Read - < 1 minute
ನವದೆಹಲಿ, ಸೆ.7: ಭಾರತದಲ್ಲಿ ಪೆಟ್ರೋಲ್ ಗೆ ಪರ್ಯಾಯವಾದ ಇಂಧನ ಬಳಕೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದ್ದು, ಶೀಘ್ರದಲ್ಲೇ ಪೆಟ್ರೋಲ್ ಆಮದು ರಹಿತ ದೇಶವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ನೀತಿ ಆಯೋಗ ಏರ್ಪಡಿಸಿದ್ದ ಮಿಥೆನಾಲ್ ಆರ್ಥಿಕತೆ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ನಿತಿನ್ ಗಡ್ಕರಿ, ಭಾರತದಲ್ಲಿ ಪೆಟ್ರೋಲ್ ಗೆ ಪರ್ಯಾಯವಾದ ಇಂಧನ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸಕರ್ಾರ ಗಂಭೀರ ಕ್ರಮ ಕೈಗೊಳ್ಳುತ್ತಿದೆ. ಆ ಮೂಲಕ ಭಾರತ ಶೀಘ್ರದಲ್ಲಿಯೇ ಶೂನ್ಯ ಪೆಟ್ರೋಲ್ ಆಮದು ದೇಶವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ದೇಶದಲ್ಲಿ ಪೆಟ್ರೋಲ್ ಗೆ ಪರ್ಯಾಯ ಇಂಧನಗಳಾಗಿರುವ ಎಥೆನಾಲ್, ಮಿಥೆನಾಲ್ ಹಾಗೂ ಸಿಎನ್ ಜಿ ಬಳಕೆ ಕುರಿತು ಜಾಗೃತಿ ನಡೆಸಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು, ಇದು ಗ್ರಾಮೀಣ ಹಾಗೂ ಕೃಷಿಕ ಕ್ಷೇತ್ರದಲ್ಲಿ ವ್ಯಾಪಕ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ ಎಂದು ತಿಳಿಸಿದರು.
ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಅಗ್ಗದ ದರದಲ್ಲಿ ಮಾರಾಟವಾಗುತ್ತಿದ್ದರೂ ಭಾರತ ವಾರ್ಷಿಕ ಸುಮಾರು 7.5 ಲಕ್ಷ ಕೋಟಿ ಹಣವನ್ನು ಪೆಟ್ರೋಲಿಯಂಗಾಗಿ ಖರ್ಚು ಮಾಡುತ್ತಿತ್ತು. ಆದರೆ ಈ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಇಳಿಕೆಯಾಗಿದ್ದು, ಭಾರತ ಪ್ರಸ್ತುತ ಪೆಟ್ರೋಲಿಯಂಗಾಗಿ ಕೇವಲ 4.5 ಲಕ್ಷ ಕೋಟಿ ಹಣವನ್ನು ವ್ಯಯಿಸುತ್ತಿದೆ. ಈ ಪ್ರಮಾಣವನ್ನು ಶೂನ್ಯಕ್ಕೆ ತರುವುದು ಸಕರ್ಾರದ ಗುರಿಯಾಗಿದೆ ಎಂದು ಗಡ್ಕರಿ ಹೇಳಿದರು.
Discussion about this post