ಹೊಸದಿಲ್ಲಿ, ಆ.29: ಮಹಿಳಾ ಕ್ರೀಡಾಪಟುಗಳಿಗೆ ಇಂದು ಸಂಭ್ರಮದ ದಿನವಾಗಿತ್ತು. ಒಲಿಂಪಿಕ್ಸ್ ಸ್ಟಾರ್ಗಳಾದ ಪಿ.ವಿ.ಸಿಂಧು, ಸಾಕ್ಷಿ ಮಲಿಕ್ ಮತ್ತು ದೀಪಾ ಕರ್ಮಾಕರ್ ಕ್ರೀಡೆಯ ಪ್ರತಿಷ್ಠಿತ ಪ್ರಶಸ್ತಿಗಳಲೊಂದಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದು ಸಂಭ್ರಮಿಸಿದರು. ಇವರೊಂದಿಗೆ ಅಗ್ರ ಶೂಟರ್ ಜೀತು ರಾಯ್ ಕೂಡ ಪ್ರಸ್ತಿಗೆ ಭಾಜನರಾದರು.
ರಾಷ್ಟ್ರಿಯ ಕ್ರೀಡಾ ಇತಿಹಾಸದಲ್ಲಿ ಇದೇ ಮಾದಲ ಬಾರಿಗೆ ನಾಲ್ಕು ಅಥ್ಲೀಟ್ಗಳಿಗೆ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರಲ್ಲಿ ಮೂವರು ಮಹಿಳೆಯರು ಪ್ರಶಸ್ತಿ ಪಡೆದುಕೊಂಡಿರುವುದು ವಿಶೇಷವಾಗಿದೆ.
2009ರಲ್ಲಿ ಮೂರು ಅಥ್ಲೀಟ್ಗಳಾದ ಬಾಕ್ಸರ್ ವಿಜೇಂದರ್ ಸಿಂಗ್, ಮೇರಿ ಕೋಮ್ ಮತ್ತು ಕುಸ್ತಿ ಪಟು ಸುಶೀಲ್ ಕುಮಾರ್ ಖೇಲ್ ರತ್ನ ನೀಡಿ ಗೌರವಿಸಲಾಗಿತ್ತು.
ಬ್ಯಾಡ್ಮಿಂಟನ್ ಆಟಗಾತರ್ಿ ಪಿವಿ.ಸಿಂಧು, ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಹೊಸ ಇತಿಹಾಸ ಬರೆದರು. ಕುಸ್ತಿ ಪಟು ಸಾಕ್ಷಿ ಮಲಿಕ್ ಕಂಚಿನ ಪದಕ ಪಡೆದರು. ಜಿಮ್ನಾಸ್ಟ್ನಲ್ಲಿ ದೀಪಾ ಕಮರ್ಾಕಾರ್ ನಾಲ್ಕನೆ ಸ್ಥಾನ ಪಡೆದು ವಿಶ್ದ ಗಮನಸೆಳೆದಿದ್ದಾರೆ.
ಶೂಟರ್ ಜೀತು ರಾಯ್ ಕಳೆದ ಎರಡು ವರ್ಷಗಳಿಂದ ಶೂಟಿಂಗ್ನಲ್ಲಿ ಪದಕಗಳನ್ನು ಗೆಲ್ಲುತ್ತಾ ಬಂದಿದ್ದಾರೆ. ಏಷ್ಯನ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದು ಮಿಂಚಿದ್ದಾರೆ. ವಲ್ಡರ್್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ನಾಲ್ವರು ಅಥ್ಲೀಟ್ಗಳು ರಾಷ್ಟ್ರಪತಿ ಪ್ರಣಬ್ ಮುಖಜರ್ಿ ಅವರಿಂದ ಖೇಲ್ ರತ್ನ ಪಡೆಯುವಾಗ ನೆರೆದಿದ್ದ ಜನರಿಂದ ಭಾರೀ ಚಪ್ಪಾಳೆ ಪಡೆದು ಪ್ರಶಂಸೆಗೆ ಪಾತ್ರರಾದರು. ಪ್ರಶಸ್ತಿ ಪುರಸ್ಕೃತರಿಗೆ ತಲಾ 7.5ಲಕ್ಷ ರೂ., ಸಟರ್ಿಫಿಕೇಟ್ ಮತ್ತು ಮೆಡಲ್ ನೀಡಿ ಸನ್ಮಾನಿಸಲಾಯಿತು.
15 ಕ್ರೀಡಾಪಟುಗಳು ಅಜರ್ುನ ಪ್ರಶಸ್ತಿ ಸ್ವೀಕರಿಸಿದರು. ಇವರಿಗೆ ತಲಾ 5 ಲಕ್ಷರೂ. ಹಣ ನೀಡಲಾಯಿತು.
ರಿಯೊದ 3 ಸಾವಿರ ಸ್ಟೀಪಲ್ ಚೇಸ್ನಲ್ಲಿ 10ನೇ ಸ್ಥಾನ ಪಡೆದ ದೂರದ ಓಟಗಾತರ್ಿ ಲಲಿತಾ ಬಾಬರ್, ಬಾಕ್ಸರ್ ಶಿವ ಥಾಪ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ಪಡೆದ ಅಥ್ಲೀಟ್ಗಳಾಗಿದ್ದಾರೆ. ಕನ್ನಡಿಗ ವಿ.ಆರ್.ರಘುನಾಥ್ ಮತ್ತು ಹಾಕಿ ಆಟಗಾತರ್ಿ ರಾಣಿ ರಾಮ್ಪಾಲ್ ಅಜರ್ುನ ಪ್ರಶಸ್ತಿ ಪಡೆದ ಕ್ರೀಡಾಪಟುಗಳಾಗಿದ್ದಾರೆ.
ಕ್ರಿಕೆಟಿಗ ಅಜಿಂಕ್ಯ ರಹಾನೆ ಟಿ20 ಪಂದ್ಯ ಆಡುತ್ತಿರುವುದರಿಂದ ಪ್ರಶಸ್ತಿ ಸಮಾರಂಭಕ್ಕೆ ಗೈರು ಹಾಜರಿಯಾಗಿದ್ದರು.
ಜಾವಲಿನ್ ಅಥ್ಲೀಟ್ ನೀರಜ್ ಚೋಪ್ರಾ ಅಂಡರ್ 20 ವಲ್ಡರ್್ ಚಾಂಪಿಯನ್ಶಿಪ್ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಆಗಿದ್ದಾರೆ. ಇವರು ಅಜರ್ುನಾ ಪ್ರಶಸ್ತಿ ಪಡೆದರು.
ಗೋಲ್ ಕೀಪರ್ ಸುಬ್ರಾತಾ ಪೌಲ್ ಅಜರ್ುನಾ ಪ್ರಶಸ್ತಿ ಪಡೆದ ಏಕೈಕ ಫುಟ್ಬಾಲ್ ಆಟಗಾರರಾಗಿದ್ದಾರೆ. ಇವರಲ್ಲಿ ಶೂಟರ್ ಅಪೂವರ್ಿ ಚಾಂಡಿಲಾ ಮತ್ತು ವಿನೀಶ್ ಪೋಗಟ್ ಕೂಟ ಒಬ್ಬರಾಗಿದ್ದಾರೆ.
ದೇಶದ ಆರು ಅಗ್ರ ತರಬೇತುದಾರರು ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿ ಪಡೆದರು. ಇವರಲ್ಲಿ ಜಿಮ್ನಾಸ್ಟ್ ದೀಪಾ ಕಮರ್ಾಕರ್ ಅವರ ತರಬೇತುದಾರ ಬಿಶ್ವೇಶ್ವರ್ ನಂದಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ತರಬೇತುದಾರ ರಾಜ್ ಕುಮಾರ್ ಶಮರ್ಾ ಕೂಡ ಸೇರಿದ್ದಾರೆ.
Discussion about this post