ಸಹ ಪಂಕ್ತಿ ಭೋಜನ ಯಾಕೆ ಬೇಡ? ಎಂಬುದಕ್ಕೆ ಇಲ್ಲಿದೆ ತಾತ್ವಿಕ ಸಿದ್ಧಾಂತ.
ಜನರಿಗೆ ತಾತ್ವಿಕತೆಯನ್ನು ತಿಳಿಸಲರಿಯದವರು ಜನರನ್ನು ಸಂಘಟಿಸಿ ಮೋಸಮಾಡುವುದಕ್ಕೇ ಸಹಪಂಕ್ತಿ ಬೇಡ ಅಂದಿದ್ದು. ನಾವೂ ಮನುಷ್ಯರಲ್ಲವೇ ಎಂದು ಹೇಳುವುದಕ್ಕೇ ಇವರ ಬುದ್ಧಿ ಸಿಮಿತವಾಗಿದೆಯಷ್ಟೇ ಹೊರತು ಮನುಷ್ಯತ್ವ ಎಂದರೇನು ಎಂಬುದು ಇವರಿಗೆ ಗೊತ್ತಿಲ್ಲ.
ಪೇಜಾವರ ಶ್ರೀಗಳಿಗೆ ಚಕ್ರವರ್ತಿ ಸೂಲಿಬೆಲೆ ಬುದ್ಧಿ ಹೇಳಬೇಕು ಎನ್ನುವ ‘ಬೋಳುಮಂಡೆ’ ಗೆ ಪೇಜಾವರ ಶ್ರೀಗಳ ಹೆಸರು ಹೇಳುವ ಯೋಗ್ಯತೆ ಇದೆಯೇ? ಮನುಷ್ಯತ್ವ ಇದ್ದವರು ಈ ರೀತಿ ಹೇಳಲಾರರು. ಭೋಜನ ನೀಡುವವರ ಚಪ್ಪಲಿ ಹೊರುವ ಈ ಸ್ವಾಭಿಮಾನವಿಲ್ಲದವರ ಸಹಪಂಕ್ತಿ ಬೇಡಿಕೆಗೆ ನಾವು ಕವಡೆ ಕಿಮ್ಮತ್ತೂ ಕೊಡುವುದಿಲ್ಲ.ಅಥವಾ ಕೊಡುವುದಕ್ಕೂ ಯಾವುದೇ ತಾತ್ವಿಕತೆಗಳೂ ಇಲ್ಲ.
‘ ಬ್ರಾಹ್ಮಣೋ ಭೋಜನ ಪ್ರಿಯ ‘ ಈ ವಾಕ್ಯಕ್ಕೆ ಸಾಕಷ್ಟು ಅರ್ಥವೂ ಇದೆ,ಒಂದೇ ವಾಕ್ಯದ ವ್ಯಂಗ್ಯಾರ್ಥವೂ ಇದೆ. ಊಟ ಎಂದರೆ ಬ್ರಾಹ್ಮಣ ಜೀವ ಬಿಡುತ್ತಾನೆ.ಬ್ರಾಹ್ಮಣ ಊಟ ಪ್ರಿಯ ಎಂದು ಕ್ಷಣದಲ್ಲಿ ವ್ಯಂಗ್ಯವಾಗಿ ಹೇಳಬಹುದು.ಹೀಗೆ ಹೇಳುವವರಿಗೆ ಬುದ್ಧಿಯೂ ಅಷ್ಟೆ. ನಿಜವಾದ ವಿವರಣೆಯೇ ಬೇರೆ. ಬೇರೆ ಬ್ರಾಹ್ಮಣೇತರರಿಗೆ ಹೊಟ್ಟೆ ಇಲ್ಲವೇ? ಹಸಿವಿಲ್ಲವೇ? ಭೋಜನಾಸಕ್ತಿ ಇಲ್ಲವೇ? ಆದಾಗ್ಯೂ ಬ್ರಾಹ್ಮಣ ಪದದ ಅರ್ಥ ಏನು? ಭೋಜನದ ಅರ್ಥವೇನು? ಇಂತಹ ವಿಮರ್ಷೆ ಮಾಡಲು ಅರಿಯದವರು ಬ್ರಾಹ್ಮಣ ಊಟ ಪ್ರಿಯ ಎನ್ನುತ್ತಾರೆ.
ಸಾಮಾನ್ಯರಲ್ಲಿ ನೀವು ,’ಯಾಕೆ ಊಟಮಾಡುವಿರಿ?’ ಎಂದು ಕೇಳಿನೋಡಿ. ಬಹು ಸುಲಭವಾದ ಎಲ್ಲರಿಗೂ ತಿಳಿದಿರುವ ಉತ್ತರ ಎಂದರೆ ‘ ಹಸಿವಾಗುತ್ತದೆ. ಅದಕ್ಕಾಗಿ ಊಟ ಮಾಡುತ್ತೇವೆ’ಎನ್ನುತ್ತಾರೆ. ಇನ್ನು ರಸ್ತೆಯ ಕುರುಕುರು ತಂಡಿಪೋತರಲ್ಲಿ ‘ ಯಾಕೆ ತಿನ್ನುತ್ತೀರಿ’ ಎಂದರೆ ಕೆಲವರು ನನಗಿಷ್ಟ, ಇನ್ನುಕೆಲವರು ಹಸಿವಾಯ್ತು, ಮತ್ತೆ ಕೆಲವರು just time pass ಎಂದೆಲ್ಲ ಹೇಳಬಹುದು.ಆದರೆ ಇಂತಹ ಉತ್ತರ ಕೊಡುವವರಿಗೆ ಊಟದ ಮಹತ್ವವೇ ತಿಳಿದಿರುವುದಿಲ್ಲ.
ಯಾರು ಬ್ರಹ್ಮ ಜ್ಞಾನಿಯೋ ಅವನು ಬ್ರಾಹ್ಮಣ. ಅವನಿಗೆ ಆಹಾರ ಸೇವನೆಯ ನಿಯಮ, ಆಹಾರದ ಮಹತ್ವ ತಿಳಿದಿರುವುದರಿಂದ ಬ್ರಾಹ್ಮಣೋ ಭೋಜನ ಪ್ರಿಯ ಎಂದರು. ಹೊಟ್ಟೆ ಬಾಕರಾದುದಕ್ಕೆ ಭೋಜನ ಪ್ರಿಯ ಎಂಬ ಮಾತು ಸರಿಯಾಗಲಾರದು. ಅಂತವರಿಗೆ ಭೋಜನ ಮುಕ್ಕುವವರು ಎನ್ನಬಹುದು.
ನಾವು ಸೇವಿಸುವ ಆಹಾರದಲ್ಲಿ 108 ವಿಧಗಳ ಖನಿಜಾಂಶಗಳು ( elements ) ಇವೆ. ಇದನ್ನು ಆ ರೀತಿಯ ಖಾದ್ಯಾದಿಗಳ ಮೂಲಕ ಸೇವಿಸಿದರೆ ಮಾತ್ರ ಪ್ರಾಪ್ತಿಯಾದೀತು. ಆಧನಿಕ ವಿಜ್ಞಾನವು ಕೇವಲ ತೊಂಭತ್ತೆಂಟು ಮಾತ್ರ ಕಂಡುಹಿಡಿದಿದೆ.ಭಾರತೀಯ ಪುರಾತನ ಶಾಸ್ತ್ರಗಳು ಇದನ್ನು ಹೇಳಿದೆ. ಇದನ್ನು ದ್ವಾದಶ ರಾಶಿಗಳ ನೂರೆಂಟು ಅಂಶಗಳೂ ಸೂಚಿಸಿವೆ.
ನಾವು ತುಂಬಿಸುವ ಆಹಾರಗಳು ಜಠರಕ್ಕಿರಬಹುದು. ಆದರೆ ಅಲ್ಲಿಂದ ಯಾವ ಅಂಶಗಳು ಯಾವ ಭಾಗಕ್ಕೆ ಹೋಗುತ್ತದೆ ಎಂಬುದು ಯಾರಿಗಾದರೂ ತಿಳಿದಿದೆಯೇ. ಇದುವೇ ಪ್ರಕೃತಿ.ಅದಕ್ಕಾಗಿ ಭೋಜನಕ್ಕೊಂದು system ಮಾಡಿದರು. ಆ ನಿಯಮಕ್ಕೆ ಬದ್ಧರಲ್ಲದವರು ಬೇರೆ ಪಂಕ್ತಿಗೆ ಹೋದರು. ಹೇಗೆ ಒಂದು ಭಜನಾ ಕಾರ್ಯಕ್ರಮದಲ್ಲಿ ಭಜನೆ ಗೊತ್ತಿದ್ದವರು,ರಾಗ ತಾಳ ತಿಳಿದವರು ಭಜನಾಕಾರರ ಜತೆಗೆ ಕುಳಿತು ಭಜನೆ ಹಾಡುತ್ತಾರೋ, ತಿಳಿಯದವರು ದೂರದಲ್ಲಿ ಕುಳಿತು ಭಜನೆ ಶ್ರವಣ ಮಾಡುತ್ತಾರೋ ಹಾಗೆಯೇ ಭೋಜನಾ ನಿಯಮ ಪಾಲಕರು ಒಂದೆಡೆ,ನಿಯಮ ತಿಳಿಯದವರು ಇನ್ನೊಂದೆಡೆ ಹೊಟ್ಟೆ ತುಂಬಿಸುವರು. ಆದರೆ ಈಗ ಅದು ಜಾತಿಯ ವಿಚಾರವಾಗಿ ಪಂಕ್ತಿಬೇಧವಾಗಿದೆ. ಹಾಗೆಂದು ಎಲ್ಲಾ ಬ್ರಾಹ್ಮಣರೂ ಭೋಜನಾ ನಿಯಮ ಪಾಲಿಸುತ್ತಾರೆ ಎಂದು ವಾದ ಮಾಡುವುದಿಲ್ಲ. ಆದರೂ ಈ ಬ್ರಾಹ್ಮಣರಿಗೆ ಈ ಸಂಸ್ಕಾರದ ಪಾಠಗಳಿವೆ. ಎಲ್ಲರೂ ಪಾಠವನ್ನು ಅನುಷ್ಟಾನಿಸಿಕೊಂಡಿದ್ದಾರೆ ಎಂದೂ ಹೇಳುತ್ತಿಲ್ಲ. ಇದನ್ನು ತಿಳಿಯುವುದು ಒಂದು ವರ್ಗದ ಮೇಲಿಟ್ಟಿರುವ ನಂಬಿಕೆಯಿಂದ ಮಾತ್ರ. ಅಗ್ನಿಮುಖೇನ ದ್ವಿಜತ್ವ( ಉಪನಯನ) ಪಡೆದು ನಂತರ ಇತರ ವಿದ್ಯಾಭ್ಯಸಗಳೊಡನೆ ಭೋಜನಾ ನಿಯಮವನ್ನೂ ತಿಳಿದುಕೊಳ್ಳಬೇಕು.ಇದು ಪ್ರಕೃತಿದತ್ತವಾದ ವೇದೋಕ್ತ ಸಿದ್ಧಾಂತ.ಅಂತಹ ಭೋಜನಾನಿಯಮದ ಪಂಕ್ತಿಯಲ್ಲಿ, ಇಂತಹ ಅರ್ಹತೆಯ certificate ಪಡೆದವರು ಕುಳಿತುಕೊಳ್ಳಬಹುದು. ಸಹ ಪಂಕ್ತಿ ಆಗಬೇಕು ಎಂದು ತಕರಾರು ಎಬ್ಬಿಸುವ ಮಂದಿಯು ಯಾಕೆ ಈ ಜನರಿಗೆ ಭೋಜನದ ಮಹತ್ವ ತಿಳಿಸುವುದಿಲ್ಲ? ಅವರಿಗೆ ತಿನ್ನುವುದು ಬಿಟ್ಟರೆ ತರಲೆ ಮಾಡುವುದು ಮಾತ್ರವೇ ಗೊತ್ತು.
ವೇದ ವಿಚಾರ ಬಿಡಿ.ದಾಸರ ಹಾಡಿನ ಅರ್ಥ ಎಷ್ಟುಜನರಿಗೆ ತಿಳಿದಿದೆ?
ಒಂದು ಹೊತ್ತು ಉಂಬವ ಯೋಗಿ
ಎರಡು ಹೊತ್ತು ತಿಂಬವ ಭೋಗಿ
ಮೂರು ಹೊತ್ತು ಉಂಬವ ರೋಗಿ
ಆಗಾಗ ತಿಂಬವನ ಹೊತ್ತುಕೊಂಡು ಹೋಗಿ
ಎಂದರು ದಾಸರು.
ಈಗ ಆಗಾಗ ಕಂಡಕಂಡಲ್ಲಿ ತಿಂಬವರೇ ಹೆಚ್ಚು. ಇಂತವರನ್ನೇ ಹೊತ್ತುಕೊಂಡು ಬಂದು ಸಹಪಂಕ್ತಿ ಗಲಭೆ ಮಾಡುವರು.
ನಿಯಮಾನಿಯಮ ಇಲ್ಲದವರೆಲ್ಲಾ ಸಹಪಂಕ್ತಿಯಲ್ಲಿ ಕುಳಿತರೆ ಏನಾದೀತು? ಎಲ್ಲರೂ ರೋಗಿಗಳಾಗಿ ಹೊತ್ತುಕೊಂಡು ಹೋಗುವವರೇ ಇಲ್ಲವೆಂದಾದೀತು.
ಹಾಗಾಗಿ ಊಟಕ್ಕೊಂದು ತಕರಾರು ಮಾಡಬೇಡಿ.ಅವರವರು ಅವರವರ ಇಷ್ಟದವರೊಡನೆ ನೆಮ್ಮದಿಯಲ್ಲಿ ಊಟಮಾಡಲು ಬಿಡಿ. ಇದುವೇ ಪ್ರಕೃತಿ ಧರ್ಮ.
Discussion about this post