ಬೆಂಗಳೂರು, ಅ.15: “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” – ಹೆತ್ತ ತಾಯಿ ಮತ್ತು ಮಾತೃ ಭೂಮಿ ಸ್ವರ್ಗಕ್ಕಿ೦ತಲೂ ಮಿಗಿಲಾದದ್ದು ಎ೦ದು ಶ್ರೀರಾಮನ ಬಾಯಿಯಲ್ಲಿ ನುಡಿಸಿ,ಸಮಸ್ತ ಭಾರತೀಯರಲ್ಲಿ ಮಾತೃ ಭಕ್ತಿಯೊಡನೆ ದೇಶಭಕ್ತಿಯ ಮೌಲ್ಯಗಳಿಗೆ ಸಮಾನವಾದ ಉನ್ನತಿಕೆಯನ್ನು ಕಲ್ಪಿಸಿದವರು ವಾಲ್ಮೀಕಿ ಮಹರ್ಷಿಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಸ್ತ ಭಾರತೀಯರಲ್ಲಿ ಮಾತೃ ಭಕ್ತಿಯೊಡನೆ ದೇಶಭಕ್ತಿಯ ಮೌಲ್ಯಗಳಿಗೆ ಸಮಾನವಾದ ಉನ್ನತಿಕೆಯನ್ನು ಕಲ್ಪಿಸಿ, ಶಾಶ್ವತವಾಗಿ ನೆಲೆಯೂರುವ೦ತೆ ಮಾಡಿದ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿಗಳು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದರೆ, 2010ರ ಅಕ್ಟೋಬರ್ 5ರಂದು ವಾಲ್ಮೀಕಿ ಮಹರ್ಷಿಗಳ ಜಯ೦ತಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಆಚರಿಸಬೇಕೆ೦ದು ಮತ್ತು ವಾಲ್ಮೀಕಿ ಜಯ೦ತಿಯನ್ನು ಸಾರ್ವಜನಿಕ ರಜಾದಿನವನ್ನಾಗಿ ಘೋಷಿಸಿದ್ದೆ. ಆಗ, ವಾಲ್ಮೀಕಿ ಜನಾ೦ಗದವರ ಸಮುದಾಯ ಭವನವನ್ನು 8 ಜಿಲ್ಲೆಗಳಲ್ಲಿ ನಿರ್ಮಿಸಲು ನನ್ನ ಸರ್ಕಾರ 8 ಕೋಟಿ ಅನುದಾನವನ್ನು ನೀಡಿತ್ತು ಎಂದರು.
ವಾಲ್ಮೀಕಿ ಜಯಂತಿಯ ಈ ಶುಭದಿನದಂದೇ ಈ ದೇಶ ಕಂಡ ಹೆಮ್ಮೆಯ ಪುತ್ರ ಡಾ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನವೂ ಹೌದು. ಕಲಾಂ ಕೂಡಾ ತಮ್ಮೆಲ್ಲ ಕಷ್ಟ – ಶಾರ್ಪಣ್ಯಗಳ ನಡುವೆ ಸಾಧನೆ ಮಾಡಿ , ವಿಜ್ಞಾನಿಯಾಗಿ , ರಾಕೇಟ್ ವಿಜ್ಞಾನಿ ಎಂದು ಖ್ಯಾತಿಗಳಿಸಿ, ರಾಷ್ಟ್ರಪತಿಯ ಹುದ್ದೆ ಅಲಂಕರಿಸಿದರು. ಈ ನಿಟ್ಟಿನಲ್ಲಿ ನೋಡುವುದಾದರೆ ವಾಲ್ಮೀಕಿ, ಕಲಾಂ ಇಬ್ಬರೂ ಜನಮಾನದಲ್ಲಿ ಚಿರಸ್ಥಾಯಿಯಾಗಿರುತ್ತಾರೆ ಎಂದು ಸ್ಮರಿಸಿದರು.
Discussion about this post