ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಲ್ಲಿಂದು ಒಟ್ಟು 24 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಹೊಳೆಹೊನ್ನೂರಿನ 55 ವರ್ಷದ ಪುರುಷ, ಬೋವಿ ಕಾಲೋನಿಯ 40 ವರ್ಷದ ಪುರುಷ, ಗಾಂಧಿ ನಗರದ 38 ವರ್ಷದ ಪುರುಷ, ಹಳೇ ಹಿರಿಯೂರಿನ 25 ವರ್ಷದ ಮಹಿಳೆ, ಲೋಯರ್ ಹುತ್ತಾದ 44 ವರ್ಷದ ಮಹಿಳೆ ಹಾಗೂ 19 ವರ್ಷದ ಯುವಕ, ನಿಂಬೆ ಗೊಂದಿಯ 65, 32 ಹಾಗೂ 37 ವರ್ಷದ ಮೂವರು ಪುರುಷರು, ಅರಳಿಹಳ್ಳಿಯ 23 ವರ್ಷದ ಯುವಕ, ಭದ್ರಾವತಿಯಲ್ಲಿ ಪರೀಕ್ಷೆ ಮಾಡಿಸಿರುವ ಶಿವಮೊಗ್ಗದ ನಿವಾಸಿ 33 ವರ್ಷದ ಪುರುಷ, ಜನ್ನಾಪುರದ 38 ವರ್ಷದ ಮಹಿಳೆ, ಸಿದ್ದಾರೂಢ ನಗರದ 38 ವರ್ಷದ ಪುರುಷ ಹಾಗೂ 40 ವರ್ಷದ ಪುರುಷ, ನ್ಯೂಕಾಲೋನಿಯ 68 ವರ್ಷ ವೃದ್ಧ, ಭೂತನಗುಡಿಯ 60 ವರ್ಷದ ವೃದ್ಧ ಹಾಗೂ 60 ವರ್ಷದ ವೃದ್ದೆ, ಬಾರಂದೂರಿನ 56 ವರ್ಷದ ಪುರುಷ, ಜನ್ನಾಪುರದ 40 ವರ್ಷದ ಪುರುಷ, ಹೆಗ್ಗೆರೆಸೆ ಕಾಲೋನಿ 40 ವರ್ಷದ ಪುರುಷ, ಗಾಂಧಿ ನಗರದ 30 ವರ್ಷದ ಪುರುಷ ಹಾಗೂ 80 ವರ್ಷದ ವೃದ್ಧ, ಕಲ್ಪನಹಳ್ಳಿ 33 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

ತಾಲೂಕಿನಲ್ಲಿ ಒಂದು ಸಾವು
ತೀವ್ರ ಅನಾರೋಗ್ಯಕ್ಕೆ ಒಳಗಾಗಿ, ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ಕರೆ ತರಲಾಗಿತ್ತು. ಆದರೆ, ಆಸ್ಪತ್ರೆಗೆ ದಾಖಲು ಮಾಡುವ ಮೊದಲೇ ಅವರು ಕೊನೆಯುಸಿರೆಳೆದಿದ್ದಾರೆ. ಆನಂತರ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವ್ ಬಂದಿದೆ ಎಂದು ಮಾಹಿತಿ ತಿಳಿದುಬಂದಿದೆ.
Get In Touch With Us info@kalpa.news Whatsapp: 9481252093















