ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 388 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.
ಈ ಕುರಿತಂತೆ ಜಿಲ್ಲಾಡಳಿತ ಮಾಹಿತಿ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಇಂದು 2693 ಮಂದಿಯ ಸ್ಯಾಂಪಲ್ ಸಂಗ್ರಹಿಸಿದ್ದು, 1575 ಮಂದಿಯ ವರದಿ ನೆಗೆಟಿವ್ ಬಂದಿದೆ. 311 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ.
316 ಮಂದಿ ನಿಗದಿತ ಆಸ್ಪತ್ರೆಯಲ್ಲಿ, 231 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ 1397 ಮಂದಿ ಹೋಂ ಐಸೋಲೇಶನ್’ನಲ್ಲಿದ್ದಾರೆ. ಇನ್ನು, 102 ವಿದ್ಯಾರ್ಥಿಗಳ ಸ್ಯಾಂಪಲ್ ಸಂಗ್ರಹಿಸಿದ್ದು 11 ಮಂದಿಯದ್ದು ಪಾಸಿಟಿವ್ ಬಂದಿದೆ.ತಾಲೂಕುವಾರು ವಿವರ:
- ಶಿವಮೊಗ್ಗ: 152
- ಭದ್ರಾವತಿ: 67
- ಶಿಕಾರಿಪುರ: 13
- ತೀರ್ಥಹಳ್ಳಿ: 23
- ಸೊರಬ: 17
- ಸಾಗರ: 53
- ಹೊಸನಗರ: 51
- ಇತರೆ ಜಿಲ್ಲೆ: 12
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post