No Result
View All Result
PESITM hosts Mock CET 2026 to Strengthen KCET Preparation
English Articles

PESITM hosts Mock CET 2026 to Strengthen KCET Preparation

by ಕಲ್ಪ ನ್ಯೂಸ್
March 31, 2026
0

Kalpa Media House  |  Shivamogga  | PES Institute of Technology and Management #PESITM conducted Mock CET 2026 on March 30...

Read moreDetails
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

March 30, 2026
SWR to run special trains for Good Friday, Easter rush

SWR to run special trains for Good Friday, Easter rush

March 30, 2026
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಪಿಆರ್‌ಓ ಪ್ರವೀಣ್ ಅಧಿಕಾರ ಸ್ವೀಕಾರ

South Western Railway | Praveen Takes Charge as Hubballi Divisional Public Relations Officer

March 28, 2026
26 ವರ್ಷದ ಯುವಕನಿಗೆ ಮರುಜೀವ ಕೊಟ್ಟ ಮೆಡಿಕವರ್ ಆಸ್ಪತ್ರೆ | ಏನಾಗಿತ್ತು ಯುವಕನಿಗೆ?

Critical Condition Turned Around with Timely Medical Intervention

March 27, 2026
  • Advertise With Us
  • Grievances
  • About Us
  • Contact Us
Wednesday, April 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಸಿನೆಮಾ

ಹಾಡಿನೊಂದಿಗೆ ಬರಲು ‘ರಾಜರು’ ತಯಾರು!

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 28, 2016
in ಸಿನೆಮಾ
0
Share on FacebookShare on TwitterShare on WhatsApp
ಎಂ.ಆರ್.ಎಸ್. ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾಗಿರುವ ಸಿನಿಮಾ ‘ರಾಜರು’. ಈ ಚಿತ್ರಕ್ಕೆ ‘ಅರಮನೆ ಇಲ್ಲ ರಾಣಿ ಹುಡುಕ್ತಾವ್ರೆ’ ಎನ್ನುವ ಹೊಸ ಬಗೆಯ, ಕುತೂಹಲ ಕೆರಳಿಸುವ ಅಡಿ ಬರಹ ಕೂಡಾ ಇದೆ.
ಚಿತ್ರದ ಶೀರ್ಷಿಕೆ ಮತ್ತು ಟ್ಯಾಗ್ ಲೈನ್ ಕಾರಣಕ್ಕೇ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರುವ ಈ ಚಿತ್ರದ ನಿರ್ದೇಶಕರು ಗಿರೀಶ್ ಮೂಲಿಮನಿ. ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಗಿರೀಶ್ ಮೂಲಿಮನಿ ಎಲ್‌ಎಲ್‌ಬಿ ವ್ಯಾಸಂಗ ಮುಗಿಸಿ ವಕೀಲಿ ವೃತ್ತಿ ಮಾಡಿಕೊಂಡಿದ್ದವರು. ಆದರೆ ಸಿನಿಮಾ ಎಂಬ ಮಾಯೆಯ ಸೆಳೆತದಿಂದ ಆ ವೃತ್ತಿಗೆ ಗುಡ್ ಬೈ ಹೇಳಿ, ಸೀದಾ ಬಂದು ಬೆಂಗಳೂರು ಸೇರಿ, ನಿರ್ದೇಶನದ ಪಟ್ಟುಗಳನ್ನು ಕಲಿತವರು. ಆರಂಭದಲ್ಲಿ ನಾಗೇಂದ್ರ ಅರಸ್ ಅವರ ರಾಕಿ ಮತ್ತು ಯಾರೆ ನೀ ದೇವತೆ ಚಿತ್ರಗಳು ಸೇರಿದಂತೆ ಒಂದಿಷ್ಟು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಗಿರೀಶ್ ನಂತರ ಬಂದು ನೆಲೆ ನಿಂತಿದ್ದು ಕಿಚ್ಚ ಸುದೀಪ ಅವರೊಟ್ಟಿಗೆ. ಸುದೀಪ್ ಅವರ ಕೆಂಪೇಗೌಡ, ವರದ ನಾಯಕ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಗಿರೀಶ್ ಮಾಣಿಕ್ಯ ಚಿತ್ರದ ಮೊದಲ ಹಂತದ ಚಿತ್ರೀಕರಣಕ್ಕೂ ಕಾರ್ಯ ನಿರ್ವಹಿಸಿದ್ದರು. ಅದೇ ವೇಳೆಗೆ ಸ್ವತಂತ್ರ ನಿರ್ದೇಶಕರಾಗುವ ಅವಕಾಶ ಒದಗಿಬಂದಿದ್ದರಿಂದ ‘ರಾಜರು’ಗಳ ಸಖ್ಯ ಬೆಳೆಸಿದರು.
‘ರಾಜರು’ ಚಿತ್ರಕ್ಕೆ ಮೂವರು ನಿರ್ಮಾಪಕರು. ಎಂ. ಮೂರ್ತಿ, ಪಿ. ಶಿವಕುಮಾರ್ ಮತ್ತು ಹೆಚ್. ರಮೇಶ್ ಸೇರಿ ಪಾಲುದಾರಿಕೆಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪಿ. ಶಿವಕುಮಾರ್ ಅವರು ಮಾಜಿ ನಗರಪಾಲಿಕೆ ಸದಸ್ಯರು ಮತ್ತು ಇನ್ನುಳಿದ ಇಬ್ಬರು ನಿರ್ಮಾಪಕರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಗಿರೀಶ್ ಮೂಲಿಮನಿ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದಿನದಿಂದಲೇ ಈ ನಿರ್ಮಾಪಕರ ಪರಿಚಯವಿತ್ತಂತೆ. ‘ನಾವು ಎಂದಾರೂ ಸಿನಿಮಾ ಮಾಡಿದರೆ ಅದಕ್ಕೆ ನೀವೇ ನಿರ್ದೇಶಕರು’ ಎಂಬ ಭರವಸೆ ನೀಡಿದ್ದರಂತೆ. ಹೀಗಿರುವಾಗಲೇ ಕ್ರಿಷ್ ರಂಗಸ್ವಾಮಿ ಎಂಬ ಪ್ರತಿಭಾವಂತ ಕತೆಗಾರ ಹೆಣೆದುತಂದ ಒಂದು ಎಳೆ ನಿರ್ಮಾಪಕರಿಗೂ ಒಪ್ಪಿಗೆಯಾಗಿ, ಆ ಕತೆಗೆ ಚಿತ್ರಕತೆ ಮತ್ತು ಸಂಭಾಷಣೆಯನ್ನು ಸ್ವತಃ ಗಿರೀಶ್ ಮೂಲಿಮನಿ ಅವರೇ ರಚಿಸಿದರು. ಆ ಮೂಲಕ ‘ರಾಜರು’ ಸಿನಿಮಾ ಆರಂಭಗೊಂಡಿತ್ತು. ಅದಾಗಲೇ, ಜಾಲಿಡೇಸ್, ಪೈಪೋಟಿ ಮತ್ತು ಕೇಸ್ ನಂಬರ್ ೧೮/೯ ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ನಿರಂಜನ್ ಶೆಟ್ಟಿ ಅವರು ಆಯ್ಕೆಯಾದರು. ಗಡ್ಡ ವಿಜಿ ನಿರ್ದೇಶನದ ‘+’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಶಾಲಿನಿ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಯಿತು.
ಹೀಗೆ ಶುರುವಾದ ‘ರಾಜರು’ ಚಿತ್ರ ‘ಇಲ್ಲಿ ಎಲ್ಲರೂ ರಾಜರೇ. ಆದರೆ ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಂಡರೆ ಮಾತ್ರ; ಬದುಕಿಗಾಗಿ ಅನ್ಯ ಮಾರ್ಗಗಳನ್ನು ತುಳಿದರೆ ಆಗಬಾರದ್ದೇ ಆಗುತ್ತದೆ’ ಎನ್ನುವ ಪ್ರಧಾನ ಸಂದೇಶವನ್ನು ಹೊಂದಿದೆ. ಈ ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಎಷ್ಟು ಪ್ರಾಧಾನ್ಯತೆ ಇದೆಯೋ ಅಷ್ಟೇ ಮಟ್ಟಿಗೆ ನಾಯಕಿಯ ಪಾತ್ರ ಕೂಡಾ ಪ್ರಾಮುಖ್ಯತೆಯನ್ನು ಪಡೆದಿದೆ. ಅರಮನೆಯಿಲ್ಲದ ರಾಜನಿಗೆ ಸಿಕ್ಸೂಚಿಯಂತೆ ಬರುವ ರಾಣಿಯದ್ದೇ ಇಲ್ಲಿ ಬಲು ದರ್ಬಾರು! ಈ ಕಾರಣಕ್ಕೇ ‘ಅರಮನೆ ಇಲ್ಲ-ರಾಣಿ ಹುಡುಕ್ತಾವ್ರೆ’ ಎನ್ನುವ ಅಡಿಬರಹವನ್ನು ಇರಿಸಲಾಗಿದೆ.
‘ರಾಜರು’ ಚಿತ್ರದಲ್ಲಿ ಕಥೆಯಷ್ಟೇ ಕಾಡುವ ಮತ್ತೊಂದು ಅಂಶವೆಂದರೆ, ಅದು ಸಂಗೀತ. ಶ್ರೀಧರ್ ವಿ. ಸಂಭ್ರಮ್ ಅವರು ನೀಡಿರುವ ಸುಂದರ ಸಂಗೀತಕ್ಕೆ ಜಯಂತ್ ಕಾಯ್ಕಿಣಿ, ಡಾ. ವಿ. ನಾಗೇಂದ್ರ ಪ್ರಸಾದ್ ಮತ್ತು ಯೋಗರಾಜ ಭಟ್ ಹಾಡುಗಳನ್ನು ಬರೆದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ವಿಶೇಷ ಗೀತೆಯೊಂದಕ್ಕೆ ದನಿ ನೀಡಿದ್ದಾರೆ. ಅರ್ಮನ್ ಮಲ್ಲಿಕ್ ಮತ್ತು ಶ್ರೇಯಾ ಘೋಷಾಲ್ ಕೂಡಾ ಹಾಡಿದ್ದಾರೆ. ‘ಮುಂಗಾರು ಮಳೆ-೨’ ಚಿತ್ರದ ‘ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ’ ಚಿತ್ರದ ಹಾಡಿನ ನಂತರ ಅರ್ಮನ್ ಮಲ್ಲಿಕ್ ಅವರಿಗೆ ಕನ್ನಡದಲ್ಲಿ ದೊಡ್ಡ ಯಶಸ್ಸು ‘ರಾಜರು’ ನೀಡುತ್ತಾರೆ ಎನ್ನುವ ನಂಬಿಕೆ ಖುದ್ದು ಚಿತ್ರತಂಡದ್ದು.
ಸಣ್ಣಪುಟ್ಟ ಅಡೆತಡೆಗಳ ನಡುವೆಯೂ ಯಾವುದೇ ದೊಡ್ಡ ಸಮಸ್ಯೆ ಎದುರಾಗದೆ, ಸಲೀಸಾಗಿ ಚಿತ್ರೀಕರಣ ಪೂರೈಸಿರುವ ‘ರಾಜರು’ ಚಿತ್ರದ ಹಾಡುಗಳು ದೀಪಾವಳಿ ಮುಗಿಯುತ್ತಿದ್ದಂತೇ ಲೋಕಾರ್ಪಣೆಗೊಳ್ಳಲಿವೆ ಮತ್ತು ಡಿಸೆಂಬರ್ ೨೦ರ ನಂತರ ತೆರೆಗೆ ಬರಲು ಸಕಲ ರೀತಿಯ ತಯಾರಿ ನಡೆಸಿದೆ. ಈಗಾಗಲೇ ಡಬ್ಬಿಂಗ್, ಡಿಐ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೂಡಾ ಶೇ. ೫೦ರಷ್ಟು ಸಂಪೂರ್ಣಗೊಂಡಿದೆ.
‘ರಾಜರು’ ಚಿತ್ರಕ್ಕಾಗಿ ಬೆಂಗಳೂರು, ಸಕಲೇಶಪುರ, ತುಮಕೂರು, ಹಾಸನ, ಗೋವಾ ಸೇರಿದಂತೆ ೫೧ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸಿನಿಟೆಕ್ ಸೂರಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ಎಲ್ಲ ಹಾಡುಗಳಿಗೆ ಮುರಳಿ ಅವರ ನೃತ್ಯ ಸಂಯೋಜನೆ ಇದೆ. ಈ ಚಿತ್ರದಲ್ಲಿ ನಿರಂಜನ್ ಶೆಟ್ಟಿ ಮತ್ತು ಶಾಲಿನಿ ನಾಯಕ, ನಾಯಕಿಯರಾಗಿ ಕಾಣಿಸಿಕೊಂಡರೆ, ‘ಮೈತ್ರಿ’ ಚಿತ್ರದಲ್ಲಿ ಕಳ್ಳನ ಪಾತ್ರ ನಿರ್ವಹಿಸಿದ್ದ ಜಗದೀಶ್ ಮತ್ತು ಕಿರುತೆರೆ ನಟ ನಾಗರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ರಾಕ್‌ಲೈನ್ ಸುಧಾಕರ್, ಕರಿಸುಬ್ಬು ಮುಂತಾದವರ ತಾರಾಗಣವಿದೆ.
Share196Tweet123Send
Previous Post

‘ವರ್ಧನ’ ಮುಕ್ತಾಯ

Next Post

ಈ ವಾರ ತೆರೆಗೆ ‘ಮುಕುಂದ ಮುರಾರಿ’

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಈ ವಾರ ತೆರೆಗೆ ‘ಮುಕುಂದ ಮುರಾರಿ’

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಸೇರಿದ ವಿಶ್ವಕಪ್ ವಿಜೇತ ನಾಯಕಿ ನಿಕಿ ಪ್ರಸಾದ್!

ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಸೇರಿದ ವಿಶ್ವಕಪ್ ವಿಜೇತ ನಾಯಕಿ ನಿಕಿ ಪ್ರಸಾದ್!

April 1, 2026
ಬೆಂಗಳೂರು ಎಫ್‌ಸಿ ತಂಡಕ್ಕೆ ಸಾವಿಯೊ ಮೆಡೈರಾ ಸೇರ್ಪಡೆ

ಬೆಂಗಳೂರು ಎಫ್‌ಸಿ ತಂಡಕ್ಕೆ ಸಾವಿಯೊ ಮೆಡೈರಾ ಸೇರ್ಪಡೆ

April 1, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಬೆಂಗಳೂರು-ಹುಬ್ಬಳ್ಳಿ, ಬೀದರ್, ಮುಂಬೈ ಸೇರಿ 28 ರೈಲುಗಳ ಸಂಚಾರದಲ್ಲಿ ವ್ಯತ್ಯಯ

April 1, 2026
ಕೋಟಕ್ ಮಹೀಂದ್ರಾ ಬ್ಯಾಂಕ್ ನಾಯಕತ್ವ ಬದಲಾವಣೆ | ಸಿಇಓ ಆಗಿ ಸೂರಜ್ ರಾಜಪ್ಪನ್ ನೇಮಕ

ಕೋಟಕ್ ಮಹೀಂದ್ರಾ ಬ್ಯಾಂಕ್ ನಾಯಕತ್ವ ಬದಲಾವಣೆ | ಸಿಇಓ ಆಗಿ ಸೂರಜ್ ರಾಜಪ್ಪನ್ ನೇಮಕ

April 1, 2026
SWR to run special trains for Good Friday, Easter rush

ತಿರುಚ್ಚಿರಾಪಳ್ಳಿ-ಬೆಂಗಳೂರು ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು | ಇಲ್ಲಿದೆ ಡೀಟೇಲ್ಸ್

April 1, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL