ಈಗಿನ ವೈಜ್ಞಾನಿಕ ಯುಗದಲ್ಲಿ ಪ್ರೇತ ದೋಷ ಇದೆ ಎಂದರೆ ಹೇಳಿದವರನ್ನೇ ಅವಹೇಳನ ಮಾಡುವ ಕಾಲ. ಜ್ಯೋತಿಷ್ಯರು ಪ್ರೇತ ದೋಷವಿದೆ ಎಂದು ಹೇಳಿದರೆ ಅನೇಕರು ಇದನ್ನು ನಂಬಿದರೆ ಇನ್ನು ಕೆಲವರು ಅವಹೇಳನ ಮಾಡಿ ನಗಬಹುದು. ಜ್ಯೋತಿಷ್ಯರಲ್ಲೂ ಕಪೋಲ ಕಲ್ಪಿತರೂ ಇದ್ದಾರೆ.ನಾವು ಸರಿಯಾಗಿ ತಿಳುವಳಿಕೆ ಇದ್ದವರ ಮೂಲಕವೇ ವಿಮರ್ಷಿಸಿಕೊಳ್ಳುವುದು ನಮ್ಮ ಜವಾಬ್ದಾರಿಯೂ ಆಗಿದೆ. ಇತ್ತೀಚೆಗೆ ಒಬ್ಬ ಸಾಹಿತಿ ಇದೊಂದು ಮೌಡ್ಯ ಎಂದು ಪುಸ್ತಕವನ್ನು ಬರೆದು ಹಾಕಿದರು.(‘ ಪ್ರೇತಂ ಭಟ್ಟರ ನಿಂತಿಲ್ಲರು’ ಎಂಬ ಶಿರೋನಾಮೆಯ ಪುಸ್ತಕ ಇದು.) ಈ ಶಿರೋನಾಮೆ ಓದಿದರೆ , ಈ ಸಾಹಿತಿಗಳಿಗೆ ಪ್ರೇತೋದ್ಧಾರದ ಬಗ್ಗೆ ಅಸಹ್ಯತೆ ತೋರಿದಂತಿದೆ. ಹಾಗಾಗಿ ಇದು ದ್ವೇಷ ತುಂಬಿದ ಪುಸ್ತಕವೇ ಆಗುತ್ತದೆಯೇ ವಿನಃ ವಿಮರ್ಷಾತ್ಮಕ ತಿಳುವಳಿಕೆ ನೀಡುವಂತದ್ದಲ್ಲ ಎಂದು ಕಾಣುತ್ತದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾನ್ಯ ಗೃಹ ಸಚಿವರೂ ಕ್ರಮದ ಉದ್ದೇಶಗಳಿಗನುಗುಣವಾಗಿ ಮಾತನಾಡಿದ್ದಾರೆ.
ಆದರೆ ಇದು ಮನಸಿನೊಳಗಿನ ಭಾವನೆಗಳಾಗಿರಲಿಕ್ಕಿಲ್ಲ. ಒಂದು ವೇಳೆ ವಿಮರ್ಷಾತ್ಮಕವಾಗಿದ್ದ ಬರಹಗಳಾಗಿದ್ದರೆ ಜನರಿಗೆ ಪ್ರೇತಗಳೆಂದರೇನು? ನಿಜವೇ? ಎಂಬ ಅರ್ಥದಲ್ಲಿ ಶಿರ್ಷಿಕೆ ಇರುತ್ತಿತ್ತು. ಏನಿದು ಪ್ರೇತಂಭಟ್ಟರ ನಿಂತಿಲ್ಲರು? ಇದು ಪ್ರೇತ ದೋಷದಿಂದಲೇ ಬರೆದುದೆಂದು ಹೇಳಬೇಕಾಗುತ್ತದೆ.
ಯಾವಾಗ ಒಂದು ಅನಾದಿ ಸಂಪ್ರದಾಯವನ್ನು ವ್ಯಂಗ್ಯವಾಗಿ ಬರೆಯುತ್ತಾರೋ ಅವರು ಪ್ರೇತಗ್ರಸ್ತರು ಆಗಿರುತ್ತಾರೆ. ಇದಕ್ಕೆ ಇನ್ನಷ್ಟು ಪ್ರಚಾರ ಸಿಗಬೇಕೆಂದುಕೊಂಡು ಗೃಹ ಖಾತೆಯ ಸಚಿವರನ್ನೇ ಕರೆಸಿಕೊಂಡು ಬಿಡುಗಡೆ ಮಾಡಲಾಯಿತು.ಕೊನೆಗೆ ಪ್ರೇತ ವಿಚಾರಗಳು ಬ್ರಾಹ್ಮಣರ ಒಂದು ಮೂಢ ನಂಬಿಕೆ ಎನ್ನುವ ಮಟ್ಟದಲ್ಲೂ ವಿಚಾರ ವಿಮರ್ಷೆ ನಡೆಯಿತು. ಅದೇನೇ ಇರಲಿ.ಅವರವರ ನಂಬಿಕೆ ವಿಚಾರಗಳ ಬಗ್ಗೆ ವಾದ ಬೇಡ.ಈಗ ಬೇಕಾದದ್ದು ಪ್ರೇತ ವಿಚಾರ.
ಪ್ರೇತ ಎಂದರೆ ಶವ(dead body). ಶವ ಎಂದರೆ ಜೀವ ಜಂತುಗಳ ಕಾಯವೇ ಮಾತ್ರವಲ್ಲ.ಚಟುವಟಿಕೆ ನಿಂತರೆ ಅದು ಶವವೇ. ಆಡು ಮಾತಿನಲ್ಲಿ ‘ ಅವನೊಂದು ಶವ ಮಹರಾಯ’ ಎಂದು ಕೆಲಸಕ್ಕೆ ಬಾರದವನನ್ನು ಹೇಳುವುದಿಲ್ಲವೇ? ಹಾಗಾಗಿ ಯಾವುದು ಚಟುವಟಿಕೆಯಲ್ಲಿ ಇಲ್ಲವೋ ಅದು ಶವ.ಮಾನವ ದೇಹವು ಚಟುವಟಿಕೆಯಲ್ಲಿ ಇರಬೇಕಾದರೆ ಅವನೊಳಗಿನ 72 ಸಾವಿರ ನಾಡಿಗಳು ನಿರಂತರ ಚಟುವಟಿಕೆಯಲ್ಲಿರಬೇಕು. ಕೆಲವೊಮ್ಮೆ ಇಂತಹ ನಾಡಿಗಳು ನಿಧಾನಗತಿಯಲ್ಲಿ ಕೆಲಸಮಾಡುವುದಿದೆ.ಇಂತವರನ್ನು ನಾವು tube light ಎಂದು ತಮಾಷೆ ಮಾಡುವುದಿದೆ. ಇನ್ನು ಕೆಲವರಲ್ಲಿ ಈ ನಾಡಿಗಳು ಪೂರ್ಣ ನಿರ್ಜೀವವಿದ್ದಾಗ ಅಂಗ ನ್ಯೂನತೆಗಳು, ಬುದ್ಧಿ ಮಾಂದ್ಯತೆಗಳೂ ಇರುತ್ತವೆ. ಬುದ್ಧಿ ಮಾಂದ್ಯತೆ ಇದ್ದಾಗ ದುರ್ಬುದ್ಧಿಗಳೂ ಉತ್ಪತ್ತಿ ಆಗುವುದೂ ಇದೆ. ದುರ್ಬುದ್ಧಿ ಉಂಟಾದರೆ ಶಾಸ್ತ್ರ ಅವಹೇಳನ ಮಾಡುವಿಕೆ, ಇತರರೊಡನೆ ವಿನಾಕಾರಣ ಕಲಹ, ಸಂತಾನ ದೋಷ,ಋಣ ಬಾಧೆ ಇತ್ಯಾದಿ ವಿವಿಧ ಸ್ವರೂಪಗಳ ಫಲೋತ್ಪತ್ತಿ ಆಗುತ್ತದೆ. ಅಸಂಬದ್ಧ ಬರಹಗಾರನ ಕೃತಿಯನ್ನು ಉದ್ಘಾಟಿಸಲು ಹೋಗುವ ಜವಬ್ದಾರಿ ಮನುಷ್ಯರು, ಇದು ಅಸಂಭದ್ದ ಎಂದು ತಿಳಿದಿದ್ದರೂ, ಸಭೆಯಲ್ಲಿ ಈ ಅಸಂಭದ್ದವನ್ನು ಪುಷ್ಟೀಕರಿಸುವ ಮಾತುಗಳನ್ನಾಡುವಿಕೆಯೂ ಪ್ರೇತ ದೋಷಗಳೇ ಆಗುತ್ತದೆ.ಅಂದರೆ ಆ ವ್ಯಕ್ತಿ ಶರೀರದ ವಿಮರ್ಷೆ,ವಿವೇಚನಾ ನಾಡಿಗಳು ಸತ್ತುಹೋಗಿ ಶರೀರದ ಒಳಗೇ ಪ್ರೇತವಾಗಿರುತ್ತದೆ ಎಂದರ್ಥ.
ಹಿಂದೆ ಋಷಿಗಳು ಪುರೂರವ( ಈಗಿನ ಬೆಲೂಚಿಸ್ಥಾನ) ನದಿಯಲ್ಲಿ ಪ್ರಥಮ ಪ್ರೇತ ಸಂಸ್ಕಾರ,ಶ್ರದ್ಧಾದಿಗಳನ್ನು ಮಾಡಿದ್ದರಿಂದಲೇ ಇಂದಿಗೂ ಸಾಂವತ್ಸರಿಕ ಶ್ರಾದ್ಧಗಳಲ್ಲಿ ‘ ಪುರೂರವಾರ್ದ್ರ ಶ್ರಾದ್ಧೇ’ ಎಂಬ ಹೆಸರಿದೆ.
ನಮ್ಮ ಶರೀರವು ಪಿತೃದತ್ತವಾಗಿ ಬಂದದ್ದು.ಆ ಪಿತೃಗಳಿಗೆ ಅವರ ಪಿತೃಗಳು ಕಾರಣರು.ಇಂತಹ ಪಿತೃಗಳು ಸತ್ತಾಗ ನಮ್ಮೊಳಗಿನ DNA ಸ್ಥಬ್ದವಾಗುತ್ತದೆ.ಅದನ್ನು ಮತ್ತೆ ಜಾಗೃತಗೊಳಿಸಲೆಂದೇ ಈ ಮಹಾಲಯಶ್ರಾದ್ಧಾದಿಗಳಿರುವುದು.ಇದು ವೈದಿಕ ಸಂಪ್ರದಾಯದ ಒಂದು Treatment.ಬೇರೆ ಸಂಪ್ರದಾಯಗಳಲ್ಲೇನಿದೆಯೋ ಗೊತ್ತಿಲ್ಲ. ಜ್ಞಾನಿಗಳಿಗೆ ಇವೆಲ್ಲ ಬೇಕಾಗಿಲ್ಲ.ಯಾರು ದುಃಖಿಸುತ್ತಾರೋ ಅಂತವರು ಪಿತೃಗಳಿಗೆ ಶ್ರಾದ್ಧಾದಿಗಳನ್ನು ಮಾಡಲೇ ಬೇಕು.ಯಾರಿಗೆ ಯಾವುದರಲ್ಲೂ ದುಃಖವೇ ಇರೋದಿಲ್ಲವೋ ಅಂತಹ ಜ್ಞಾನಿಗಳಿಗೆ ಯಾವ ಪೂಜೆಯೂ ಬೇಕಾಗಿಲ್ಲ, ಯಾವ ಶ್ರಾದ್ಧಾದಿ ಪೈತ್ರಿಕ ಕ್ರಿಯೆಗಳು ಬೇಕಾಗಿಲ್ಲ.ಅಂತವರ ಶರೀರದ ನಾಡಿಗಳಿಗೆ ಮರಣವಿರುವುದಿಲ್ಲ.ಇನ್ನೊಬ್ಬರ ಅವಹೇಳನ,ಇನ್ನೊಬ್ಬರನ್ನು ದುಃಖಿಸುವಂತೆ ಮಾಡುವಿಕೆ, ಪುರಾಣ ನಿಂದನೆ, ಶಾಸ್ತ್ರ ನಿಂದನಾ ಪ್ರಕ್ರಿಯೆಗಳು ಯಾರಲ್ಲಿದೆಯೋ ಅಂತವರಿಗೆ ಪ್ರೇತ ಬಾಧೆ ಇರುತ್ತದೆ.ಅಂದರೆ ಅವರ ಶರೀರದೊಳಗಿನ ನಾಡಿಗಳು ಶವಗಳಾಗಿರುತ್ತದೆ ಎಂದರ್ಥ.
ನಾನು ಹೇಳುವ ಪ್ರಕಾರ ನಾವೆಲ್ಲರೂ ದುಃಖಿತರು,ಕೋಪಿಷ್ಟರು,ಕಾಲಾಕಾಲ ವಿವೇಚನೆ ಇಲ್ಲದವರು, ಹೊಟ್ಟೆ ಬಾಕರು, ಮೋಹ ಉಳ್ಳವರು ಆಗಿರುವುದರಿಂದ ನಾವು ಪ್ರೇತ ವಿಚಾರದಲ್ಲಿ ಅದನ್ನು ಕಡೆಗಣಿಸುವುದು ತಪ್ಪಾಗುತ್ತದೆ.ಒಂದು ವೇಳೆ ಮೇಲಿನ ಗುಣಗಳಲ್ಲಿ ಎಲ್ಲವೂ ವಿವೇಚನಾಯುಕ್ತವಾಗಿ ಜ್ಞಾನಿಗಳಾಗಿದ್ದಾಗ ಯಾವ ಪ್ರೇತ ವಿಚಾರದಲ್ಲೂ ಚಿಂತಿಸಬೇಕಾಗಿಲ್ಲ.
ಮುಂದಿನ ಪಕ್ಷ ಮಹಾಲಯ ಪಿತೃಪಕ್ಷ.ಇಲ್ಲೇ ಪಿತೃಗಳಿಗೆ ಮೋಕ್ಷೋದಯವಾಗುವ ಪರ್ವ ಕಾಲ.ಈ ಬಗ್ಗೆ ಮುಂದಿನ ವಾರ ನೋಡೋಣ.
Discussion about this post