Read - < 1 minute
ಬೆಂಗಳೂರು: ಸೆ.14ರಂದು ಎಎಫ್ಸಿ ಫುಟ್ಬಾಲ್ ಟೂರ್ನಿ ನಡೆಯಲಿರುವುದರಿಂದ ಮುಂಬರುವ ಹಿರಿಯರ ಮತ್ತು ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವುದು ಅನುಮಾನವಾಗಿದೆ. ಅಥ್ಲೀಟ್ ಗಳಿಗೆ ವಸತಿ ಸಿಗುವುದು ಅನುಮಾನವಾಗಿದೆ.
ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಈಗಾಗಲೇ 2 ಸಾವಿರ ಅಥ್ಲೀಟ್ ಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಬಾರಿಯ ಕ್ರೀಡಾಕೂಟಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ.
ಇತ್ತೀಚೆಗೆ ಎಸ್ ಡಬ್ಲ್ಯೂ ಕ್ರೀಡಾ ಸಂಸ್ಥೆಯ ಬೆಂಗಳೂರು ಎಎಫ್ಸಿ ತಂಡ ಸೆ.14ರಂದು ತಾಮಪೀನೋ ರೋವರ್ಸ್ ವಿರುದ್ಧ ಪಂದ್ಯ ಆಡಲು ಸಿದ್ಧತೆ ನಡೆಸುತ್ತಿದೆ. ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ನಡೆಯುವ ಹಿನ್ನೆಲೆಯಲ್ಲಿ ಟ್ರ್ಯಾಕ್ ಸುತ್ತಕಬ್ಬಿಣದ ಬೇಲಿಯನ್ನು ಹಾಕಿರುವುದು ಕ್ರೀಡಾಂಗಣಕ್ಕೆ ಹಾನಿಯಾಗಬಹುದೆಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಜೆಎಸ್ ಡಬ್ಲ್ಯೂ ಕ್ರೀಡಾಂಗಣದ ಪೂರ್ವ ದಿಕ್ಕಿನ ಭಾಗಗಳಲ್ಲಿರುವ ಖಾಲಿ ವಸತಿ ಕೊಠಡಿಗಳಿಗೆ ಬಿಗ ಜಡಿದಿದೆ ಎಂದು ತಿಳಿದು ಬಂದಿದೆ. ಈ ಎಲ್ಲ ಕಾರಣಗಳಿಂದ ರಾಜ್ಯ ಮಟ್ಟದ ಹಿರಿಯರ ಮತ್ತು ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಡೆಯುವುದು ಅನುಮಾನವಾಗಿದೆ.
Discussion about this post