ಸಾಗರ: ಭಾರೀ ಮಳೆಯ ಪರಿಣಾಮ ಸಾಗರದಲ್ಲಿ ಆರ್’ಟಿಒ ಅಧಿಕಾರಿಗಳು ಕರ್ತವ್ಯದಲ್ಲಿದ್ದ ಜೀಪ್ ಮೇಲೆ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಪವಾಡ ಸದೃಶ್ಯ ರೀತಿಯಲ್ಲಿ ಸಿಬ್ಬಂದಿಗಳು ಪಾರಾಗಿದ್ದಾರೆ.
ಸಾಗರ-ಸಿಗಂಧೂರು ರಸ್ತೆಯಲ್ಲಿ ಇಂದು ಘಟನೆ ನಡೆದಿದ್ದು, ಇಲ್ಲಿನ ಆರ್’ಟಿಒ ಕಚೇರಿಯಿಂದ ತಾಲೂಕು ಕಚೇರಿಗೆ ಹೊರಟಿದ್ದ ಸಾಗರದ ಚೀಪಿನ ಮೇಲೆ ಮರ ಬಿದ್ದಿದೆ. ಚಾಲಕನ ಮುನ್ನಚ್ಚರಿಕೆಯಿಂದ ಮೂವರ ಪ್ರಾಣ ಉಳಿದಿದೆ.
ಚೀಪು ಸ್ವಲ್ಪ ಪ್ರಮಾಣದಲ್ಲಿ ಜಖಂಗೊಂಡಿದ್ದು, ಚೀಪಿನಲ್ಲಿದ್ದ ಮಹಿಳಾ ಸಿಬ್ಬಂದಿ ಪ್ರಭಾ ಅವರು ಇನ್ನೂ ಗಾಬರಿಯಿಂದ ಚೇತರಿಸಿಕೊಂಡಿಲ್ಲ ಎಂದು ವರದಿಯಾಗಿದೆ.
ಈ ಘಟನೆಯಿಂದ ಸಾಗರ-ಸಿಗಂದೂರು ರಸ್ತೆ ಬಂದಾಗಿದ್ದು, ಪ್ರಯಾಣಿಕರು ಬದಲಿ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಮರ ತೆರವು ಕಾರ್ಯ ನಡೆಯುತ್ತಿದೆ.
ಸ್ಥಳಕ್ಕೆ ಎ.ಎಸ್.ಪಿ ಯತೀಶ್, ಪೌರಾಯುಕ್ತ ರಾಜು, ಪರಿಸರ ಅಭಿಯಂತರ ಪ್ರಭಾಕರ್, ನಗರ ಠಾಣೆ ಇನ್ಸ್’ಪೆಕ್ಟರ್ ಮಹಾಬಲೇಶ್, ಕಂದಾಯ ಇಲಾಖೆಯ ಆನಂದ್ ನಾಯ್ಕ್, ಗಜೇಂದ್ರ ಇನ್ನಿತರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Discussion about this post