ನವದೆಹಲಿ: ಉಗ್ರರ ಉಪಟಳದಿಂದ ರೊಚ್ಚಿಗೆದ್ದಿರುವ ಭಾರತೀಯ ಸೇನೆ ನಾಲ್ವರು ಉಗ್ರರನ್ನು ಎನ್‍ಕೌಂಟರ್ ಮಾಡಿದ ಬೆನ್ನಲ್ಲೇ, ಇಂದು ಮಹತ್ವದ ಹೆಜ್ಜೆಯನ್ನಿಟ್ಟಿರುವ ಸೇನಾ ಪಡೆ ಬೃಹತ್ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದೆ.
ಹಿಜ್ಬುಲ್ ಮುಜಾಹಿದ್ದೀನ್, ಎಲ್‍ಇಟಿ, ಜೈಷ್ ಎ ಮೊಹಮದ್ ಸೇರಿದಂತೆ ಪ್ರಮುಖ ಉಗ್ರ ಸಂಘಟನೆಗೆ ಸೇರಿದ ಸುಮಾರು 21 ಮೋಸ್ಟ್ ವಾಂಟೆಡ್ ಡೆಡ್ಲಿ ಉಗ್ರರ ಹಿಟ್ ಲಿಸ್ಟ್ ಸಿದ್ದಪಡಿಸಿಕೊಂಡಿರು ಸೇನೆ, ಯೋಧರನ್ನು ಕಾರ್ಯಾಚರಣೆಗೆ ಇಳಿಸಿದೆ.
ಉಗ್ರರಲ್ಲಿ ಎಂದು 21 ಉಗ್ರರ ಪಟ್ಟಿಯನ್ನು ಸೇನೆ ಸಿದ್ದಪಡಿಸಿದ್ದು ಇದರಲ್ಲಿ ಅ++ ಎಂದು ಪರಿಗಣಿಸಿರುವ 6 ಡೆಡ್ಲಿ ಉಗ್ರರೂ ಸಹ ಸೇರಿದ್ದಾರೆ. ಈಗಾಗಲೇ ಹತ್ಯೆ ಮಾಡಲಾಗಿರುವ ಉಗ್ರರ ಸಂಖ್ಯೆ ಹಾಗೂ ಸನ್ನಿವೇಶಗಳನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಇವರೆಲ್ಲರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ಸೇನೆ, ಸಮರವನ್ನೇ ಸಾರಿದೆ.
Also Read: ಶತ್ರು ಸಂಹಾರಕ್ಕೆ ಶೀಘ್ರ ಮತ್ತೆ ದೊಡ್ಡ ಸರ್ಜಿಕಲ್ ಸ್ಟ್ರೈಕ್‌ಗೆ ಮೋದಿ ಸರ್ಕಾರ ಸಿದ್ದ?
ಶತ್ರು ಸಂಹಾರಕ್ಕೆ ಶೀಘ್ರ ದೊಡ್ಡ ಸರ್ಜಿಕಲ್ ಸ್ಟ್ರೈಕ್ ಗೆ ಮೋದಿ ಸರ್ಕಾರ ಸಿದ್ಧ?
ಶುಕ್ರವಾರ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಸೇನೆ ಐಎಸ್‍ಜೆಕೆ ಸಂಘಟನೆಗೆ ಸೇರಿದ ನಾಲ್ವರು ಉಗ್ರರನ್ನು ಹೊಡೆದುರುಳಿಸಿತ್ತು. ಇದರಲ್ಲಿ ಪ್ರಮುಖವಾಗಿ ಐಎಸ್‍ಜೆಕೆ ಮುಖ್ಯಸ್ಥ ದಾವೂದ್ ಅಹ್ಮದ್ ಸೋಫಿ ಸಹ ಸೇರಿದ್ದಾನೆ.
ಕಣಿವೆ ರಾಜ್ಯದಲ್ಲಿ ಬಿಜೆಪಿ-ಪಿಡಿಪಿ ಸರ್ಕಾರ ಪತನಗೊಂಡು ರಾಜ್ಯಪಾಲರ ಆಡಳಿತ ಜಾರಿಯಾದ ನಂತರ ಶುಕ್ರವಾರ ನಡೆದಿದ್ದು ಮೊದಲ ಎನ್‍ಕೌಂಟರ್. ಅದರ ಬೆನ್ನಲ್ಲೇ, ಈಗ ಮಹತ್ವದ ಕಾರ್ಯಾಚರಣೆ ಆರಂಭಿಸಿರುವುದು ಮೋದಿ ಸರ್ಕಾರ ಉಗ್ರರ ಶಮನಕ್ಕೆ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.
















