಾ ಕೊಡಲಾಗುವುದೇ ಎಂದು!
ಈ ಕೆಂಪು ಉಗ್ರರಿಗೆ ಬೌದ್ಧಿಕವಾಗಿ ಸಹಾಯ ಮಾಡುವ ಒಂದು ವರ್ಗವಿದೆ. ಅವರೆಲ್ಲಾ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪೂರೈಸಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಹಂಚಿ ಹೋಗಿದ್ದಾರೆ. ಆರ್ಥಿಕವಾಗಿ ಬಲಿಷ್ಟರಾಗಿರುವ ಅವರು ಎಲ್ಲಾ ಕ್ಷೇತ್ರಗಳಲ್ಲಿ ಅಧಿಪತ್ಯವನ್ನು ಸ್ಥಾಪಿಸಿ ತಮ್ಮ ಚಿಂತನೆಯೇ ಮಾನ್ಯತೆ ಪಡೆಯುವಂತೆ, ಅದನ್ನೆ ಜನ ನಂಬುವಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ತಾವು ಜಾತ್ಯಾತೀತರು ಎಂದು ಬೊಬ್ಬಿರಿವ ಇವರು ಅತೀ ದೊಡ್ದ ಜಾತಿವಾದಿಗಳೂ, ಕೋಮುವಾದಿಗಳೂ ಆಗಿರುತ್ತಾರೆ. ಜನರನ್ನು ಜಾತಿವಾದದ ಮೂಲಕ ಪ್ರತ್ಯೇಕಿಸಿ ತಮ್ಮ ಅನ್ನದಾತರಿಗೆ ಅವರನ್ನು ಮತಬ್ಯಾಂಕನ್ನಾಗಿಸಿ ತನ್ಮೂಲಕ ತಮ್ಮ ಧಣಿಗಳ ಋಣ ತೀರಿಸುವುದೇ ಅವರ ಉದ್ದೇಶ. ಶಿಕ್ಷಣ, ಸಾಹಿತ್ಯ, ಮಾಧ್ಯಮ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದಲು ಹುಳುಗಳಂತೆ ತುಂಬಿಕೊಂಡ ಇವರುಗಳು ದೊಡ್ಡ ದನಿಯಲ್ಲಿ ಚೀರಾಡುವುದೇ ಜಗತ್ತಿನೆಲ್ಲೆಡೆ ಮೊಳಗುತ್ತದೆ. ಇತ್ತೀಚೆಗೆ “ಪ್ರಶಸ್ತಿ ವಾಪಸಿ’ ಅಥವಾ “ಗೋಮಾಂಸ ಭಕ್ಷಣೆಗೆ ಬೆಂಬಲ’ದಂಥ ಘಟನೆಗಳ ಮೂಲಕ ಸುದ್ದಿಯಾದವರೆಲ್ಲಾ ಇಂಥವರೇ. ಇಂಥ ಚಿಂತಕರು ಸುದ್ದಿ ಮಾಧ್ಯಮದಲ್ಲಿ ಎದ್ದು ತೋರುತ್ತಾರೆ. ಆಗಾಗ ಜಾತ್ಯತೀತತೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ, ಅಲ್ಪಸಂಖ್ಯಾಕರ ರಕ್ಷಣೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಬಿತ್ತರಿಸುತ್ತಿರುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಷ್ಟು ಕಾಲ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ, ವಿವಿಧ ಅಕಾಡೆಮಿಗಳಲ್ಲಿ ಅಧಿಕಾರ ಅನುಭವಿಸಿ ದೇಶ ಒಡೆವ ಸಾಧನೆ ಮಾಡಿದ ಈ ವಾಮಪಂಥೀಯ ಬುದ್ಧಿಜೀವಿಗಳಿಗೆ ಕೇಂದ್ರದಲ್ಲಿ ಭಾಜಪಾ ಅಧಿಕಾರಕ್ಕೆ ಬಂದೊದನೆ ತಮ್ಮ ಅಡಿಪಾಯ ಕುಸಿದು ಬೀಳುತ್ತಿರುವ ಹತಾಷೆಯ ಭಾವ ಆವರಿಸಿದೆ! ಇವರಿಂದಾಗಿಯೇ ಕೇರಳ, ಬಂಗಾಳಗಳಲ್ಲಾದ ಕೆಂಪು ಉಗ್ರರ ರಕ್ತರಾಜಕೀಯ ಹೊರ ಜಗತ್ತಿಗೆ ಮುಚ್ಚಿ ಹೋದದ್ದು!
2013 ಫೆಬ್ರವರಿ 27ರಂದು ಕೇಂದ್ರ ಗೃಹಸಚಿವರು ರಾಜ್ಯಸಭೆಗೆ ನೀಡಿದ ಮಾಹಿತಿ ಪ್ರಕಾರ 2001-13ರ ನಡುವೆ ಎಡಪಂಥೀಯ ಉಗ್ರವಾದಕ್ಕೆ ಬಲಿಯಾದವರ ಸಂಖ್ಯೆ 7881! ಒಂದು ಮೂಲದ ಪ್ರಕಾರ ಮಾವೋಗಳು ಸುಲಿಗೆಯಿಂದ ಒಟ್ಟು ಮಾಡುವ ಹಣ ವರ್ಷಕ್ಕೆ 1500 ಕೋಟಿ ರೂಪಾಯಿಗಳು. ಈ ಮೊತ್ತ ಇನ್ನೂ ಹೆಚ್ಚಾಗಿರುವ ಸಾಧ್ಯತೆಯೇ ಅಧಿಕ. ರಸ್ತೆ ಕಂಟ್ರಾಕ್ಟರುಗಳು, ಬಸ್, ಟ್ರಕ್, ಪೆಟ್ರೋಲ್ ಬಂಕ್, ಅಂಗಡಿಯ ಮಾಲಿಕರೇ ಇವರ ಬಲಿಪಶುಗಳು. ಛತ್ತೀಸ್ ಗಢ್, ಒರಿಸ್ಸಾ, ಜಾರ್ಖಂಡ್, ಬಿಹಾರಗಳಲ್ಲಿ ಪಾಪ್ಪಿ(Poppy, ಒಂದು ಬಗೆಯ ಅಫೀಮು) ಬೆಳೆದು ತಮ್ಮ ನಕ್ಸಲ್ ಚಳುವಳಿಗೆ ಹಣ ಒದಗಿಸುವ ಕಳ್ಳರು ಈ ಕಮ್ಯೂನಿಸ್ಟರು. ಗಣಿಕಂಪೆನಿಗಳು ಕೂಡಾ ಇವರ ಆಶ್ರಯದಾತರೇ. ಯುಪಿಎ-1 ಸಮಯದಲ್ಲಿ ರಾಷ್ಟ್ರೀಯ ಸಲಹಾ ಸಮಿತಿಯಂತೂ ಕಮ್ಯೂನಿಸ್ಟರಿಂದಲೇ ತುಂಬಿ ಹೋಗಿತ್ತು. ಹೌದು ಅವರದ್ದು ಬಲಿಷ್ಟವಾದ ಜಾಲ. ಜೆ.ಎನ್.ಯು.ವಿನಿಂದ ಪತ್ರಿಕೋದ್ಯಮದ ಕೆಳಹಂತದವರೆಗೆ, ದೃಶ್ಯಮಾಧ್ಯಮ, ರಂಗಭೂಮಿ, ಸಾಹಿತ್ಯ, ಕಲೆ, ಕಾರ್ಮಿಕ ಸಂಘಟನೆಗಳಿಂದ ರಾಜಕೀಯದವರೆಗೆ ಎಲ್ಲವನ್ನೂ ಕೆಡಿಸಿಟ್ಟಿದ್ದಾರೆ. ಈ ಎಲ್ಲಾ ಕ್ಷೇತ್ರಗಳಲ್ಲೂ ನಿರ್ಣಾಯಕ ಸ್ಥಾನದಲ್ಲಿ ಅವರೇ ಇರುತ್ತಾರೆ. ಅವರ ಜಾಲ ಎಷ್ಟು ಬಲವಾಗಿರುತ್ತದೆಯೆಂದರೆ ಯಾವುದೇ ಕೊಲೆಯ ಪಾತಕಿಗೆ ಶಿಕ್ಷೆಯಾಗುವುದೇ ಇಲ್ಲ. ಕೊಲೆಯಾದವನ ಪರಿವಾರ, ಸಾಕ್ಷಿಯನ್ನೇ ಅವರು ದಮನಿಸಿಬಿಟ್ಟಿರುತ್ತಾರೆ. ಒಂದು ವೇಳೆ ತಿರುಗಿ ನಿಂತರೂ ತಮ್ಮ ಬಲವಾದ ಜಾಲದಿಂದಾಗಿ ಕ್ಷಣಮಾತ್ರದಲ್ಲಿ ಬಿಡುಗಡೆಗೊಳ್ಳುತ್ತಾರೆ. ಕೊಲೆ ನಡೆದುದನ್ನೇ ವ್ಯವಸ್ಥಿತವಾಗಿ ಕೊಲೆ ಮಾಡುವ ಪಕ್ಷ ಎಂದರೆ ಅದು ಎಡಪಕ್ಷ! ಎಲ್ಲಾ ಪಕ್ಷಗಳು, ಮಾಧ್ಯಮಗಳು ಭಾಜಪಾದ ವಿರುದ್ಧ ಯಾಕೆ ಕೆಲಸ ಮಾಡುತ್ತಾರೆ ಎನ್ನುವುದು ಈಗ ನಿಧಾನವಾಗಿ ಜನಸಾಮಾನ್ಯರಿಗೂ ಅರಿವಾಗುತ್ತಿದೆ. ಹಾಗಾಗಿಯೇ ಅವರ ಒಂದೊಂದೇ ಖದೀಮತನ ನಿಧಾನವಾಗಿ ಬೆಳಕಿಗೆ ಬರುತ್ತಿದೆ. ವಾಮಪಂಥೀಯರು ಭಾರತದಲ್ಲಿ ತಾವೇನು ಮಾಡಬೇಕು ಎನ್ನುವುದನ್ನು ಸ್ಪಷ್ಟವಾಗಿ ತಿಳಿದಿದ್ದಾರೆ. ಅವರ ಗುರಿ ಒಂದೇ…ಹಿಂದೂ ನಾಗರೀಕತೆಯನ್ನು ನಾಶ ಮಾಡಿ ಮಾರ್ಕ್ಸಿಸ್ಟ್ ರಾಜ್ಯದ ಸ್ಥಾಪನೆ. ಇದಕ್ಕಾಗಿ ಕಳೆದ 80 ವರ್ಷಗಳಲ್ಲಿ ಮಾನವ ಹಕ್ಕುಗಳು, ಮಹಿಳಾ ಸಬಲೀಕರಣ, ಮಹಿಳಾ ಹಕ್ಕುಗಳು, ಜಾತ್ಯಾತೀತ ಸಮಾಜ, ಅವರ್ಗೀಕೃತ ಸಮಾಜ ಮುಂತಾದ ಧನಾತ್ಮಕ/ ಜನಪ್ರಿಯ ವಿಷಯಗಳ ಬಗ್ಗೆ ಯಾರಿಗೂ ಅರ್ಥವಾಗದ ರೀತಿಯಲ್ಲಿ ಚರ್ಚೆ ನಡೆಸಿ ಜನರ ದಿಕ್ಕು ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಗಮನಕ್ಕೆ ತಂದಾಗ ಆತ “ಅವರು ಪ್ರಸ್ತಾಪಿಸುತ್ತಿರುವುದು ಬ್ರಿಟಿಷರನ್ನು” ಎಂದುಬಿಟ್ಟರು. “ಇದು ನಿಮ್ಮ ಅಹಿಂಸಾ ವಿಧಾನಕ್ಕೆ ವಿರುದ್ಧವಾದುದಲ್ಲವೇ. ಅಲ್ಲದೆ ಈ ಮೌಲ್ವಿಗಳು ಇದನ್ನು ಹಿಂದೂಗಳ ವಿರುದ್ಧ ಪ್ರಯೋಗಿಸುವುದಿಲ್ಲ ಎನ್ನುವುದರ ಬಗ್ಗೆ ಏನು ಖಚಿತತೆಯಿದೆ” ಎಂದು ನಾನು ಪ್ರಶ್ನಿಸಿದಾಗ ಗಾಂಧಿಯ ಬಳಿ ಉತ್ತರವಿರಲಿಲ್ಲ. ವರ್ಷದೊಳಗೆ ಸ್ವರಾಜ್ಯ ಪ್ರಾಪ್ತಿಗೆ ಇರಿಸಿದ ಮೂರು ಷರತ್ತುಗಳನ್ನು ಮರೆತ ಗಾಂಧಿ ದೇಶದ ಜನರ ಮುಂದೆ ಮತ್ತೊಂದು ಪ್ರಸ್ತಾಪವಿಟ್ಟರು. ಕಾಂಗ್ರೆಸ್ಸಿನ ಬೆಜವಾಡಾ ಅಧಿವೇಶನದಲ್ಲಿ ಗಾಂಧಿಯವರ ಈ ಪ್ರಸ್ತಾಪವನ್ನು ಅಂಗೀಕರಿಸಲಾಯಿತು. ಬೇರೆ ನಾಯಕರ ಪ್ರಸ್ತಾಪಗಳು ಇದಕ್ಕಿಂತ ಎಷ್ಟೋ ಉತ್ತಮವಾಗಿದ್ದಾಗ್ಯೂ ಅವನ್ನು ತಳ್ಳಿ ಹಾಕಲಾಯಿತು. ಚರಕಾವನ್ನು ಮುಖ್ಯ ಸಂಕೇತವಾಗುಳ್ಳ ರಾಷ್ಟ್ರ ಧ್ವಜಕ್ಕೂ ಸಮ್ಮತಿ ಸಿಕ್ಕಿತು. ಒಂದು ಕೋಟಿ ರೂಪಾಯಿ ಸಂಗ್ರಹವಾದರೆ ಮೂರು ತಿಂಗಳ ಒಳಗೆ ಸ್ವರಾಜ್ಯ ತಂದುಕೊಡುತ್ತೇನೆಂಬ ಷರತ್ತು ಅದು. 1921ರ ಜೂನ್ ಅಂತ್ಯದ ವೇಳೆಗೆ ಒಂದು ಕೋಟಿ ಸದಸ್ಯರನ್ನು ಕಾಂಗ್ರೆಸ್ಸಿಗೆ ಸೇರಿಸಿ 20ಲಕ್ಷ ಚರಕಾ ವಿತರಿಸಲಾಯಿತು. ಗಾಂಧಿಯವರ ಈ ನಿರಂಕುಶ ಸರ್ವಾಧಿಕಾರವನ್ನು ಪ್ರತಿಭಟಿಸಿ ಶೃದ್ಧಾ ಪತ್ರಿಕೆಯಲ್ಲಿ ನಾನು ಲೇಖನವನ್ನೂ ಬರೆದೆ. ಗಾಂಧಿಯ ಯಾವುದೇ ಮಾತನ್ನು ಮರುಮಾತಿಲ್ಲದೆ ಅಂಗೀಕರಿಸುವ ಕಾಂಗ್ರೆಸ್ಸಿನ ಮನೋಭೂಮಿಕೆಯಿಂದಾಗಿ ಭಾರತದ ಚಿಂತನಶೀಲ ವರ್ಗ ಗೊಂದಲ ಹಾಗೂ ಬೇಸರಗೊಂಡಿತ್ತು.(ಇನ್ ಸೈಡ್ ಕಾಂಗ್ರೆಸ್ – ಸ್ವಾಮಿ ಶೃದ್ಧಾನಂದ)
ಒಂದು ಕೋಟಿ ರೂಪಾಯಿ ಸಂಗ್ರಹವಾಯಿತು. ಸದಸ್ಯರ ಪಟ್ಟಿ ತಯಾರಾಗಲಿಲ್ಲ. ಮೂರು ತಿಂಗಳು ಕಳೆಯಿತು. ಸ್ವರಾಜ್ಯದ ಸುಳಿವೇ ಇಲ್ಲ. “ಸ್ವರಾಜ್ಯಕ್ಕೆ ದೇಶ ಸಿದ್ಧವಾಗಿದೆಯೋ ಇಲ್ಲವೋ ಎಂದು ಅಳೆಯಲು ಅದು ಶಿಸ್ತಿನ ಮಾಪನವಾಗಿತ್ತು. ನಿಜವಾದ ಸ್ವರಾಜ್ಯ ತಾನಾಗಿ ಬರುತ್ತದೆ.” ಎಂದು ಬಿಟ್ಟರು ಗಾಂಧಿ. ಖಿಲಾಫತ್ ಅಬ್ಬರ ಮೇರೆ ಮೀರುತ್ತಿತ್ತು. ಯಾರು ಬೆಂಕಿಯುಗುಳುವ ಭಾಷಣ ಮಾಡುತ್ತಾರೋ ಅವರಿಗೆ ಶಹಭಾಸ್ ಗಿರಿ ದಕ್ಕುತ್ತಿತ್ತು. ಆದರೆ ಈ ವಾಗ್ಭಟರೇ ಒಳಗಿಂದೊಳಗೆ ಸರ್ಕಾರದ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೋಟ್ಗರ್’ನ ಸ್ಟೋಕ್ಸ್ ನನಗೆ ಹೇಳಿದಾಗ ಅತ್ಯಾಶ್ಚರ್ಯವಾಯಿತು. ಲಾಲಾಲಜಪತ್ ರಾಯರನ್ನು ನಾಣು ಭೇಟಿಯಾದಾಗ ಅವರೂ ಸ್ಟೋಕ್ಸ್ ಅಭಿಪ್ರಾಯವನ್ನೇ ವ್ಯಕ್ತಪಡಿಸಿದರು. ಉನ್ನತ ನಾಯಕರಿಂದ ಹಿಡಿದು ಮರಿ ಪುಢಾರಿಗಳವರೆಗೆ ಯಾರಿಗೂ ಗಾಂಧಿಯ ಹೋರಾಟ ಎತ್ತ ಸಾಗುತ್ತಿದೆ, ಸಾಗುತ್ತದೆ ಎನ್ನುವುದರ ಅರಿವೇ ಇರಲಿಲ್ಲ. ಗಾಂಧಿಯವರ ಅಂತಿಮ ಗುರಿಯೇನು ಎಂದು ತಿಳಿದುಕೊಳ್ಳುವಂತೆ, ತಮ್ಮ ನಂಬಿಗಸ್ಥ ಬೆಂಬಲಿಗರನ್ನು ಬಿಟ್ಟು ತಾವೇನಾದರೂ ಹಿಮಾಲಯಕ್ಕೆ ಹೋಗುತ್ತಾರೋ ಎನ್ನುವುದನ್ನು ಕಂಡುಕೊಳ್ಳುವಂತೆ ನಾನು ಅವರಿಗೆ ಸಲಹೆ ಮಾಡಿದೆ.(ಇನ್ ಸೈಡ್ ಕಾಂಗ್ರೆಸ್ – ಸ್ವಾಮಿ ಶೃದ್ಧಾನಂದ)
1922 ಮಾರ್ಚಿನಲ್ಲಿ ಶೃದ್ಧಾನಂದ ಕಾಂಗ್ರೆಸ್ಸಿಗೆ ನೀಡಿದ ರಾಜೀನಾಮೆ ಪತ್ರದಲ್ಲಿ “ಗಾಂಧಿ ಹೇಳಿದ ಅಹಿಂಸಾ ಆದರ್ಶದ ಪ್ರಕಾರ ಭಾರತದಲ್ಲಿ ಅಹಿಂಸಾತ್ಮಕ ವಾತಾವರಣ ನೆಲೆಗೊಳ್ಳುತ್ತದೆ ಎನ್ನುವ ಬಗ್ಗೆ ನಂಬಿಕೆ ಇಲ್ಲ. ಕಾನೂ ಭಂಗ ಚಳವಳಿ ಶೀಘ್ರ ಆರಂಭವಾಗಬಹುದೆಂದು ನನಗನಿಸುತ್ತಿಲ್ಲ. ಅಲ್ಲದೆ ಅಸಹಕಾರ ಆಂದೋಲನದ ಪ್ರಚಾರ ಕುರಿತಂತೆ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿ ಜೊತೆ ನಾನು ಭಿನ್ನಾಭಿಪ್ರಾಯ ಹೊಂದಿದ್ದೇನೆ. ಆಡಳಿತ ಶಾಹಿ ಈಗ ಗಾಂಧಿಯನ್ನು ತನ್ನತ್ತ ಸೆಳೆದುಕೊಂಡಿದೆ!” ಎಂದು ಬರೆದಿದ್ದರು. ಆದರೆ ಶೃದ್ಧಾನಂದರ ರೀತಿಯ ದೃಷ್ಟಿಕೋನ ಇರುವವರು ಕಾರ್ಯಕಾರಿ ಸಮಿತಿಯನ್ನು ತ್ಯಜಿಸಬೇಕೆನ್ನುವುದು ಕೇವಲ ಗಾಂಧಿಯವರ ಅಭಿಪ್ರಾಯ ಎಂದು ಪಟೇಲ್ ಮೊದಲಾದ ಕಾಂಗ್ರೆಸ್ ನಾಯಕರು ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ಅಸ್ಪೃಶ್ಯತಾ ನಿರ್ಮೂಲನಾ ಕಾರ್ಯದ ಮುಂದಾಳತ್ವವನ್ನು ಸ್ವಾಮಿ ಶೃದ್ಧಾನಂದರಿಗೆ ವಹಿಸಲಾಯಿತು. ವಿಚಿತ್ರವೆಂದರೆ ಹಿಂದೂಗಳನ್ನು ಇಸ್ಲಾಮಿಗೆ ಮತಾಂತರಗೊಳಿಸುತ್ತಿದ್ದ ಮುಸ್ಲಿಮ್ ನಾಯಕರಿಗೆ ಕಾಂಗ್ರೆಸ್ ನೀತಿನಿರೂಪಣೆಯಲ್ಲಿ ಮಾರ್ಗದರ್ಶನ ಮಾಡಲು ಹಾಗೂ ಸಂಸ್ಥೆಯ ಮಾನ್ಯತೆ ಪಡೆದ ಪ್ರತಿನಿಧಿಗಳಂತೆ ಅವಕಾಶ ನೀಡಲಾಗಿತ್ತು. ಹಿಂದೂ ಸಮಾಜ ಭಿನ್ನವಾಗದಂತೆ ರಕ್ಷಿಸುವ ಕೆಲಸ ಮಾಡುತ್ತಿದ್ದವರನ್ನು ಬಹಿಷ್ಕರಿಸಲಾಗಿತ್ತು. ಇದು ಶೃದ್ಧಾನಂದರನ್ನು ಕುಪಿತಗೊಳಿಸಿತು. ಅವರು ಕಾಂಗ್ರೆಸ್ಸಿನಿಂದ ಹೊರಬಂದರು.(ಇನ್ ಸೈಡ್ ಕಾಂಗ್ರೆಸ್ – ಸ್ವಾಮಿ ಶೃದ್ಧಾನಂದ)
ಗಾಂಧಿಯವರ ವಿಚಿತ್ರ ನೀತಿಗಳಿಂದಾಗಿ 1922ರಲ್ಲಿ ಒಂದು ಕೋಟಿಯಷ್ಟಿದ್ದ ಕಾಂಗ್ರೆಸ್ ಸದಸ್ಯರ ಸಂಖ್ಯೆ ಒಂದೇ ವರ್ಷದಲ್ಲಿ ಕೆಲವೇ ಸಾವಿರಕ್ಕೆ ಕುಸಿಯಿತು. ಸ್ವಾಮಿ ಶೃದ್ಧಾನಂದರು “ವಿವರಿಸಲು ಅಸಾಧ್ಯವಾದ ತಥಾಕಥಿತ ಸ್ವರಾಜ್ಯದ ಮರೀಚಿಕೆಯ ಬೆನ್ನು ಹತ್ತಿ ಹೋಗಿ ಸಮಯ ವ್ಯರ್ಥ ಮಾಡುವ ಬದಲು ನೈಜ ಸ್ವರಾಜ್ಯದ ಗುರಿಗಾಗಿ ಹೋರಾಟ ಮಾಡಿ. ರಾಷ್ಟ್ರೀಯ ಭಾವನೆ ಹೊಂದಿದ ಪ್ರತಿಯೊಬ್ಬರೂ ಕಾಂಗ್ರೆಸ್ ಪ್ರವೇಶಿಸಿ ದೇಶಕ್ಕಾಗಿ ತನ್ನ ಕೈಲಾದ ಅಳಿಲು ಸೇವೆಯನ್ನು ಮಾಡಲು ಉದ್ಯುಕ್ತವಾಗುವಂತೆ ಕಾಂಗ್ರೆಸ್ ಸಂವಿಧಾನ ತಿದ್ದುಪಡಿ ಮಾಡಿ” ಎಂದು ಲೇಖನವನ್ನೂ ಬರೆದರು. ಖಿಲಾಫತ್ ಅತಿರೇಕದಂದ ಮತಾಂತರಕ್ಕೊಳಗಾದ ಹಿಂದೂಗಳ ಶುದ್ದೀಕರಣ ಕಾರ್ಯ ಕೈಗೊಂಡು ಮರಳಿ ಮಾತೃಧರ್ಮಕ್ಕೆ ಕರೆತಂದರು. ಅವರ ಶುದ್ಧಿ ಪ್ರಚಾರದಿಂದ ಉತ್ತರಪ್ರದೇಶವೊಂದರಲ್ಲೇ ಸುಮಾರು 18000 ಮತಾಂತರಿತರು ಮರಳಿ ಮಾತೃಧರ್ಮಕ್ಕೆ ಸೇರಿದರು. ತಮ್ಮ ಕಾಲ ಕೆಳಗಿನ ನೆಲ ಅದುರುತ್ತಿರುವುದನ್ನು ಅರ್ಥೈಸಿಕೊಂಡ ಮುಲ್ಲಾಗಳು ಶೃದ್ಧಾನಂದರ ಮೇಲೆ ದೋಷಾರೋಪಣೆಗೆ ತೊಡಗಿದರು. ಯಾವ ಮುಸಲ್ಮಾನರು ಹಿಂದೊಮ್ಮೆ ಇದೇ ಸಂತರನ್ನು ಮಸೀದಿಯೊಳಗೆ ಕರೆದೊಯ್ದು ಪ್ರವಚನ ಹೇಳಿಸಿಕೊಂಡಿದ್ದರೋ ಅದೇ ಮುಸ್ಲಿಮರು ಅವರ ಮೇಲೆ ದ್ವೇಷಕಾರಲಾರಂಭಿಸಿದರು. 1926 ಡಿಸೆಂಬರ್ 23ರಂದು ಅಬ್ದುಲ್ ರಶೀದ್ ಎಂಬ ಮುಸ್ಲಿಮ್ ಯುವಕ ಸ್ವಾಮಿ ಶೃದ್ಧಾನಂದರನ್ನು ಕಾಣಲೆಂದು ಅವರ ಆಶ್ರಮಕ್ಕೆ ಬಂದು ಅವರ ಮೇಲೆ ಗುಂಡು ಹಾರಿಸಿದ. ಶೃದ್ಧಾನಂದರು ಕೊನೆಯುಸಿರೆಳೆದರು. ಮುಸ್ಲಿಮರು ರಶೀದನ ಪರ ಕಾನೂನು ಹೋರಾಟಕ್ಕೆ ಭಾರಿ ಹಣ ಸಂಗ್ರಹಿಸಿದರು. ಪ್ರಮುಖ ಕಾಂಗ್ರೆಸ್ ಸದಸ್ಯ ಅಸೀಫ್ ಅಲಿ ರಶೀದ್ ಪರ ವಕಾಲತ್ತು ಮಾಡಿದ. ಅಂತಹ ರಶೀದನನ್ನು ಗಾಂಧಿ ಸಹೋದರ ಎಂದು ಕರೆದರು. ಅಬ್ದುಲ್ ರಶೀದ್ ಪರ ವಾದಿಸಲು ನಾನು ಇಚ್ಚಿಸುತ್ತೇನೆ ಎಂದರು. ರಶೀದ್ ಹೊಂದಿದ್ದ ಆಕ್ರೋಶಕ್ಕೆ ನಾವೇ ಕಾರಣ ಎಂದರು. ಭಗತ್ ಹಾಗೂ ಇನ್ನಿತರ ಕ್ರಾಂತಿವೀರರ ಗಲ್ಲುಶಿಕ್ಷೆ ತಪ್ಪಿಸುವ ಮನವಿಗೆ ಅವರು ಹಿಂಸಾನಿರತರಾಗಿದ್ದರು ಎನ್ನುವ ಕಾರಣವೊಡ್ಡಿ ಒಪ್ಪದಿದ್ದ ಗಾಂಧಿ ರಶೀದನ ಕೃತ್ಯವನ್ನು ಸಮರ್ಥಿಸಿಕೊಂಡದ್ದೇಕೆ. ಅದನ್ನೂ ಆ ನೆಲೆಯಲ್ಲಿಯೇ ನೋಡಬೇಕಿತ್ತಲ್ಲವೆ? ಇವತ್ತಿನ ಓಲೈಕೆಯ ರಾಜಕಾರಣಕ್ಕೆ ಭದ್ರ ತಳಹದಿ ಹಾಕಿದ ರಾಜಕಾರಣಿಯಾಗಿ ನನಗೆ ಗಾಂಧಿ ಕಾಣುತ್ತಾರೆ. ಹಿಂದೂಗಳೇನಾದರೂ ಮುಸ್ಲಿಮರನ್ನು ಕೊಲ್ಲುತ್ತಿದ್ದರೆ ಗಾಂಧಿ ಹೀಗೆ ಹೇಳುತ್ತಿದ್ದರೇ? ಹಿಂದೂಗಳಿಗೆ ಅಹಿಂಸೆ ಬೋಧಿಸುವ ಗಾಂಧಿ ಮುಸ್ಲಿಮರು ಮಾಡುವ ಹಿಂಸಾಪಾತಕಗಳನ್ನು ಸಮರ್ಥಿಸಿಕೊಳ್ಳುತ್ತಾರೆ, ಅಂತಹವರನ್ನು ಸಹೋದರರೆಂದು ಅಪ್ಪಿಕೊಳ್ಳುತ್ತಾರೆ, ತಪ್ಪು ನಮ್ಮದೇ ಎನ್ನುತ್ತಾರೆ ಎಂದಾದರೆ ಆ ಅಹಿಂಸೆ ಯಾವ ಬಗೆಯದು. ಗಾಂಧಿ ಹಾಕಿದ ಆ ಅಡಿಪಾಯ ಇಂದಿಗೂ ಅಲುಗಾಡದೆ ನಿಂತಿದೆ. ಇಂದು ಬಂಗಾಳ, ಕೇರಳ, ಕರ್ನಾಟಕಗಳಲ್ಲಿ ಬಹುತೇಕ ದೇಶದಾದ್ಯಂತ ಹಿಂದೂಗಳ ಕಗ್ಗೊಲೆಯಾಗುತ್ತದೆ. ಲಜ್ಜೆಗೆಟ್ಟ ರಾಜಕಾರಣಿಗಳು ಕೊಲೆಗಡುಕರ ಸಹಾಯಕ್ಕೆ ಧಾವಿಸುತ್ತಾರೆ. ಇದು ಯಾವ ಪಕ್ಷವನ್ನೂ ಬಿಟ್ಟಿಲ್ಲ. ಮೊನ್ನೆ ಮೊನ್ನೆ ನವರಾತ್ರಿ ಹಾಗೂ ಮೊಹರಮ್ ಸಂದರ್ಭದಲ್ಲಿ ಹಿಂದೂಗಳ ಮೇಲೆ ನಡೆದ ಮಾರಣಹೋಮ ಯಾವುದೇ ಸುದ್ಧಿ ಮಾಧ್ಯಮಗಳಲ್ಲಿ ಪ್ರತಿಫಲಿಸಲಿಲ್ಲ ಎಂದಾಗಲೇ ಈ ಓಲೈಕೆ ಎಷ್ಟು ಆಳವಾಗಿ ಬೇರೂರಿದೆ ಎಂದು ಗೊತ್ತಾಗುತ್ತದೆ.
ಇತ್ತ ಹಿಂದೂಗಳ ನಾಯಕ, ಮಹಾ ಸಂತರೊಬ್ಬನನ್ನು ಕೊಲೆಗೈದ ಹಂತಕ ರಶೀದನಿಗೆ ಶೃದ್ಧಾಂಜಲಿ ಸಲ್ಲಿಸಲೆಂದು 50ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಮಸೀದಿಗಳಲ್ಲಿ ಅವನ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜಮಾತ್-ಉಲ್-ಉಲೇಮಾ ಪಕ್ಷದ ಅಧಿಕೃತ ಮುಖವಾಣಿ ರಶೀದ್ ಹುತಾತ್ಮ ಎಂದು ಅನೇಕ ವಾದಗಳನ್ನು ಮಂಡಿಸಿ ಕರಪತ್ರಗಳನ್ನು ಹೊರಡಿಸಿತು. ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳುವ, ಅವರ ಶವಸಂಸ್ಕಾರಕ್ಕೆ ಸಾಗರೋಪಾದಿಯಲ್ಲಿ ತಮ್ಮವರನ್ನು ಒಟ್ಟುಗೂಡಿಸುವ ಮುಸ್ಲಿಮರ ಮತಾಂಧತೆ ಇಂದಾದರೂ ಕಡಿಮೆಯಾಗಿದೆಯೇ?
Discussion about this post