ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿಂದು ಒಟ್ಟು 30 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ಜಿಲ್ಲಾಡಳಿತ ಮೀಡಿಯಾ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಒಂದೇ ದಿನ 30 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇಂದು 543 ಮಂದಿಯ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿದ್ದು, 330 ಮಂದಿಗೆ ನೆಗೆಟಿವ್ ಬಂದಿದೆ.
ಒಬ್ಬರು ಇಂದು ಕೋವಿಡ್19ಕ್ಕೆ ಮೃತರಾಗಿದ್ದು, 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಟ್ಟು 142 ಕಂಟೈನ್ಮೆಂಟ್ ಝೋನ್ ನೋಟಿಫೈ ಮಾಡಲಾಗಿದ್ದು, 18 ಕಂಟೈನ್ಮೆಂಟ್ ಝೋನ್‌ಗಳನ್ನು ಡಿ ನೋಟಿಫೈ ಮಾಡಲಾಗಿದೆ.
ತಾಲೂಕುವಾರು ಪ್ರಕರಣಗಳು: ಶಿವಮೊಗ್ಗ-23 ಶಿಕಾರಿಪುರ-3 ಸಾಗರ-1 ತೀರ್ಥಹಳ್ಳಿ-3
Get In Touch With Us info@kalpa.news Whatsapp: 9481252093

















