No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
  • Advertise With Us
  • Grievances
  • About Us
  • Contact Us
Wednesday, July 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಭಾರತದ ದೇಶೀಯ ಕ್ವಾಂಟಮ್ ಹಾರ್ಡ್‌ವೇರ್ ಅಭಿವೃದ್ಧಿಗೆ ‘ಮಾಹೆ’ ಕ್ವಾಂಟಮ್ ಹಬ್ ಸ್ಥಾಪನೆ

ಭಾರತದ ಕ್ವಾಂಟಮ್‌ ಪ್ರಗತಿಗೆ ಮಾಹೆ ಕೊಡುಗೆ: ಕ್ವಾಂಟಮ್-ಹಬ್@ಮಾಹೆ ಸ್ಥಾಪನೆ

kalpa News by kalpa News
March 5, 2026
in Special Articles
0
ಭಾರತದ ದೇಶೀಯ ಕ್ವಾಂಟಮ್ ಹಾರ್ಡ್‌ವೇರ್ ಅಭಿವೃದ್ಧಿಗೆ ‘ಮಾಹೆ’ ಕ್ವಾಂಟಮ್ ಹಬ್ ಸ್ಥಾಪನೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ #Manipal Academy of Higher Education University ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯು ತನ್ನ ಅಂಗಸಂಸ್ಥೆಯಾದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಬೆಂಗಳೂರು ಕ್ಯಾಂಪಸ್‌ನಲ್ಲಿ #Manipal Institute of Technology (MIT) Bangalore Campus ಕ್ವಾಂಟಮ್-ಹಬ್ @ ಮಾಹೆಯನ್ನು (ಕ್ಯು-ಹಬ್@ಮಾಹೆ) #Quantum-Hub@MAHE ಮಾರ್ಚ್‌ 5ರ ಗುರುವಾರ ಅಧಿಕೃತವಾಗಿ ಆರಂಭಿಸಿತು. ಇದು ಭಾರತದ ರಾಷ್ಟ್ರೀಯ ಕ್ವಾಂಟಮ್ ಮಿಷನ್‌ಗೆ ಅನುಗುಣವಾಗಿರುವ, ಸ್ವದೇಶೀ ಕ್ವಾಂಟಮ್ ಹಾರ್ಡ್‌ವೇರ್ ಅಭಿವೃದ್ಧಿಗಾಗಿ ಮೀಸಲಾಗಿರುವ ಓಪನ್ ಆರ್ಕಿಟೆಕ್ಚರ್ ವ್ಯವಸ್ಥೆಯಾಗಿದೆ.

ವಿನ್ಯಾಸದಿಂದ ಅನುಷ್ಠಾನದ ತನಕ ಎಲ್ಲವನ್ನೂ ಒಳಗೊಂಡ ವೇದಿಕೆಯಾಗಿರುವ ಕ್ಯು-ಹಬ್@ಮಾಹೆ, ಕ್ವಾಂಟಮ್ ಹಾರ್ಡ್‌ವೇರ್ ಪ್ರಯೋಗಗಳು, ಡೀಪ್ ಟೆಕ್ ಸ್ಟಾರ್ಟಪ್ ಇಂಕ್ಯುಬೇಶನ್, ಮಾನವ ಸಂಪನ್ಮೂಲ ಅಭಿವೃದ್ಧಿ, ಪರೀಕ್ಷಾ ಮೂಲಸೌಕರ್ಯ, ಮತ್ತು ಏಕೀಕೃತ ಶೈಕ್ಷಣಿಕ ವ್ಯವಸ್ಥೆಯಡಿ ಸಂಶೋಧನೆಗಳನ್ನು ಒಳಗೊಂಡಿದೆ. ಈ ಕ್ರಮ ಭಾರತದ ಕ್ವಾಂಟಮ್ ತಂತ್ರಜ್ಞಾನ ಮೌಲ್ಯ ವ್ಯವಸ್ಥೆಯ ಎಲ್ಲ ಹಂತಗಳಲ್ಲೂ ಭಾರತವನ್ನು ಸಂಪೂರ್ಣವಾಗಿ ಸ್ವಾವಲಂಬಿಯಾಗಿಸುವ ಗುರಿ ಹೊಂದಿದೆ.
ಬಹುಸಂಸ್ಥೀಯ ಡೀಪ್-ಟೆಕ್ ಕಾರ್ಯತಂತ್ರದ ಭಾಗವಾಗಿ, ಎಂಐಟಿ, ಬೆಂಗಳೂರು ಕ್ವಾಂಟಮ್ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವಾಗಲಿದ್ದು, ಇಲ್ಲಿ ಉನ್ನತ ಮಟ್ಟದ ಕ್ವಾಂಟಮ್ ಹಾರ್ಡ್‌ವೇರ್ ಪ್ರಯೋಗಗಳು, ಕ್ರಯೋಜನಿಕ್ ಮತ್ತು ಆರ್‌ಎಫ್ ವ್ಯವಸ್ಥೆಗಳು, ಕ್ವಾಂಟಮ್ ಎಂಜಿನಿಯರಿಂಗ್ ಮತ್ತು ತರಬೇತಿಗಳನ್ನು ನೀಡಲಾಗುತ್ತದೆ.

ಆರಂಭಿಕ ಹಂತದಲ್ಲಿ, ಈ ಕೇಂದ್ರ 25 – ಕ್ಯುಬಿಟ್ ಡೈಲ್ಯೂಷನ್ ರೆಫ್ರಿಜಿರೇಶನ್ (ಡಿಆರ್) ಆಧಾರಿತ ಓಪನ್ ಆರ್ಕಿಟೆಕ್ಚರ್ ವ್ಯವಸ್ಥೆಯೊಡನೆ ಕಾರ್ಯಾರಂಭಿಸಲಿದೆ. ಇದು ಆಧುನಿಕ ತರಬೇತಿ ಮತ್ತು ಪ್ರಾಯೋಗಿಕತೆಗೆ ಪೂರಕವಾಗಿ ವಿನ್ಯಾಸಗೊಂಡಿದೆ. ಮುಂದಿನ ಹಂತದಲ್ಲಿ 50-150 ಕ್ಯುಬಿಟ್ ‘ಪ್ರೂಫ್ ಆಫ್ ಕಾನ್ಸೆಪ್ಟ್’ ವೇದಿಕೆಯಾಗಿ ಬೆಳೆದು, ಅಂತಿಮವಾಗಿ 150-1,000+ ಕ್ಯುಬಿಟ್ ಕೈಗಾರಿಕಾ ದರ್ಜೆಯ ಕ್ವಾಂಟಮ್ ಉತ್ಪನ್ನ ವ್ಯವಸ್ಥೆಯಾಗಿ ಮುಂದುವರಿಯಲಿದೆ.

ಕ್ಯು-ಹಬ್@ಮಾಹೆ ಅನ್ನು ಓಪನ್ ಆರ್ಕಿಟೆಕ್ಚರ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದರಿಂದ ಸ್ವದೇಶೀ ಘಟಕಗಳ ಅಭಿವೃದ್ಧಿ, ಕ್ಯಾಲಿಬರೇಶನ್ ವ್ಯವಸ್ಥೆಗಳು ಮತ್ತು ಹಾರ್ಡ್‌ವೇರ್ ಏಕೀಕರಣ, ಮತ್ತು ಸಾಧಿಸಬಹುದಾದ ಉತ್ಪಾದನಾ ಮಾರ್ಗೋಪಾಯಗಳು ಸಾಧಿತವಾಗಲಿವೆ.
ಪ್ರಸ್ತುತ ಕ್ಯು-ಹಬ್@ಮಾಹೆ ಸ್ಥಾಪನೆಗಾಗಿ ಕ್ವಾಂಟ್ರೋಲ್ಒಎಕ್ಸ್ (ಫಿನ್‌ಲ್ಯಾಂಡ್) ಜೊತೆ ಒಪ್ಪಂದ (ಮೆಮೊರೆಂಡಂ ಆಫ್ ಅಂಡರ್‌ಸ್ಟಾಂಡಿಂಗ್) ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಬ್ಲೂಫೋರ್ಸ್ (ಫಿನ್‌ಲ್ಯಾಂಡ್), ಕ್ಯೂಬ್ಲಾಕ್ಸ್ (ನೆದರ್ಲ್ಯಾಂಡ್ಸ್), ಕಾನ್‌ಸೈನ್ಸ್ (ಸ್ವೀಡನ್) ಮತ್ತು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಗ್ (ಸಿ-ಡಿಎಸಿ), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಯೋಗದೊಂದಿಗೆ ಇದನ್ನು ರೂಪಿಸಲಾಗಿದೆ.

ಈ ಸಹಭಾಗಿತ್ವಗಳು ಮೊದಲ ವರ್ಷದಲ್ಲಿ ರಾಷ್ಟ್ರೀಯ ಕ್ವಾಂಟಮ್ ಮಿಷನ್‌ಗೆ ಪೂರಕವಾಗಿ ನಡೆಸುವ ಮಾನವ ಸಂಪನ್ಮೂಲ ಅಭಿವೃದ್ಧಿ, ಹಾರ್ಡ್‌ವೇರ್ ಪ್ರಾಯೋಗಿಕತೆ, ಐಪಿ (ಬೌದ್ಧಿಕ ಸ್ವತ್ತು) ಸಹ ಅಭಿವೃದ್ಧಿ, ರಾಷ್ಟ್ರೀಯ ಪರೀಕ್ಷಾ ಮೂಲ ಸೌಕರ್ಯ ಅಭಿವೃದ್ಧಿಯಂತಹ ಕಾರ್ಯತಂತ್ರದ ಪ್ರಮುಖ ಕಾರ್ಯಗಳನ್ನು ಕೈಗೊಳ್ಳಲಿವೆ.

ಕ್ಯು-ಹಬ್@ಮಾಹೆ ಡಿಸೆಂಬರ್ 2026ರ ಒಳಗೆ 100 ಕ್ವಾಂಟಮ್ ಇಂಜಿನಿಯರ್‌ಗಳನ್ನು ತರಬೇತಿಗೊಳಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಆನ್‌ಲೈನ್ ಪಠ್ಯಕ್ರಮ, ಮೌಲ್ಯಮಾಪನ, ಮತ್ತು ಪ್ರಯೋಗಾಲಯ ತರಬೇತಿಗಳನ್ನು ಒಳಗೊಂಡ ವ್ಯವಸ್ಥಿತ ಸರ್ಟಿಫಿಕೇಟ್ ತರಬೇತಿಯನ್ನು ಒದಗಿಸಲಾಗುತ್ತದೆ. ಈ ಕೇಂದ್ರ, ರಾಷ್ಟ್ರೀಯ ಪರೀಕ್ಷಾ ಮತ್ತು ಮೌಲ್ಯಮಾಪನ ಸೌಲಭ್ಯಗಳನ್ನು ಒದಗಿಸುವ ಕೇಂದ್ರವಾಗಿಯೂ ಕಾರ್ಯಾಚರಿಸಲಿದ್ದು, ಸ್ಟಾರ್ಟಪ್‌ಗಳು ಮತ್ತು ಔದ್ಯಮಿಕ ಸಹಯೋಗಿಗಳಿಗೆ ಅತ್ಯಾಧುನಿಕ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಲಿದೆ. ಈ ಕೇಂದ್ರ ಸೆಪ್ಟೆಂಬರ್ 2026ರಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಸಂಸ್ಥೆಯ ಮುಖಂಡರ ಅಭಿಪ್ರಾಯಗಳು

ಲೆ. ಜನರಲ್ (ಡಾ.) ಎಂ. ಡಿ. ವೆಂಕಟೇಶ್, ಕುಲಪತಿ, ಮಾಹೆ:

“ರಾಷ್ಟ್ರೀಯ ಕ್ವಾಂಟಮ್ ಮಿಷನ್ನಿನ ದೂರದೃಷ್ಟಿಗೆ ಅನುಗುಣವಾಗಿ, ಸ್ವಾವಲಂಬಿ, ಸ್ವಾಯತ್ತ ವೈಜ್ಞಾನಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬೇಕು ಎನ್ನುವ ನಮ್ಮ ಬದ್ಧತೆಯನ್ನು ಕ್ಯು-ಹಬ್@ಮಾಹೆ ಪ್ರತಿನಿಧಿಸುತ್ತದೆ. ಸಂಶೋಧನೆ, ಹಾರ್ಡ್‌ವೇರ್ ಅಭಿವೃದ್ಧಿ, ಮತ್ತು ಮಾನವ ಸಂಪನ್ಮೂಲ ತರಬೇತಿಯನ್ನು ಒಂದೆಡೆ ಒದಗಿಸುವ ಮೂಲಕ, ಆಧುನಿಕ ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ನಾಯಕತ್ವಕ್ಕೆ ಮಹತ್ವಪೂರ್ಣ ಕೊಡುಗೆ ನೀಡುವುದು ನಮ್ಮ ಗುರಿಯಾಗಿದೆ.”

ಪ್ರೊ. (ಡಾ.) ಮಧು ವೀರರಾಘವ‌ನ್, ಪ್ರೊ ವೈಸ್ ಚಾನ್ಸೆಲರ್, ಮಾಹೆ ಬೆಂಗಳೂರು:

“ಎಂಐಟಿ ಬೆಂಗಳೂರನ್ನು ಕಾರ್ಯಾಚರಣಾ ಕೇಂದ್ರವಾಗಿ ಹೊಂದಿರುವ ಕ್ಯು-ಹಬ್@ಮಾಹೆ ಅಂತರಶಾಖಾ ಸಹಕಾರ, ಡೀಪ್ ಟೆಕ್ ಉದ್ಯಮಶೀಲತೆ, ಮತ್ತು ಸಂಶೋಧನಾ ವೇಗವನ್ನು ಹೆಚ್ಚಿಸಲಿದೆ. ಶೈಕ್ಷಣಿಕ ಅನ್ವೇಷಣೆಯಿಂದ, ನೈಜ ಜಗತ್ತಿನ ಮೇಲೆ ಪರಿಣಾಮ ಬೀರಬಲ್ಲ ಉತ್ಪಾದನಾಶೀಲ ಕ್ವಾಂಟಮ್ ವ್ಯವಸ್ಥೆಗಳನ್ನು ನಿರ್ಮಿಸುವುದರತ್ತ ನಾವು ಗಮನ ಹರಿಸಿದ್ದೇವೆ.”

ಪ್ರೊ. ಐವೆನ್ ಜೋಸ್, ನಿರ್ದೇಶಕರು, ಎಂಐಟಿ ಬೆಂಗಳೂರು:

“ನಮ್ಮ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ನೈಜ ಕ್ವಾಂಟಮ್ ಹಾರ್ಡ್‌ವೇರ್, ಕ್ರಯೋಜನಿಕ್ ವ್ಯವಸ್ಥೆಗಳು ಮತ್ತು ಆರ್‌ಎಫ್ ಮೂಲಭೂತ ವ್ಯವಸ್ಥೆಗಳನ್ನು ಬಳಸು ಅವಕಾಶ ಲಭಿಸುವುದರಿಂದ, ಅವರು ಕೇವಲ ಬಳಕೆದಾರರಾಗಿ ಉಳಿಯದೆ, ನೈಜ ಉತ್ಪಾದಕರಾಗಲಿದ್ದಾರೆ. ಮಣಿಪಾಲ್ ಹೌಸ್ ಆಫ್ ಕ್ವಾಂಟಮ್ ಮೂಲಕ ಮುಂದಿನ ತಲೆಮಾರಿನ ಕ್ವಾಂಟಮ್ ಇಂಜಿನಿಯರ್‌ಗಳನ್ನು ತಯಾರಿಸಲು ಇದು ಅತ್ಯಂತ ಅವಶ್ಯಕವಾಗಿದೆ.”

http://kalpa.news/wp-content/uploads/2024/04/VID-20240426-WA0008.mp4

ಕೋಟ್ಸ್‌ ವಿಶಾಲ್, ಕ್ರಾಂಟ್ರೊಲ್ಒಎಕ್ಸ್:

“ಕ್ಯಾಲಿಬರೇಶನ್ ಮತ್ತು ಸ್ವಯಂಚಾಲಿತ ಸಾಮರ್ಥ್ಯಗಳನ್ನು ಓಪನ್ ಆರ್ಕಿಟೆಕ್ಚರ್ ವಿನ್ಯಾಸದಡಿ ಅಭಿವೃದ್ಧಿ ಪಡಿಸಲು ಕ್ಯು-ಹಬ್@ಮಾಹೆ ಜೊತೆ ಸಹಭಾಗಿತ್ವ ಸಾಧಿಸುವುದು ನಮಗೆ ಸಂತೋಷದ ವಿಚಾರವಾಗಿದೆ.”

ಡಾ. ಸುದರ್ಶನ್, ಸಿ-ಡಿಎಸಿ:

“ಕ್ಯು-ಹಬ್@ಮಾಹೆಯ ಉದ್ದೇಶಗಳು ರಾಷ್ಟ್ರೀಯ ಕ್ವಾಂಟಮ್ ಮಿಷನ್ನಿನ ಆದ್ಯತೆಗಳಾದ ಪೂರೈಕೆ ಸರಪಳಿಗೆ ಬೆಂಬಲ, ಡೀಪ್-ಟೆಕ್ ಉದ್ಯಮಿಗಳ ಸೃಷ್ಟಿ, ಮತ್ತು ಮಾನವ ಸಂಪನ್ಮೂಲ ನಿರ್ಮಾಣಕ್ಕೆ ಪೂರಕವಾಗಿವೆ.”

ಡಾ. ಡೇವಿಡ್ ಗುನ್ನಾರ್ಸನ್, ಸಿಟಿಒ, ಬ್ಲೂಫೋರ್ಸ್, ಫಿನ್‌ಲ್ಯಾಂಡ್

“ಕ್ವಾಂಟಮ್ ಹಾರ್ಡ್‌ವೇರ್ ಪ್ರಯೋಗಗಳು ಮತ್ತು ವಿಸ್ತರಿಸಬಹುದಾದ ಕ್ವಾಂಟಮ್ ವ್ಯವಸ್ಥೆಗಳ ಅಭಿವೃದ್ಧಿಗಾಗಿ ಅಗತ್ಯವಿರುವ ಉನ್ನತ ಮಟ್ಟದ ಕ್ರಯೋಜೆನಿಕ್ ಮೂಲಸೌಕರ್ಯವನ್ನು ಸ್ಥಾಪಿಸುವಲ್ಲಿ ಕ್ಯು-ಹಬ್@ಮಾಹೆ ಬೆಂಬಲ ನೀಡುತ್ತಿರುವುದಕ್ಕೆ ನಾವು ಸಂತೋಷಪಡುತ್ತೇವೆ.”

ಡಾ. ನೀಲ್ಸ್ ಬುಲ್ಟಿಂಕ್, ಕ್ಯುಬ್ಲಾಕ್ಸ್:

“ಒಂದು ಶೈಕ್ಷಣಿಕ – ಉತ್ಪಾದನಾ ವ್ಯವಸ್ಥೆಯಡಿ ಪ್ರಮಾಣಿತ ಕ್ವಾಂಟಮ್ ನಿಯಂತ್ರಣ ವ್ಯವಸ್ಥೆಗಳ ಅಭಿವೃದ್ಧಿಗೆ ಈ ಸಹಭಾಗಿತ್ವ ನೆರವಾಗಲಿದೆ.”

ಡಾ. ಮಾರ್ಕಸ್ ರಾಮ್ಮೆಲ್, ಕಾನ್‌ಸೈನ್ಸ್:

“ಭಾರತದ ಕ್ವಾಂಟಮ್ ವ್ಯವಸ್ಥೆ ಅಭಿವೃದ್ಧಿ ಹೊಂದುತ್ತಿದ್ದು, ಕ್ಯು-ಹಬ್@ಮಾಹೆ ವಿವಿಧ ಕ್ವಾಂಟಮ್ ಪ್ರೊಸೆಸಿಂಗ್ ಯುನಿಟ್‌ಗಳ (ಕ್ಯುಪಿಯು) ಪರೀಕ್ಷೆ, ವಿಶ್ಲೇಷಣೆಗಳಿಗೆ ನೆರವಾಗಲಿದೆ.”

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: BENGALURUKannada NewsKannada News LiveKannada News OnlineKannada News WebsiteKannada WebsiteLatest News KannadaManipal Academy of Higher Education UniversityManipal Institute of Technology (MIT) Bangalore CampusNews in KannadaNews KannadaQuantum-Hub@MAHEಬೆಂಗಳೂರುಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಪಿಂಕ್‌ಥಾನ್ 2026: ಮಹಿಳಾ ಓಟದ ಸಂಭ್ರಮಕ್ಕೆ ಸಾಥ್ ನೀಡಿದ ಆಸ್ಪೆಕ್ಟ್ ಸ್ಪೋರ್ಟ್ಸ್ !

Next Post

ಡಾ. ಮೈತ್ರೇಯಿ ಅವರಿಗೆ ಸಂಸ್ಕೃತ ವಿವಿಯ ಗ್ರಂಥ ಪುರಸ್ಕಾರ

kalpa News

kalpa News

Next Post
ಡಾ. ಮೈತ್ರೇಯಿ ಅವರಿಗೆ ಸಂಸ್ಕೃತ ವಿವಿಯ ಗ್ರಂಥ ಪುರಸ್ಕಾರ

ಡಾ. ಮೈತ್ರೇಯಿ ಅವರಿಗೆ ಸಂಸ್ಕೃತ ವಿವಿಯ ಗ್ರಂಥ ಪುರಸ್ಕಾರ

Leave a Reply Cancel reply

Your email address will not be published. Required fields are marked *

No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL