ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪೆರಿಷಬಲ್ ಸರಕು ಸಾಗಣೆಯಲ್ಲಿ ಮೊದಲ ಆದ್ಯತಾ ವಿಮಾನ ನಿಲ್ದಾಣ ಎಂಬ ಖ್ಯಾತಿ ಪಡೆದಿರುವ ಬಿಎಲ್‌ಆರ್ ಏರ್‌ಪೋರ್ಟ್ ಕಾರ್ಗೋ ಈ ವರ್ಷದ ಪ್ರೇಮಿಗಳ ದಿನದ ಪೂರ್ವದಲ್ಲಿ ಗುಲಾಬಿ ಸಾಗಣೆಯಲ್ಲಿ ಎರಡು ಪಟ್ಟು ಹೆಚ್ಚಳ ಸಾಗಣೆ ಮಾಡುವ ಮೂಲಕ ಮತ್ತೊಮ್ಮೆ ಸಾಕ್ಷಿಯಾಗಿದೆ.
ಬಿಎಲ್‌ಆರ್ ವಿಮಾನ ನಿಲ್ದಾಣದಲ್ಲಿ ಗುಲಾಬಿಗಳ ಋತುವಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಕ್ರಿಯೆಗೊಳಿಸಲಾದ ಗುಲಾಬಿ ಸಾಗಣೆಯಲ್ಲಿ ಶೇ.14 ರಷ್ಟು ಹೆಚ್ಚಳ ಕಂಡು ಬಂದಿದೆ.
ಈ ಬಾರಿ 17.4 ಮಿಲಿಯನ್ ಗುಲಾಬಿಗಳನ್ನು (589,296 ಕೆಜಿ) ಕೌಲಾಲಂಪುರ್, ಸಿಂಗಾಪುರ್, ಕುವೈತ್, ಮನಿಲಾ, ಆಕ್ಲೆಂಡ್, ನ್ಯೂಯಾರ್ಕ್, ಲೆಬನಾನ್, ಮಾಲ್ಡೀವ್ಸ್, ಜೋರ್ಡಾನ್ ಮತ್ತು ದುಬೈ ಈ ದೇಶಗಳಿಗೆ ಪ್ರಮುಖವಾಗಿ ರಫ್ತು ಮಾಡಲಾಯಿತು.. ಬಿಎಲ್‌ಆರ್ ಕಾರ್ಗೋ ಒಟ್ಟು 15 ಜಾಗತಿಕ ತಾಣಗಳಿಗೆ ಗುಲಾಬಿಗಳನ್ನು ಕಳುಹಿಸಿದೆ.
ದೇಶೀಯ ವಿಭಾಗದಲ್ಲಿ ಒಟ್ಟು 6.6 ಮಿಲಿಯನ್ ಗುಲಾಬಿಗಳನ್ನು (178,200 ಕೆಜಿ) ಸಂಸ್ಕರಿಸಲಾಗಿದೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.31ರಷ್ಟು ಹೆಚ್ಚಳವಾಗಿದೆ. ದೆಹಲಿ, ಕೋಲ್ಕತ್ತಾ, ಮುಂಬೈ, ಗುವಾಹಟಿ, ಬಾಗ್ಡೋಗ್ರಾ, ಅಹಮದಾಬಾದ್, ಕೊಚ್ಚಿ, ದರ್ಭಾಂಗ, ಚಂಡೀಗಢ ಮತ್ತು ಪಾಟ್ನಾ ಸೇರಿದಂತೆ 34 ದೇಶೀಯ ಸ್ಥಳಗಳಲ್ಲಿ ವ್ಯಾಲೆಂಟೈನ್ಸ್ ವಾರದ ಅಂಗವಾಗಿ ರವಾನೆ ಮಾಡಲಾಯಿತು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post