No Result
View All Result
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ
English Articles

Ramachandrapura Seer Hails PM Narendra Modi’s Leadership

by ಕಲ್ಪ ನ್ಯೂಸ್
June 10, 2026
0

Kalpa Media House  |  Honavar/Sagara  | Jagadguru Shankaracharya Sri Raghaveshwara Bharathi Mahaswamiji of Ramachandrapura Math has extended his congratulations to...

Read moreDetails
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು

18-Month-Old Girl Dies After Falling Into Water Tank in Bagalkot

June 9, 2026
2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

ILCAD 2026 Observed in Mysuru Division; SWR Promotes Level Crossing Safety

June 9, 2026
ಬೆಂಗಳೂರು–ತುಮಕೂರು ರೈಲು ಮಾರ್ಗದ ವಿದ್ಯುತ್ ವ್ಯವಸ್ಥೆ ಮೇಲ್ದರ್ಜೆಗೆ | ₹162.57 ಕೋಟಿ ಅನುಮೋದನೆ

Indian Railways Sanctions ₹162.57 Crore Upgrade for Bengaluru–Tumakuru Rail Section

June 9, 2026
  • Advertise With Us
  • Grievances
  • About Us
  • Contact Us
Thursday, June 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ವೈರಿಗಳನ್ನು ಜೈಲಿಗಟ್ಟುವುದು ಬಿಟ್ಟು ಬೇರೇನೂ ಹೊಳೆಯುವುದಿಲ್ಲವೇ ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 24, 2016
in Army
0
Share on FacebookShare on TwitterShare on WhatsApp
ಸಿದ್ದರಾಮಯ್ಯನ ಸಲಹೆಗಾರ ಎಂದು ಹೇಳಿಕೊಳ್ಳುವ ದಿನೇಶ್ ಅಮೀನ್ ಮಟ್ಟು ಎಂಬ ಈ ವ್ಯಕ್ತಿ ಮೊದಲಿಗೆ ಕನಕ ನಡೆಯನ್ನು ತಡೆಯಲು ದಲಿತರನ್ನು ಬಳಸಿಕೊಳ್ಳಲು ನೋಡಿದರು. ರಾಜ್ಯದಾದ್ಯಂತ ಯುವಾ ಬ್ರಿಗೇಡ್ ಮೇಲೆ ಅಟ್ರಾಸಿಟಿ ಕೇಸುಗಳನ್ನು ಹಾಕಿಸಿ ವೈರಿಗಳನ್ನು ಹೆಡೆಮುರಿಕಟ್ಟಿ ಠಾಣೆಗೆ ಒಗೆಯುವ ಪ್ಲ್ಯಾನ್ ಹಾಕಿದ್ದರು. ಆದರೆ ಈ ವ್ಯಕ್ತಿಯ ಸೀಕ್ರೇಟ್ ಗೇಮ್ ಪ್ಲ್ಯಾನ್, ಇವರದ್ದೇ ಉಡುಪಿ ಚಲೋ ವಾಟ್ಸಾಪ್ ಗ್ರೂಪ್‌ನ ಮೆಸೇಜುಗಳ ಮೂಲಕ ಬಟಾಬಯಲಾಯಿತು.
ತಮ್ಮ ಯೋಜನೆ ಹೊರಬಿದ್ದ ಮೇಲೆ ಮರ್ಯಾದೆ ಉಳಿಸಿಕೊಳ್ಳಲಿಕ್ಕಾಗಿ ಇವರೊಂದಷ್ಟು ಜನ ಹೋಗಿ ಪೊಲೀಸ್ ಮಹಾನಿರ್ದೇಶಕರಿಗೇ ದೂರು ಕೊಟ್ಟಂತೆ ಫೋಟೋ ಹೊಡೆಸಿಕೊಂಡರು. ದೂರು ಕೊಟ್ಟರೋ ಇಲ್ಲಾ ಯಾವುದಾದರೂ ಪ್ರೇಮಪತ್ರ ಬರೆದುಕೊಟ್ಟರೋ ದೇವರಿಗೇ ಗೊತ್ತು. ಯಾಕೆಂದರೆ ಇವರು ಕೊಟ್ಟ ದೂರಿಗೆ ಪೊಲೀಸ್ ಮಹಾನಿರ್ದೇಶಕರು ’ಅಕ್ನಾಲೆಡ್ಜ್ಮೆಂಟ್ ಕಾಪಿ’ ಏನೂ ಕೊಟ್ಟಿರಲಿಲ್ಲ!! ( ಹಾಗಾಗಿ ಇವರ ಹಾರಾಟ, ಓರಾಟಗಳೆಲ್ಲ ಕೇವಲ ದೊಂಬರಾಟ ಎಂಬುದು ನಮಗೆ ಅಂದೇ ಗೊತ್ತಿತ್ತು. ಅದನ್ನು ಬಾಯಿ ಬಿಟ್ಟು ಹೇಳದೆ ನಾವೆಲ್ಲ ಮುಸಿಮುಸಿ ನಕ್ಕಿದ್ದೆವು ಅಷ್ಟೆ 🙂
ಇವರದ್ದೇ ಸರ್ಕಾರ , ಇವರದ್ದೇ ಜನ ಇದ್ದ ಮೇಲೂ ಪೊಲೀಸ್  ಮೂಲಕ ಯುವಾ ಬ್ರಿಗೇಡ್  ಹಣಿಯಲು ಆಗಲಿಲ್ಲ ಅಂತಾದರೆ ಇವರ ದೂರುಗಳು ಎಷ್ಟು ಬಾಲಿಶವಾಗಿದ್ದವು ಎಂದು ಅರ್ಥ ಮಾಡಿಕೊಳ್ಳಬಹುದು. ಪೊಲೀಸ್ ಮೂಲಕ ಬಲಪ್ರದರ್ಶನ ಮಾಡಲು ಆಗದಿದ್ದ ಮೇಲೆ ಸಲಹೆಗಾರರು ಮುಂದಿನ ಹೆಜ್ಜೆಯಾಗಿ ಸ್ವಾಮೀಜಿಗೇ ಪ್ರೇಮಪತ್ರ ಬರೆಯಲು ಕೂತು ಬಿಟ್ಟರು. ಪತ್ರ ಕೊರಿಯರ್ ಆಗಿ ಸ್ವಾಮೀಜಿಗಳನ್ನು ತಲುಪಿದ್ದೂ ಆಯಿತು, ಸ್ವಾಮೀಜಿ ತತಕ್ಷಣ ಫೋನ್ ಎತ್ತಿಕೊಂಡು ಮಾತಾಡಿದ್ದೂ ಆಯಿತು, ಅದನ್ನೀತ ತನ್ನ ವಿಜಯಾ ದಿಗ್ವಿಜಯಾ ಅಂದುಕೊಂಡು ಫೇಸ್ಬುಕ್ಕಿನಲ್ಲಿ ಟಾಂ ಟಾಂ ಬಡಿದುಕೊಂಡದ್ದೂ ಆಯಿತು.
ಅಕ್ಟೋಬರ್  ೨೩ ಮುಗಿದಿದೆ. ಅಂದುಕೊಂಡಂತೆ ಕನಕ ನಡೆ ನಡೆದಿದೆ. ಸ್ವಾಭಿಮಾನಿಗಳ ಕೀಲು ಮುರಿದಿದೆ. ಈಗ ಈ ಸಲಹೆಗಾರರು ಗೆದ್ದದ್ದು ತನ್ನ ಭಂಡತನವಾ ಸ್ವಾಮೀಜಿಯ ಚಾಣಾಕ್ಷತೆಯಾ ಅಂತ ಆದ ಗಾಯಗಳನ್ನು ನೆಕ್ಕಿಕೊಳ್ಳುತ್ತ ಯೋಚಿಸುವುದು ಒಳ್ಳೆಯದು.ಬಾಯಿ ತೆಗೆದರೆ ತಾನು ಪೊಲೀಸ್ ವ್ಯವಸ್ಥೆಯನ್ನು ಬಳಸುತ್ತೇನೆ, ಸಿಕ್ಕಸಿಕ್ಕವರನ್ನು ಜೈಲಿಗೆ ಕಳಿಸುತ್ತೇನೆ, ವೈರಿಗಳಿಗೆಲ್ಲ ಶ್ರೀಕೃಷ್ಣನ ಜನ್ಮಸ್ಥಾನ ತೋರಿಸುತ್ತೇನೆ ಎಂದು ಹೇಳುವ ಈ ಸಲಹೆಗಾರ.  ಅಂದರೆ ಈತನಿಗೆ ತನ್ನ ವೈರಿಗಳನ್ನು ಜೈಲಿಗಟ್ಟುವುದು ಬಿಟ್ಟರೆ ಬೇರೆ ಯಾವ ಯೋಚನೆಯೂ ತಲೆಯಲ್ಲಿ ಮೊಳೆಯುವುದಿಲ್ಲ ಎಂದು ಕಾಣುತ್ತದೆ. ದಿನದ ಇಪ್ಪತ್ತನಾಲ್ಕು ತಾಸೂ ಈತ ಯೋಚಿಸುವುದು ವೈರಿಗಳನ್ನು ಹಣಿಯುವುದು ಹೇಗೆ ಎಂದಷ್ಟೇ.ಐಡಲ್ ಮೈಂಡ್ ಈಸ್ ಡೆವಿಲ್ಸ್ ವರ್ಕ್‌ಶಾಪ್  ಎನ್ನುತ್ತಾರೆ. ಅದಕ್ಕೊಂದು ಸಾಕ್ಷಾತ್ ಮೂರ್ತ ದೃಷ್ಟಾಂತ ಇದು.
ಈ ವ್ಯಕ್ತಿ ಮಾತು ಮಾತಿಗೆ ತನ್ನ ವೈರಿಗಳನ್ನು ಕಿಡಿಗೇಡಿ ಎಂದು ಸಂಬೋಧಿಸುವಾಗ ನಗೆ ಬರುತ್ತದೆ. ಇದೇನಾ ಈತನ ಸಂಸ್ಕೃತಿ!!! ಇನ್ನು ಮಠಕ್ಕೆ ಯಾರು ಬೇಕು, ಯಾರು ಬೇಡ ಎನ್ನುವುದು ಸ್ವಾಮೀಜಿಗಳಿಗೆ ಗೊತ್ತಿದೆ. ಯಾರನ್ನು ಸ್ವಾಗತಿಸಬೇಕು, ಯಾರನ್ನು ಒದ್ದು ಹೊರಹಾಕಬೇಕು ಎಂಬ ವಿವೇಚನೆಯೂ ಅವರಿಗಿದೆ. ಮಠದಲ್ಲಿ ಏನೇ ಆದರೂ ಅದರಿಂದ ಈ ಸಲಹೆಗಾರನಿಗೆ ಆಗುವ ಲಾಭ ಅಥವಾ ನಷ್ಟ ಏನು? ಹಿಂದೂ ದೇವಸ್ಥಾನ, ಮಠಗಳ ವ್ಯವಸ್ಥೆಯನ್ನೇ ಧಿಕ್ಕರಿಸಿ ನಡೆದ ನಾರಾಯಣ ಗುರುಗಳ ಈ ಪರಮ ಭಕ್ತ ಹಗಲೂ ರಾತ್ರಿ ಕೃಷ್ಣಮಠದ ಭಜನೆಯನ್ನು ಕನಕದಾಸರಿಗಿಂತ ಹೆಚ್ಚಾಗಿ ಮಾಡುತ್ತಿರುವುದು ಏಕೆ?  ಈತನಿಗೆ ಸಲಹೆಗಾರನ ಹುದ್ದೆ ಬಿಟ್ಟು ಕಾವಿಯುಟ್ಟು ಮಠದ ಸ್ವಾಮಿಯಾಗಿ ದೀಕ್ಷೆ ಪಡೆಯುವ ಆಸೆ ಇದೆಯೇ? ಹಾಗೇನಾದರೂ ಆಗಿಯೇ ಬಿಟ್ಟರೆ, ಮುಂಜಾನೆ ಮೂರಕ್ಕೆ ಎದ್ದು ಪ್ರಾತಃ ವಿಧಿಗಳನ್ನು ಮುಗಿಸಿ ವೇದಾಧ್ಯಯನ ಮಾಡುವ, ಚಾಪೆಯಲ್ಲಿ ಮಲಗುವ, ಮರದ ಚಪ್ಪಲಿ ಧರಿಸುವ, ಉಪ್ಪು ಖಾರಗಳಿಲ್ಲದ ಹಕ್ಕಿಯೂಟ ಮಾಡುವ, ಮಧ್ವಸರೋವರದಲ್ಲಿ ದಿನಕ್ಕೆ ಮೂರು ಬಾರಿ ಮುಳುಗು ಹಾಕುವ ದಿನೇಶ್ ಅಮೀನ್‌ರನ್ನು ನೋಡಲು ನಾನಂತೂ ಆಸೆಪಡುತ್ತೇನೆ. ಅವರನ್ನು ಅನುಸರಿಸಿ ಅವರ ಲಕ್ಷೋಪಲಕ್ಷ ಅನುಯಾಯಿಗಳು ಶ್ರೀಕೃಷ್ಣಮಠದ ಭಕ್ತರಾದರೆ ಅದಕ್ಕಿಂತ ಸಂತೋಷ ಮತ್ತು ಲಾಭವೇನಿದೆ!
ಅಂದ ಹಾಗೆ, ಧರ್ಮದ ಹೆಸರು ಹೇಳಿಕೊಂಡು ಹೊಟ್ಟೆ ಹೊರೆಯುವವರಿಂದಲೇ ದೇಶ ಮಲಿನವಾಗಿರುವುದು ಎಂದು ಈ ಬೃಹಸ್ಪತಿಯ ಮತ್ತೊಂದು ಹೇಳಿಕೆ. ಈ ಮಾತು ಮಾತ್ರ ಸತ್ಯ. ಯಾಕೆಂದರೆ ಇಂದು ಧರ್ಮದ ಹೆಸರು ಹೇಳಿಕೊಂಡು ಹೊಟ್ಟೆ ಹೊರೆಯುತ್ತಿರುವವರು ಈ ಆಸಾಮಿಯಂಥ ಬುದ್ಧಿಜೀವಿಗಳಲ್ಲದೆ ಬೇರ್ಯಾರೂ ಅಲ್ಲ! ನಿಜವಾದ ಭಕ್ತರಿಗೆ, ಆಸ್ತಿಕರಿಗೆ, ಬಲಪಂಥೀಯರಿಗೆ ಧರ್ಮ, ದೇವರು ಇತ್ಯಾದಿ ಒಂದು ಚರ್ಚೆಯ ವಿಷಯವೇ ಅಲ್ಲ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಧರ್ಮದ ಚರ್ಚೆ ನಡೆಸುತ್ತಿರುವವರು ಎಡಪಂಥೀಯರು, ಬುದ್ದಿಜೀವಿಗಳು ಮತ್ತು ದಿನೇಶ್ ತರದ ಎಡಬಿಡಂಗಿ ವಿಚಾರವಾದಿಗಳು ಮಾತ್ರ. ಹೀಗೆ ಧರ್ಮವನ್ನು ಹೊರಗಿನಿಂದ ಕೂತು ಚರ್ಚಿಸುವ ಬದಲು ಅವರು ಸನಾತನ ಧರ್ಮವನ್ನು ಒಪ್ಪಿಕೊಂಡು, ತನ್ನದೆಲ್ಲವನ್ನೂ ಕಳಚಿ ಅಪ್ಪಟ ಭಕ್ತರಾಗಲಿ. (ತನ್ನಲ್ಲಿ ಈಗಿರುವ ಎಲ್ಲವನ್ನೂ ಕಳಚಿದರೆ ಮಾತ್ರ ಸ್ವಾಮೀಜಿಯ ಜೊತೆ ನಿಲ್ಲುವ ಯೋಗ್ಯತೆ ಬರುತ್ತದೆ ಎಂಬ ಜ್ಞಾನೋದಯವಾದರೂ ಅವರಿಗೆ ಆಗಿರುವುದರಿಂದ, ದೀಕ್ಷೆ ಪಡೆಯುವ ದಾರಿಯಲ್ಲಿ ಮೊದಲ ಮೆಟ್ಟಿಲು ಹತ್ತಿದ್ದಾರೆ ಎಂದು ಭಾವಿಸಬಹುದು)
 
ಹಿಂದೂ ದೇವಸ್ಥಾನ, ಮಠಗಳ ವ್ಯವಸ್ಥೆಯನ್ನೇ ಧಿಕ್ಕರಿಸಿ ನಡೆದ ನಾರಾಯಣ ಗುರುಗಳ ಈ ಪರಮ ಭಕ್ತ ಹಗಲೂ ರಾತ್ರಿ ಕೃಷ್ಣಮಠದ ಭಜನೆಯನ್ನು ಕನಕದಾಸರಿಗಿಂತ ಹೆಚ್ಚಾಗಿ ಮಾಡುತ್ತಿರುವುದು ಏಕೆ?  ಈತನಿಗೆ ಸಲಹೆಗಾರನ ಹುದ್ದೆ ಬಿಟ್ಟು ಕಾವಿಯುಟ್ಟು ಮಠದ ಸ್ವಾಮಿಯಾಗಿ ದೀಕ್ಷೆ ಪಡೆಯುವ ಆಸೆ ಇದೆಯೇ? ಹಾಗೇನಾದರೂ ಆಗಿಯೇ ಬಿಟ್ಟರೆ, ಮುಂಜಾನೆ ಮೂರಕ್ಕೆ ಎದ್ದು ಪ್ರಾತಃ ವಿಧಿಗಳನ್ನು ಮುಗಿಸಿ ವೇದಾಧ್ಯಯನ ಮಾಡುವ, ಚಾಪೆಯಲ್ಲಿ ಮಲಗುವ, ಮರದ ಚಪ್ಪಲಿ ಧರಿಸುವ, ಉಪ್ಪು ಖಾರಗಳಿಲ್ಲದ ಹಕ್ಕಿಯೂಟ ಮಾಡುವ, ಮಧ್ವಸರೋವರದಲ್ಲಿ ದಿನಕ್ಕೆ ಮೂರು ಬಾರಿ ಮುಳುಗು ಹಾಕುವ ದಿನೇಶ್ ಅಮೀನ್‌ರನ್ನು ನೋಡಲು ನಾನಂತೂ ಆಸೆಪಡುತ್ತೇನೆ. ಅವರನ್ನು ಅನುಸರಿಸಿ ಅವರ ಲಕ್ಷೋಪಲಕ್ಷ ಅನುಯಾಯಿಗಳು ಶ್ರೀಕೃಷ್ಣಮಠದ ಭಕ್ತರಾದರೆ ಅದಕ್ಕಿಂತ ಸಂತೋಷ ಮತ್ತು ಲಾಭವೇನಿದೆ!
Share196Tweet123Send
Previous Post

ವಿಧಾನಸೌಧದಲ್ಲಿ ಹಣ ಜಪ್ತಿ ವಿಚಾರ ಬಿಎಸ್‌ವೈಗೆ ತಿಳಿದಿದೆ: ಎಚ್‌ಡಿಕೆ

Next Post

ಹುಬ್ಬಳ್ಳಿ-ಮೈಸೂರು ಇಂಟರ್‌ಸಿಟಿ ರೈಲು ಜಪ್ತಿ!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಹುಬ್ಬಳ್ಳಿ-ಮೈಸೂರು ಇಂಟರ್‌ಸಿಟಿ ರೈಲು ಜಪ್ತಿ!

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಗಮನಿಸಿ! ಜ.21-22ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

ಗಮನಿಸಿ! ಜೂ.12ರಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 11, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಮೈಸೂರು–ಮದಾರ್ ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್‌ಗೆ ಎರಡು ಹೆಚ್ಚುವರಿ ಟ್ರಿಪ್‌ಗಳ ವಿಸ್ತರಣೆ

June 11, 2026
SWR to run special trains for Good Friday, Easter rush

ಬೆಂಗಳೂರು, ಹುಬ್ಬಳ್ಳಿ, ಚೆನ್ನೈ  ಸೇರಿದಂತೆ ಒಟ್ಟು 25 ರೈಲುಗಳ ಬಿಗ್ ಅಪ್ಡೇಟ್ ಇಲ್ಲಿದೆ

June 11, 2026
ಹೊಸನಗರದಲ್ಲಿ ಎರಡು ಕಳ್ಳತನ ಪ್ರಕರಣ: ಭದ್ರಾವತಿಯ ಯುವಕ ಬಂಧನ

ಹೊಸನಗರದಲ್ಲಿ ಎರಡು ಕಳ್ಳತನ ಪ್ರಕರಣ: ಭದ್ರಾವತಿಯ ಯುವಕ ಬಂಧನ

June 11, 2026
ಎಸ್‌ಎಸ್‌ಎಲ್‌ಸಿ ಉತ್ತರಪತ್ರಿಕೆ ಮೌಲ್ಯಮಾಪನ ಮರುಪರೀಶಿಲನಾ ಅರ್ಜಿ ವಜಾ

ಚೆಕ್ ಬೌನ್ಸ್ ಪ್ರಕರಣ: 2 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ಸಾಧ್ಯವಿಲ್ಲ: ಹೈಕೋರ್ಟ್ ಸ್ಪಷ್ಟನೆ

June 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL