ಪ್ರಧಾನ ಮಂತ್ರಿಯವರ ಈವತ್ತಿನ ಭಾಷಣದ ಫಲ ಶ್ರುತಿ
ಕಾಶ್ಮೀರದ ಸ್ಥಿತಿ ಹಿಂದೆ ಹೇಗಿತ್ತು ಎಂಬುದಕ್ಕೆ ಒಂದು ಉದಾಹರಣೆಯನ್ನು ಕೊಡುತ್ತೇನೆ.
ಭಾರತ ದೇಶದ ಸರಕಾರವು ಒಂದು ಮೃಷ್ಟಾನ್ನ ಭೋಜನ ವ್ಯವಸ್ಥೆ ಮಾಡಿ, ದೇಶದ ಸಕಲ ರಾಜ್ಯಕ್ಕೂ ನೀಡುತ್ತದೆ. ಎಲ್ಲಾ ರಾಜ್ಯದವರು ಆ ಸ್ವಾದವನ್ನು ಸವಿಯುತ್ತಾರೆ. ಆದರೆ ಭೂಲೋಕದ ಸ್ವರ್ಗವೆನಿಸಿದ ಕಾಶ್ಮೀರದ ಜನತೆ ನಾಲಿಗೆಯಲ್ಲಿ ನೀರು ಸುರಿಸಿ ಬೇರೆ ರಾಜ್ಯದವರನ್ನು ನೋಡುತ್ತಾ ಕುಳಿತುಕೊಳ್ಳಬೇಕಾದ ಹೀನ ಸ್ಥಿತಿ ಇತ್ತು.
’ನಮಗೂ ಕೊಡಿ ಸಾರ್ ’ ಎಂದು ದೇಶದ ಪ್ರಧಾನಮಂತ್ರಿಗಳಿಗೆ ಆ ಕಾಶ್ಮೀರಿ ಸಹೋದರ ಸಹೋದರಿಯರು ಕೇಳಿದರೆ, ಈ ವಂಶಾಡಳಿತ ಸರಕಾರದ ಪ್ರಧಾನ ಮಂತ್ರಿಯ ಉತ್ತರ ಹೇಗಿತ್ತು ಗೊತ್ತಾ? ’ ನಿಮಗೆ ಕೊಡೋದಿಕ್ಕೆ ಆಗಲ್ಲ ಕಣ್ರೀ, ನಮ್ ತಾತ ಯೋಚ್ನೆ ಮಾಡಿ ಅವರ ಮುತ್ತಾತನ ಜನಾಂಗದ ಹಿತ ದೃಷ್ಟಿಯಿಂದ 370 ನೇ ಶಾಸನ ಮಾಡೌರೆ. ಹಾಗಾಗಿ ನಿಮಗೆ ಕೊಡೋ ರೂಲ್ಸಿಲ್ಲ ಕಣ್ರೀ ’ ಎಂದು ಉತ್ತರ ಬರುತ್ತದೆ. ’ಆ ರೂಲ್ಸು ತೆಗೆದ್ಬಿಡಿ ಸಾರ್. ಭಾರತೀಯರಲ್ವೇ ನಾವೂ? ’ ಎಂದು ಕೇಳಿದರೆ ವಾಚ್ಮೇನ್, ಇವ್ರನ್ನು ಕಳಿಸಿ ಹೊರಗಡೆ. ಭಾರಿ ರೂಲ್ಸಂತೆ’ ಎಂದು ಝಾಡಿಸಿ ಒದ್ದು ಕಳುಹಿಸುತ್ತಿತ್ತು ಈ ವಂಶಾಡಳಿತದ ಕಾಂಗ್ರೆಸ್.
ಕಾಲ ಬದಲಾಯ್ತು. ಮಾನವೀಯತೆಯ ಸರಕಾರ ಬಂತು. ಆ 370 ನೇ ವಿಧಿಯನ್ನು ಎಡ ಕಾಲಿನಿಂದ ಝಾಡಿಸಿ ಒದ್ದು ತಿಪ್ಪೆಗೆಸೆಯಿತು. ಈಗ ಕಾಶ್ಮೀರ ನಮ್ಮದು. ಯಾವ ಶಕ್ತಿಯೂ ಕಿತ್ತುಕೊಳ್ಳೋಕೆ ಆಗಲ್ಲ. ಮೋದಿ ಅಮಿತ್ ಷಾ ನೇತೃತ್ವದ ಸರಕಾರಕ್ಕೆ ಭಾರತದ ಪ್ರಜೆಗಳು ಚಿರ ಋಣಿಗಳು. ಆದರೂ ಅಲ್ಲೋ ಇಲ್ಲೋ ಈ ಅಳಿದುಳಿದ ವಂಶಾಡಳಿತದ ಊಳಿಗದ ಆಳುಗಳು ಬೊಗಳುತ್ತಿರುವುದು ಕೇಳಿ ಬಂದರೂ, ಇನ್ನು ಪ್ರಜೆಗಳೇ ಝಾಡಿಸಿ ಒದ್ದು ಹೊರ ಹಾಕಲಿದ್ದಾರೆ.
ಜೈ ಹಿಂದ್ ಎಂದು ಕಾಶ್ಮೀರದಿಂದಲೂ ಸ್ವರ ಕೇಳಲಿದೆ.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post