ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಬನಶಂಕರಿ ಮೂರನೆ ಹಂತದ ಇಟ್ಟಮಡು ಬಳಿಯ ಗುರುದತ್ತ ಬಡಾವಣೆಯ 3 ನೇ ಎ ಕ್ರಾಸ್ ನಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಕೇಸ್ ಬಂದಿದೆ ಎಂದು ಈ ರಸ್ತೆಯನ್ನು ಇಂದು ಸೀಲ್ ಡೌನ್ ಮಾಡಲಾಗಿದೆ.
ಪಾಸಿಟಿವ್ ಬಂದ ಇಬ್ಬರನ್ನೂ ಸರ್ಕಾರಿ ಆಸ್ಪತ್ರೆ ದಾಖಲಿಸಲಾಗಿದೆ. ಬಿಬಿಎಂಪಿ ವತಿಯಿಂದ ಗುರುದತ್ತ ಬಡಾವಣೆಯಲ್ಲಿ ಔಷಧಿ ಸಿಂಪಡಣೆ ಮಾಡಲಾಗುತ್ತಿದ್ದು, ಎಲ್ಲ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಜೈ ದೇವ್ ಸಿಂಗ್ ಹಾಗೂ ಉಪಾಧ್ಯಕ್ಷ ಚಿಕ್ಕ ಮರಿಯಪ್ಪ ಅವರು ಶೀಘ್ರವಾಗಿ ಕ್ರಮ ಕೈಗೊಂಡು ಬಿಬಿಎಂಪಿ ವತಿಯಿಂದ ಪ್ರಾಥಮಿಕ ಹಂತದ ಔಷಧಿ ಸಿಂಪಡಣೆ ಮಾಡಿಸಿದ್ದಾರೆ.
ಬಿಬಿಎಂಪಿ ಎಇಇ, ಆರೋಗ್ಯ ಕಾರ್ಯಕರ್ತರ ತಂಡ ಮತ್ತು ಗಿರಿನಗರ ಪೊಲೀಸ್ ಠಾಣೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಗುರುದತ್ತ ಬಡಾವಣೆಯ 3ನೆಯ ಎ ಕ್ರಾಸನ್ನು 28 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.
ವಾಕಿಂಗ್’ಗೆ ಬ್ರೇಕ್
ಗುರುದತ್ತ ಬಡಾವಣೆಯ ನಿವಾಸಿಗಳು ಮುಂಜಾನೆಯ ವಾಕಿಂಗ್’ಗೆ ಬ್ರೇಕ್ ಹಾಕಿ ಮನೆಯಲ್ಲಿಯೇ ಇರಿ, ಮಾಸ್ಕ್ ಧರಿಸಿ ಅಗತ್ಯ ಕೆಲಸಗಳಿಗೆ ಮಾತ್ರ ಓಡಾಡಿ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕ್ಷೇಮವಾಗಿರಿ ಎಂದು ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ.
ಬಂಗಾರಪ್ಪ ನಗರದ ವೈದ್ಯಾಧಿಕಾರಿ ಡಾ. ಪುಷ್ಪಲತಾ ಮಾತನಾಡಿ, ಗುರುದತ್ತ ಬಡಾವಣೆಯ 3 ನೇ ಎ ಕ್ರಾಸ್ ನಲ್ಲಿ 2 ಜನರಿಗೆ ಕೊರೋನಾ ಪಾಸಿಟಿವ್ ಕೇಸ್ ಬಂದಿದೆ. ಆದರೆ, ಜನರು ಆತಂಕ ಪಡುವ ಅಗತ್ಯವಿಲ್ಲ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಬರುತ್ತಾರೆ. ಅವರಿಗೆ ಮಾಹಿತಿ ನೀಡಿ ಎಂದು ವಿನಂತಿಸಿದರು.
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
Get In Touch With Us info@kalpa.news Whatsapp: 9481252093
Discussion about this post