ಹುಬ್ಬಳ್ಳಿ, ಸೆ.2: ಮಹದಾಯಿ ನದಿ ಯೋಜನೆ ಕುರಿತಂತೆ ನ್ಯಾಯಾಧೀಕರಣ ಮೂರು ರಾಜ್ಯಗಳ ಸಿಎಂ ಸೇರಿ ಸಂಧಾನ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದು ಸ್ವಾಗತಾರ್ಹ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುತ್ಸದ್ದಿತನದಿಂದ ಮುಂದೆ ನಿಂತು ಸಮಸ್ಯೆಯನ್ನು ಪರಿಹರಿಸಬೇಕು.ಅದಕ್ಕೆ ಬಿಜೆಪಿಯಿಂದ ಸಂಪೂರ್ಣ ಬೆಂಬಲವಿದೆ ಎಂದು ಪ್ರತಿಪಕ್ಷದ ಮುಖಂಡ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಗದೀಶ ಶೆಟ್ಟರ್, ಮಹದಾಯಿ ನ್ಯಾಯಾಧೀಕರಣ ನೀಡಿರುವ ತೀರ್ಪು ಸ್ವಾಗತಾರ್ಹ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಧೀಕರಣದ ಸಲಹೆಯ ನಂತರ ಗೋವಾ ಸಿ.ಎಂ ಗೆ ಪತ್ರ ಬರೆಯುವೆ ಎಂದಿದ್ದಾರೆ. ಮುಖ್ಯಮಂತ್ರಿಗಳು ಪತ್ರ ಬರೆಯುವುದನ್ನು ಬಿಟ್ಟು ಗೋವಾ ಸಿ.ಎಂ ಜೊತೆ ನೇರವಾಗಿ ಮಾತನಾಡಲಿ. ಆಗ ನ್ಯಾಯಾಧೀಕರಣಕ್ಕೂ ಬೆಲೆ ಕೊಟ್ಟಂತಾಗುತ್ತೆ. ಮತ್ತು ಆ ಪ್ರಕ್ರಿಯೆಗೆ ಬಿಜೆಪಿಯು ಬೆಂಬಲ ನೀಡುತ್ತೆ ಸಲಹೆ ನೀಡಿದರು.
ಅಲ್ಲದೇ ಕೆಪಿಎಸ್ ಸಿ ಶ್ಯಾಂ ಭಟ್ ಅವರನ್ನು ನೇಮಕ ಮಾಡಿರುವುದು ತಪ್ಪು ಈ ಮುಂಚೆ ಕೆಪಿಎಸ್ ಸಿ ಗೆ ನೇಮಕಾತಿ ಸಂದರ್ಶನಕ್ಕೆ 1:3 ಅನುಪಾತ ಇತ್ತು. ಆದರೆ ಈಗ 1:5 ರ ಅನುಪಾತಕ್ಕೆ ಹೆಚ್ಚಿಸಲಾಗಿದೆ.ಇದರಿಂದ ಭ್ರಷ್ಟಾಚಾರ ಹೆಚ್ಚಾಗಲಿದೆ ಎಂದ ಅದಕ್ಕೆ ರಾಜ್ಯಪಾಲರು ಅಂಕಿತ ಹಾಕಿರುವುದು ತಪ್ಪೇ ಎಂದು ಹೇಳಿದರು. ಶ್ಯಾಂ ಭಟ್ ನೇಮಕಕ್ಕೆ ಸಂಬಂಧಿಸಿದಂತೆ ನಾವು ಮೊದಲು ಕಾನೂನು ಸಲಹೆ ಪಡೆಯುತ್ತೇವೆ ನಂತರ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.















