ನವದೆಹಲಿ: ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಎಸಿ ಕೋಚ್ ಸೇವೆಯನ್ನು ಇಲಾಖೆ ಒದಗಿಸುತ್ತಿದ್ದರೆ, ಪ್ರಯಾಣಿಕರು ಇಲ್ಲಿನ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಪ್ರಕಟಿಸಿದ್ದು, ಎಸಿ ಕೋಚ್‌ನಲ್ಲಿ ಪ್ರಯಾಣಿಸುವ ಹಲವು ಪ್ರಯಾಣಿಕರು ಬೆಡ್‌ಶೀಟ್ ಹಾಗೂ ಟವಲ್‌ಗಳನ್ನು ಕಳವು ಮಾಡಿದ್ದು, ಇದುವರೆಗೂ ಇದರಿಂದಾನ ನಷ್ಟ ಸುಮಾರು ರೂ. 2.5 ಕೋಟಿ.
ಈ ಕುರಿತಂತೆ ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶದಂತೆ, 2017-18ರ ಅವಧಿಯಲ್ಲಿ 1.95 ಲಕ್ಷ ಟವೆಲ್ ಗಳು, 81,736 ಬೆಡ್ ಶೀಟ್ ಗಳು, 55,573 ದಿಂಬು ಕವರ್ ಗಳು, 5,038 ದಿಂಬುಗಳು ಮತ್ತು 7,043 ಬೆಡ್ ಶೀಟ್ ಗಳನ್ನು ರೈಲ್ವೆಯ ಎಸಿ ಕೋಚ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಳವು ಮಾಡಿದ್ದಾರೆ ಎಂದು ವರದಿಯಾಗಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಡಬ್ಲೂಆರ್ 2.5 ಕೋಟಿ ರೂ. ಮೌಲ್ಯದ ಲಿನಿನ್ ಮತ್ತು ಫಿಟ್ಟಿಂಗ್ ಗಳನ್ನು ಕಳೆದುಕೊಂಡಿತ್ತು. ಇದು ಪ್ರಯಾಣಿಕರಿಂದ ಹಾನಿಗೊಳಗಾದ ಇತರ ವಸ್ತುಗಳನ್ನು ಹೊರತುಪಡಿಸಿ ಎಂದು ತಿಳಿದುಬಂದಿದೆ.
ಇನ್ನು ಸೆಂಟ್ರಲ್ ರೈಲ್ವೆಯಲ್ಲಿಯೂ ಕೂಡ ಇದೆ ಪರಿಸ್ಥಿತಿಯಾಗಿದ್ದು, ಈ ವರ್ಷ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ 79,350 ಟವೆಲ್, 27,545 ಬೆಡ್ ಶೀಟ್ ಗಳು, 21,050 ದಿಂಬು ಕವರಗಳು, 2,150 ದಿಂಬುಗಳು ಮತ್ತು 62 ಲಕ್ಷ ಮೌಲ್ಯದ 2,065 ಕಂಬಳಿಗಳು ಪ್ರಯಾಣಿಕರಿಂದ ಕಳ್ಳತನವಾಗಿವೆ ಎನ್ನಲಾಗಿದೆ.
ಕಳೆದ ಸೋಮವಾರದಂದು ರೈಲಿನ ಹವಾನಿಯಂತ್ರಿತ ಕೋಚ್ ನಲ್ಲಿ ಕಂಬಳಿಗಳು ಮತ್ತು ಬೆಡ್ ಶೀಟ್ ಗಳನ್ನು ಕದಿಯುತ್ತಿದ್ದ ಸಂದರ್ಭದಲ್ಲಿ ಓರ್ವ ಪ್ರಯಾಣಿಕನನ್ನು ಬಂಧಿಸಲಾಗಿತ್ತು.
Discussion about this post