ನವದೆಹಲಿ:ಆ:29: ಅಮೆರಿಕದ ಶಸ್ತ್ರಾಸ್ತ ಸಹಿತ ಹಾಗೂ ಚಾಲಕ ರಹಿತ ಯುದ್ಧ ವಿಮಾನ ಡ್ರೋಣ್ ನ ತಂತ್ರಜ್ಞಾನ ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಈ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅಮೆರಿಕದಿಂದ ಡ್ರೋಣ್ ತಂತ್ರಜ್ಞಾನ ಪಡೆಯುವ ಸಲುವಾಗಿ ಒಪ್ಪಂದ ಮಾಡಿಕೊಳ್ಳಲ್ಲಿದ್ದಾರೆ.
2015ರಲ್ಲಿ ಭಾರತ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಮಂಡಳಿ ಸದಸ್ಯತ್ವಕ್ಕಾಗಿ ಮನವಿ ಸಲ್ಲಿಸಿದ್ದು, 2016ರಲ್ಲಿ ಭಾರತಕ್ಕೆ ಸದಸ್ಯತ್ವ ದೊರೆತಿದೆ. ಹೀಗಾಗಿ ಭಾರತ ಇದೀಗ ಅಮೆರಿಕದ ಚಾಲಕರಹಿತ ಯುದ್ಧ ವಿಮಾನ “ಡ್ರೋಣ್” ತಂತ್ರಜ್ಞಾನ ಪಡೆಯುವ ಅರ್ಹತೆ ಹೊಂದಿದ್ದು, ಇದೇ ಕಾರಣಕ್ಕೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಅಮೆರಿಕದಿಂದ ಡ್ರೋಣ್ ತಂತ್ರಜ್ಞಾನ ಪಡೆಯಲು ಒಪ್ಪಂದ ಮಾಡಿಕೊಳ್ಳಲಿದ್ದಾರೆ.
ಅಮೆರಿಕ ಪ್ರವಾಸಕ್ಕೆ ಹೊರಡಲಿರುವ ಮನೋಹರ್ ಪರಿಕ್ಕರ್, ಪ್ರವಾಸದ ಸಂದರ್ಭದಲ್ಲಿ ಅಮೆರಿಕ ರಕ್ಷಣಾ ಸಚಿವ ಆ?ಯಷ್ಟನ್ ಕಾರ್ಟರ್ ರನ್ನು ಭೇಟಿ ಮಾಡಿ, ಈ ಬಗ್ಗೆ ಬೇಡಿಕೆ ಮುಂದಿಡಲಿದ್ದಾರೆ. ಉಭಯ ನಾಯಕರಿಗೆ ಇದು 6ನೇ ಭೇಟಿಯಾಗಿದ್ದು, ಈ ಹಿಂದೆಯೂ ಕೂಡ ಪರಿಕ್ಕರ್ ಡ್ರೋಣ್ ತಂತ್ರಜ್ಞಾನ ಪಡೆಯುವ ಕುರಿತು ಮಾತುಕತೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಪ್ರಸ್ತುತ ಪರಿಕ್ಕರ್ ಅವರ ಅಮೆರಿಕ ಪ್ರವಾಸ ಭಾರಿ ಕುತೂಹಲ ಮೂಡಿಸಿದ್ದು, ಪ್ರಸ್ತುತ ಪ್ರವಾಸದಲ್ಲಿ ಬಹು ನಿರೀಕ್ಷಿತ ಒಪ್ಪಂದಕ್ಕೆ ಪರಿಕ್ಕರ್ ತಾಕರ್ಿಕ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಒಪ್ಪಂದ ಸಂಬಂಧ ಉಭಯ ದೇಶಗಳ ಅಧಿಕಾರಿಗಳು ಕರಡನ್ನು ಕೂಡ ಸಿದ್ಧಪಡಿಸಿಕೊಂಡಿದ್ದು, ಉಭಯ ದೇಶಗಳ ನಾಯಕ ಸಹಿಯೊಂದೇ ಬಾಕಿ ಎಂದು ಹೇಳಲಾಗುತ್ತಿದೆ. ಪರಿಕ್ಕರ್ ಅಮೆರಿಕ ಪ್ರವಾಸದ ವೇಳೆ ಒಪ್ಪಂದ ಕುರಿತ ಪೂವರ್ಾಪರ ಚಚರ್ೆಗಳು ನಡೆಯಲಿದ್ದು, ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಅಮೆರಿಕದ ರಕ್ಷಣಾ ಸಚಿವ ಆ?ಯಷ್ಟನ್ ಕಾರ್ಟರ್ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅಧಿಕೃತವಾಗಿ ಈ ಬಹು ನಿರೀಕ್ಷಿತ ಒಪ್ಪಂದಕ್ಕೆ ಉಭಯ ನಾಯಕರು ಸಹಿ ಹಾಕಲಿದ್ದಾರೆ ಎನ್ನಲಾಗಿದೆ.
Discussion about this post