ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಈ ಬಾರಿಯ ಬೇಸಿಗೆ ಬಿಸಿಲಿನಿಂದ ಕಾದ ಕಾವಲಿಯಂತಾಗಿದ್ದ ನಗರದಲ್ಲಿ ಇಂದು ವರುಣ ಕೊಂಚ ಕೃಪೆ ತೋರಿದರೂ ಸಹ, ಅಷ್ಟೇನು ಸಮಾಧಾನಕರವಾಗಿರಲಿಲ್ಲವಾದರೂ, ಈ ಬಾರಿಯ ಮೊದಲ ಮಳೆ ಎಂದು ಸಂತಸ ಪಟ್ಟುಕೊಳ್ಳುವಂತಾಗಿದೆ.
ಹೌದು… ಬಿರು ಬಿಸಿಲು, ಸೆಖೆಯಿಂದ ನಗರದ ಮಂದಿ ತತ್ತರಿಸಿ ಹೋಗಿದ್ದರು. ಇಂತಹ ಸಂದರ್ಭದಲ್ಲೇ ಇಂದು ಸಂಜೆ ೭.೪೦ರ ವೇಳೆಯಲ್ಲಿ ನಗರದಲ್ಲಿ ಸುಮಾರು ಅರ್ಧ ಗಂಟೆ ಮಳೆ ಸುರಿದಿದ್ದು ಜನರು ಕೊಂಚ ನಿಟ್ಟುಸಿರು ಬಿಡುವಂತೆ ತಂಪನೆರೆಯಿತು.
ಸೈಕ್ಲೋನ್ ಪರಿಣಾಮ ರಾಜ್ಯದ ಹಲವು ಕಡೆಗಳಲ್ಲಿ ಮಳೆ ಎಂದು ಮುನ್ಸೂಚನೆ ನೀಡಲಾಗಿತ್ತು. ಅಲ್ಲದೇ, ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಎರಡು ದಿನದಿಂದಲೇ ಮಳೆಯಾಗುತ್ತಿದೆ. ಆದರೆ, ಉಕ್ಕಿನ ನಗರಿಯಲ್ಲಿ ಇಂದು ಸಂಜೆ ವರುಣ ಕೃಪೆ ತೋರಿದ್ದು, ಅಲ್ಪ ಗುಡುಗು ಸಹಿತ ಮಳೆ ಸುರಿದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post