ಕ್ರೈಸ್ಟ್’ಚರ್ಚ್: ಇಲ್ಲಿನ ಎರಡು ಮಸೀದಿಯಲ್ಲಿ ಇಂದು ನಡೆದ ಶೂಟೌಟಿನಲ್ಲಿ ಕನಿಷ್ಠ 40 ಮಂದಿ ಮೃತರಾಗಿದ್ದು, 20 ಗಾಯಾಗಳುಗಳ ಸ್ಥಿತಿ ಗಂಭೀರವಾಗಿದೆ.
ಲಿನ್’ವುಡ್ ಇಸ್ಲಾಮಿಕ್ ಸೆಂಟರ್’ನಲ್ಲಿ ನಡೆದ ಶೂಟೌಟಿನಲ್ಲಿ 10 ಮಂದಿ ಬಲಿಯಾಗಿದ್ದು, ಅಲ್ ನೂರ್ ಮಸೀದಿಯಲ್ಲಿ ನಡೆದ ದಾಳಿಯಲ್ಲಿ 30 ಮಂದಿ ಸಾವಿಗೀಡಾಗಿದ್ದಾರೆ.
ಈ ಘಟನೆ ನಡೆದಾಗ ಇದೇ ಮಸೀದಿ ಬಳಿಯಲ್ಲಿಯೇ ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರರು ಇದ್ದರು ಎಂದು ವರದಿಯಾಗಿದೆ.
ಈ ಕುರಿತಂತೆ ಕ್ರಿಕೆಟರ್ ಇಕ್ಬಾಲ್ ಖಾತ್ ಟ್ವೀಟ್ ಮಾಡಿದ್ದು, ನಮ್ಮ ಬಳಿಯಲ್ಲೀ ಈ ದುರ್ಘಟನೆ ನಡೆಯಿತು. ಅದೃಷ್ಟವಶಾತ್ ನಮ್ಮ ತಂಡದಲ್ಲಿ ಯಾರಿಗೂ ತೊಂದರೆಯಾಗಲಿಲ್ಲ. ಅಲ್ಲದೇ, ಘಟನೆಯಲ್ಲಿ ಬಲಿಯಾದವರ ಆತ್ಮಕ್ಕೆ ಶಾಂತಿಕೋರಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದಿದ್ದಾರೆ.
Entire team got saved from active shooters!!! Frightening experience and please keep us in your prayers #christchurchMosqueAttack
— Tamim Iqbal Khan (@TamimOfficial28) March 15, 2019
ಘಟನೆ ಕುರಿತಂತೆ ಮಾತನಾಡಿರುವ ನ್ಯೂಜಿಲೆಂಡ್ ಪ್ರಧಾನಿ ಜಾರ್ಕಿಂಡ ಅರ್ಡನ್, ನಮ್ಮ ದೇಶದ ಇತಿಹಾಸದಲ್ಲಿ ಇದೊಂದು ಕರಾಳ ದಿನವಾಗಿದೆ. ನಡೆಯಬಾರದಿದ್ದ ದುರಂತ. ಇದರ ವಿರುದ್ಧ ನಾವೂ ಹೋರಾಡುತ್ತೇವೆ ಎಂದಿದ್ದಾರೆ.
Discussion about this post