ನವದೆಹಲಿ: ಅ:29: ಪ್ರಧಾನಿ ನರೇಂದ್ರ ಮೋದಿ ಈ ಬಾರಿ ದೀಪಾವಳಿಯನ್ನು ಭಾರತ-ಚೀನಾ ಗಡಿಯಲ್ಲಿ ಯೋಧರೊಂದಿಗೆ ಆಚರಿಸಲಿದ್ದಾರೆ. ಉತ್ತರಾಖಂಡ್ನ ಭಾರತ-ಚೀನಾ ಗಡಿಯಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸರ ಜೊತೆ ಪ್ರಧಾನಿ ಬೆಳಕಿನ ಹಬ್ಬವನ್ನು ಆಚರಿಸಲಿದ್ದಾರೆ.
ಭಾರತ-ಚೀನಾ ಗಡಿಗೆ ಭಾನುವಾರ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಉತ್ತರಾಖಂಡ್ನ ಮಾನದಲ್ಲಿ ಐಟಿಬಿಪಿ ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಆಚರಿಸಲಿದ್ದಾರೆ. ಈ ವೇಳೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿಲ್ ದೋವಲ್ ಅವರು ಪ್ರಧಾನಿಗೆ ಸಾಥ್ ಕೊಡಲಿದ್ದಾರೆ. ಮಾನ ಪ್ರದೇಶ ಸಮುದ್ರಮಟ್ಟದಿಂದ10 ಸಾವಿರ ಅಡಿ ಎತ್ತರದಲ್ಲಿದೆ.
ಇದೇ ಸಮಯದಲ್ಲಿ ಭಾರತದ ಪ್ರಾಚೀನ ದೇವಾಲಯವಾದ ಬದ್ರೀನಾಥ್ಕ್ಕೂ ಪ್ರಧಾನಿ ಭೇಟಿ ಕೊಡಲಿದ್ದಾರೆ ಎನ್ನಲಾಗಿದೆ. ಇನ್ನು, ಮೋದಿ ಪ್ರಧಾನಿಯಾದ ನಂತರ ಮೊದಲ ಬಾರಿಗೆ 2014ರಲ್ಲಿ ಸಿಯಾಚಿನ್ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. ಕಳೆದ ವರ್ಷ ಕೂಡ ಪಂಜಾಬ್ ಗಡಿಗೆ ತೆರಳಿ ಯೋಧರ ಜೊತೆ ಸೇರಿ ಬೆಳಕಿನ ಹಬ್ಬವನ್ನು ಆಚರಿಸಿದ್ದು, ಈ ಬಾರಿ ಇಂಡೋ-ಚೀನಾ ಗಡಿಯಲ್ಲಿ ದೀಪಾವಳಿ ಆಚರಿಸುತ್ತಿದ್ದಾರೆ.
Gudi Namana 2026: A Year-Long Musical Tribute to Guru Parampara Across Sacred Spaces
Kalpa Media House | Article by Rasikapriya | Gudinamana 2026, a distinctive classical music and dance initiative curated by renowned...
Read moreDetails




