ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ತಿರುಚ್ಚಿರಾಪಳ್ಳಿ #Tiruchirappalli ಮತ್ತು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್’ಎಂವಿಟಿ) ನಡುವೆ ನಾಲ್ಕು ಟ್ರಿಪ್ ವಿಶೇಷ ರೈಲುಗಳು ಸಂಚರಿಸಲಿದೆ.
ಈ ಕುರಿತಂತೆ ದಕ್ಷಿಣ ರೈಲ್ವೆ #SouthernRailway ಮಾಹಿತಿ ನೀಡಿದ್ದು, ವಿಶೇಷ ರೈಲಿನ ವಿವರ ಹೀಗಿದೆ.
06007 ಸಂಖ್ಯೆಯ ತಿರುಚ್ಚಿರಾಪಳ್ಳಿಯಿಂದ ಏಪ್ರಿಲ್ 7, 14, 21 ಮತ್ತು 28ರಂದು (ಮಂಗಳವಾರ) ಬೆಳಿಗ್ಗೆ 05.30ಕ್ಕೆ ಹೊರಟು, ಅಂದು ಮಧ್ಯಾಹ್ನ 01.30ಕ್ಕೆ ಬೆಂಗಳೂರಿನ ಎಸ್’ಎಂವಿಟಿ ನಿಲ್ದಾಣಕ್ಕೆ ತಲುಪಲಿದೆ.
ಹಿಂತಿರುಗುವ ಪ್ರಯಾಣದಲ್ಲಿ ರೈಲು ಸಂಖ್ಯೆ 06008 ಎಸ್’ಎಂವಿಟಿ ಬೆಂಗಳೂರಿನಿಂದ #Bengaluru ಅದೇ ದಿನಗಳಂದು (ಏಪ್ರಿಲ್ 7, 14, 21, 28) ಮಧ್ಯಾಹ್ನ 03.00ಕ್ಕೆ ಹೊರಟು, ಅಂದೇ ರಾತ್ರಿ 10.30ಕ್ಕೆ ತಿರುಚ್ಚಿರಾಪಳ್ಳಿ ಜಂಕ್ಷನ್ ತಲುಪಲಿದೆ.
ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ಕರೂರ್, ನಾಮಕ್ಕಲ್, ಸೇಲಂ, ಬಂಗಾರಪೇಟೆ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಒಟ್ಟು 18 ಬೋಗಿಗಳನ್ನು ಒಳಗೊಂಡಿರುವ ಈ ರೈಲಿನಲ್ಲಿ 2 ಎಸಿ ಚೇರ್ ಕಾರ್, 8 ದ್ವಿತೀಯ ದರ್ಜೆ ಚೇರ್ ಕಾರ್, 6 ದ್ವಿತೀಯ ದರ್ಜೆ ಅಂತ್ಯೋದಯ ಬೋಗಿಗಳು ಹಾಗೂ ದಿವ್ಯಾಂಗ ಸ್ನೇಹಿ ಕಂಪಾರ್ಟ್ಮೆಂಟ್ ಒಳಗೊಂಡ ಲಗೇಜ್ ಬೋಗಿಗಳು ಇರಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Comments 1