No Result
View All Result
Shikaripura National Sports Day In Kumadvathi Central School copy
English Articles

KRCS Shikaripura Celebrates National Sports Day with Fervour

by kalpa News
August 30, 2026
0

Kalpa Media House  |  Shikaripura  |  Kumadvathi Residential Central School (KRCS), Shikaripura, celebrated National Sports Day 2026 with great enthusiasm and...

Read moreDetails
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
  • Advertise With Us
  • Grievances
  • About Us
  • Contact Us
Sunday, August 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಚಾಮರಾಜನಗರ

ರಾಷ್ಟ್ರ, ಧರ್ಮ ನಿಷ್ಠೆಗೆ ವೀರಮದಕರಿ ನಾಯಕರು ಮಾದರಿ | ಸುರೇಶ್ ಋಗ್ವೇದಿ

kalpa News by kalpa News
October 16, 2025
in ಚಾಮರಾಜನಗರ
0
ರಾಷ್ಟ್ರ, ಧರ್ಮ ನಿಷ್ಠೆಗೆ ವೀರಮದಕರಿ ನಾಯಕರು ಮಾದರಿ | ಸುರೇಶ್ ಋಗ್ವೇದಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಚಾಮರಾಜನಗರ  |

ರಾಷ್ಟ್ರ ಹಾಗೂ ಧರ್ಮದ ನಿಷ್ಠೆ ಹಾಗೂ ಭಕ್ತಿಗೆ ವೀರಮದಕರಿ ನಾಯಕರು ಮಾದರಿಯಾಗಿದ್ದು, ಇತಿಹಾಸದಲ್ಲಿ ನಾಯಕರು ಅಮರರು ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸುರೇಶ್ ಎನ್. ಋಗ್ವೇದಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಚಿತ್ರದುರ್ಗದ ವೀರ ಮದಕರಿ ನಾಯಕರ ಜನ್ಮದಿನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಡೀ ವಿಶ್ವದಲ್ಲೇ ಚಿತ್ರದುರ್ಗದ ಕೋಟೆ ವಿಶೇಷ ಇತಿಹಾಸವನ್ನು ಹೊಂದಿರುವ ಮಹಾ ಕೋಟೆ . ನಿಸರ್ಗದ ಮಡಿಲಿನಲ್ಲಿ ಸುಂದರವಾಗಿ, ಶಿಸ್ತು ಬದ್ಧವಾಗಿ, ರಕ್ಷಣಾತ್ಮಕವಾಗಿ ರೂಪಿಸಿರುವ ಏಳು ಸುತ್ತಿನ ಕೋಟೆಯು ದೇಶದ ರಕ್ಷಣಾ ವ್ಯವಸ್ಥೆಗೆ ಮಾದರಿಯಾಗಿದೆ.

ಶ್ರೀರಂಗಪಟ್ಟಣದ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ವಿರುದ್ಧ ಹೋರಾಟ ನಡೆಸಿದ ಕೆಚ್ಚೆದೆಯ ವೀರ ಮದಕರಿ ನಾಯಕರು ಪ್ರಾಣವನ್ನು ಲೆಕ್ಕಿಸದೆ ಧರ್ಮ ನಿಷ್ಠೆಯನ್ನು ರಾಷ್ಟ್ರ ನಿಷ್ಠೆಯನ್ನು ಪ್ರದರ್ಶಿಸಿ ವೀರಮರಣವನ್ನು ಅಪ್ಪಿದ  ಮದಕರಿ ನಾಯಕರನ್ನು ನಾವೆಲ್ಲರೂ ಸದಾ ಕಾಲ ಸ್ಮರಿಸಿಕೊಳ್ಳಬೇಕು ಎಂದರು.

ಪ್ರತಿಯೊಬ್ಬ ರಾಷ್ಟ್ರಭಕ್ತನು ಚಿತ್ರದುರ್ಗಕ್ಕೆ ಭೇಟಿ ನೀಡಿ ಇತಿಹಾಸವನ್ನು ತಿಳಿಯುವಂತಹ ಕಾರ್ಯ ಮಾಡಬೇಕು. ಮದಕರಿನಾಯಕರಂತಹ ರಾಜರುಗಳನ್ನು ಸದಾ ಕಾಲ ಸ್ಮರಿಸಿಕೊಳ್ಳುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ನೆರವೇರಿಸಿಕೊಂಡು ಬರುತ್ತದೆ ಎಂದು ತಿಳಿಸಿದರು.
ಮುಖಂಡರು ಹಾಗೂ ಪ್ರಸಿದ್ಧ ಜನಪದ ಗಾಯಕರು ಆದ ಸುರೇಶ್ ನಾಗ್ ಹರದನಹಳ್ಳಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವೀರ ಮದಕರಿ ನಾಯಕರ ಇತಿಹಾಸ ಕುರಿತು ಚಿಂತನ ಕಾರ್ಯಕ್ರಮ ರೂಪಿಸಿರುವ ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳು ಅರ್ಪಿಸಿ, ವೀರಮದಕರಿ ನಾಯಕರು  ಸ್ವಾಭಿಮಾನ, ದೇಶಾಭಿಮಾನ ಹಾಗೂ ಧೈರ್ಯಕ್ಕೆ ಮತ್ತೊಂದು ಹೆಸರು. ಬಂಧನದಲ್ಲಿಟ್ಟು ಕ್ರೂರವಾಗಿ ನಡೆಸಿಕೊಂಡ ಹೈದರಾಲಿ ಸಂಸ್ಥಾನಕ್ಕೆ ಹೆದರದೆ ಧರ್ಮ ತ್ಯಜಿಸದೆ, ವೀರ ಸ್ವರ್ಗ ಹೊಂದಿದ ಮದಕರಿ ನಾಯಕರು ನಮ್ಮೆ ಹೆಮ್ಮೆ ಎಂದರು.

ಬರಹಗಾರ ಲಕ್ಷ್ಮೀ ನರಸಿಂಹ ಮಾತನಾಡಿ, ತ.ರಾ. ಸುಬ್ಬರಾಯರ ದುರ್ಗಾಸ್ತಮಾನ ಕಾದಂಬರಿ ಹಾಗೂ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಮೂಲಕ ಚಿತ್ರದುರ್ಗದ ಇತಿಹಾಸವನ್ನು ಜಗತ್ತಿಗೆ ಮಾಧ್ಯಮದ ಮೂಲಕ ತೋರಿಸಿದವರು. ತರಾಸುರವರ ದುರ್ಗಾಸ್ತಮಾನ ಕೃತಿ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ. ಮದಕರಿ ನಾಯಕರ  ಜೀವನ ಮತ್ತು ಹೋರಾಟ ಯುವ  ಪೀಳಿಗೆಗೆ ತಿಳಿಸುವ ಕಾರ್ಯ ಮೆಚ್ಚುವಂತಹುದು ಎಂದರು.
ದೇಶಭಕ್ತಿ ಗೀತೆಯನ್ನು ಹಾಗೂ ಕನ್ನಡದ ಸಂಸ್ಕೃತಿ ಪರಂಪರೆ ಸಾರುವ ಗೀತೆಯನ್ನು ಸುರೇಶ್ ನಾಗ್ ಹರದನಹಳ್ಳಿ, ಮೇಗಲ ಹುಂಡಿ ರಾಜು, ಸಜ್ಜೀವನ್ ಮೂರ್ತಿ ಹೇಳಿ ಮೆಚ್ಚುಗೆ ಗಳಿಸಿದರು.

ಕನ್ನಡ ಚಳುವಳಿಗಾರ ರಾಜಗೋಪಾಲ್, ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಸರಸ್ವತಿ, ಪದ್ಮ ಪುರುಷೋತ್ತಮ್, ಗೋವಿಂದರಾಜು, ಮಾಲಿನಿ, ಮೂರ್ತಿ, ರಾಜು, ಕಾರ್ ಕುಮಾರ್, ನಾಗೇಶ್ ಮಕ್ಕಳು ಹಾಜರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2025/09/Vedic-Maths-New.mp4
https://kalpa.news/wp-content/uploads/2024/04/VID-20240426-WA0008.mp4

 

Tags: ChamarajanagaraKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಚಾಮರಾಜನಗರ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನೈಋತ್ಯ ರೈಲ್ವೆ | ಒಂದೇ ದಿನ ದಂಡ ವಿಧಿಸಿ ಮೈಸೂರು ವಿಭಾಗಕ್ಕೆ ಬಂದ ಆದಾಯವೆಷ್ಟು?

Next Post

ನೈಋತ್ಯ ರೈಲ್ವೆಯ ನೂತನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಪಿ. ಅನಂತ್ ಪದಗ್ರಹಣ

kalpa News

kalpa News

Next Post
ನೈಋತ್ಯ ರೈಲ್ವೆಯ ನೂತನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಪಿ. ಅನಂತ್ ಪದಗ್ರಹಣ

ನೈಋತ್ಯ ರೈಲ್ವೆಯ ನೂತನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಪಿ. ಅನಂತ್ ಪದಗ್ರಹಣ

Leave a Reply Cancel reply

Your email address will not be published. Required fields are marked *

No Result
View All Result
Shikaripura National Sports Day In Kumadvathi Central School copy
English Articles

KRCS Shikaripura Celebrates National Sports Day with Fervour

by kalpa News
August 30, 2026
0

Kalpa Media House  |  Shikaripura  |  Kumadvathi Residential Central School (KRCS), Shikaripura, celebrated National Sports Day 2026 with great enthusiasm and...

Read moreDetails
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL