Read - 2 minutes
ಭೂದೇವಿ ಮತ್ತು ವಿಷ್ಣುವಿನ ಮಗನಾದ ನರಕಾಸುರ ತನಗೆ ತಾಯಿಯಿಂದ ಮಾತ್ರ ಮರಣ ಬಂದೊಗಲಿ ಎಂದು ಬ್ರಹ್ಮನನ್ನು ಕುರಿತು ತಪ್ಪಸ್ಸನ್ನು ಮಾಡಿ ವರವನ್ನು ಪಡೆದವನು.
ಇಂದಿನ ಅಸ್ಸಾಂ ರಾಜ್ಯದಲ್ಲಿ ಗುವಾಹಟಿ ಆಗಿನ ಕಾಲದಲ್ಲಿ ಪ್ರಾಗ್ಜೋತಿಷ್ಯಪುರ ಎಂದು ಕರೆಯುತ್ತಿದ್ದರು. ಅದು ನರಕಾಸುರನ ರಾಜಧಾನಿಯಾಗಿದ್ದು ಅವನು ಲೋಕಕಂಟಕನಾಗಿ ಮೆರೆಯಲಾರಂಭಿಸಿದನು. ಅದು ತೀರ ಮೇರೆ ಮೀರಿದಾಗ ಶ್ರೀ ಕೃಷ್ಣನು ತನ್ನ ಮಡದಿ ಸತ್ಯಭಾಮೆಯನ್ನೂ ಅವರೊಂದಿಗೆ ಯುದ್ಧ ಮಾಡಲು ಕರೆದೊಯ್ಯುತ್ತಾನೆ. ಯುದ್ಧದಲ್ಲಿ ನರಕಾಸುರನ ಬಾಣದಿಂದಲೇ ತಾನು ಘಾಸಿಗೊಂಡಂತೆ ಮೂರ್ಛೆ ಹೋಗಿದ್ದಂತೆ ನಟನೆ ಮಾಡುತ್ತಾನೆ. ಆಗ ಅವನನ್ನು ಸೋಲಿಸಲು ಸತ್ಯಭಾಮೆಯೇ ಅವನೊಂದಿಗೆ ಯುದ್ಧ ಮಾಡುತ್ತಾಳೆ. ಸರಿ! ಆಕೆಯಿಂದಲೇ ನರಕಾಸುರನ ವಧೆಯಾಗುತ್ತದೆ. ಸಾಯುವ ಮುನ್ನ ನರಕಾಸುರ ತಾನೆಸೆಗಿದ್ದ ತಪ್ಪುಗಳಿಗೆಲ್ಲಾ ತೀವ್ರ ಪಶ್ಚಾತ್ಯಾಪ ಪಡುತ್ತಾನೆ. ಆಗಲೇ ತನ್ನ ಹೆಸರಿನಿಂದಲೇ ಒಂದು ಹಬ್ಬ ಆಚರಿಸಬೇಕೆಂದು ಬೇಡಿಕೊಳ್ಳುತ್ತಾನೆ. ಶಿಷ್ಠ ರಕ್ಷಣೆ, ದುಷ್ಟ ಶಿಕ್ಷಣೆ ಸತ್ಯವೆಂದೇ ಸಾರುವ ಈ ಹಬ್ಬ ದೇಶದಾದ್ಯಂತ ಆಚರಿಸಲಾಗುತ್ತದೆ.
ಮಾರನೆಯ ದಿವಸ ಪಟಾಕಿ ಸಿಡಿಮದ್ದುಗಳ ಗಲಾಟೆಯೇ ಸಕಲರನ್ನು ಬಹುಬೇಗನೇ ಎಚ್ಚರವಾಗಿಸಿಬಿಡುತ್ತದೆ. ಅದಂದು ಸಕಲರ ಮನೆಯಲ್ಲಿಯೂ ಎಣ್ಣೆಶಾಸ್ತ್ರದ ಸಡಗರ. ಕೊಬ್ಬರಿ ಎಣ್ಣೆಯಿಂದ ಅಂದು ಎಣ್ಣೆಶಾಸ್ತ್ರ ಮಾಡುವ ಪದ್ಧತಿ ನಡೆದು ಬಂದಿದೆ. ಮನೆ ಮುಂದೆ ತಳಿರು ತೋರಣ ರಂಗವಲ್ಲಿ ಎಲ್ಲಾ ಮುಗಿಸಿ ಒಳಗಡೆಯೂ ಶುದ್ಧೀಕರಿಸಿ ನಂತರ ರಂಗವಲ್ಲಿಬರೆದು ಹಸೆಮಣೆ ಹಾಕಿ ಎಣ್ಣೆಶಾಸ್ತ್ರ ಮಾಡುವ ಮುನ್ನ ಕುಂಕುಮ ಹಚ್ಚಿ ಎಲೆ ಅಡಿಕೆ ಕೊಟ್ಟು ನಂತರ ಸಪ್ತ ಚಿರಾಯುಗಳನ್ನು ಜ್ಞಾಪಿಸಿಕೊಂಡು ಅವರ ಹೆಸರು ಹೇಳುತ್ತಾ ಮೊದಲು ಆರತಿ ಮಾಡಿ ಮುಗಿಸಿ ನಂತರ ಶಾಸ್ತ್ರ ಮಾಡಿದರೇ ಮುಗಿಯಿತು. ಎರೆದುಕೊಳ್ಳುವ ಸಡಗರ, ಗುರುಹಿರಿಯರಿಗೆ ದೇವರಿಗೆರ ಅಭ್ಯಂಜನ ಮುಗಿಸಿ ಹೊಸಬಟ್ಟೆ ಧರಿಸಿ ನಮಸ್ಕರಿಸುತ್ತಾರೆ.
ಸಂಜೆ ಹೊಸದೊಂದು ಲೋಕವೇ ಪ್ರತ್ಯಕ್ಷವಾಗಿಬಿಡುತ್ತದೆ. ಸಣ್ಣ ಮಕ್ಕಳಿಂದ ಹಿಡಿದು, ವಯಸ್ಸಾದವರೂ ಪಟಾಕಿ, ಹಚ್ಚುವ ಕಾರ್ಯಕ್ರಮಕ್ಕೆ ಸಿದ್ಧರಾಗುತ್ತಾರೆ.
ಮನೆಯಲ್ಲಿ ಎಲ್ಲೂ ಕತ್ತಲೆಯ ಅಂಶ ಅಂದು ಇರಕೂಡದು. ಹಾಗೆಂದೇ ನರಕಾಸುರನ ಬೇಡಿ ವರಪಡೆದದ್ದು. ಶ್ರೀಕೃಷ್ಣ ಅಂದೇ ನರಕಾಸುರ ಸೆರೆಹಿಡಿದಿಟ್ಟಿದ್ದ ಕನ್ನಿಕೆಯರನ್ನು ಸೆರೆಯಿಂದ ಬಿಡಿಸಿ ಆಯಾಸದಿಂದ ಮಲಗಿದ್ದನಂತೆ. ಆಗ ಅವನನ್ನು ಎಬ್ಬಿಸಿ ಅಭ್ಯಂಜನ ಮಾಡಿಸಿ ಅವನ ಆಯಾಸ ಕಳೆದರಂತೆ. ಅದರಲ್ಲಿ ಚತುರ್ದಶಿ ಎಂಬ ಕನ್ನಿಕೆಯೂ ಇದ್ದು ಹಾಗೆಂದೇ ಅಂದು ನರಕ ಚತುರ್ದಶಿ. ಅಂದು ಆ ಕನ್ನಿಕೆಯರೇ ಶ್ರೀಕೃಷ್ಣನಿಗೆ ಸಂತಸದಿಂದ ಆರತಿ ಮಾಡಿದ್ದರಂತೆ. ಮನೆಯ ಸಕಲ ಹೊಸ್ತಿಲುಗಳು, ತುಳಸಿ ಮುಂದೆ, ದೇವರ ಮುಂದೆ, ಮುಂದಿನ ಗೋಡೆಯ ಮೇಲೆ ದೀಪಗಳನ್ನು ಹಚ್ಚಿಡುವ ಪದ್ಧತಿ ನಡೆದುಬಂದಿದೆ. ಸಕಲ ದೀಪಗಳನ್ನು ಹೊತ್ತಿಸಿದ ನಂತರ ಒಂದು ತಟ್ಟೆಯಲ್ಲಿರಿಸಿ ದೇವರ ಮುಂದೆ ಇಟ್ಟು ಈ ಮಂತ್ರವನ್ನು ಪಠಿಸಬೇಕು.
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಸಂಪದ|
ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿ ನಮೋಸ್ತುತೆ
ದೀಪಜ್ಯೋತಿ ಪರಬ್ರಹ್ಮ ದೀಪಜ್ಯೋತಿ ಜನಾರ್ದನ
ದೀಪೋ ಹರತಿ ಪಾಪಾನೀ ಸಂಧ್ಯಾ ದೀಪಂ ನಮೋಸ್ತುತೆ|
ದೀಪ ಮೂಲೇ ಸ್ಥಿತೋ ಬ್ರಹ್ಮ, ದೀಪ ಮಧ್ಯೆ ಜನಾರ್ದನ|
ದೀಪಾಗ್ರೇ ಶಂಕರ ಪ್ರೋಕ್ತ, ಸಂಧ್ಯಾ ದೀಪಂ ನಮೋಸ್ತುತೆ॥
ತಮಸೋಮ ಜ್ಯೋತಿರ್ಗಮಯ|
ಮೃತ್ಯೋರ್ಮ ಅಮೃತಂಗಮಯ|
ಅಸತೋಮಾ ಸದ್ಗಮಯ|
ಈ ಶ್ಲೋಕಗಳನ್ನು ಪ್ರತಿಬಿಂಬಿಸುವ ಹಬ್ಬವೇ ದೀಪಾವಳಿಯ ಪ್ರಮುಖ ಉದ್ದೇಶ.
ಮನೆಯಲ್ಲಿ ಎಲ್ಲೂ ಕತ್ತಲೆಯ ಅಂಶ ಅಂದು ಇರಕೂಡದು. ಹಾಗೆಂದೇ ನರಕಾಸುರನ ಬೇಡಿ ವರಪಡೆದದ್ದು. ಶ್ರೀಕೃಷ್ಣ ಅಂದೇ ನರಕಾಸುರ ಸೆರೆಹಿಡಿದಿಟ್ಟಿದ್ದ ಕನ್ನಿಕೆಯರನ್ನು ಸೆರೆಯಿಂದ ಬಿಡಿಸಿ ಆಯಾಸದಿಂದ ಮಲಗಿದ್ದನಂತೆ. ಆಗ ಅವನನ್ನು ಎಬ್ಬಿಸಿ ಅಭ್ಯಂಜನ ಮಾಡಿಸಿ ಅವನ ಆಯಾಸ ಕಳೆದರಂತೆ. ಅದರಲ್ಲಿ ಚತುರ್ದಶಿ ಎಂಬ ಕನ್ನಿಕೆಯೂ ಇದ್ದು ಹಾಗೆಂದೇ ಅಂದು ನರಕ ಚತುರ್ದಶಿ.
ಲೇಖಕರು: ಕೆ.ಎಂ. ಫಲ್ಗು
Discussion about this post