Read - < 1 minute
ಬೆಂಗಳೂರು, ಅ.14: ತೆರವು ಕಾರ್ಯಾಚರಣೆಯಿಂದ ನಿರಾಳರಾಗಿದ್ದ ನಟ ದರ್ಶನ್ ಹಾಗೂ ಶ್ಯಾಮನೂರು ಶಿವಶಂಕರಪ್ಪ ಅವರ ಕಟ್ಟಡ ತೆರವಿಗೆ ಕೊನೆಗೂ ಆದೇಶ ಹೊರಬೀಳಲಿದೆ.
ನಟ ದರ್ಶನ್ ಮನೆ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಒಡೆತನದ ಆಸ್ಪತ್ರೆ ಇರುವ ಜಾಗ ಒತ್ತುವರಿಯಾಗಿರುವುದು ಖಾತ್ರಿಯಾಗಿದ್ದು, ಏಳು ದಿನಗಳೊಳಗಾಗಿ ತೆರವು ಮಾಡುವಂತೆ ಜಿಲ್ಲಾಡಳಿತ ಗಡುವು ನೀಡಿದೆ.
ದರ್ಶನ್ ಮತ್ತು ಎಸ್ಎಸ್ ಆಸ್ಪತ್ರೆಗೆ ಸ್ವಯಂ ತೆರವುಗೊಳಿಸುವಂತೆ ಏಳು ದಿನಗಳ ಕಾಲಾವಕಾಶ ಕೊಡುತ್ತೇವೆ. ಇಲ್ಲದಿದ್ದರೆ ಒತ್ತುವರಿ ಪ್ರದೇಶವನ್ನು ಸರ್ಕಾರ ತೆರವುಗೊಳಿಸಿ ವಶಕ್ಕೆ ಪಡೆಯುತ್ತೇವೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ವಿ. ಶಂಕರ್ ಸ್ಪಷ್ಟಪಡಿಸಿದ್ದಾರೆ. ಇನ್ನು ಇದೇ ಬಡಾವಣೆಯಲ್ಲಿ 69 ಮನೆಗಳನ್ನು ಕೂಡ ಅಕ್ರಮವಾಗಿ ಕಟ್ಟಲಾಗಿದ್ದು, ಅವುಗಳ ತೆರವು ಕಾರ್ಯಾಚರಣೆ ನಡೆಯಲಿದೆ.
ಒತ್ತುವರಿ ಪ್ರದೇಶವನ್ನು ವಶಕ್ಕೆ ಪಡೆಯಲಾಗುವುದು. ಮುಂದಿನ ಕ್ರಮ ಸರ್ಕಾರಕ್ಕೆ ಬಿಟ್ಟದ್ದು ಎಂದು ಡಿ.ಸಿ. ಶಂಕರ್ ತಿಳಿಸಿದ್ದಾರೆ.
Discussion about this post