No Result
View All Result
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ
English Articles

Special Train Between Bengaluru Cantt and Chennai

by ಕಲ್ಪ ನ್ಯೂಸ್
April 3, 2026
0

Kalpa Media House  |  Bengaluru  | To clear the extra rush of passengers during the Summer Holiday season, South Western...

Read moreDetails
SWR Mysuru Division Excels with Record Passenger Revenue and Strong Commercial Growth

SWR Mysuru Division Excels with Record Passenger Revenue and Strong Commercial Growth

April 2, 2026
SWR to run special trains for Good Friday, Easter rush

Summer Special Train Between Tiruchchirappalli & SMVT Bengaluru

April 2, 2026
PESITM hosts Mock CET 2026 to Strengthen KCET Preparation

PESITM hosts Mock CET 2026 to Strengthen KCET Preparation

March 31, 2026
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

March 30, 2026
  • Advertise With Us
  • Grievances
  • About Us
  • Contact Us
Friday, April 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ವಿಶ್ವ ಹವ್ಯಕ ಸಮ್ಮೇಳನ ಹಿನ್ನೆಲೆ: ಹವ್ಯಕ ಜ್ಯೋತಿಗೆ ಚಾಲನೆ

ಡಿಸೆಂಬರ್ 28, 29 ಹಾಗೂ 30 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 27, 2018
in ಬೆಂಗಳೂರು ನಗರ
0
ವಿಶ್ವ ಹವ್ಯಕ ಸಮ್ಮೇಳನ ಹಿನ್ನೆಲೆ: ಹವ್ಯಕ ಜ್ಯೋತಿಗೆ ಚಾಲನೆ
Share on FacebookShare on TwitterShare on WhatsApp

ಬೆಂಗಳೂರು: ವಿಶ್ವ ಹವ್ಯಕ ಸಮ್ಮೇಳನದ ಹಿನ್ನಲೆಯಲ್ಲಿ ಹವ್ಯಕರ ಮೂಲ ಸ್ಥಾನವಾದ ಉತ್ತರಕನ್ನಡದ ಹೈಗುಂದದಿಂದ “ಹವ್ಯಕ ಜ್ಯೋತಿ” ಚಾಲನೆ ನೀಡಲಾಗಿದೆ.

ಹವ್ಯಪುರಾಧೀಶ್ವರಿ ಶ್ರೀ ದುರ್ಗಾಂಬಿಕಾ ದೇವಿಯ ಸನ್ನಿಧಿಯಿಂದ ಜ್ಯೋತಿಯನ್ನು ಹಚ್ಚಿಕೊಂಡು ಅಲಂಕೃತ ರಥದಲ್ಲಿ ತರಲಾಗುತ್ತಿದ್ದು, ಆ ಜ್ಯೋತಿಯಿಂದ 28 ರಂದು ದೀಪ ಬೆಳಗುವುದರ ಮೂಲಕ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ಹೈದಗುಂದದ ಶ್ರೀ ದುರ್ಗಾಂಬಿಕಾ ದೇವಿಯ ಸನ್ನಿಧಿಯಲ್ಲಿ ಅರ್ಚಕರು ಜ್ಯೋತಿಯನ್ನು ಮಹಾಸಭೆಯ ನಿರ್ದೇಶಕರಾದ ಮೂರೂರು ಸುಬ್ರಾಯ್ ಭಟ್, ಸಮಿತಿಯ ಮಂಜುನಾಥ್ ಸುವರ್ಣಗದ್ದೆ ಮುಂತಾದವರಿಗೆ ಹಸ್ತಾಂತರಿಸಿದರು. ಮಹಾಸಭೆಯ ಉಪಾಧ್ಯಕ್ಷರಾದ ಆರ್ ಎಂ ಹೆಗಡೆ ಬಾಳೆಸರ ಮುಂತಾದ ಶಿರಸಿ – ಕುಮಟಾ ಭಾಗದ ಪ್ರಮುಖರು ಉಪಸ್ಥಿತರಿದ್ದರು.

ಇನ್ನು, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳು ಡಿಸೆಂಬರ್ 28, 29 ಹಾಗೂ 30 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿತವಾಗಿದ್ದು, ಈ ಐತಿಹಾಸಿಕ ಕಾರ್ಯಕ್ರಮಗಳು ಸಮಸ್ತ ಹವ್ಯಕ ಸಮಾಜದ ಕಾರ್ಯಕ್ರಮವಾಗಿರುವುದರಿಂದ ಸಮಸ್ತ ಸಮಾಜ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿ ಶ್ರೀ ಅಖಿಲ ಹವ್ಯಕ ಮಹಾಸಭೆ ಕರೆ ನೀಡುತ್ತದೆ.

ಈ ಐತಿಹಾಸಿಕ ಬೃಹತ್ ಉತ್ಸವದಲ್ಲಿ ನಮ್ಮ ವಿಶಿಷ್ಟವಾದ ಕೃಷಿ – ಕಲೆ – ಪಾಕಗಳ ಸಮಗ್ರ ದರ್ಶನ, ಯಾಜ ಮಂಟಪ – ಯಾಗ ಮಂಡಲ – ದೇಶೀ ಗೋತಳಿಗಳ ಪ್ರದರ್ಶನ, ಸಮಾಜ ಎದುರಿಸುತ್ತಿರುವ ಸಮಸ್ಯೆ ಹಾಗೂ ಅದಕ್ಕೆ ಪರಿಹಾರ ಹಾಗೂ ಸಮಾಜದ ಹಿರಿಮೆ ಗರಿಮೆಗಳನ್ನು ಪ್ರಸ್ತುತಪಡಿಸುವ ವಿಚಾರ ಸಮ್ಮಿಲನಗಳ ಗೋಷ್ಠಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಗಳು ನಡೆದರೆ, ಮಹಿಳೆಯರಿಗೆ ರಂಗೋಲಿ, ಹೂಕುಂಡ ಕಲಾಸ್ಪರ್ಧೆ ನಡೆದರೆ, ಆಸಕ್ತರಿಗೆ ಕರಕುಶಲವಸ್ತು ಪ್ರದರ್ಶನ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ನಡೆಯಲಿವೆ. ಇಂದು ಮಲೆನಾಡಿನ ಹಳ್ಳಿಗಳಲ್ಲೂ ಆಲೆಮನೆಗಳು ಕಣ್ಮರೆಯಾಗುತ್ತಿವೆ, ಆದರೆ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಲೆಮನೆಯ ವೈಭವ ಜನರ ಕಣ್ಮನ ಸೆಳೆಯಲಿದೆ. ಉತ್ತರ ಕನ್ನಡ – ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಪ್ರಾಂತ್ಯಗಳ ಹವ್ಯಕರ ಪಾಕ ವೈವಿಧ್ಯಗಳನ್ನು ಪರಿಚಯಿಸುವ ಹವ್ಯಕ ಪಾಕೋತ್ಸವ ಈ ಕಾರ್ಯಕ್ರಮದ ರುಚಿಯನ್ನು ಹೆಚ್ಚಿಸಲಿದೆ.

ಐತಿಹಾಸಿಕ ಈ ಕಾರ್ಯಕ್ರಮದಲ್ಲಿ 75 ಪುಸ್ತಕ ಲೋಕಾರ್ಪಣೆ, 75 ವೈದೀಕರಿಗೆ ಸನ್ಮಾನ, 75 ಕೃಷಿಕರಿಗೆ ಸನ್ಮಾನ, 75 ಸಾಧಕರಿಗೆ ಸನ್ಮಾನ, 75 ವಿದ್ಯಾರ್ಥಿಗಳಿಗೆ ಸನ್ಮಾನ, 75 ಗೋದಾನ, 75 ಹವ್ಯಕ ಯೋಧರಿಗೆ ಸನ್ಮಾನ ನಡೆಯಲಿದ್ದು, ಆಯಾಯ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಸಮಾಜದ ಗಣ್ಯರನ್ನು ಗೌರವಿಸಲಾಗುತ್ತಿದೆ. 28 ರಂದು ನಾಡಿನ ಶ್ರೇಷ್ಠ ಕಲಾವಿದರಿಂದ ಗೀತ – ನಾಟ್ಯ – ವೈಭವ ನಡೆದರೆ, 29 ರಂದು ಶ್ರೇಷ್ಠ ಯಕ್ಷಕಲಾವಿದರಿಂದ ಯಕ್ಷ ನೃತ್ಯೋತ್ಸವ, 30 ರಂದು ಖ್ಯಾತ ರಂಗಭೂಮಿ ಕಲಾವಿದರಿಂದ ಅಭಿನಯರಂಗ ನಡೆಯಲಿದೆ.

• 75 ಯಾಗ ಮಂಟಪಗಳ ದರ್ಶನ
ಯಜ್ಞ ಯಾಗಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇಷ್ಟಾರ್ಥ ಸಿದ್ಧಿಯಿಂದ ಹಿಡಿದು ಪ್ರಮಾರ್ಥ ಪ್ರಾಪ್ತಿಯವರೆಗೆ ಯಜ್ಞಗಳ ವ್ಯಾಪ್ತಿಯಿದೆ. ನಮ್ಮ ಸಂಸ್ಕೃತಿಯ ಭಾಗವಾಗಿರುವ ಯಜ್ಞಗಳ ನಿಯಮಗಳು, ಅದರ ವಿವಿಧತೆಗಳು, ಆಚರಣೆಯ ಬಗೆಗಳು, ಉದ್ದೇಶಗಳು ಮುಂತಾದವನ್ನು ತಿಳಿಸುವ ದೃಷ್ಟಿಯಿಂದ 75 ವಿವಿಧ ರೀತಿಯ ಹೋಮಕುಂಡಗಲ ದರ್ಶನ, ವಿವಿಧ ರೀತಿಯ ಮಂಡಲಗಳ ದರ್ಶನ, ಯಜ್ಞಗಳ ಉದ್ದೇಶ ಹಾಗೂ ಫಲದ ಮಾಹಿತಿ, ದಿನಕ್ಕೊಂದು ಯಾಗದ ಪ್ರಾತ್ಯಕ್ಷಿಯತೆ ಮೂರು ದಿನಗಳ ಕಾಲ ನಡೆಯಲಿದೆ.

• ಅಡಿಕೆ ಸಂಸ್ಕೃತಿಯ ಸಮಗ್ರ ದರ್ಶನ
ಹವ್ಯಕರ ಜೀವನಾಧಾರವಾದ ಅಡಿಕೆ ಕೃಷಿಯ ಸಮಗ್ರ ಪ್ರದರ್ಶನವು ಕೃಷಿ ಜಗತ್ತಿನ ಪ್ರಪಂಚವನ್ನು ಸಮಗ್ರವಾಗಿ ಪ್ರದರ್ಶಿತಗೊಳಿಸಲಿದ್ದು, ವಿವಿಧ ರೀತಿಯ ಅಡಿಕೆ ಸಸಿಗಳು, ತೋಟದ ಕೆಲಸದ ಉಪಕರಣಗಳು, ಕೊನೆ ಕೊಯ್ಯುವ ಸಲಕರಣೆಗಳು, ಅಡಿಕೆ ಸುಲಿಯುವ ಉಪಕರಣಗಳು, ಅಳತೆಯ ಪಾರಂಪರಿಕ ಮಾನದಂಡಗಳು ಸೇರಿದಂತೆ ಪಾರಂಪರಿಕ ವಸ್ತುಗಳ ಪ್ರದರ್ಶನ ಇರಲಿದೆ.

• ರಾಜಧಾನಿಯ ಅರಮನೆಯಲ್ಲಿ ಸಾಂಪ್ರದಾಯಿಕ ಆಲೆಮನೆ
ಹಳ್ಳಿ ಸೊಗಡಿನ ಆಲೆಮನೆ ಕಾರ್ಯಕ್ರಮದಲ್ಲಿರಲಿದ್ದು, ಇತ್ತೀಚಿಗೆ ಮಲೆನಾಡು – ಕರಾವಳಿ ಭಾಗದಲ್ಲೇ ಆಲಮನೆಗಳು ಕಣ್ಮರೆಯಾಗಿದ್ದು, ಅರಮ್ನೆ ಮೈದಾನದಲ್ಲಿ ಜೋಡಿ ಕೋಣಗಳ ಆಲೆಗಾಣದ ಪಾರಂಪರಿಕ ಆಲೆಮನೆ ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದು, ಆಕರ್ಷಣೆಯ ಕೇಂದ್ರವಾಗಲಿದೆ.

• ಕರಕುಶಲ ವಸ್ತುಗಳ ಪ್ರದರ್ಶನ
ಹವ್ಯಕರ ಕೈ ಕೌಶಲ್ಯದಿಂದ ತಯಾರಿಸಲ್ಪಟ್ಟ ಹಾಗೂ ಹಳ್ಳಿಸೊಗಡಿನ ಹವ್ಯಕರ ಪರಂಪರೆಯ ಜೊತೆಗೆ ಹಾಸುಹೊಕ್ಕಾದ ಪ್ರಾಚೀನ ವಸ್ತುಗಳಾದ ಕಡಗೋಲು, ಕೆರೆಮಣೆ, ಕಲ್ಲಿ, ಹೆಗಡೆ, ದೋಟಿ, ಕಡಕಲನಮನೆ ಮುಂತದವುಗಳು, ಬಿದಿರಿನ ಕಲೆ, ಕೌದಿಕಲೆ, ಅಸೂತಿ ಕಲೆ, ಜನಪದ ಶೈಲಿಯ ನೇಯ್ಗೆ, ಕಾಷ್ಠ ಕಲೆಗಳು ಇಲ್ಲಿರಲಿದೆ.

• ಕಲಾ ಸಂಜೆಗಳು
ಡಿ. 28 ರಂದು ನಾಡಿನ ಶ್ರೇಷ್ಠ ಕಲಾವಿದರಿಂದ ಗೀತ – ನಾಟ್ಯ – ವೈಭವ ನಡೆದರೆ, 29 ರಂದು ಶ್ರೇಷ್ಠ ಯಕ್ಷಕಲಾವಿದರಿಂದ ಯಕ್ಷ ನೃತ್ಯೋತ್ಸವ, 30 ರಂದು ಖ್ಯಾತ ರಂಗಭೂಮಿ ಕಲಾವಿದರಿಂದ ಅಭಿನಯರಂಗ ನಡೆಯಲಿದೆ.

• ರಾಮಕಥಾ ಪ್ರಸ್ತುತಿ
ಯಜ್ಞಗಳ ಮಹತಿಯನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನವಾಗಿ ಪ್ರಸಿದ್ಧ ರಾಮಕಥಾ ಮಾದರಿಯಲ್ಲಿ “ಯಜ್ಞ ಧಾರಿಣಿ” ರಾಮಕಥಾ ಪ್ರಸ್ತುತಿ ಆಯೋಜಿಸಲಾಗಿದೆ. ಪ್ರವಚನ – ಗಾಯನ – ವಾದನ – ಚಿತ್ರ – ರೂಪಕಗಳ ವಿಶಿಷ್ಟ ಸಂಯೋಜನೆಯಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನಡೆಸಿಕೊಡಲಿದ್ದಾರೆ.

• ಸಾಮೂಹಿಕ ಭಗವದ್ಗೀತಾ ಪಠಣ
ಶ್ರೀಮದ್ಬಗವದ್ಗೀತೆ ಭಾರತೀಯರೆಲ್ಲರಿಗೂ ಪೂಜನೀಯವಾಗಿದ್ದು, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನಾ ದಿನದಂದು ಸ್ವರ್ಣವಲ್ಲಿ ಸಂಸ್ಥಾನದ ಶ್ರೀಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ನೇತೃತ್ವದಲ್ಲಿ ‘ಸಾಮೂಹಿಕ ಭಗವದ್ಗೀತಾ ಪಠಣ’ ನಡೆಯಲಿದ್ದು, ಶ್ರೀಕೃಷ್ಣನ ಸಂದೇಶವನ್ನು ಜಗತ್ತಿಗೆ ಸಾರಲಿದೆ.

• ಹವ್ಯಕ ಪಾಕೋತ್ಸವ – ಆಹಾರ ಮೇಳ
ಹವ್ಯಕ ಸಂಸ್ಕೃತಿಯಲ್ಲಿ ಆಹಾರಕ್ಕು ವಿಶೇಷ ಮಾನ್ಯತೆ ಇದ್ದು, ಹವ್ಯಕರ ಪಾಕ ವೈವಿಧ್ಯಗಳು ನಾಡಿನ ಜನಮನ್ನಣೆ ಪಡೆದಿವೆ. ಮಲೆನಾಡು – ಕರಾವಳಿ ಭಾಗಗಳ ಪಾರಂಪರಿಕ ಹವ್ಯಕ ಪಾಕಗಳು ಈ ಐತಿಹಾಸಿಕ ಕಾರ್ಯಕ್ರಮದ ರುಚಿಯನ್ನು ಹೆಚ್ಚಿಸಲಿದ್ದು, ಪತ್ರೊಡೆ, ಕೊಟ್ಟೆಕಡುಬು, ವಿವಿಧ ರೀತಿಯ ಅವಲಕ್ಕಿಗಳು, ಗೆಣೆಸೆಲೆ, ಜಿಲೇಬಿ, ಅತ್ರಾಸ, ಚಕ್ಕುಲಿ, ಸುಕ್ಕಿನುಂಡೆ, ಕೇಸರಿ, ತಂಬಳಿ, ಪಾಯಸಗಳು, ಹೋಳಿಗೆಗಳು ಜನಾಕರ್ಷಣೆಯ ಕೇಂದ್ರವಾಗಲಿದೆ.

• ಸರ್ವ ಸಮಾಜದವರಿಗೂ ಮುಕ್ತ
ಈ ಬೃಹತ್ ಕಾರ್ಯಕ್ರಮ ಸರ್ವ ಸಮಾಜದವರಿಗೂ ಮುಕ್ತವಾಗಿದ್ದು, ಎಲ್ಲಾ ಸಮಾಜದ ಬಂಧುಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಿ; ಹವ್ಯಕ ಸಂಸ್ಕೃತಿ – ಸಂಸ್ಕಾರ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಬಹುದಾಗಿದ್ದು, ಹವ್ಯಕರ ವಿಶಿಷ್ಟ ಆಹಾರ ಪದಾರ್ಥಗಳನ್ನು ಪಾಕೋತ್ಸವದಲ್ಲಿ ಆಸ್ವಾದಿಸಬಹುದಾಗಿದೆ.

ಹವ್ಯಕ ಸಮಾಜ ಒಂದು ಕುಟುಂಬವಾಗಿ ತನ್ನ ಶಕ್ತಿ, ಸಾಮಥ್ರ‍್ಯ ಹಾಗೂ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂಬುದು ಮಹಾಸಭೆಯ ಆಶಯವಾಗಿದ್ದು, ಮೂರೂ ದಿನಗಳ ಕಾಲ ಆಗಮಿಸಿ, ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಸಮಾಜದ ಪ್ರತಿಯೊರ್ವ ಬಂಧುಗಳನ್ನೂ ಪ್ರಿÃತಿ ಪೂರ್ವಕವಾಗಿ ಆಹ್ವಾನಿಸಿದೆ.

Tags: 2nd world havyaka ConferenceHavyaka Maha Mandalaಬೆಂಗಳೂರುರಾಮಕಥಾ ಪ್ರಸ್ತುತಿವಿಶ್ವ ಹವ್ಯಕ ಸಮ್ಮೇಳನಹವ್ಯಕ ಸಮಾಜ
Share196Tweet123Send
Previous Post

ನರೇಂದ್ರ ಮೋದಿ ಯಾಕೆ ಮತ್ತೆ ಪ್ರಧಾನಿಯಾಗಬೇಕು?

Next Post

ಮೆಲ್ಬೋರ್ನ್ ಟೆಸ್ಟ್: 443 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡ ಭಾರತ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮೆಲ್ಬೋರ್ನ್ ಟೆಸ್ಟ್: 443 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡ ಭಾರತ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಗಮನಿಸಿ! ಜ.21-22ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

ಗಮನಿಸಿ! ಎಪ್ರಿಲ್ 4ರ ಶನಿವಾರ ಭದ್ರಾವತಿಯ ಹಲವು ಕಡೆ ಕರೆಂಟ್ ಇರಲ್ಲ

April 3, 2026
ಪೊಲೀಸ್ ಪಬ್ಲಿಕ್ ಶಾಲೆ | ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಪೊಲೀಸ್ ಪಬ್ಲಿಕ್ ಶಾಲೆ | ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

April 3, 2026
“ಮೂರ್ಖ ಯೋಜನೆಗಳ” ವಿರುದ್ಧ ಬೆಂಗಳೂರಿಗರ ಆಕ್ರೋಶ | ನಗರಾಭಿವೃದ್ಧಿ ಯೋಜನೆಗಳ ಮರುಕಲ್ಪನೆಗೆ ನಾಗರಿಕರ ಆಗ್ರಹ

“ಮೂರ್ಖ ಯೋಜನೆಗಳ” ವಿರುದ್ಧ ಬೆಂಗಳೂರಿಗರ ಆಕ್ರೋಶ | ನಗರಾಭಿವೃದ್ಧಿ ಯೋಜನೆಗಳ ಮರುಕಲ್ಪನೆಗೆ ನಾಗರಿಕರ ಆಗ್ರಹ

April 3, 2026
SWR Mysuru Division Excels with Record Passenger Revenue and Strong Commercial Growth

ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ದಾಖಲೆಯ ಆದಾಯ, ಹಲವು ಮೈಲಿಗಲ್ಲು

April 3, 2026
ಭದ್ರಾವತಿಯ ಇಬ್ಬರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ಏನಿದು ಪ್ರಕರಣ?

ಲಂಚದ ಸ್ವೀಕರಿಸುವಾಗ ಸಿಕ್ಕಿಬಿದ್ದ ಅಧಿಕಾರಿಗೆ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ: ಕೋರ್ಟ್ ಆದೇಶ

April 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL