ಚಂಢೀಗಡ: ಅ:29: ಮುಂದಿನ ವರ್ಷ ನಡೆಯುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಪಕ್ಷ ರಾಷ್ಟ್ರೀಯ ಪಕ್ಷಗಳನ್ನು ಹಿಂದಿಕ್ಕಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.
ಇಂಡಿಯಾ ಡ್ರೆಡಿಂಗ್ನೌ ಸಂಸ್ಥೆ ನಡೆಸಿರುವ ಸಮೀಕ್ಷೆಯಂತೆ ಮುಂದಿನ ವಿಧಾನಸಭೆ ಚುನವಾಣೆಯಲ್ಲಿ ಆಮ್ ಆದ್ಮಿ ಪಕ್ಷ ಶೇ.47ರಷ್ಟು ಮತ ಪಡೆಯಲಿದ್ದು. ಶೇ.85ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಿದೆ.
ಕಳೆದ ಬಾರಿ ಚುನಾವಣೆಯಲ್ಲಿ ಶೇ.34.73ರಷ್ಟು ಮತಗಳಿಸಿ 56 ಸ್ಥಾನಗಳಲ್ಲಿ ಗೆದ್ದಿದ್ದ ಶಿರೋಮಣಿ ಅಕಾಲಿದಳ ಮತ್ತು ಶೇ.7.18ರಷ್ಟು ಮತ ಗಳಿಸಿ 12 ಸ್ಥಾನಗಳಲ್ಲಿ ಜಯಗಳಿಸಿ ಅಧಿಕಾರದಲ್ಲಿರುವ ಬಿಜೆಪಿ ಮಿತ್ರ ಕೂಟ ಈ ಬಾರಿ ಶೇ.9ರಷ್ಟು ಮಾತ್ರ ಮತಗಳಿಸಲಿದ್ದು, ಐದು ಕ್ಷೇತ್ರಗಳಲ್ಲೂ ಗೆಲ್ಲುವುದು ಕಷ್ಟ ಎಂಬ ವರದಿ ನೀಡಲಾಗಿದೆ.
ಶೇ.40ರಷ್ಟು ಮತಗಳಿಸಿ 46 ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಕಾಂಗ್ರೆಸ್ ಈ ಚುನಾಣೆಯಲ್ಲಿ ಶೇ.31ರಷ್ಟು ಮತಗಳಿಸಿ 25ಕ್ಕೂ ಕಡಿಮೆ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗಿದೆ. ಪಕ್ಷೇತರರು ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದಾರೆ.
117 ಕ್ಷೇತ್ರಗಳಿರುವ ಪಂಜಾಬ್ ವಿಧಾನಸಭೆಯಲ್ಲಿ 59 ಸ್ಥಾನಗಳನ್ನು ಪಡೆದರೆ ಅಧಿಕಾರ ಹಿಡಿಯಲು ಸಾಧ್ಯವಿದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅಸ್ತಿತ್ವದಲ್ಲೇ ಇಲ್ಲದ ಎಎಪಿ ಪಕ್ಷ ಈ ಬಾರಿ ಅಧಿಕಾರ ಹಿಡಿಯಲಿದೆ ಎಂದು ಹೇಳಿರುವುದು ಸಮೀಕ್ಷೆ ಬಗ್ಗೆಯೇ ಅನುಮಾನ ಹುಟ್ಟುವಂತೆ ಮಾಡಿದೆ.
ಆಮ್ಆದ್ಮಿ ಹಿಂದಿನ ಚುನಾವಣೆಯಲ್ಲಿ 34 ಕ್ಷೇತ್ರಗಳಲ್ಲಿ ಸ್ಪಧರ್ಿಸಿ, 7ರಲ್ಲಿ 2ನೇ ಸ್ಥಾನ, 73ರಲ್ಲಿ 3ನೇ ಸ್ಥಾನ, ಮೂರು ಕ್ಷೇತ್ರಗಳಲ್ಲಿ 4ನೇ ಸ್ಥಾನಗಳಲ್ಲಿ ಮತಗಳಿಸಿತ್ತು. ಆದರೆ ಒಂದೂ ಕ್ಷೇತ್ರಗಳಲ್ಲೂ ಗೆಲುವು ಕಂಡಿರಲಿಲ್ಲ.
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸಕರ್ಾರ ಅಸ್ತಿತ್ವಕ್ಕೆ ಬಂದ ನಂತರ ಇತರೆ ರಾಜ್ಯಗಳಲ್ಲೂ ಆಮ್ಆದ್ಮಿ ಪ್ರಬಲವಾಗಿ ಬೆಳೆಯುತ್ತಿರುವುದು ಕೇಳಿಬರುತ್ತಿದೆ.















