ನವದೆಹೆಲಿ: ರಾಜ್ಯದಲ್ಲಿ ಸಂಭವಿಸಿದ ನೆರೆ ಪರಿಹಾರಕ್ಕೆ ಕುರಿತಂತೆ ಪ್ರವಾಹದಿಂದ 38 ಸಾವಿರ ಕೋಟಿ ರೂ. ಮೊತ್ತದ ನಷ್ಟವೇ ಸಂಭವಿಸಿಲ್ಲ ಎಂದಿರುವ ಕೇಂದ್ರ ಸರ್ಕಾರ, ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.
ಈ ಕುರಿತಂತೆ ರಾಜ್ಯದಿಂದ ಸ್ಪಷ್ಟೀಕರಣ ಕೇಳಿರುವ ಕೇಂದ್ರ ಸರ್ಕಾರ, ನಷ್ಟದ ಪ್ರಮಾಣವನ್ನು ಅಧಿಕೃತವಾಗಿ ಪ್ರಮಾಣೀಕರಿಸಿ ಎಂದು ಸೂಚಿಸಿದೆ.
ಈ ಹಿಂದೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ರಾಜ್ಯ ಸರ್ಕಾರ, ಪ್ರವಾಹದಿಂದಾದಿ ಅಂದಾಜು ಸಾವಿರ ಕೋಟಿ ರೂ.ಗೂ ಅಧಿಕ ಪ್ರಮಾಣದ ನಷ್ಟ ಉಂಟಾಗಿದ್ದು, ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಯಮಾವಳಿ ಪ್ರಕಾರ ರೂ.3,500 ಕೋಟಿ ಪರಿಹಾರದ ನೆರವು ನೀಡಬೇಕೆಂದು ಪ್ರಸ್ತಾವನೆಯಲ್ಲಿ ತಿಳಿಸಿತ್ತು. ಆದರೆ, ರಾಜ್ಯ ಪ್ರಸ್ತಾವನೆಗೆ ಖ್ಯಾತೆ ತೆಗೆದಿರುವ ಕೇಂದ್ರ ವಾಸ್ತವವಾಗಿ ಕರ್ನಾಟಕದಲ್ಲಿ ಅಷ್ಟು ದೊಡ್ಡ ಪ್ರಮಾಣದ ನಷ್ಟವೇ ಸಂಭವಿಸಿಲ್ಲ ಎಂದಿದ್ದು, ಇದರ ಪ್ರಮಾಣೀಕರಣವನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.
ರಾಜ್ಯದ ವರದಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ಗಾಳಿಗೆ ತೂರಿ, ಮನಸೋಇಚ್ಛೆ ವರದಿ ತಯಾರಿಸಿದ್ದೀರಿ. ನಷ್ಟದ ಪ್ರಮಾಣವನ್ನು ಬೇಕಾಬಿಟ್ಟಿಯಾಗಿ ಏರಿಕೆ ಮಾಡಿದ್ದೀರಿ. ಹೀಗಾಗಿ, ಅಧಿಕೃತ ಪ್ರಮಾಣೀಕೃತ ವರದಿ ನೀಡಿ ಎಂದಿದೆ.
Discussion about this post